ಅಬ್ಬರದ ಮಳೆ ನಿಮ್ಮ ಹಬ್ಬದ ಸಂಭ್ರಮಕ್ಕೆ ಅಡ್ಡಿಪಡಿಸದಿರಲಿ!

By: Jaya subramanya
Subscribe to Boldsky

ಭಾರೀ ಮಳೆಯ ನಡುವೆ ಕೂಡ ಹಬ್ಬಹರಿದಿನಗಳ ಆಚರಣೆ ಸಂಭ್ರಮ ನಿಲ್ಲುವುದಿಲ್ಲ ಎಂದೇ ಹೇಳಬಹುದು. ಅದರಲ್ಲೂ ಭಾರತೀಯರಿಗೆ ಹಬ್ಬಗಳನ್ನು ಆಚರಿಸುವುದೆಂದರೆ ಅದೊಂದು ಸಂಭ್ರಮಪಡುವ ಉತ್ಸವದಂತೆ. ಹೊಸ ದಿರಿಸುಗಳನ್ನು ಧರಿಸುವುದು, ರುಚಿಯಾದ ಅಡುಗೆಯನ್ನು ಸಿದ್ಧಪಡಿಸುವುದು, ಬಂಧುಮಿತ್ರರನ್ನು ಭೇಟಿಯಾಗುವುದು, ಕುಟುಂಬ ಸದಸ್ಯರ ಸಮ್ಮಿಲನ ಹೀಗೆ ಹಬ್ಬದಲ್ಲಿ ಹಲವಾರು ಚಟುವಟಿಕೆಗಳು ಮಿಳಿತಗೊಂಡಿರುತ್ತವೆ. ದಸರಾ ಸಂಭ್ರಮ ಇನ್ನೇನು ಕೆಲವೇ ದಿನಗಳ ಅಂತರದಲ್ಲಿದ್ದು ಬೆಂಗಾಳಿಗಳಿಗೆ ದುರ್ಗಾಪೂಜೆಯ ಸಂಭ್ರಮ ದಸರಾದಲ್ಲಿ ಮನೆಮಾಡಿದೆ. ಕರ್ನಾಟಕದವರಿಗೆ ದಸರಾ ಎಂದರೆ ಅದೊಂದು ಜಾತ್ರೆಯೇ ಸರಿ.

ಬಂಗಾಳಿಗರಿಗೂ ದುರ್ಗಾಪೂಜೆಯ ಸಮಯದಲ್ಲಿ ದೇವಿಯ ಮೆರವಣಿಗೆ, ನೃತ್ಯ ಕುಣಿತ, ಮಾತೆಯ ಪೂಜೆ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳಿರುತ್ತವೆ. ನಮ್ಮಲ್ಲಿ ಅಂಬಾರಿ ಹೇಗೆ ಮುಖ್ಯವೋ ಅಲ್ಲಿನವರಿಗೆ ದೇವಿಯ ಪೂಜೆ ನಡೆಸುವುದು ಸಂಭ್ರಮದ ಆಚರಣೆಯಾಗಿದೆ. ಈ ಬಾರಿಯ ದುರ್ಗಾಪೂಜೆಯಂದೂ ಎಂದಿನಂತೆ ಭಾರೀ ಮಳೆಯಾಗುವ ಸಾಧ್ಯತೆ ಇರುತ್ತದೆ. ಅದಾಗ್ಯೂ ಮಳೆಯ ನಡುವೆ ನಿಮ್ಮ ಹೊಸ ದಿರಿಸು ಹಾಳಾಗದಂತೆ ನಿಮ್ಮ ಹಬ್ಬದ ಹುಮ್ಮಸ್ಸು ಇಳಿಯದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ...

ಕಲೋಟ್ಸ್ ಅಥವಾ ಕೇಪ್ರಿಸ್ ಧರಿಸಿ

ಕಲೋಟ್ಸ್ ಅಥವಾ ಕೇಪ್ರಿಸ್ ಧರಿಸಿ

ನೀವು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸುತ್ತಿದ್ದೀರಿ ಎಂದಾದಲ್ಲಿ ತ್ರಿ ಫೋರ್ತ್ ಲೆಂತ್‌ನಲ್ಲಿರುವ ದಿರಿಸನ್ನು ಆಯ್ಕೆಮಾಡಿ. ಕಲೋಟ್ಸ್ ಅಥವಾ ಕೇಪ್ರಿಸ್ ಉತ್ತಮ ಆಯ್ಕೆಯಾಗಿದೆ. ಉದ್ದನೆಯ ಲಂಗದ ಬದಲಿಗೆ ಈ ಬಗೆಯ ದಿರಿಸುಗಳನ್ನು ನೀವು ಧರಿಸಬಹುದಾಗಿದೆ.

ಗಾಢ ಬಣ್ಣ

ಗಾಢ ಬಣ್ಣ

ಹಬ್ಬದ ಸಮಯದಲ್ಲಿ ಅದೂ ಮಳೆ ಬರುವಾಗ ಗಾಢ ಬಣ್ಣದ ದಿರಿಸುಗಳನ್ನು ಆಯ್ಕೆಮಾಡಿ. ಗಾಢ ಬಣ್ಣವನ್ನು ಆರಿಸಿಕೊಳ್ಳಿ. ಬರಿಯ ಹಬ್ಬದ ಸಮಯದಲ್ಲಿ ಮಾತ್ರವಲ್ಲದೆ ಇನ್ನಿತರ ಸಮಾರಂಭಕ್ಕೂ ಈ ಬಗೆಯ ಉಡುಗೆಗಳನ್ನು ಧರಿಸಬಹುದಾಗಿದೆ.

