For Quick Alerts
ALLOW NOTIFICATIONS  
For Daily Alerts

ಇವರೇ ಈ ವರ್ಷ ಒಲಂಪಿಕ್ಸ್ ನಲ್ಲಿ ಭಾರತದ ಪರವಾಗಿ ಆಡುತ್ತಿರುವ ಟಾಪ್ 5 ಸ್ಟೈಲಿಶ್ ಕ್ರೀಡಾಪಟುಗಳು

|

ಕ್ರೀಡಾಪಟುಗಳು ಸಾಮಾನ್ಯವಾಗಿ ಫಿಟ್ ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಫಿಟ್ ಆಗಿದ್ದಾಗಲೇ, ಚೆನ್ನಾಗಿ ಆಡಲು ಸಾಧ್ಯವಾಗುವುದು. ಆದರೆ ಕೆಲ ಕ್ರೀಡಾಪಟುಗಳು ಫಿಟ್ ನೆಸ್ ಜೊತೆಗೆ ತುಂಬಾ ಫ್ಯಾಷನೇಬಲ್ ಆಗಿ ಇರುತ್ತಾರೆ. ಆಟದ ಜೊತೆಗೆ ಅಂದಕ್ಕೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.

ಟೋಕಿಯೋದಲ್ಲಿ ಭರ್ಜರಿಯಾಗಿ ಶುಭಾರಂಭಗೊಂಡಿರುವ 2020 ರ ಒಲಿಂಪಿಕ್ ಪಂದ್ಯಕ್ಕೆ ಭಾರತವನ್ನ ಪ್ರತಿನಿಧಿಸಿ 18 ವಿವಿಧ ಕ್ರೀಡೆಗಳಿಗೆ ತೆರಳಿರುವ ಒಟ್ಟು 127 ಅದ್ಭುತ ಕ್ರೀಡಾಪಟುಗಳ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆಯಿದೆ. ಒಲಂಪಿಕ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಆಡುತ್ತಿರುವ ಅಷ್ಟು ಕ್ರೀಡಾಪಟುಗಳಲ್ಲಿ ಅತ್ಯಂತ ಫ್ಯಾಷನ್ ಆಗಿರುವ ಟಾಪ್ 5 ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಟೋಕಿಯೊ ಒಲಿಂಪಿಕ್ಸ್ ಭಾಗವಹಿಸಿರುವ ಫ್ಯಾಷನ್ ವಿಚಾರದಲ್ಲಿ ಹೆಚ್ಚು ಗಮನಸೆಳೆದಿರುವ ಟಾಪ್ 5 ಆಟಗಾರರ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸಾನಿಯಾ ಮಿರ್ಜಾ:

ಸಾನಿಯಾ ಮಿರ್ಜಾ:

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಅವರ ಸಹ ಆಟಗಾರರಾದ ಅಂಕಿತಾ ರೈನಾ ಒಲಿಂಪಿಕ್ಸ್‌ಗೆ ಸಜ್ಜಾಗಿದ್ದಾರೆ. 34 ರ ಹರೆಯದ ಇವರು, ತಾಯಿಯಾಗಿರುವುದರ ನಡುವೆಯೇ ಫ್ಯಾಷನ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರ ಉಡುಪುಗಳಿಂದ ಹಿಡಿದು ಕಿವಿಯೋಲೆಗಳು, ಹ್ಯಾಟ್ ಗಳವರೆಗೆ ಎಲ್ಲರದರಲ್ಲೂ ಸ್ಟೈಲಿಶ್ ಆಗಿ ಕಾಣುವ ಸಾನಿಯಾ ತನ್ನನ್ನು ಫ್ಯಾಶನ್ ಐಕಾನ್ ಎಂದು ಬಿಂಬಿಸಿಕೊಂಡಿದ್ದಾರೆ. ಇವರ ಫ್ಯಾಷನ್ ಸೆನ್ಸ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.

ಪಿ.ವಿ ಸಿಂಧು:

ಪಿ.ವಿ ಸಿಂಧು:

ಟೋಕಿಯೊ ಒಲಿಂಪಿಕ್ಸ್ ರಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಮಹಿಳಾ ಶಟ್ಲರ್ ಪದ್ಮಭೂಷಣ್ ಮತ್ತು ಪದ್ಮಶ್ರೀ ವಿಜೇತರಾದ ಪಿ.ವಿ ಸಿಂಧು ಕೂಡ ಹಲವಾರು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿ ಆಟಗಾರ್ತಿ. 26 ವರ್ಷದ ಈಕೆ ಕ್ರೀಡೆಯಲ್ಲಿ ಮಾತ್ರವಲ್ಲದೇ, ಹಲವಾರು ಜಾಹೀರಾತಿನಲ್ಲಿ ಮಿಂಚಿದ್ದು ಉಂಟು. ತಮ್ಮ ವಿಭಿನ್ನ ಗೌನ್‌ನಿಂದ ಹಿಡಿದು, ಮಿನಿ ಡ್ರೆಸ್‌ವರೆಗೆ ಎಲ್ಲದರಲ್ಲೂ ಹೊಂದಿಕೊಳ್ಳುವ ಸಿಂಧು, ತನ್ನ ಅಥ್ಲೆಟಿಕ್ ಫಿಗರ್ ನಲ್ಲಿ ಫ್ಯಾಷನ್ ಮೂಲಕ ಹೇಗಿರಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದಾರೆ.

