Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹೊಸ ಪರಿಕಲ್ಪನೆಯ ವಿನ್ಯಾಸದಲ್ಲಿ ಓಪ್ಪೋ ನೋಡಲು ಬಯಸುವಿರಾ? ಹಾಗಾದರೆ ಓಪ್ಪೋ ಎಫ್9 ಪ್ರೋ ಗಾಗಿ ನಿರೀಕ್ಷಿಸಿ.
ಸ್ಮಾರ್ಟ್ ಫೋನ್‍ಗಳು ಇದೀಗ ಮಾರುಕಟ್ಟೆಯಲ್ಲಿ ಮಹತ್ತರವಾದ ಸ್ಥಾನ ಪಡೆದುಕೊಂಡಿರುವುದು ಸುಳ್ಳಲ್ಲ. ಒಂದು ಕಾಲದಲ್ಲಿ ಮೊಬೈಲ್ ಎಂದರೇನು? ಎನ್ನುವುದನ್ನು ತಿಳಿದಿರದ ಜನ ಇದೀಗ ಅದೊಂದು ಅವಶ್ಯಕ ವಸ್ತು ಹಾಗೂ ಶ್ರೀಮಂತಿಕೆಯ ಪ್ರತೀಕವಾಗಿ ಕಾಣುತ್ತಿದ್ದಾರೆ. ಸ್ಮಾರ್ಟ್ ಫೋನ್‍ಗಳು ವ್ಯಕ್ತಿಯನ್ನು ಸ್ಮಾರ್ಟ್ ಆಗಿಸುವುದರ ಜೊತೆಗೆ ಜಗತ್ತಿನ ಎಲ್ಲಾ ವಿಚಾರಗಳನ್ನು ಅಂಗೈಯಲ್ಲಿಯೇ ತೋರಿಸಿಕೊಡುತ್ತದೆ. ಸ್ಮಾರ್ಟ್ ಫೋನ್ ಎಂದರೆ ಕೇವಲ ಒಳಭಾಗದಿಂದ ಸ್ಮಾರ್ಟ್ ಆಗಿದ್ದರೆ ಸಾಲದು. ಅದನ್ನು ನೋಡಲು ಹೊರಭಾಗದಿಂದಲೂ ಹೆಚ್ಚು ಸ್ಮಾರ್ಟ್ ಆಗಿ ಕಾಣಬೇಕು ಎಂದು ಬಯಸುತ್ತಾರೆ ಜನ.
ವಿವಿಧ ವಿನ್ಯಾಸ, ರಚನೆ ಹಾಗೂ ಬಣ್ಣಗಳ ಆಯ್ಕೆಯಲ್ಲಿ ವಿವಿಧ ಸಂಸ್ಥೆಗಳು ಸ್ಮಾರ್ಟ್ ಫೋನ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವಂತೆ ಹಾಗೂ ಆಕರ್ಷಕವಾಗಿರುವಂತೆ ತಯಾರಿಸುವುದು ಇದೀಗ ಮೊಬೈಲ್ ಸಂಸ್ಥೆಗಳಿಗೂ ಒಂದು ಸವಾಲು ಎಂದು ಹೇಳಬಹುದು. ಅಂತಹ ಒಂದು ಸ್ಪರ್ಧೆಯಲ್ಲಿ ಉತ್ತುಂಗ ಸ್ಥಾನದಲ್ಲಿ ನಿಲ್ಲುವವರು ಎಂದರೆ ಓಪ್ಪೋ. ಹೊಸ ಪರಿಕಲ್ಪನೆ ಹಾಗೂ ಆರಾಮದಾಯಕ ಬಳಕೆ ಮತ್ತು ಗುಣಮಟ್ಟವನ್ನು ಹೊಂದಿರುವ ಮೊಬೈಲ್ ಇದು.

ಓಪ್ಪೋ ಸಂಸ್ಥೆ ಇದೀಗ "ಓಪ್ಪೋ ಎಫ್9 ಪ್ರೋ" ಎನ್ನುವ ಹೊಸ ಮೊಬೈಲ್ ಅನ್ನು ಮಾಡುಕಟ್ಟೆಗೆ ಪರಿಚಯಿಸುವುದಾಗಿ ಘೋಷಿಸಿದೆ. ಅದು ಸುಂದರವಾದ ವಿನ್ಯಾಸ, ನೋಟರಿಕ್ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎನ್ನಲಾಗುವುದು. ಉತ್ತಮ ಭರವಸೆಯೊಂದಿಗೆ ಸುದೀರ್ಘ ಬಾಳಿಕೆ ಬರುವುದು. ಉತ್ತಮ ಕಾರ್ಯಕ್ಷಮತೆಯೊಂದಿಗೆ ಸಮಗ್ರವಾದ ಸ್ಮಾರ್ಟ್ ಫೋನ್ ಆಗಿ ಮಿಂಚುವುದು. ಇದು ಉತ್ತಮ ಅನುಭವ ಕೊಡುವುದರ ಜೊತೆಗೆ ವ್ಯಕ್ತಿಯ ಶ್ರೇಷ್ಠತೆಯನ್ನು ಹೆಚ್ಚಿಸುವುದು.
