For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ ಗೂ ಬಿಪಿಗೂ ಸಂಬಂಧವಿದೆಯೇ?

By Dr Arpandev Bhattacharyya
|
Diabetes In Connection To BP And Cholesterol
ಡಯಾಬಿಟಿಸ್ ಗೂ ಬಿಪಿಗೂ ಸಂಬಂಧವಿದೆಯೇ?

ವಯಸ್ಕರಲ್ಲಿ ಕಾಣಿಸುವ ಮಧುಮೇಹ (ಟೈಪ್ 2)ಕ್ಕೂ ರಕ್ತದೊತ್ತಡಕ್ಕೂ ಖಂಡಿತಾ ನಂಟಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಸಕ್ಕರೆ ಕಾಯಿಲೆಯುಳ್ಳವರು ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಸೂಚಿಸಲಾಗಿದೆ. 130/80 mm og Hg ಗುರಿ ಮುಟ್ಟಿದರೂ, ಅಗತ್ಯಬಿದ್ದರೆ ಕಾಲಕಾಲಕ್ಕೆ ಗುಳಿಗೆಗಳನ್ನು ಸೇವಿಸತಕ್ಕದ್ದು. ಒಟ್ಟಿನಲ್ಲಿ ಮಧುಮೇಹಿಗಳು ಸಕ್ಕರೆ ಅಂಶ ನಿಯಂತ್ರಣದ ಜೊತೆಗೆ ರಕ್ತದೊತ್ತಡವನ್ನು ಕಾಯ್ದುಕೊಳ್ಳುವುದು ತುಂಬಾ ಅವಶ್ಯ.

ಕೊಲೆಸ್ಟ್ರಾಲ್ ನಿಯಂತ್ರಣ ಹೇಗೆ ಸಾಧ್ಯ?

ನಿಮಗೆ ಸಕ್ಕರೆ ಕಾಯಿಲೆ ಇದ್ದರೆ ರಕ್ತದಲ್ಲಿನ ಕೊಬ್ಬಿನ ಅಂಶವಾದ ಕೊಲೆಸ್ಟ್ರಾಲ್ ಹೆಚ್ಚಿರುವ ಸಾಧ್ಯತೆ ಶೇ.50ರಷ್ಟು ಅಧಿಕ ಎಂದು ತಿಳಿದುಬಂದಿದೆ. ಕೊಲೆಸ್ಟ್ರಾಲ್ ನಿಯಂತ್ರಿಸಲು ಸಮತೋಲನ ಆಹಾರ ಹಾಗೂ ದೈಹಿಕ ಕಸರತ್ತು ಅಗತ್ಯ. ನೀವು ಸ್ಥೂಲಕಾಯರಾಗಿದ್ದರೆ, ಆದಷ್ಟು ಬೇಗ ದೇಹ ತೂಕ ಇಳಿಸಿಕೊಳ್ಳಿ. ಆಗ ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ತಾನೇ ತಾನಾಗಿ ಕಮ್ಮಿಯಾಗತೊಡಗುತ್ತದೆ.

ಒಂದೆರಡು ದಿನ ಕಸರತ್ತು ಮಾಡಿ ಕೊಬ್ಬು ಇಳಿಸಿಬಿಡಬಹುದು ಎನ್ನಲಾಗುವುದಿಲ್ಲ. ಅವಿರತವಾಗಿ ನಿಯಮಿತ ಅವಧಿಯ ದೈಹಿಕ ಕಸರತ್ತು ಅತ್ಯಗತ್ಯ. ಆದರೆ, ದೈಹಿಕ ಕಸರತ್ತಿನ ಹೊರತಾಗಿಯೂ ಕೊಲೆಸ್ಟ್ರಾಲ್ ಪ್ರಮಾಣ ತಗ್ಗದಿದ್ದರೆ, ವೈದ್ಯರ ಸಲಹೆಯಂತೆ ಗುಳಿಗೆ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣ ನಮ್ಮ ಕೈಲಿದ್ದರೂ. ವೈದ್ಯರ ಸೂಚನೆ ಮೇರೆಗೆ ನಡೆಯುವುದು ಉತ್ತಮ ಹಾಗೂ ಸುರಕ್ಷಿತ.

English summary

Diabetes | Blood Pressure | Cholesterol | Health | Lifestyle | ಡಯಾಬಿಟಿಸ್| ಬಿಪಿ| ರಕ್ತದೊತ್ತಡ| ಕೊಲೆಸ್ಟ್ರಾಲ್ | ಆರೋಗ್ಯ|

Diabetes also depends on high blood pressure, It is important to control BP to control blood sugar. Cholesterol also needs to be controlled.
X
Desktop Bottom Promotion