ಡಯಾಬಿಟಿಸ್ ಬಗ್ಗೆ ಇರುವ ಕಟ್ಟುಕತೆಗಳು

By: Hemanth P
Subscribe to Boldsky

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಸುಮಾರು 61 ದಶಲಕ್ಷ ಜನರು ಮತ್ತು ಅಮೆರಿಕಾದಲ್ಲಿ 24 ದಶಲಕ್ಷ ಜನರು ಮಧುಮೇಹ (ಡಯಾಬಿಟಿಸ್)ದಿಂದ ಬಳಲುತ್ತಿದ್ದಾರೆ. ಇಷ್ಟೊಂದು ಮಂದಿಗೆ ಈ ರೋಗ ಆವರಿಸಿದ್ದರೂ ಇದರ ಬಗ್ಗೆ ಲಕ್ಷಗಟ್ಟಲೆ ಕಟ್ಟುಕತೆಗಳಿವೆ.

ಈ ರೋಗದ ಬಗ್ಗೆ ಮೂಲ ಜ್ಞಾನ ಹೊಂದಿರುವ ವಿದ್ಯಾವಂತರು ಕೂಡ ಇಂತಹ ಕಟ್ಟುಕತೆಗಳಿಂದಾಗಿ ಕಣ್ಣುಕಟ್ಟಿದಂತಾಗಿದ್ದಾರೆ. ಮಧುಮೇಹದ ಬಗ್ಗೆ ಹಲವಾರು ರೀತಿಯ ಕಟ್ಟುಕತೆಗಳಿವೆ ಮತ್ತು ಹೆಚ್ಚಿನ ಜನರಿಗೆ ಈ ರೋಗದ ಬಗ್ಗೆ ತಪ್ಪು ತಿಳುವಳಿಕೆಯಿದೆ.

ನೀವು ಇವರಲ್ಲಿ ಒಬ್ಬರಾಗಿದ್ದರೆ ಆಗ ಡಯಾಬಿಟಿಸ್ ಬಗ್ಗೆ ಇಲ್ಲಿರುವ ಹತ್ತು ಕಟ್ಟುಕತೆಗಳನ್ನು ವಿವರಿಸಲಾಗಿದೆ. ಇದರಿಂದ ನೀವು ಡಯಾಬಿಟಿಸ್ ನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಡಯಾಬಿಟಿಸ್ ಬಗ್ಗೆ ಇರುವ ಹೆಚ್ಚಿನ ಕಟ್ಟುಕತೆಗಳ ಬಗ್ಗೆ ನಿಮಗೆ ತಿಳಿದೇ ಇರಬಹುದು ಮತ್ತು ಡಯಾಬಿಟಿಸ್ ಇದ್ದರೆ ಸಕ್ಕರೆ ತಿನ್ನುವುದನ್ನು ಬಿಡುಬೇಕು ಎನ್ನುವುದು ಡಯಾಬಿಟಿಸ್ ಗೆ ಇರುವ ಆಹಾರಕ್ರಮ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹವನ್ನು ಹದ್ದು ಬಸ್ತಿನಲ್ಲಿಡುವ ಆಹಾರಗಳಿವು

ಕೆಲವೊಂದು ಉತ್ಪನ್ನಗಳು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿವೆ. ನಿಮಗೆ ಡಯಾಬಿಟಿಸ್ ಇದ್ದರೆ ಕಾರ್ಬೋಹೈಡ್ರೆಟ್ಸ್ ಗಳನ್ನು ಕಡೆಗಣಿಸಬೇಕು. ಆದರೆ ಇದನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದಿಲ್ಲ. ದಿನದಲ್ಲಿ ಸಮತೋಲಿತ ಆಹಾರಕ್ರಮ ಪಾಲಿಸಬೇಕು ಮತ್ತು ಕಾರ್ಬೋಹೈಡ್ರೆಟ್ಸ್ ನಿಮ್ಮ ಸಮತೋಲಿತ ಆಹಾರಕ್ರಮದ ಒಂದು ಭಾಗ.

