For Quick Alerts
ALLOW NOTIFICATIONS  
For Daily Alerts

ಸಕ್ಕರೆ ಮಧುಮೇಹಕ್ಕೆ ಕಾರಣ ಎಂಬ ಸುಳ್ಳು!

By Mahesh
|
Sugar-facts and myths
ಹಲವು ವರ್ಷಗಳಿಂದ ಜನರಲ್ಲಿ ಸಕ್ಕರೆಯ ಬಗ್ಗೆ ಪೂರ್ವಭಾವಿ ಕಲ್ಪನೆಯಿದ್ದು, ಅದನ್ನು ಕಳಪೆ ಆಹಾರವೆಂದು ಪರಿಗಣಿಸಿದ್ದಾರೆ. ಸಕ್ಕರೆಯ ಸೇವನೆ ಕಡಿಮೆಗೊಳಿಸಿದ ಕಾರನ ಹ್ಯೆಪಗ್ಲೈಸಿಮಿಯಾ ಅಥವಾ ಕನಿಷ್ಠ ರಕ್ತದ ಮಧುಮೇಹದ ಕಾರಣ ದೇಹದ ಪರಿಸ್ಥಿತಿ ಅತಿರೇಕಕ್ಕೆ ತಿರುಗುವ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚಿವೆ. ಸಕ್ಕರೆ ಮತ್ತು ಸಕ್ಕರೆ ಆಹಾರದ ಬಳಕೆಯನ್ನು ಸುತ್ತುವರಿದಂತೆ ಹಲವು ಸುಳ್ಳುಗಳಿವೆ. ಸ್ಪಷ್ಟ ಉದ್ದವಾದ ಸುಳ್ಳು ಮತ್ತು ತಪ್ಫುತಿಳುವಳಿಕೆಯನ್ನು ಸುತ್ತುವರದ ಹತ್ತಿರದ ನೋಟವನ್ನು ನಾವು ತೆಗೆದುಕೊಳ್ಳೋಣ.

ಸಕ್ಕರೆಯ ಸುಳ್ಳು #1: ಸಕ್ಕರೆ ಮಧುಮೇಹಕ್ಕೆ ಕಾರಣವಾಗುತ್ತದೆ.

ಅತಿಯಾಗಿ ಸಕ್ಕರೆಯನ್ನು ತಿನ್ನುವುದು ಮಧುಮೇಹಕ್ಕೆ ಕಾರಣವಾಗುತ್ತದೆಂದು ಜನರಲ್ಲಿ ಅರಿವಿದೆ. ಇದು ನಿಜವಲ್ಲ. ಒಂದನೇ ತರಹ(Type 1)ದ ಮಧುಮೇಹ ಅನುವಂಶ ಮತ್ತು ಇನ್ನಿತರೆ ತಿಳಿಯದ ಕಾರಣಗಳಿಂದ ಸಂಭವಿಸುತ್ತದೆ. ಮತ್ತು ಎರಡನೇ ತರಹ(Type 2)ದ ಮಧುಮೇಹ ಅನುವಂಶ ಮತ್ತು ಜೀವನಶೈಲಿಯ ಕಾರಣದಿಂದ ಸಂಭವಿಸುತ್ತದೆ. ಮಧುಮೇಹದ ಜನರಿಗೆ ತಮ್ಮ ಜೀವನಶೈಲಿಯನ್ನು ನಿರ್ವಹಿಸಲು ಮತ್ತು ತಮ್ಮ ಪಥ್ಯೆಯಲ್ಲಿ ಸಕ್ಕರೆಯನ್ನು ಬಳಸಲು ಅಸಮರ್ಥರಾದ ಕಾರಣ ಸಕ್ಕರೆಯ ಸೇವನೆಯನ್ನು ಕಡಿವಗೊಳಿಸಲು ತಿಳಿಸಲಾಗಿದೆ. ಆದರೆ, ಮಧುಮೇಹಕ್ಕೆ ಸಕ್ಕರಯ ಕಾರಣವೆಂದು ಅರ್ಥವಲ್ಲ.

ಸಕ್ಕರೆಯ ಸುಳ್ಳು #2: ಸಕ್ಕರೆ ಉದ್ರೇಕ ಚಟುವಟಿಕೆಗೆ ಕಾರಣವಾಗುತ್ತದೆ.

