For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ಆಹಾರ ಕ್ರಮ ಹೀಗಿದ್ದರೆ ಒಳ್ಳೆಯದು

By Super
|

ನೀವು ಮಧುಮೇಹಿಯಾಗಿದ್ದರೆ(ಡಯಾಬಿಟಿಕ್ ) ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ವಿಧಾನವೆಂದರೆ ಅದು ಆಹಾರಕ್ರಮ. ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಯಸ್ಸು, ಲಿಂಗ, ತೂಕ, ಎತ್ತರ, ದೈಹಿಕ ಕೆಲಸ ಇತ್ಯಾದಿಗಳಿಗೆ ಅನುಗುಣವಾಗಿ ಆಹಾರ ಕ್ರಮವು ಬದಲಾಗುತ್ತದೆ. ಡಯಾಬಿಟಿಸ್ ಒಂದನೇ ಅಥವಾ ಎರಡನೇ ವಿಧದ್ದಾಗಿರಬಹುದು. ಶೇಕಡಾ 80ರಷ್ಟು ಡಯಾಬಿಟಿಸ್ ರೋಗಿಗಳು ಎರಡನೇ ವಿಧದ ಡಯಾಬಿಟಿಸ್ ನಿಂದ ಬಳಲುತ್ತಿರುತ್ತಾರೆ. ಎರಡನೇ ವಿಧದಲ್ಲಿ ಮೇಧೋಜೀರಕ ಗ್ರಂಥಿಗಳು ಹೆಚ್ಚಿನ ಇನ್ಸುಲಿನ್ ನ್ನು ಶ್ರವಿಸುತ್ತದೆ. ಆದರೆ ದೇಹದ ಜೀವಕೋಶಗಳು ಇದಕ್ಕೆ ಪ್ರತಿಕ್ರಿಯಿಸಲು ವಿಫಲವಾಗುತ್ತದೆ.

ಸರಿಯಾದ ಆಹಾರ ಕ್ರಮದಿಂದ ಡಯಾಬಿಟಿಸ್ ಇರುವ ರೋಗಿಗಳು ಆರೋಗ್ಯಕರ ಜೀವನ ಸಾಗಿಸಬಹುದು. ಆರೋಗ್ಯಕರ ಆಹಾರವೆಂದರೆ ಏನು? ಒಂದು ಸಲ ಡಯಾಬಿಟಿಕ್ ಡಯಟ್ ಎಂದು ಗೂಗಲ್ ಮಾಡಿ ಆಗ ನಿಮಗೆ ಲೆಕ್ಕವಿಲ್ಲದಷ್ಟು ಉತ್ತರ ಸಿಗುತ್ತದೆ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ನಿಮ್ಮಲ್ಲಿ ಗೊಂದಲವುಂಟಾಗಬಹುದು. ಇದರ ಬಗ್ಗೆ ತಜ್ಞರನ್ನು ಕೇಳಿದರೆ, ನಾರಿನಾಂಶ, ಹಸಿರು ತರಕಾರಿ, ಹಣ್ಣು, ಹಾಲು ಇತ್ಯಾದಿ ಆಹಾರ ಕ್ರಮದಲ್ಲಿ ಸೇರಿಸಲು ಸಲಹೆ ನೀಡುತ್ತಾರೆ. ಇದೆಲ್ಲವೂ ಪರಿಣಾಮ ಬೀರಬೇಕೆಂದರೆ ದೈಹಿಕ ಚಟುವಟಿಕೆಗಳು ಕೂಡ ಮುಖ್ಯ. ಈ ಎಲ್ಲಾ ಆಹಾರಗಳನ್ನು ಒಂದು ಮಿತಿಯಲ್ಲಿ ತೆಗೆದುಕೊಳ್ಳಬೇಕೆನ್ನುವುದು ನೆನಪಿರಲಿ.