ಓಪ್ಪೋ ಎಫ್9 ಪ್ರೋ:
ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ "ಓಪ್ಪೋ ಎಫ್9 ಪ್ರೋ" ಮೊಬೈಲ್ ಅನಾವರಣವನ್ನು ಮುಂದೂಡಲಾಗಿದೆ. ಇದೀಗ ವಾಟರ್ ಡ್ರಾಪ್ ಪ್ರದರ್ಶನದ ಮೂಲಕ ಜನರಿಗೆ ಸಾಕಷ್ಟು ಕುತೂಹಲವನ್ನು ಮೂಡಿಸಲಿದೆ. ಇದು 90.8 ಪ್ರತಿಶತದಷ್ಟು ಪರದೆ ವಿನ್ಯಾಸವನ್ನು ಹೊಂದುವುದರ ಮೂಲಕ ಬೆರಗುಗೊಳಿಸಲಿದೆ. ಇದರ ಮೇಲ್ಭಾಗವು ಒಂದು ಹನಿ ನೀರಿನಂತಹ ವಿನ್ಯಾಸವನ್ನು ಒಳಗೊಂಡಿದೆ. ಇದು ಹೇಗೆ ಕಾಣಬಹುದು ಎನ್ನುವ ಕಲ್ಪನೆಯಲ್ಲಿ ನೀವಿದ್ದರೆ ಸ್ವಲ್ಪ ಸಮಯ ಕಾಯಿರಿ. ಹೆಚ್ಚಿನ ಮಾರಾಟ ಮಳಿಗೆಯಲ್ಲಿ ಲಗ್ಗೆ ಇಡಲಿವೆ.
ಓಪ್ಪೋ ಎಫ್9 ಪ್ರೋ ಕೂಡಾ 3500 ಮೆಗಾ ಎಐ ಬ್ಯಾಟರಿಯೊಂದಿಗೆ ಐದು ಲೇಯರ್ ರಕ್ಷಣೆಯನ್ನು ಪಡೆದುಕೊಂಡಿದೆ. ಅಲ್ಲದೆ ವೋಕ್ ಫ್ಲ್ಯಾಶ್ ಚಾರ್ಜ್ ಸಾಮಥ್ರ್ಯವನ್ನು ಪಡೆದುಕೊಂಡಿದೆ. ಇದರಿಂದ ಏನು ಪ್ರಯೋಜನ ಎಂದು ಯೋಚಿಸುತ್ತಿದ್ದೀರಾ? ಸರಳವಾಗಿ ಹೇಳಬೇಕೆಂದರೆ ಐದು ನಿಮಿಷಗಳ ಕಾಲ ಓಪ್ಪೋ ಎಫ್9 ಪ್ರೋ ಮೊಬೈಲ್ ಚಾರ್ಜ್ ಹಾಕಿದರೆ ಎರಡು ಗಂಟೆಗಳ ಮಾತನಾಡಬಹುದಾಗಿದೆ. ಮೊಬೈಲ್‍ನ ಮೇಲ್ಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಒಂದು ಛಾಯಾಚಿತ್ರಗಳನ್ನು ಸೆರೆಹಿಡಿಯಲು ಬಳಸಿದರೆ ಇನ್ನೊಂದನ್ನು ರೋಮಾಂಚಕ ಸೆಲ್ಫೀಯ ಚಿತ್ರವನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು.
ಇದರಲ್ಲಿ ಸ್ಪಾಟ್‍ಲೈಟ್ ತಂತ್ರಜ್ಞಾನಗಳ ವಿಶೇಷತೆಯಿದೆ. ಈ ಸಾಧನವು ರೋಮಾಂಚಕ ಹಾಗೂ ಉತ್ಸಾಹಭರಿತ ದೃಷ್ಟಿಕೋನವನ್ನು ಒಳಗೊಂಡಿದೆ. ಅಸಂಖ್ಯಾತ ನವೀನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಸ್ಮಾರ್ಟ್ ಫೋನ್ ವರ್ಣರಂಜಿತವಾದ 3 ಮೂಲ ಬಣ್ಣದಲ್ಲಿ ಲಭ್ಯವಾಗುವುದು. ಸ್ಟೇರಿ ಪರ್ಪಲ್, ಸನ್‍ರೈಸ್ ರೆಡ್, ಟ್ವಿಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ವಜ್ರದ ಆಕಾರದ ವಿನ್ಯಾಸ ಮತ್ತು ರಾತ್ರಿ ವೇಳೆ ನಕ್ಷತ್ರದ ಚಿತ್ತಾರ ಕಾಣುವಂತಹ ವಿನ್ಯಾಸಗಳನ್ನು ಒಳಗೊಂಡಿದೆ.
ನಾವು ನಂಬಲೇ ಬೇಕಾದಂತಹ ನವೀನ ವಿನ್ಯಾಸದ ಓಪ್ಪೋ ಎಫ್9 ಪ್ರೋ ಸೊಗಸಾದ ಸಂಯೋಜನೆಯನ್ನು ಹೊಂದಿರುತ್ತದೆ. ಫ್ಯಾಷನ್ ಮತ್ತು ತಂತ್ರಜ್ಞಾನದ ಸಂಯೋಜನೆಯಿಂದ ಓಪ್ಪೋ ಎಫ್9 ಪ್ರೋ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೊಬೈಲ್ 64 ಜಿಬಿ ರಾಮ್‍ನೊಂದಿಗೆ ಇದೇ ಆಗಸ್ಟ್ 21ರಂದು ಬಿಡುಗಡೆಯಾಗುವುದು. ನೀವು ಸಿದ್ಧರಿದ್ದೀರಾ?



Click it and Unblock the Notifications
