For Quick Alerts
ALLOW NOTIFICATIONS  
For Daily Alerts

ಮಧುಮೇಹದಲ್ಲಿ ಬಗೆಗಳು ಯಾವ್ಯಾವು?

By Dr Arpandev Bhattacharyya
|
Types Of Diabetes And More

ಸಕ್ಕರೆ ಕಾಯಿಲೆಯಲ್ಲಿ ಎರಡು ಬಗೆಳಿವೆ. ಒಂದು ಟೈಪ್ 1 ಅಥವಾ ಇನ್ಸುಲಿನ್ ಕೊರತೆ ಹಾಗೂ ಇನ್ನೊಂದು ಟೈಪ್ 2 ಅಥವಾ ವಯಸ್ಕರಿಗೆ ಬಾಧಿಸುವ ಡಯಾಬಿಟಿಸ್. ಟೈಪ್ 1 ಡಯಾಬಿಟಿಸ್ ನಲ್ಲಿ ಪ್ಯಾಂಕ್ರಿಯಸ್ ಗ್ರಂಥಿ ಇನ್ಸುಲಿನ್ ಹಾರ್ಮೊನ್ ಅನ್ನು ಉತ್ಪಾದಿಸುವುದಿಲ್ಲ, ಅಲ್ಲದೆ ಇನ್ಸುಲಿನ್ ಇಲ್ಲದೆ ಬದುಕುಳಿಯುವುದೂ ಕಷ್ಟ.

ಟೈಪ್ 2 ಡಯಾಬಿಟಿಸ್ ನಲ್ಲಿ ಪ್ಯಾಂಕ್ರಿಯಾಸ್ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಿದರೂ ಪರಿಣಾಮಕಾರಿ ಸಂಖ್ಯೆಯಲ್ಲಿರುವುದಿಲ್ಲ ಅಥವಾ ದೇಹಕ್ಕೆ ಬೇಕಾದ ಇನ್ಸುಲಿನ್ ಪ್ರಮಾಣಕ್ಕಿಂತ ಕಮ್ಮಿಯಿರುತ್ತದೆ.ಗರ್ಭಾವಸ್ಥೆಯಲ್ಲಿನ ಮಹಿಳೆಯಿಂದ ಮಗುವಿಗೆ ತಗಲುವ ಹರಿಯುವ ಡಯಾಬಿಟಿಸ್ ಗೆ Gestational ಡಯಾಬಿಟಿಸ್ ಎನ್ನುತ್ತಾರೆ. ಹೆಚ್ಚಿನ ಪ್ರಮಾಣದ ಸ್ಟೈರೈಂಡ್ಸ್ ಗುಳಿಗೆಗಳನ್ನು ನುಂಗಿದ ಪರಿಣಾಮವಾಗಿ ಬರುವ ಡಯಾಬಿಟಿಸ್ ಗೆ chronic pancreatitis ಅಲ್ಲದೆ ಎರಡನೇ ದರ್ಜೆ ಡಯಾಬಿಟಿಎಸ್ ಎನ್ನುತ್ತಾರೆ.

ನನಗೆ ಡಯಾಬಿಟಿಸ್ ಬಂದ ತಕ್ಷಣ ನಾನೇನು ಮಾಡಬೇಕು?

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಎಷ್ಟರಮಟ್ಟಿಗಿದೆ ಎಂದು ತಿಳಿದುಕೊಂಡು ರೋಗದ ಲಕ್ಷಣಗಳನ್ನು ನಿರ್ಣಯಿಸಬೇಕು. ರೋಗ ನಿರ್ಣಯದ ನಂತರ ಮುಖ್ಯವಾಗಿ ಕಾಯಿಲೆಯನ್ನು ಒಪ್ಪಿಕೊಂಡು ಚಿಕಿತ್ಸೆಗೆ ಸಿದ್ಧವಾಗಬೇಕು. ಆರಂಭದಲ್ಲೇ ಡಯಾಬಿಟಿಸ್ ಬಗ್ಗೆ ಸಂಪೂರ್ಣ ಅರಿವು ಪಡೆಯುವುದು ಒಳ್ಳೆಯದು, ಉದಾಸೀನತೆ ತೋರಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ರೋಗದ ಬಗ್ಗೆ ತಿಳಿವಳಿಕೆ ಪಡೆಯಲು ಆರೋಗ್ಯಕ್ಕೆ ಸಂಬಂಧಿಸಿದ ಪತ್ರಿಕೆಗಳು, ಇಂಟರ್ ನೆಟ್, ಮೆಡಿಕಲ್ ಜನರಲ್ ಗಳು, ಟಿವಿಯಲ್ಲಿ ಪ್ರಸಾರವಾಗುವ ಶೈಕ್ಷಣಿಕ ಕಾರ್ಯಕ್ರಮಗಳು.. ಇತ್ಯಾದಿಗಳಿವೆ.