ಸಕ್ಕರೆಯ ಬಗ್ಗೆ ಇನ್ನೊಂದು ಸಾಮಾನ್ಯವಾದ ತಪ್ಪು ತಿಳುವಳಿಕೆ ಏನೆಂದರೆ ಸಕ್ಕರೆಯುತ ಆಹಾರ ಮಕ್ಕಳಲ್ಲಿ ಉದ್ರೇಕ ಚಟುವಟಿಕೆಗೆ ಕಾರಣವಾಗುತ್ತದೆ. ತಮ್ಮ ಮಕ್ಕಳ ನಡವಳಿಕೆಗೆ ತಂದ-ತಾಯಿಗಳು ತಕ್ಷಣ ಸಕ್ಕರಯ ಮೇಲೆ ಆಪಾದನ ಮಾಡುತ್ತಾರ. ಸಕ್ಕರೆಯು ಉದ್ರೇಕತೆಗೆ ಕಾರಣವಾಗುತ್ತದೆಂದು ಎಲ್ಲಿಯೂ ಸಾಬೀತಾಗಿಲ್ಲ.

ಆದರೂ ಸಹ ಕೆಲವು ವಿಷಯಗಳಲ್ಲಿ ಅನುವಂಶೀಯ ಘಟಕಗಳಾಗಿ ಗೋಚರಿಸುತ್ತವೆ. ಆದ್ದರಿಂದ ತಂದೆ-ತಾಯಿಗಳು ಉದ್ರೇಕತೆಗೆ ಸಕ್ಕರೆಯ ಮೇಲೆ ಏಕೆ ಆಪಾದನೆ ಮಾಡುತ್ತಾರೆ? ಒಂದು ಸಂಶೋಧನೆ ಯಲ್ಲಿ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಸಕ್ಕರೆಯುತ ಪಾನೀಯಗಳನ್ನು ನೀಡಿದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ತದನಂತರದ ವರ್ತನೆಯನ್ನು ಉದ್ರೇಕ ಚಟುವಟಿಕೆಯಾಗಿ ಗುರುತಿಸಲಾಗಿದೆ ಎಂದು ಕಂಡುಹಿಡಿಯಲಾಗಿದೆ. ವ್ಯತ್ಯಾಸವಿರುವುದು ತಂದೆ-ತಾಯಿಯರ ಮನಸ್ಸಿನಲ್ಲಿ.

ಸಕ್ಕರೆಯ ಸುಳ್ಳು #3: ಸಕ್ಕರೆ ತೂಕದ ಗಳಿಕೆಗೆ ಕಾರಣವಾಗುತ್ತದೆ.

ಜನರು ಆಗಾಗ ಸಕ್ಕರೆಯನ್ನು ತೂಕದ ಕಾರಣವಾಗಿ ಹಿಡಿದಿದ್ದಾರೆ. ಅದೇ ಸಮಯದಲ್ಲಿ ಸಕ್ಕರೆಯಿಂದ ಅಲ್ಲ. ಆದರೆ, ತಮ್ಮ ಬೊಜ್ಜಿನಿಂದ ಹೆಚ್ಚಿನ ಕ್ಯಾಲರಿಗಳು ಉತ್ಪತ್ತಿಯಾಗುತ್ತದೆ ಎಂಬುದನ್ನು ಮರೆಯುತ್ತಾರೆ. ಮತ್ತು ಬೊಜ್ಜಿನಲ್ಲಿ ಸಕ್ಕರೆಗಿಂತ ಎರಡುಪಟ್ಟು ಕ್ಯಾಲರಿಗಳು ಇರುತ್ತವೆ. ಅವಶ್ಯಕತೆಗಿಂತ ನೀವು ಹೆಚ್ಚು ಸಕ್ಕರೆ ತಿಂದರೆ ದೇಹದಲ್ಲಿ ತೂಕ ಹೆಚ್ಚಾಗಿ, ಬೊಜ್ಜಿಗೆ ಕಾರಣವಾಗುತ್ತದೆ. ಯಾವುದೊಂದು ಆಹಾರದ ಗುಂಪು ತೂಕವನ್ನು ಹೆಚ್ಚಿಸಲು ಆಗುವುದಿಲ್ಲ.