Diabetes Diet: Do‘s and Don’ts

ಡಯಾಬಿಟಿಸ್ ಇರುವವರು ಏನು ಸೇವಿಸಬೇಕು ಅಥವಾ ಏನು ಸೇವಿಸಬಾರದು ಎನ್ನುವ ಬಗ್ಗೆ ಚಿಂತಿಸಿ ಒತ್ತಡಕ್ಕೆ ಒಳಗಾಗಬಾರದು. ಡಯಾಬಿಟಿಸ್ ಇರುವವರು ಆಹಾರ ಕ್ರಮದಲ್ಲಿ ಪಾಲಿಸಬೇಕಾದ ಮತ್ತು ಪಾಲಿಸಬಾರದ ಕೆಲವು ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ಏನು ಮಾಡಬೇಕು?
* ನೀರು-ಜೀವನದ ಅಮೃತ
ಮೊದಲನೇಯದಾಗಿ ದೇಹದಲ್ಲಿ ಯಾವಾಗಲೂ ನೀರಿನಾಂಶ ಇರುವಂತೆ ನೋಡಿಕೊಳ್ಳಿ, ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಎಲ್ಲಿಗೆ ಹೋದರೂ ಒಂದು ಬಾಟಲಿ ನೀರನ್ನು ಹಿಡಿದುಕೊಂಡು ಹೋಗಿ. ಪ್ರತೀ ಅರ್ಧಗಂಟೆಗೊಮ್ಮೆ ನೀರು ಸೇವಿಸಿ.

* ಆಹಾರ ಕ್ರಮದಲ್ಲಿ ಕೆಫಿನ್ ಇರುವ ಟೀ ಗಿಂತ ಹರ್ಬಲ್ ಟೀ ಸೇರಿಸಿ. ಗ್ರೀನ್ ಟೀ, ಜಿಂಜರ್ ಟೀ ಅಥವಾ ನಿಮಗೆ ಇಷ್ಟವಾಗುವ ಇತರ ಯಾವುದೇ ಹರ್ಬಲ್ ಟೀ ಆಯ್ಕೆ ಮಾಡಬಹುದು. ಈ ಟೀಯನ್ನು ಸಕ್ಕರೆ ಹಾಕದೆ ಅಥವಾ ತುಂಬಾ ಕಡಿಮೆ ಕ್ಯಾಲೊರಿ ಇರುವ ಸಿಹಿಕಾರಕವನ್ನು ಸೇರಿಸಿ ಸೇವಿಸಿ.

* ಕೊಬ್ಬು ರಹಿತ ಆಹಾರ ಸೇವಿಸಿ
ಡಯಾಬಿಟಿಸ್ ಇರುವವರು ಯಾವಾಗಲೂ ಕೊಬ್ಬು ರಹಿತ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳಬೇಕು.

* ತರಕಾರಿಗೆ ಮೊದಲ ಆದ್ಯತೆ
ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಮೂರು ಬಗೆಯ ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ.

* ಈರುಳ್ಳಿ ಒಳ್ಳೆಯ ಮದ್ದು
ಈರುಳ್ಳಿಯನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ. ಇದು ಜೀರ್ಣಕ್ರಿಯೆಗೆ ನೆರವಾಗುತ್ತದೆ.

* ಹಣ್ಣುಗಳನ್ನು ಸೇವಿಸಿ
ಚಿಕ್ಕು, ಮಾವು, ಬಾಳೆಹಣ್ಣಿನಂತಹ ಹಣ್ಣುಗಳನ್ನು ಸಣ್ಣ ಪ್ರಯಾಣದಲ್ಲಿ ಸೇವಿಸಿ.

* ಭಾರತದ ನೇರಳೆ ಹಣ್ಣು ಅಥವಾ ಜಾಮೂನ್ ಡಯಾಬಿಟಿಕ್ ಗೆ ಒಳ್ಳೆಯ ಆಹಾರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮಾರ್ಥ್ಯ ಹೊಂದಿದ್ದು, ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ.

* ಕಹಿ ಹಾಗಲಕಾಯಿ ಡಯಾಬಿಟಿಕ್ ಆಹಾರ ಕ್ರಮದಲ್ಲಿ ಸೇರಿಸಲೇಬೇಕಾದ ತರಕಾರಿ. ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ಕಡಿಮೆ ಮಾಡುತ್ತದೆ.

* ನಿಮ್ಮ ಆಹಾರದಲ್ಲಿ ಆಗಸೆ ಬೀಜ ಮತ್ತು ದಾಲ್ಚಿನ್ನಿ ಸೇರಿಸಬಹುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಮತ್ತು ಗ್ಲೂಕೋಸ್ ನ ಚಯಾಪಚಯ ಕ್ರಿಯೆಯೆನ್ನು ಸುಧಾರಿಸುತ್ತದೆ.