ಡಯಾಬಿಟಿಸ್ ಬಗ್ಗೆ ಶುಭ ಸುದ್ದಿ ಏನಿದೆ?

ಡಯಾಬಿಟಿಸ್ ರೋಗ ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ, ಅದನ್ನು ಸಂಪೂರ್ಣವಾಗಿ ನಿವಾರಣೆ ಸಾಧ್ಯವಿಲ್ಲ. ಆದರೆ, ಸರಿಯಾದ ಚಿಕಿತ್ಸಾ ಕ್ರಮ ಹಾಗೂ ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಜೀವಂತವಿರುವವರೆಗೂ ಆರೋಗ್ಯವಾಗಿರಬಹುದು. ಸದ್ಯಕ್ಕಂತೂ ಮಧುಮೇಹ ನಿವಾರಣೆ ಅಸಾಧ್ಯ, ನಿಯಂತ್ರಣ ಮಾತ್ರ ಸಾಧ್ಯ.

ವಯಸ್ಸು ಹೆಚ್ಚಾದಂತೆ ಡಯಾಬಿಟಿಸ್ ವ್ಯಾಧಿ ಉಲ್ಬಣಿಸುತ್ತಾ ಹೋಗುತ್ತದೆ, ಆದ್ದರಿಂದ , ಆರಂಭದಲ್ಲೇ ಸಮತೋಲನ ಆಹಾರ ಸೇವನೆ ಮೂಲಕ ನಿಯಂತ್ರಣಕ್ಕೆ ಒಳಪಡಿಸಬೇಕು, ಗುಳಿಗೆ ಹಾಗೂ ಇಂಜೆಕ್ಷನ್ ಕೂಡಾ ಬಳಕೆ ಮಾಡಬೇಕಾಗುವುದು. ಇದಕ್ಕೆ ಇಂತಿಷ್ಟೇ ವರ್ಷ ಎಂಬ ಕಾಲಾವಧಿ ಇಲ್ಲ. ಕೆಲವರಿಗೆ ಬರೀ ಮಾತ್ರೆ ಹಾಗೂ ಆಹಾರ, ದೈಹಿಕ ಕಸರತ್ತಿನ ಮೂಲಕ ನಿಯಂತ್ರಣಕ್ಕೆ ಬರಬಹುದು. ಮತ್ತೆ ಕೆಲವರಿಗೆ ಇನ್ಸುಲಿನ್ ಇಂಜೆಕ್ಷನ್ ಬೇಕಾಗಬಹುದು. ಡಯಾಬಿಟಿಸ್ ನಿಮ್ಮನ್ನು ನಿಯಂತ್ರಣಿಸುವ ಮುನ್ನ ಮಧುಮೇಹವನ್ನು ನೀವು ನಿಯಂತ್ರಿಸಿ.

ಸಕ್ಕರೆ ಕಾಯಿಲೆಯನ್ನು ತಡೆಗಟ್ಟಬಹುದೇ?

ವಂಶ ಪಾರಂಪಾರಾಗತವಾಗಿ ನಿಮಗೆ ಮಧುಮೇಹ ಅಂಟುಕೊಂಡಿದ್ದಾರೆ ಅದಕ್ಕೆ ಯಾವುದೇ ಪರಿಹಾರವಿಲ್ಲ. ಆರೋಗ್ಯಕರ ಆಹಾರ ಸೇವನೆ( ತರಕಾರಿ ಹಾಗೂ ಹಣ್ಣುಗಳು, ಫಾಸ್ಟ್ ಫುಡ್ ವರ್ಜಿಸುವುದು)ಆರೋಗ್ಯಕರ ಜೀವನಶೈಲಿ(ನಿಯಮಿತವಾಗಿ ದೈಹಿಕ ಕಸರತ್ತ್ತು, ಧೂಮಪಾನ ನಿಷೇಧ, ಮದ್ಯಪಾನ ಸೇವನೆಯಲ್ಲಿ ನಿಯಂತ್ರಣ..ಇತ್ಯಾದಿ) ಹಾಗು ನಿಮ್ಮ ದೇಹದ ಎತ್ತರಕ್ಕೆ ತಕ್ಕ ತೂಕವನ್ನು ಹೊಂದುವುದು. ಗಡಿರೇಖೆಯಲ್ಲಿರುವ ಡಯಾಬಿಟಿಸ್ ಅನ್ನು ನಿಯಂತ್ರಿಸುವ ಮದ್ದು ಇತ್ತೀಚೆಗೆ ಬಳಕೆಯಲ್ಲಿದೆ

English summary

Types Of Diabetes

There are two types of Diabetes, Type 1 and Type 2. Type one is insulin deficient and type 2 is insulin resistance. The word cure is not for Diabetes but it can surely be controlled and prevented.
X
Desktop Bottom Promotion