For Quick Alerts
ALLOW NOTIFICATIONS  
For Daily Alerts

ಮಧುಮೇಹ ಹದ್ದುಬಸ್ತಿನಲ್ಲಿಡುವ ಶಕ್ತಿ-ಲಿಂಬೆಯ ಸಿಪ್ಪೆಯಲ್ಲಿದೆ!

By Manu
|

ಲಿಂಬೆ ಹಣ್ಣಿನ ಮಹತ್ವ ಮತ್ತು ಅದರ ಪ್ರಯೋಜನಗಳ ಬಗ್ಗೆ ಈಗಾಗಲೇ ಅನೇಕ ಸಂಗತಿಗಳನ್ನು ಬೋಲ್ಡ್ ಸ್ಕೈ ತಾಣದಲ್ಲಿ ನಿಮ್ಮ ಉಪಯೋಗಕ್ಕಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಲಿಂಬೆಯ ವಿಶಿಷ್ಟ ಪ್ರಯೋಜನಗಳ ಬಗ್ಗೆ ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಈಗಿನ ಶೇಖಡಾ 30ರಷ್ಟು ಜನರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಳ್ಳಿಗಾಡಿನವರೂ ಸಹ ಇದಕ್ಕೆ ಹೊರತಾಗಿಲ್ಲ. ಈಗಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಇದಕ್ಕೆ ಮೂಲ ಕಾರಾಣವೆಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

Sprinkle lemon zest on your food to control diabetes

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸ ಮತ್ತು ಬೆಚ್ಚನೆಯ ನೀರು ಕುಡಿಯುವ ಅಭ್ಯಾಸದ ಬಗ್ಗೆ ಅನೇಕರಿಗೆ ತಿಳಿದಿದೆ. ಇದರಿಂದ ತೂಕ ಕಡಿಮೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಮನೆಗಳಲ್ಲಿನ ರೆಫ್ರಿಜರೇಟರ್‌ಗಳಲ್ಲಿ ಸಾಕಷ್ಟು ಲಿಂಬೆ ಹಣ್ಣುಗಳನ್ನು ಶೇಖರಿಸಿಟ್ಟಿರುತ್ತೀವಿ. ಆದರೆ ಲಿಂಬೆಯ ಸಿಪ್ಪೆಯಲ್ಲಿಯೂ ಸಹ ಮಧುಮೇಹ ನಿರೋಧಕ ಅಂಶವಿರುವುದು ಹೆಚ್ಚಿನವರಿಗೆ ತಿಳಿದಿಲ್ಲ ಹಾಗೂ ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಲಿಂಬೆಯನ್ನು ಉಪಯೋಗಿಸುವಾಗ ಅದರ ಸಿಪ್ಪೆಯನ್ನು ಬಿಸಾಡುವ ಬದಲು ಶೇಖರಿಸಿಟ್ಟುಕೊಳ್ಳಿ.

ಲಿಂಬೆಯ ಸಿಪ್ಪೆಯ ಮಹತ್ವ

ಲಿಂಬೆಯ ಸಿಪ್ಪೆಯಲ್ಲಿ ಪಾಲಿಫೆನಾಲ್ಸ್ ಸತ್ವವಿದ್ದು, ಇನ್ಸುಲಿನ್ ನಿಯಂತ್ರಣವನ್ನು ಹೆಚ್ಚಿಸುತ್ತದೆ. ಈ ಸ್ಥಿತಿಯಲ್ಲಿ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯೆ ಮಾಡಲು ಹಿಂಜರಿಯುತ್ತವೆ. ಈ ಗುಣವು ಬೊಜ್ಜನ್ನು ಹೊಟ್ಟೆಯ ಭಾಗದಲ್ಲಿ ಶೇಖರಿಸದಂತೆ ತಡೆಯುತ್ತದೆ. ಅಲ್ಲದೆ ಇದರಲ್ಲಿರುವ ನರಿಂಜಿನ್ ಮತ್ತು ಹೆಸ್ಪರಿಡಿನ್ ಸತ್ವಗಳು ಮಧುಮೇಹವನ್ನು ತಡೆಯಲು ಸಹಕಾರಿಯಾಗಲಿದೆ. ಇದರಿಂದ ಯಕೃತ್ತುವಿನಲ್ಲಿ (ಲಿವರ್) ಗ್ಲೂಕೋಸ್ ಉತ್ಪತ್ತಿಯನ್ನು ಕಡಿಮೆ ಮಾಡಿ ಗ್ಲೂಕೋಸ್ ಉತ್ಪತ್ತಿ ಮತ್ತು ಅದರ ಸಂಚಲನ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಿಮ್ಮ ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸೂಕ್ತವಾದ ಆಹಾರ ಪದ್ಧತಿಯನ್ನು ನಿಮಗಾಗಿ ನೀಡಲಾಗಿದೆ. ಲಿಂಬೆ ಜ್ಯೂಸ್, ಇದುವೇ ಶಕ್ತಿಯ ಆಗರ- ಚಾಲೆಂಜ್‌ಗೆ ರೆಡಿನಾ?