ಕಾರ್ಬೋಹೈಡ್ರೆಟ್ಸ್ ನ್ನು ಒಂದು ಮಿತಿಯಲ್ಲಿ ಸೇವಿಸುವುದನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕು. ನೀವು ತಿನ್ನುವ ಪ್ರತಿಯೊಂದು ಆಹಾರದಲ್ಲಿ ಇರುವ ಕಾರ್ಬೋಹೈಡ್ರೆಟ್ಸ್ ನ ಪ್ರಮಾಣ ಕಂಡುಹಿಡಿಯಬೇಕು. ಡಯಾಬಿಟಿಸ್ ಬಗ್ಗೆ ಇರುವ ಹತ್ತು ಕಟ್ಟುಕತೆಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ನೀವು ರೋಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗಬಹುದು.

ಅತಿಯಾದ ತೂಕವೆಂದರೆ ಡಯಾಬಿಟಿಸ್

ಅತಿಯಾದ ತೂಕವೆಂದರೆ ಡಯಾಬಿಟಿಸ್

ಬೊಜ್ಜಿನಿಂದಾಗಿ ಡಯಾಬಿಟಿಸ್ ಉಂಟಾಗುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಬೊಜ್ಜು ಹೊಂದಿರುವವರಲ್ಲಿ ಇನ್ಸುಲಿನ್ ಪ್ರತಿರೋಧಕ ಶಕ್ತಿ ಹೆಚ್ಚಾಗಿ ಅದು ಡಯಾಬಿಸ್ ಗೆ ಕಾರಣವಾಗಬಹುದು ಎನ್ನುವುದು ನಿಜ. ಬೊಜ್ಜು ಹೊಂದಿರುವ ಕೆಲವು ಜನರಿಗೆ ಡಯಾಬಿಟಿಸ್ ಇರುವುದಿಲ್ಲ. ಆದರೆ ಸಪೂರವಾಗಿರುವವರಿಗೆ ಡಯಾಬಿಟಿಸ್ ಇರುತ್ತದೆ.

ಹಣ್ಣುಗಳ ಕಡೆಗಣನೆ

ಹಣ್ಣುಗಳ ಕಡೆಗಣನೆ

ಡಯಾಬಿಟಸ್ ಮತ್ತು ಅದರ ಆಹಾರಕ್ರಮದ ಬಗ್ಗೆ ಇರುವ ಕಟ್ಟುಕತೆಯಲ್ಲಿ ಇದು ಒಂದು. ಹಣ್ಣಿನಲ್ಲಿ ಕಾರ್ಬೋಹೈಡ್ರೆಟ್ಸ್ ಇರುವ ಕಾರಣ ಅದನ್ನು ಕಡೆಗಣಿಸಬೇಕೆಂದು ಹೆಚ್ಚಿನವರು ಭಾವಿಸಿದ್ದಾರೆ. ಜಿಐ ಇಂಡೆಕ್ಸ್ ನಂತೆ ರಕ್ತದ ಸಕ್ಕರೆ ಮಟ್ಟ ಹೆಚ್ಚು ಮತ್ತು ಕಡಿಮೆಯಾಗಬಹುದು. ಹಣ್ಣುಗಳಲ್ಲಿ ಕಡಿಮೆ ಜಿಐ ಇಂಡೆಕ್ಸ್ ಇದೆ ಮತ್ತು ಡಯಾಬಿಟಿಸ್ ಇದ್ದರೂ ಇದನ್ನು ಸೇವಿಸಬಹುದು.

ಕಠಿಣ ವ್ಯಾಯಾಮ

ಕಠಿಣ ವ್ಯಾಯಾಮ

ಡಯಾಬಿಟಿಸ್ ಬಗ್ಗೆ ಇರುವ ಹತ್ತು ಕಟ್ಟಕತೆಗಳಲ್ಲಿ ಒಂದೆಂದರೆ ಅದು ಕಠಿಣ ವ್ಯಾಯಾಮ ಮಾಡುವುದು. ಇದು ನಿಜವಲ್ಲ, ನಿಮ್ಮ ವ್ಯಾಯಾಮವು ಆಮ್ಲಜನಕ ರಹಿತವಾದರೆ ಆಗ ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚುತ್ತದೆ. ಇದರಿಂದ ಯಾವಾಗಲೂ ವ್ಯಾಯಾಮ ಮಾಡುವಾಗ ಹೃದಯಬಡಿತದ ಮಾನಿಟರ್ ಜತೆಗೆ ಇಟ್ಟುಕೊಂಡು ಪರಿಶೀಲಿಸುತ್ತಿರಿ.