ಏಕೆಂದರೆ, ಎಲ್ಲಾ ಆಹಾರದ ಪದಾರ್ಥಗಳು ಕ್ಯಾಲರಿಯನ್ನು ಹೊಂದಿರುತ್ತವೆ. ಬೇರೆ ಕಾರ್ಬೋಹೈಡ್ರೇಟ್ ಗಳು ಮತ್ತು ಪ್ರೋಟೀನ್ ಗಳಂತೆ ಸಕ್ಕರೆಯೂ ಸಹ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆಧುನೀಕತೆಯಲ್ಲಿ ತಿಂದಾಗ ಸಕ್ಕರೆಯೂ ಸಹ ಆರೋಗ್ಯಯುತ ಪಥ್ಯೆಯ ಇನ್ನೊಂದು ಭಾಗದಂತಿರುತ್ತದೆ. ತಡೆಯಾಜ್ಞೆಯನ್ನು ಹೂಡುವುದು ಮತ್ತು ಆಹಾರದಲ್ಲಿ ಸಕ್ಕರೆಯನ್ನು ಕಡಿಮೆಗೊಳಿಸುವುದರ ಬದಲು ಪೌಷ್ಟಿಕ ಬೆಲೆಯುಳ್ಳ ಆಹಾರಕ್ಕೆ ಒತ್ತು ಕೊಟ್ಟು ಎಲ್ಲಾ ಆಹಾರವನ್ನು ಉಪಭೋಗಿಸುವುದು ಮುಖ್ಯವಾದದ್ದು.

ಸಕ್ಕರೆಯ ಸುಳ್ಳು # 4: ಸಕ್ಕರೆ ವ್ಯಸನತೆಗೆ ಕಾರಣವಾಗುತ್ತದೆ.

ಇತರೆ ಆಹಾರಗಳಿಗೆ ಹೋಲಿಸಿದರೆ, ಸಿಹಿ ಮತ್ತು ಸಕ್ಕರೆಯುತ ಆಹಾರಗಳು ಹತ್ತಿಕ್ಕಲಾಗದಂತಹದ್ದು. ಅದು ನಮಗೆ ಸಕ್ಕರೆಯ ಬಗ್ಗೆ ಸ್ವಾಭಾವಿಕವಾದ ಪ್ರೀತಿ ಇರುವಂತೆ ತಿರುಗಿಸುತ್ತದೆ ಮತ್ತು ಸಾಮಾನ್ಯವಾಗಿ ಪ್ರಶಸ್ತಿ ಅಥವಾ ಇನ್ನಾವುದರಂತೆಯೇ ಆಸೆ ಪಡುವಂತೆ ಮಾಡುತ್ತದೆ. ಸಿಹಿ ಆಹಾರಗಳು ಪ್ರಾಶ ಸ್ತ್ಯಕ್ಕೆ ಕಾರಣವಾಗುವಂತೆ ನಮ್ಮ ದೇಹದಲ್ಲಿ ಜೀನುಗಳಿರುತ್ತವೆ ಎಂದು ಸಂಶೋಧನೆ ಸ್ಥಾಪಿಸಿವೆ. ನಿಜವಾದ ವ್ಯಸನತೆಗಿಂತ ಸಿಹಿ ಆಹಾರಕ್ಕೆ ಆಸೆಪಡುವುದು ಹೆಚ್ಚಾಗಿ ಒಂದು ಕೆಟ್ಟ ಹವ್ಯಾಸ.