ಮಾನ ಪಟೇಲ್:

ಮಾನ ಪಟೇಲ್:

ಈಗಾಗಲೇ 10 ಚಿನ್ನ, 5 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಹೊಂದಿರುವ ಮಾನ ಪಟೇಲ್ ಟೋಕಿಯೊ ಒಲಿಂಪಿಕ್ಸ್ 2021 ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 21 ವರ್ಷದ ಈಕೆ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದು, ಅವರು ಸ್ಟೈಲಿಂಗ್ ಮತ್ತು ಮಾಡರ್ನ್ ಬಟ್ಟೆಗಳ ಆಸಕ್ತಿಯುಳ್ಳವರು. ಅವಳ ವಿಭಿನ್ನ ಸ್ವಿಮದ ಸೂಟ್ ಗಳ ಜೊತೆಗೆ ಅಟ್ರಾಕ್ಟಿವ್ ಮಾಡರ್ನ್ ಉಡುಗೆ-ತೊಡುಗೆಯನ್ನು ಮೆಚ್ಚುವ ಇವರು ಈಜಲ್ಲಿ ಮಾತ್ರ ಪ್ರಭಾವಶಾಲಿಯಲ್ಲದೇ, ಉತ್ತಮ ಫ್ಯಾಷನಿಸ್ಟ್ ಆಗಿದ್ದಾರೆ.

ಮನ್‌ಪ್ರೀತ್ ಸಿಂಗ್:

ಮನ್‌ಪ್ರೀತ್ ಸಿಂಗ್:

ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ಪಡೆದಿರುವ ಮನ್‌ಪ್ರೀತ್ ಭಾರತೀಯ ಹಾಕಿ ತಂಡದ ನಾಯಕ ಮತ್ತು ಭಾರತದ ಅತ್ಯಂತ ಶ್ರೀಮಂತ ಹಾಕಿ ಆಟಗಾರ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಆಡುತ್ತಿರುವ 29 ವರ್ಷದ ಈತ ತನ್ನ ಜೀವನದಲ್ಲಿ ಕ್ರೀಡೆಯನ್ನು ಆಳವಾಗಿ ತುಂಬಿಸಿಕೊಂಡಿದ್ದಾನೆ. ಕಾಲಿನಲ್ಲಿ ವಿಭಿನ್ನ ಟ್ಯಾಟು ಹಾಕಿಸಿಕೊಂಡಿರುವ ಸಿಂಗ್, ತನ್ನ ರೋಮಾಂಚಕ ಅಥ್ಲೆಟಿಕ್ ಉಡುಪಿನಿಂದ ಮಿಂಚುವವರು. ಕ್ರೀಡೆಯ ಜೊತೆಗೆ ಸಮಕಾಲೀನ ಫ್ಯಾಷನ್‌ಗೆ ದಾಪುಗಾಲು ಹಾಕಿದ್ದಾರೆ.

ಮಾನಿಕಾ ಬಾತ್ರಾ:

ಮಾನಿಕಾ ಬಾತ್ರಾ:

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮಾನಿಕಾ, ಭಾರತದ ಅಗ್ರ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದು, ಈ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎರಡನೇ ಒಲಿಂಪಿಕ್ ಪ್ರದರ್ಶನ ನೀಡಲಿದ್ದಾರೆ. ಅವಳ ಕೈ-ಕಣ್ಣಿನ ಸಮನ್ವಯವು ಅಸಾಧಾರಣ ಮಾತ್ರವಲ್ಲದೇ, ವಾರ್ಡ್ರೋಬ್ ಸ್ಟೈಲಿಂಗ್ ಸಹ ಉತ್ತಮವಾಗಿದೆ. ತನ್ನ ಉಡುಪಿನಿಂದಲೇ ಇಂಟರ್ ನೆಟ್ ನಲ್ಲಿ ಸದ್ದು ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದರು. 26 ವರ್ಷದ ಬಹುಮುಖ ಪ್ರತಿಭೆಯಾದ ಮಾನಿಕಾ,ಯಾವುದೇ ಸಂದರ್ಭಕ್ಕೆ ಅನುಗುಣವಾಗಿ ಸುಲಭವಾಗಿ ರೆಡಿಯಾಗುತ್ತಾರೆ.

Read more about: fashion ಫ್ಯಾಷನ್
English summary

Tokyo Olympics 2021: Most Stylish Athletes Representing India This Year Olympics

Here we talking about Tokyo Olympics 2021: Most Stylish Athletes Representing India This Year Olympics, read on
Story first published: Saturday, July 24, 2021, 18:15 [IST]
X
Desktop Bottom Promotion