* ನಿಮ್ಮ ಡಯಾಬಿಟಿಸ್ ಆಹಾರ ಕ್ರಮದಲ್ಲಿ ಉತ್ಕರ್ಷಣ ಉತ್ಕರ್ಷಣ ನಿರೋಧಕಗಳನ್ನು ಸೇರಿಸಲು ಮರೆಯದಿರಿ. ಡಯಾಬಿಟಿಸ್ ಮುಕ್ತ ರಾಡಿಕಲ್, ವಿಟಮಿನ್ ಸಿ, ವಿಟಮಿನ್ ಇ ಇತ್ಯಾದಿಗಳನ್ನು ಉತ್ಪಾದಿಸುತ್ತದೆ.

ಮಾಡಬಾರದ್ದು....
* ಡಯಾಬಿಟಿಕ್ ಆಹಾರ ಪಥ್ಯದ ವೇಳೆ ಮಾಡಲೇಬಾರದ ಮೊದಲ ವಿಷಯವೆಂದರೆ ಊಟ ತ್ಯಜಿಸಬಾರದು. ಇದರಿಂದ ನಿಮ್ಮ ಸಕ್ಕರೆ ಮಟ್ಟ ಸಮತೋಲನ ಕಳಕೊಳ್ಳುತ್ತದೆ.

* ನಿಮ್ಮ ಫೇವರಿಟ್ ಚಾಕಲೆಟ್, ಐಸ್ ಕ್ರೀಂ ಮತ್ತು ಕುಕ್ಕೀಸ್ ಗಳನ್ನು ತಿನ್ನಬೇಡಿ.

* ಅನ್ನವನ್ನು ಕಡೆಗಣಿಸಿ ಮತ್ತು ಆಹಾರ ಪಥ್ಯದಲ್ಲಿ ಹೆಚ್ಚಿನ ನಾರಿನಾಂಶ ಸೇರಿಸಿ.

* ಕರಿದ ಬಟಾಟೆ ನಿಮಗಿಷ್ಟವಾಗಿದ್ದರೆ ಅದನ್ನು ತ್ಯಜಿಸಿ. ಅದರ ಬದಲಿಗೆ ಬೇಯಿಸಿ ತಿನ್ನಿ.

* ಡಯಾಬಿಟಿಕ್ ಆಹಾರ ಕ್ರಮದಲ್ಲಿ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ. ನೀವು ಡಯಾಬಿಟಿಸ್ ರೋಗಿಯಾಗಿರುವ ಕಾರಣ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ.

* ನೀವು ಹೆಚ್ಚು ತಿನ್ನುವವರಾಗಿರಬಹುದು. ಆದರೆ ಅದನ್ನು ನಿಯಂತ್ರಣದಲ್ಲಿಡುವುದು ಅತ್ಯಗತ್ಯ.

* ದಿನದಲ್ಲಿ ಎರಡಕ್ಕಿಂತ ಹೆಚ್ಚು ಕಪ್ ಟೀ ಅಥವಾ ಕಾಫಿ ಕುಡಿಯಬೇಡಿ. ಇದನ್ನು ಕಠಿಣವಾಗಿ ಪಾಲಿಸಿ.

* ನೀವು ಮಾಂಸಹಾರಿಯಾಗಿದ್ದರೆ ಕೆಂಪು ಮಾಂಸ ತ್ಯಜಿಸಿ, ಮೊಟ್ಟೆ ಮತ್ತು ಕೋಳಿ ತಿನ್ನುವುದನ್ನು ಕಡಿಮೆ ಮಾಡಿ.

* ಅಲ್ಕೊಹಾಲ್ ಮತ್ತು ಧೂಮಪಾನ ತ್ಯಜಿಸಿ. ಡಯಾಬಿಟಿಸ್ ಇರುವವರು ಈ ಎರಡು ಅಭ್ಯಾಸ ಮಾಡಲೇಬಾರದು.

* ಹೊರಗಿನ ಒತ್ತಡದಿಂದ ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಡಿ.

English summary

Diabetes Diet: Do‘s and Don’ts

For those who are diabetic, you may not take the pain and stress of thinking what to do and what not to do. Here we bring you a few do’s and don’ts s in a diabetes diet.
Story first published: Friday, November 15, 2013, 10:12 [IST]
X
Desktop Bottom Promotion