For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಣ: ಆಹಾರ-ಕ್ರಮ ಶಿಸ್ತು ಬದ್ಧವಾಗಿರಲಿ

By Manu
|

ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ ಇಂದು ಬಡವ ಬಲ್ಲಿದ, ಹಿರಿಯ ಕಿರಿಯನೆಂಬ ಭೇದ ಪರಿಗಣಿಸದೇ ಎಲ್ಲರನ್ನೂ ಆವರಿಸುತ್ತಿದೆ. ಇದಕ್ಕೆ ಕಾರಣವನ್ನು ಹುಡುಕಿದರೆ ಲಭ್ಯವಾದ ಸೌಲಭ್ಯಗಳ ಕಾರಣದಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ತಜ್ಞರು ಈ ವಾದವನ್ನು ಸುಲಭವಾಗಿ ಒಪ್ಪದೆ ಇತರ ಕಾರಣಗಳನ್ನೂ ಹೆಸರಿಸುತ್ತಾರೆ.

ಅನುವಂಶೀಯ ಕಾರಣಗಳು ಮಧುಮೇಹಕ್ಕೆ ಪ್ರಮುಖವಾದರೆ, ಒತ್ತಡ, ಆಹಾರ ಸೇವನೆಯ ಅಭ್ಯಾಸ, ಆಹಾರದಲ್ಲಿ ನಾರಿನ ಕೊರತೆ, ನಡುರಾತ್ರಿಯ ಊಟ ಮೊದಲಾದವು ಇತರ ಕಾರಣಗಳಾಗಿವೆ ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಪೂರ್ವಾಗ್ರಹವಾಗಿ ಬಂದ ನಂಬಿಕೆ ಎಂದರೆ "ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ" ಎನ್ನುವುದು. ವಾಸ್ತವವಾಗಿ ಸಕ್ಕರೆ ತಿನ್ನುವುದಕ್ಕೂ ಸಕ್ಕರೆ ಕಾಯಿಲೆ ಬರುವುದಕ್ಕೂ ಯಾವುದೇ ಸಂಬಂಧವಿಲ್ಲ...! ಹಾಗಾದರೆ ಈ ಮಧುಮೇಹ ರೋಗ ಬರಲು ಕಾರಣವೇನು? ಮೌನ ಕೊಲೆಗಾರ 'ಮಧುಮೇಹದ' ಅಪಾಯಕಾರಿ ಲಕ್ಷಣಗಳು!

ಸಾಮಾನ್ಯವಾಗಿ ಮಧುಮೇಹ ರೋಗ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದು ವರ್ಗೀಕರಿಸಲಾಗಿದೆ). ಈ ಕಾಯಿಲೆ ಬಂದ ಮೇಲೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೇ ಹೋದರೂ ಸೂಕ್ತ ಜೀವನ ಶೈಲಿ, ಆಹಾರಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳ ಸೇವನೆಯ ಮೂಲಕ ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು. ಮಧುಮೇಹಕ್ಕೆ ಆಹ್ವಾನ ನೀಡುವ ಕೆಟ್ಟ ಅಭ್ಯಾಸಗಳಿಂದ ದೂರವಿರಿ!

ಹೌದು ಇಂದು ವಿವಿಧ ವೈದ್ಯಪದ್ಧತಿಯಲ್ಲಿ ಹಲವಾರು ರೀತಿಯ ಚಿಕಿತ್ಸೆಗಳು ಹಾಗೂ ಔಷಧಿಗಳು ಲಭ್ಯವಿವೆ. ಆದರೆ ದುಬಾರಿಯಾದ ಈ ಔಷಧಿಗಳನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಈ ಔಷಧಿಗಳು ನೀಡುವಷ್ಟೇ ಪರಿಣಾಮಕಾರಿ ಫಲಿತಾಂಶವನ್ನು ನಮ್ಮ ಮನೆಯಲ್ಲಿರುವ ಸುಲಭ ಸಾಮಾಗ್ರಿಗಳೂ ನೀಡುತ್ತವೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಿ

ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಿ

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಮಾಡಿದ ಅಡುಗೆಯಲ್ಲಿ ಉಪ್ಪಿನ ಪ್ರಮಾಣ ಕೊಂಚ ಹೆಚ್ಚೇ ಇರುತ್ತದೆ. ಆದ್ದರಿಂದ ಉಪ್ಪು ಹಾಕಿದ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಹಸಿ ತರಕಾರಿ, ನಿಮಗೆ ಸಲಹೆ ಮಾಡಲಾದ ಹಣ್ಣುಗಳು ಮತ್ತು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾದ ಚಪಾತಿ, ರೋಟಿ ಮೊದಲಾದವುಗಳನ್ನೇ ಆಯ್ದುಕೊಳ್ಳಿ. ಅಲ್ಲದೆ ನಿತ್ಯದ ಅಡುಗೆಗಳಲ್ಲಿ ಕೇವಲ ಕಾರ್ಬೋಹೈಡ್ರೇಟುಗಳನ್ನು ಮಾತ್ರ ಸೇವಿಸುವ ಬದಲು ಕಾರ್ಬೋಹೈಡ್ರೇಟು ಮತ್ತು ಪ್ರೋಟೀನುಗಳ ಸಂಯೋಜನೆಯನ್ನು ಸೇವಿಸಿ. ಏಕೆಂದರೆ ಈ ಸಂಯೋಜನೆಯಿಂದ ಜೀರ್ಣಶಕ್ತಿ ನಿಧಾನವಾಗುವುದರ ಜೊತೆಗೇ ಸಕ್ಕರೆಯೂ ನಿಧಾನವಾಗಿ ರಕ್ತಕ್ಕೆ ಸೇರುತ್ತದೆ. ಹಸಿವನ್ನೂ ತೃಪ್ತಿಪಡಿಸಿದಂತಾಗುತ್ತದೆ.

ತುಳಸಿ ಎಲೆಗಳ ರಸ

ತುಳಸಿ ಎಲೆಗಳ ರಸ

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

ಹಾಗಲಕಾಯಿ ರಸ

ಹಾಗಲಕಾಯಿ ರಸ

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds) ಕಾರಣವಾಗಿವೆ. ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸಲಾಗಲು ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.

ನಾರಿನಂಶ ಹೊಂದಿರುವ ಆಹಾರಕ್ಕೆ ಆದ್ಯತೆ ನೀಡಿ

ನಾರಿನಂಶ ಹೊಂದಿರುವ ಆಹಾರಕ್ಕೆ ಆದ್ಯತೆ ನೀಡಿ

ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ನಾರು ಇರಲೇ ಬೇಕು. ಮೈದಾ ಆಧಾರಿತ ಆಹಾರಗಳು ನೋಡಲು ಬಿಳಿಯಾಗಿರುತ್ತದೆಯೇ ವಿನಃ ಆರೋಗ್ಯಕರವಲ್ಲ. ನಿಮ್ಮ ಆಹಾರದಲ್ಲಿ ಹಣ್ಣು, ಹಂಪಲು, ಇಡಿಯ ಗೋಧಿಹಿಟ್ಟಿನಿಂದ ತಯಾರಿಸಿದ ಹಿಟ್ಟಿನ ಖಾದ್ಯಗಳು ಹೆಚ್ಚಿರುವಂತೆ ನೋಡಿಕೊಳ್ಳಿ.

ಬೆಂಡೆಕಾಯಿ

ಬೆಂಡೆಕಾಯಿ

ಬೆಂಡೆಯಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಜೀರ್ಣಕ್ರಿಯೆಯನ್ನು ಕೊಂಚ ನಿಧಾನಗೊಳಿಸಿ ರಕ್ತಕ್ಕೆ ಸಕ್ಕರೆ ಸೇರುವ ಅವಧಿಯನ್ನು ದೀರ್ಘಗೊಳಿಸುತ್ತದೆ. ಅಲ್ಲದೆ ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

ಸಲಹೆ

ಸಲಹೆ

*ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ವ್ಯಾಯಾಮ ಇರಲಿ. ನಿತ್ಯವೂ ಒಂದು ಗಂಟೆ ವ್ಯಾಯಾಮಕ್ಕಾಗಿ ಮುಡಿಪಾಗಿರಿಸುವುದರಿಂದ ಮಧುಮೇಹವನ್ನು ಸಾಕಷ್ಟು ಅಂತರದಲ್ಲಿರಿಸಿಕೊಳ್ಳಬಹುದು

*ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುವ ಒಣ ಹಣ್ಣುಗಳನ್ನು ಸೇವಿಸಿ

* ಬೆಳಗ್ಗಿನ ಜಾವ ವಾಕಿಂಗ್‌ಗೆ ಹೋಗುವ ಮುನ್ನ ಕ್ಯಾರೆಟ್ ತಿನ್ನಿ.

*ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

English summary

World Diabetes Day Special: Tips for Diabetes patient

Diabetes is one of the most common diseases which has effected more than a million people from around the world, especially in India. It is one of those diseases which is life long and threatening too since it comes with other related disease which effect your whole body. Celebrating World Diabetes Day, Boldsky helps you on how to live with this disease in a positive way. Take a look at some of the ways in which you can now live with Diabetes with a smile on your face:
Story first published: Friday, November 13, 2015, 19:42 [IST]
X
Desktop Bottom Promotion