ವಾಪಸಾತಿ ಲಕ್ಷಣಗಳನ್ನೊಳಗೊಂಡ ಮಾನಸಿಕ ಮತ್ತು ದೈಹಿಕ ಅವಲಂಬನೆ ಅಥವಾ ಎರಡನ್ನಾಗಿಯೂ ವ್ಯಸನvಯನ್ನು ನಿರೂಪಿಸಲಾಗಿದೆ. ಅಂತಹ ಯಾವುದೇ ಸಂದರ್ಭಗಳು ಸಕ್ಕರೆ ಅಥವಾ ಇನ್ನಿತರ ಸಕ್ಕರೆ ಪಿಷ್ಟಗಳಲ್ಲಿ ಸಂಭವಿಸುವುದಿಲ್ಲ. ಆದ್ದರಿಂದ, ಸಕ್ಕರೆ ವ್ಯಸನತೆಗೆ ಕಾರಣವಾಗುತ್ತದೆಂದು ಹೇಳುವುದು ತಪ್ಪು. ಸಕ್ಕರೆ ಮತ್ತು ಸಕ್ಕರೆ ಪಿಷ್ಟಗಳನ್ನು ಹೊಂದಿರುವ ಆಹಾರವನ್ನು ಸೌಖ್ಯವಾದ ಆಹಾರವೆಂದು ಪರಿಗಣಿಸಲಾಗಿದೆ. ಉದ್ವೇಗದ ಜನರು ದುಖ: ಆಥವಾ ಆಶಾಭಂಗವನ್ನು ಅನುಭವಿಸಿದಾಗ ಇಂತಹ ತರಹದ ಆಹಾರವನ್ನು ಹೊಂದಲು ಇಚ್ಚಿಸುತ್ತಾರೆ.

ಸಕ್ಕರೆಯ ಸುಳ್ಳು #5: ಅತಿಯಾಗಿ ಸಕ್ಕರೆ ತಿನ್ನುವುದರಿಂದ ಹಲ್ಲುಗಳ ಕೊಳೆತಕ್ಕೆ ಕಾರಣವಾಗುತ್ತದೆ.

ಕ್ಯಾಂಡಿಗಳಂತಹ ಸಿಹಿ ತಿಂಡಿಗಳು ಹಲ್ಲುಗಳ ಕ್ಯಾವಿಟಿಗೆ ಕಾರಣವಾಗುತ್ತದೆಂದು ಆಗಾಗ ತಂದೆ-ತಾಯಿಗಳು ಮಕ್ಕಳಿಗೆ ಎಚ್ಚರಿಕೆ ನೀಡುತ್ತಿರುತ್ತಾರೆ. ಸಕ್ಕರೆಯಿಂದ ದೂರವಿರಬೇಕೆಂದು ಒತಯಿಸುವುದು ಸಂಪೂರ್ಣವಾಗಿ ಸರಿಯಲ್ಲವೆಂದು ತಿಳಿಯಲು ಮಕ್ಕಳು ಬಹುಶ: ತುಂಬ ಸಂತೋಷಪಡುತ್ತಾರೆ. ತಮ್ಮ ತಂದೆ-ತಾಯಂದಿರು ಸ್ಪಲ್ಪ ಮಟ್ಟಿಗೆ ಸರಿಯಿದ್ದರೂ ಇಡೀ ವಸ್ತು ಸ್ವಲ್ಪ ಮಟ್ಟಿಗೆ ಜಟಿಲವಾಗಿದೆ. ಸಮಸ್ಯೆ ಇರುವುದು ತಿಂದ ಸಕ್ಕರೆಯ ಪ್ರಮಾಣದಲ್ಲಲ್ಲ. ಸಕ್ಕರೆ ಹಲ್ಲಿನ ಸಂಪರ್ಕದಲ್ಲಿದ್ದ ಸಮಯದಲ್ಲಿ. ಹೆಚ್ಚು ಸಮಯದವರೆಗೂ ಇರುವ ನಿಧಾನವಾಗಿ ಕರಗುವ ಕ್ಯಾಂಡಿ ಮತ್ತು ಸೋಡಾಗಳು ಬೇಗ ಕರಗುವ ಕ್ಯಾಂಡಿ ಬಾರ್‌ಗಳಿಗಿಂತ ಹೆಚ್ಚು ಅಪಾಯಕಾರಿಯಾದದ್ದು.

ಸಕ್ಕರೆಯ ಸುಳ್ಳು #6 : ಹೃದಯ ಸಂಬಂಧಿ ರೋಗಗಳಿಗೆ ಸಕ್ಕರೆ ಜವಾಬ್ದಾರಿಯಾಗಿದೆ.