ಲಿಂಬೆಯ ಸಿಪ್ಪೆ ಉಪಯೋಗಿಸುವುದು ಹೇಗೆ?

ಲಿಂಬೆಯ ಸಿಪ್ಪೆಯನ್ನು ಸಲಾಡ್‌ಗೆ ಕಿವುಚದೇ ಬಳಸಿದಲ್ಲಿ ಸಲಾಡ್ ನ ರುಚಿಯನ್ನು ಹೆಚ್ಚಿಸುವುದಲ್ಲದೇ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಲಿಂಬೆಯನ್ನು ಕತ್ತರಿಸಿ ಅದರ ರಸವನ್ನು ಸಲಾಡ್‌ಗೆ ಚಿಮ್ಮಿಸಿ, ಇದರಿಂದ ಉತ್ತಮ ಹಿತವಾದ ರುಚಿಯನ್ನು ಹೊಂದಬಹುದು. ಸಾಂಬಾರಿನ ರುಚಿಯನ್ನು ಹೆಚ್ಚಿಸಲು ಇದನ್ನು ಕಾಳುಗಳಿಗೆ ಬೆರೆಸಿದರೆ ರುಚಿ ಹೆಚ್ಚಾಗುತ್ತದೆ. ಎರಡು ಚಮಚ ಲಿಂಬೆಯ ಸಿಪ್ಪೆಯನ್ನು ಸಾಂಬಾರು ತಯಾರಿಸುವಾಗ ಬೆರೆಸಿ. ಲಿಂಬೆ ರಸದ ಬದಲು ಅದರ ಸಿಪ್ಪೆಯನ್ನು ಕೋಳಿಮಾಂಸದ ಆಹಾರಕ್ಕೆ ಅಥವಾ ಮೀನಿನ ಆಹಾರಗಳಲ್ಲಿ ಬಳಸಿದರೆ ಮಧುಮೇಹ ನಿರೋಧಕ ಸತ್ವವು ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಲಿಂಬೆಹಣ್ಣುಗಳನ್ನು ಖರೀದಿಸುವಾಗ ಅದರ ಸಿಪ್ಪೆಯನ್ನು ಉಪಯೋಗಿಸುವ ವಿಧಾನದ ಬಗ್ಗೆ ಮೇಲಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದರ ಜೊತೆಗೆ ನಿಮಗೆ ತಿಳಿಸಿರುವ ಔಷಧಿಗಳನ್ನು ಸೇವಿಸಲು ಮರೆಯದಿರಿ. ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿ ಮತ್ತು ಕ್ರಮವಾದ ವ್ಯಾಯಾಮವನ್ನು ಅನುಸರಿಸಿ ದೇಹದಲ್ಲಿನ ರಕ್ತದ ಅಂಶವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ.

English summary

Sprinkle lemon zest on your food to control diabetes

We all know that drinking warm water and lemon juice early in the morning not only aids in weight loss but also boosts your immune system. And hence, our refrigerators are always stocked with lemon. But not many people know that lemon zest or peel is packed with anti-diabetic properties that can help you in managing your blood sugar level. So the next time you squeeze a lemon, don’t throw it away! Rather peel it off and store.
X
Desktop Bottom Promotion