ನೆರಿಗೆಯ ಉಡುಗೆ ಬೇಡ

ನೆರಿಗೆಯ ಉಡುಗೆ ಬೇಡ

ನೆರಿಗೆಯುಳ್ಳ ಉದ್ದನೆಯ ಲಂಗ,ಪಲೋಜಾವನ್ನು ಧರಿಸಲು ಹೋಗಬೇಡಿ. ಮಳೆಯ ಸಮಯದಲ್ಲಿ ಈ ಬಗೆಯ ದಿರಿಸುಗಳನ್ನು ಧರಿಸುವುದು ಬಟ್ಟೆ ಕೊಳೆಯಾಗುವಂತೆ ಮಾಡುತ್ತದೆ. ನಿಮ್ಮ ಮೆಚ್ಚಿನ ದಿರಿಸು ಕೊಳೆಯಾಗುವುದು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಈ ಬಗೆಯ ಉಡುಗೆಯನ್ನು ಧರಿಸಲು ಹೋಗದಿರಿ.

ಸೀರೆಗಳ ಆಯ್ಕೆಬೇಡ

ಸೀರೆಗಳ ಆಯ್ಕೆಬೇಡ

ಪೂಜೆಯ ಸಮಯದಲ್ಲಿ ಸೀರೆಗಿಂತ ಉತ್ತಮ ಆಯ್ಕೆ ಇನ್ನೊಂದು ಇರುವುದಿಲ್ಲ. ಆದರೆ ಸೀರೆಯನ್ನು ಭಾರೀ ಮಳೆಯಾಗುವಾಗ ನೀವು ಧರಿಸುವುದರಿಂದ ನಿಮ್ಮ ಸೀರೆ ಹಾಳಾಗುವುದು ಖಂಡಿತ. ಬೇಕಿದ್ದರೆ ಮಳೆ ಇಲ್ಲದ ವೇಳೆಯಲ್ಲಿ ಸೀರೆಯನ್ನು ಉಟ್ಟುಕೊಳ್ಳಿ.

ಕೊಡೆ ನಿಮ್ಮ ಬಳಿ ಇರಲಿ

ಕೊಡೆ ನಿಮ್ಮ ಬಳಿ ಇರಲಿ

ನಿಮ್ಮ ದಿರಿಸಿಗೆ ಒಪ್ಪುವಂತಹ ಕೊಡೆಯನ್ನು ನೀವು ಬಳಸಿ. ಇದರಿಂದ ನಿಮ್ಮ ದಿರಿಸಿನ ಅಂದವೂ ಜೊತೆಗೆ ನಿಮ್ಮ ಫ್ಯಾಶನ್ ಪ್ರಿಯತೆಯೂ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತದೆ.

ಚರ್ಮದ ಶೂ ಅಥವಾ ಬ್ಯಾಗ್ ಬೇಡ

ಚರ್ಮದ ಶೂ ಅಥವಾ ಬ್ಯಾಗ್ ಬೇಡ

ಮಳೆಗಾಲದಲ್ಲಿ ಈ ಬಗೆಯ ಶೂ ಅಥವಾ ಬ್ಯಾಗ್ ಧರಿಸಬೇಡಿ. ಇದರಿಂದ ಅವುಗಳು ನೆನೆದು ವಾಸನೆ ಬರಬಹುದು ಮತ್ತು ಅವುಗಳು ಬೇಗನೇ ಹಾಳಾಗಬಹುದು ಕೂಡ.

 ಫ್ಲಿಪ್‌ ಪ್ಲಾಪ್‌ಗಳನ್ನು ಧರಿಸಬೇಡಿ

ಫ್ಲಿಪ್‌ ಪ್ಲಾಪ್‌ಗಳನ್ನು ಧರಿಸಬೇಡಿ

ಈ ಬಗೆಯ ಚಪ್ಪಲಿಗಳು ಮಳೆಗಾಲದಲ್ಲಿ ನಿಮ್ಮ ದಿರಿಸನ್ನು ಹಾಳುಮಾಡುವುದು ಖಂಡಿತ. ನೀವು ನೀರಿರುವ ಸ್ಥಳದಲ್ಲಿ ನಡೆದಾಗ ಚಪ್ಪಲಿಯಿಂದ ಕೊಳಕು ನೀರು ಹಾರಿ ನಿಮ್ಮ ದಿರಿಸು ಹಾಳಾಗಬಹುದು.

English summary

Tips To Style Well In Rainy Durga Puja, Durga Puja 2017, Durga Puja Style Tips 2017, Durga Puja Fashion Tips 2017, Durga Puja Special Saree, Durga Puja Saree Style

This year Maa Durga is coming in a boat and this suggests that there is a high probability of rainfall during the festival.If you go by the latest weather conditions or the mythological statement, it is probable that rain might be a risk for this year's Durga Puja pandal hoppings. If not for anything, just for the risk of ruining your style.
Story first published: Friday, September 8, 2017, 23:55 [IST]
Subscribe Newsletter