ವ್ಯಾಯಾಮ ಮಾಡದಿರುವುದು

ವ್ಯಾಯಾಮ ಮಾಡದಿರುವುದು

ಡಯಾಬಿಟಿಸ್ ಮತ್ತು ಅದರ ಆಹಾರಕ್ರಮದ ಬಗ್ಗೆ ಇರುವ ಕಟ್ಟುಕತೆಗಳಲ್ಲಿ ವ್ಯಾಯಾಮ ಮಾಡಬೇಡಿ ಎನ್ನುವುದು ಒಂದಾಗಿದೆ. ನೀವು ವ್ಯಾಯಾಮ ಮಾಡಬೇಕು. ಏರೋಬಿಕ್ಸ್ ನಿಮಗೆ ಫಿಟ್ ಆಗಿರಲು ನೆರವಾಗಿ, ತೂಕ ನಿಯಂತ್ರಿಸುತ್ತದೆ ಮತ್ತು ಸಕ್ಕರೆ ಮಟ್ಟ ಕಾಪಾಡುತ್ತದೆ.

ಸಕ್ಕರೆಮುಕ್ತ ಜೀವನ

ಸಕ್ಕರೆಮುಕ್ತ ಜೀವನ

ನಿಮಗೆ ಡಯಾಬಿಟಿಸ್ ಇದ್ದರೆ ಆಗ ಸಕ್ಕತೆ ಇಲ್ಲದ ಬಿಸ್ಕಿಟ್, ಕುಕ್ಕಿಸ್ ಮತ್ತು ಸಿಹಿ ತಿಂಡಿಗಳನ್ನು ತಿನ್ನಬಹುದು. ಡಯಾಬಿಟಿಸ್ ಬಗ್ಗೆ ಇರುವ ಈ ಕಟ್ಟುಕತೆಯನ್ನು ಹೆಚ್ಚಿನ ಜನರು ನಂಬಿದ್ದಾರೆ. ನಿಜವೆಂದರೆ ಇದು ಸಕ್ಕರೆಯಿಂದ ಮುಕ್ತವಾಗಿದೆ. ಆದರೆ ಕಾರ್ಬೋಹೈಡ್ರೆಟ್ಸ್ ಗಳಿಂದಲ್ಲ. ಇವುಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ರಕ್ತದ ಸಕ್ಕರೆ ಮಟ್ಟವು ಹೆಚ್ಚಾಗಬಹುದು.

ಇನ್ಸುಲಿನ್ ಇಂಜೆಕ್ಷನ್ ಅತ್ಯಗತ್ಯ

ಇನ್ಸುಲಿನ್ ಇಂಜೆಕ್ಷನ್ ಅತ್ಯಗತ್ಯ

ಡಯಾಬಿಟಿಸ್ ನಿಯಂತ್ರಣಕ್ಕೆ ಇನ್ಸುಲಿನ್ ಇಂಜೆಕ್ಷನ್ ಬೇಕೆನ್ನುವುದು ಒಂದು ಕಟ್ಟುಕತೆ. ಹಾರ್ಮೋನು ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಂಡಿರುವ ಟೈಪ್ 1 ಡಯಾಬಿಟಿಸ್ ಹೊಂದಿರುವವರಿಗೆ ಇದು ಬೇಕೆನ್ನುವುದು ಸತ್ಯ. ಎರಡನೇ ಮಟ್ಟದ ಡಯಾಬಿಟಿಸ್ ಹೊಂದಿರುವವರಿಗೆ ಮಾತ್ರೆಗಳು ಸಾಕಾಗುತ್ತದೆ.

