For Quick Alerts
ALLOW NOTIFICATIONS  
For Daily Alerts

2030ರ ವೇಳೆಗೆ 8 ಕೋಟಿ ಮಧುಮೇಹಿಗಳು

By Mahesh
|
India likely to have 80 million diabetics by 2030: WHO
ನ್ಯೂಯಾರ್ಕ್, ನ.15: ಭಾರತದಲ್ಲಿ ಸಕ್ಕರೆ ಕಾಯಿಲೆ ಬಾಧಿತರ ಸಂಖ್ಯೆಯು ಈಗಿನ 3.2 ಕೋಟಿಯಿಂದ 2030ರ ವೇಳೆಗೆ 8 ಕೋಟಿಯನ್ನು ತಲುಪಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಸಕ್ತ ಭಾರತದಲ್ಲಿ 50.8 ದಶಲಕ್ಷ ಮಧುಮೇಹಿ ರೋಗಿಗಳಿದ್ದು, ಈ ಸಂಖ್ಯೆಯು 2030ರ ವೇಳೆಗೆ 87 ದಶಲಕ್ಷವನ್ನು ತಲುಪಲಿದೆ ಎಂದು 'ಇಂಟರ್‌ನ್ಯಾಶನಲ್ ಡಯಾಬಿಟೀಸ್ ಫೆಡರೇಶನ್'(IDF) ವರದಿ ಮಾಡಿದೆ ಎಂದು ಎಂಡೊಕ್ರೈನಾಲಜಿ ವಿಭಾಗದಲ್ಲಿ ಪ್ರಮುಖ ಸಲಹೆಗಾರರಾಗಿರುವ ತೀರ್ಥಂಕರ ಚೌಧುರಿ ತಿಳಿಸಿದ್ದಾರೆ.

"ವಿಶ್ವದಾದ್ಯಂತ ಈಗ ಸುಮಾರು 23 ಕೋಟಿ ಜನರು ದೀರ್ಘಾವಧಿಯ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, 20 ವರ್ಷಗಳ ಬಳಿಕ ಈ ಸಂಖ್ಯೆಯು 35 ಕೋಟಿಗೆ ತಲುಪುವ ನಿರೀಕ್ಷೆಯಿದೆ"ಎಂದು ವಿಶ್ವ ಮಧುಮೇಹ ದಿನವಾದ ಭಾನುವಾರ(ನ.14) ಅವರು ತಿಳಿಸಿದ್ದಾರೆ. ಮಧುಮೇಹ ನಿಯಂತ್ರಣದ ನಾಲ್ಕು ಪ್ರಮುಖ ಹಂತಗಳಾದ ದೈಹಿಕ ವ್ಯಾಯಾಮ, ಸಮತೋಲಿತ ಆಹಾರ, ಸೂಕ್ತ ಔಷಧ ಹಾಗೂ ತಪಾಸಣೆಗಳ ಮೂಲಕ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದವರು ಹೇಳಿದರು.

ಮಧುಮೇಹವನ್ನು ಸಮಗ್ರವಾಗಿ ನಿಯಂತ್ರಿಸುವ ನಿಟ್ಟಿನ ಕಾರ್ಯಾಚರಣೆಯು ಪ್ರತಿ ಮನೆಯಲ್ಲೂ ಕಡ್ಡಾಯವಾಗಬೇಕಾದ ಅಗತ್ಯವಿದೆ.ಮಧುಮೇಹ ನಿಯಂತ್ರಣದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವುದು ಬಹಳ ಮಹತ್ವದ ಕ್ರಮವಾಗಿದೆ. ಇದನ್ನು ಆಧರಿಸಿ ರೋಗಿಗಳು ಇನ್ಸುಲಿನ್ ತೆಗೆದು ಕೊಳ್ಳುವ ಬಗ್ಗೆ ಹಾಗೂ ಆ ಮೂಲಕ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸುರಕ್ಷಿತ ಮಟ್ಟಕ್ಕೆ ತರುವ ಬಗ್ಗೆ ನಿರ್ಧರಿಸಬಹುದಾಗಿದೆ ಎಂದರು.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಭೋಜನ ಪೂರ್ವ ಗ್ಲುಕೋಸ್ ಪ್ರಮಾಣವು 70 ರಿಂದ 130 ಮಿಲಿಗ್ರಾಂ/ಡೆಸಿಲೀಟರ್ ಹಾಗೂ ಭೋಜನಾನಂತರದ ಗ್ಲುಕೋಸ್ ಪ್ರಮಾಣವು 180 ಮಿಲಿಗ್ರಾಂ/ಡೆಸಿಲೀಟರ್‌ಗೆ ನಿಯಂತ್ರಿಸಿಕೊಳ್ಳುವ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಅಮೆರಿಕನ್ ಡಯಾಬಿಟೀಸ್ ಅಸೋಸಿಯೇಶನ್ ಶಿಫಾರಸು ಮಾಡಿರುವುದಾಗಿ ತೀರ್ಥಂಕರ್ ಹೇಳಿದರು.

English summary

Diabetes | WHO | IDF | Balanced Diet | Health | Lifestyle | Insulin | ಸಕ್ಕರೆ ಕಾಯಿಲೆ| ಆರೋಗ್ಯ| ವಿಶ್ವ ಆರೋಗ್ಯ ಸಂಸ್ಥೆ|

Tirthankar Chaudhury, a leading consultant in endocrinology quoting recent statistical figures released by IDF and WHO said the World Health Organisation (WHO) has warned that the number of diabetics in India might leap to 80 million from the present 32 million by the year 2030.
Story first published: Monday, November 15, 2010, 11:36 [IST]
X
Desktop Bottom Promotion