ಹಲವು ಜನರು ಹೆಚ್ಚಿನ ಸಕ್ಕರೆ ಸೇವಿಸುವುದರಿಂದ ಹೃದಯ ರೋಗಗಳಿಗೆ ಕಾರಣವಾಗುತ್ತದೆಂದು ನಂಬಿದ್ದಾರೆ. ಸಕ್ಕರೆಯು ಹೃದಯಕ್ಕೆ ಸಂಬಂದಿಸಿದ ರಕ್ತನಾಳದ ರೋಗಗಳಿಗೆ ಸ್ವತಂತ್ರ ಅಪಾಯಕಾರಿ ಅಂಶವೆಂದು ಸ್ಥಾಪಿಸಲು ಯಾವುದೇ ನಿರ್ಣಾಯಕ ಸಾಕ್ಷಿ ಇಲ್ಲ. ಸಕ್ಕರೆ ಮತ್ತು ಹೃದಯ ರೋಗವನ್ನು ಸೇರಿಸುವ ಯಾವುದೇ ಹೊಂದಿಕೆಯಾಗುವ ಸಂಘವಿಲ್ಲ. ಹೃದಯ ರೋಗದ ಪ್ರಮುಖ ಕಾರಣಗಳು ಕುಟುಂಬದ ಇತಿಹಾಸ, ಹೆಚ್ಚಿನ ಜಿಡ್ಡಿನ ಮಟ್ಟ, ಹೆಚ್ಚಿನ ರಕ್ತದ ಒತ್ತಡ ಮತ್ತು ಅತಿಯಾದ ತೂಕಗಳನ್ನು ಒಳಗೊಂಡಿರುತ್ತದೆ.

ಸಕ್ಕರೆಯು ಮಧುಮೇಹ, ಹೃದಯ ರೋಗ, ಬೊಜ್ಜು, ಹೈಪೋಗ್ಲೈಸಿಮಿಯಾ, ಶಿಶು ಅವಸ್ಥೆಯಲ್ಲಿ ಉದ್ರೇಕತೆ ಅಥವಾ ಪೋಷಕಾಂಶಗಳ ಕೊರತೆಯನ್ನು ಉಂಟುಮಾಡುವುದಿಲ್ಲ.

ಹಲವು ವರ್ಷಗಳಿಂದ ಸಕ್ಕರೆ ಬಲಿಪಶುವಿನಂತೆ ಕಾಣಲಾಗುತ್ತಿದೆ. ಸಕ್ಕರೆ ಆಹಾರದಲ್ಲಿ ಅತ್ಯಾವಶ್ಯಕ ಮತ್ತು ದೂರವಿಡಲು ಸಾಧ್ಯವಿಲ್ಲ. ಇಲ್ಲಿ ಒಂದೇ ಒಂದು ಪ್ರಮುಖ ಅಂಶ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಎಂದರೆ, ಯಾವುದೇ ಆಗಲೀ, ಅತಿ ಆದರೆ ಕೆಡಕಾಗುವುದು. ಆದ್ದರಿಂದ ಒಂದು ಆರೋಗ್ಯಯುತ ಜೀವನ ಶೈಲಿಯನ್ನು ನಡೆಸುವುದು. ನಾಗರೀಕತೆಯ ಉದ್ದ ಸಿಹಿ ಆಹಾರವನ್ನು ತಿನ್ನುವಲ್ಲಿ ನೀವು ಹೆದರಬೇಡಿ. [ಮಧುಮೇಹ]

English summary

Sugar Myths Diabetes | Diet & Nutrition Myths | Sugar Obesity | ಸಕ್ಕರೆ ಬಗ್ಗೆ ನಂಬಿಕೆ ಮಧುಮೇಹ| ಸಮತೋಲನ ಆಹಾರ ಪೌಷ್ಟಿಕಾಂಶ ನಂಬಿಕೆ| ಸಕ್ಕರೆ ಸ್ಥೂಲದೇಹಿ|

Here is facts and myths about Sugar. usually there is a criticism against sugar that it is harmful and lead to diabetes. Diet & Nutrition experts say too little sugar wreaks havoc on all the bodies essential mechanisms. so, refined table sugar (sucrose) continues to be consumed in staggering amounts.
X
Desktop Bottom Promotion