For Quick Alerts
ALLOW NOTIFICATIONS  
For Daily Alerts

ಡಯಾಬಿಟಿಸ್ HbA1C ಪರೀಕ್ಷೆ ಅಗತ್ಯತೆ

By Dr Arpandev Bhattacharyya
|
How should I monitor my Diabetes?

ಡಯಾಬಿಟಿಸ್ ನ ಪರಿವೀಕ್ಷಣೆ ಏಕೆ ಬೇಕು?

ಡಯಾಬಿಟಿಸ್ ತೊಂದರೆ ಬಗ್ಗೆ ಆರಂಭದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ನಿಯಮಿತ ಚಿಕಿತ್ಸಾ ವಿಧಾನ ಬಳಸದ ಮಹುಮೇಹಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಸಕ್ಕರೆ ಪ್ರಮಾಣ ಹತೋಟಿಯಲ್ಲಿದ್ದರೆ ಮಿಕ್ಕೆಲ್ಲವೂ ಸುಸ್ಥಿತಿಯಲ್ಲಿರುತ್ತದೆ ಹಾಗೂ ಆದೇ ಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು.

ಡಯಾಬಿಟಿಸ್ ನ ಪರಿವೀಕ್ಷಣೆ ಮಾಡುವುದು ಹೇಗೆ?

ಡಯಾಬಿಟಿಸ್ ನಿಯಂತ್ರಣಕ್ಕೆ ಎರಡು ಮುಖ್ಯ ಮಾರ್ಗಗಳಿವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಳೆಯುವುದು (ಗ್ಲೂಕೊ ಮೀಟರ್) ಬೆರಳಿನಿಂದ ರಕ್ತ ಶೇಖರಿಸಿ ತಕ್ಷಣದಲ್ಲೇ ಸಕ್ಕರೆ ಪ್ರಮಾಣ ತಿಳಿಯಬಹುದು. ಅಥವಾ ಯಾವುದಾದರೂ ಪಾಲಿ ಕ್ಲಿನಿಕ್ ನಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇನ್ಸು ಲಿನ್ ಇಂಜೆಕ್ಷನ್ ಬಳಸುವವರು ಹಾಗೂ ಗರ್ಭಿಣಿಯರು ಸಕ್ಕರೆ ಪ್ರಮಾಣ ತಿಳಿಯಲು ಗ್ಲೂಕೋಮೀಟರ್ ಬಳಸುವುದು ಉತ್ತಮ.

ಎರಡನೇ ವಿಧಾನದಲ್ಲಿ HbA1C ಪರೀಕ್ಷೆ ಮಾಡಲಾಗುವುದು. ಮೂತ್ರ ಪರೀಕ್ಷೆ ಮೂಲಕ ಗ್ಲುಕೋಸ್ ಪ್ರಮಾಣವನ್ನು ನಿರ್ಧರಿಸಲಾಗುವುದು.ರಕ್ತದಲ್ಲಿನ ಸಕ್ಕರೆ ಪ್ರಮಾಣ ತಿಲಿಯಲು ಮೂತ್ರ ಪರೀಕ್ಷೆಯಲ್ಲಿ 'Nil' ಎಂದು ಬಂದರೆ 180 mg ಗಿಂತ ಕಡಿಮೆ ಪ್ರಮಾಣದ ಗ್ಲುಕೋಸ್ ಇದೆ ಎಂದರ್ಥ. ಮೂತ್ರ ಪರೀಕ್ಷೆಯಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುವುದು ತಿಳಿಯುವುದರಿಂದ ಡಯಾಬಿಟಿಸ್ ಸುಸ್ಥಿತಿಯಲ್ಲಿದೆ ಎನ್ನಬಹುದು.

HbA1C ಎಂದರೇನು ಹಾಗೂ ಇದರಿಂದ ಏನು ಉಪಯೋಗ?

ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಸಿದಾಗ ಆ ಸಮಕ್ಕೆ ಗ್ಲುಕೋಸ್ ಪ್ರಮಾಣ ಎಷ್ಟಿದೆ ಎಂಬುದು ಮಾತ್ರ ತಿಳಿಯುತ್ತೆ. ಪ್ರತಿ ಗಂಟೆ, ದಿನ, ವಾರ ಹಾಗೂ ತಿಂಗಳ ಹಿಂದೆ ಸಕ್ಕರೆ ಪ್ರಮಾಣ ಎಷ್ಟಿತ್ತು ಎಂಬುದು ತಿಳಿಯುವುದಿಲ್ಲ. HbA1C ಪರೀಕ್ಷೆ ಮೂಲಕ ರಕ್ತದಲ್ಲಿನ ಸಕ್ಕರೆ ಯ ಸರಾಸರಿ ಪ್ರಮಾಣ ತಿಳಿದು ಬರುತ್ತದೆ. ಹಿಮೋಗ್ಲೋಬಿನ್ ಗೆ ಹೊಂದಿಕೊಂಡಂತಿರುವ ಸಕ್ಕರೆ ಪ್ರಮಾಣ ತಿಳಿಯುವ ಮೂಲಕ ಸುಮಾರು 3 ರಿಂದ 4 ತಿಂಗಳ ಅವಧಿಯ ಸಕ್ಕರೆ ಪ್ರಮಾಣದ ದಾಖಲೆ ಲಭ್ಯವಾಗುತ್ತದೆ. ಇದರಿಂದ ಮಧುಮೇಹದ ನಿಯಂತ್ರಣ ಸುಲಭವಾಗುತ್ತದೆ. ಆದರೆ, HbA1C ಪರೀಕ್ಷೆಯಿಂದ ಹಿಮೋಗ್ಲೋಬಿನ್ ಪ್ರಮಾಣ ತಿಳಿಯುವುದಿಲ್ಲ.

HbA1C ಎಲ್ಲರ ಕೈಗುಟಕುವ ಪರೀಕ್ಷೆಯೇ?

HbA1C ಪರೀಕ್ಷೆಗೆ ಯಾವುದೇ ಲ್ಯಾಬ್ ಗೆ ಹೋದರೂ ಗರಿಷ್ಠ 300 ರಿಂದ 400 ರು ಗಳ ವೆಚ್ಚ ತಗುಲುತ್ತದೆ. ಬ್ಲಡ್ ಶುಗರ್ ಟೆಸ್ಟ್ ಗಿಂತ ಕೊಂಚ ದುಬಾರಿಯಾದರೂ HbA1C ಪರೀಕ್ಷೆ ಅವಶ್ಯಕ. ದೀರ್ಘಾವಧಿಯಿಂದ ಸಕ್ಕರೆ ಕಾಯಿಲೆಗೆ ತುತ್ತಾಗಿರುವವರು ಕೆಲ ತಿಂಗಳ ಹಿಂದಿನ ಸಕ್ಕರೆ ಪ್ರಮಾಣವನ್ನು ತಿಳಿದು ಚಿಕಿತ್ಸಾ ವಿಧಾನ ಮುಂದುವರೆಸುವುದು ಸೂಕ್ತ. HbA1C ಪರೀಕ್ಷೆಯನ್ನು ವರ್ಷಕ್ಕೆ 3ರಿಂದ 4 ಬಾರಿ ಮಾಡಿಸಿದರೆ ಸಾಕು.

English summary

ಡಯಾಬಿಟಿಸ್ HbA1C ಪರೀಕ್ಷೆ ಅಗತ್ಯತೆ

Monitoring Diabetes is important so that you are aware of the changes in your blood sugar level. HbA1C, is also very important as it gives you the status of your Diabetes at present.
X
Desktop Bottom Promotion