ಡಯಾಬಿಟಿಸ್ ಗಂಭೀರ ಸಮಸ್ಯೆಯಲ್ಲ

ಡಯಾಬಿಟಿಸ್ ಗಂಭೀರ ಸಮಸ್ಯೆಯಲ್ಲ

ಡಯಾಬಿಟಿಸ್ ನ್ನು ನಿರ್ಲಕ್ಷಿಸಬಾರದು ಅಥವಾ ಲಘುವಾಗಿ ಪರಿಗಣಿಸಬಾರದು. ಡಯಾಬಿಟಸ್ ಗಂಭೀರ ಸಮಸ್ಯೆಯಲ್ಲವೆನ್ನುವುದು ಡಯಾಬಿಟಸ್ ಬಗ್ಗೆ ಇರುವ ಹತ್ತು ಕಟ್ಟುಕತೆಗಳಲ್ಲಿ ಒಂದಾಗಿದೆ. ಡಯಾಬಿಟಸ್ ನ್ನು ತುಂಬಾ ದೀರ್ಘ ಸಮಯದ ತನಕ ಪತ್ತೆಹಚ್ಚದಿದ್ದರೆ ಅದು ನಿಮ್ಮ ರೋಗನಿರೋಧಕ ವ್ಯವಸ್ಥೆ, ಕಿಡ್ನಿ ಮತ್ತು ಇತರ ಪ್ರಮುಖ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿದೆ.

ಟೈಪ್ 1 ರಷ್ಟು ಟೈಪ್ 2 ಕೆಟ್ಟದಲ್ಲ

ಟೈಪ್ 1 ರಷ್ಟು ಟೈಪ್ 2 ಕೆಟ್ಟದಲ್ಲ

ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಿಸದಿದ್ದರೆ ಎರಡೂ ವಿಧದ ಡಯಾಬಿಟಿಸ್ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗಬಹುದು. ಎರಡು ವಿಧದ ಡಯಾಬಿಟಿಸ್ ಗೆ ಭಿನ್ನ ರೀತಿಯ ಔಷಧಿ ಬೇಕಾಗಿರುವ ಕಾರಣ ಇದಕ್ಕೆ ವಿಭಿನ್ನ ಜೀವನಶೈಲಿ ಪಾಲಿಸಬೇಕಾಗುತ್ತದೆ.

ಔಷಧಿ ಮಾತ್ರ ಸಾಕು

ಔಷಧಿ ಮಾತ್ರ ಸಾಕು

ನೀವು ಔಷಧಿ ತೆಗೆದುಕೊಳ್ಳುತ್ತಿರುವಾಗ ಏನು ಬೇಕಾದರೂ ತಿನ್ನಬಹುದು ಎನ್ನುವುದು ಡಯಾಬಿಟಿಸ್ ಬಗ್ಗೆ ಇರುವ ಹತ್ತು ಕಟ್ಟುಕತೆಗಳಲ್ಲಿ ಒಂದಾಗಿದೆ. ಔಷಧಿಯೊಂದಿಗೆ ನೀವು ಒಂದು ಮಿತಿಯ ಪ್ರಮಾಣದಲ್ಲಿ ಕಾರ್ಬೋಹೈಡ್ರೆಟ್ಸ್ ಸೇವಿಸಿದರೆ ಆಗ ಡಯಾಬಿಟಿಸ್ ನಿಯಂತ್ರಿಸಬಹುದು.

ಇನ್ಸುಲಿನ್ ನಿಂದ ತೊಡಕುಗಳು

ಇನ್ಸುಲಿನ್ ನಿಂದ ತೊಡಕುಗಳು

ಡಯಾಬಿಟಸ್ ಬಗ್ಗೆ ಇರುವ ಮತ್ತೊಂದು ಕಟ್ಟುಕತೆಯೆಂದರೆ ಇನ್ಸುಲಿನ್ ಹಾನಿಕಾರವೆನ್ನುವುದು. ಇನ್ಸುಲಿನ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅತ್ಯಂತ ಸುರಕ್ಷಿತ ಹಾರ್ಮೋನು.

Read more about: health, ಆರೋಗ್ಯ
English summary

10 myths about diabetes

Did you know, according to a recent research, around 61 Mn people from India and 24Mn from US have diabetes.
Please Wait while comments are loading...
Subscribe Newsletter