For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಫ್ಯಾಷನ್ ವೀಕ್ 2016: 'ರಾಜೇಶ್' ಮಿಂಚಿನ ವಿನ್ಯಾಸ

By Jaya
|

ನಾವೆಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಅಮೆಜಾನ್ ಇಂಡಿಯಾ ಫ್ಯಾಷನ್ ವೀಕ್‌ 2016 ಆರಂಭವಾಗಿ ಎರಡನೇಯ ದಿನಕ್ಕೆ ಕಾಲಿಟ್ಟಿದೆ. ತನ್ನ ವಿಭಿನ್ನ ಶೈಲಿಯ ಸೂಕ್ಷ್ಮ ವಿನ್ಯಾಸಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ದೆಹಲಿ ಮೂಲದ ವಿನ್ಯಾಸಕಾರ ರಾಜೇಶ್ ಪ್ರತಾಪ್ ವಿಶ್ವದ ಫ್ಯಾಷನ್ ಪ್ರಿಯರ ಆಸಕ್ತಿಯನ್ನು ತಾನು ಎಂದಿಗೂ ಸುಳ್ಳು ಮಾಡುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇರುತ್ತಾರೆ.

ಫ್ಯಾಷನ್ ವೀಕ್‌ನ ಎರಡನೇಯ, ದಿನವಾದ ಇಂದು, ತನ್ನ ವಿಭಿನ್ನ ಶೈಲಿಯ ಸೂಕ್ಷ್ಮ ವಿನ್ಯಾಸಗಳಿಂದ ಫ್ಯಾಷನ್ ಪ್ರಿಯರ ಮನವನ್ನು ಕದ್ದಿದ್ದಾರೆ. ಸುಂದರವಾದ ಫ್ಯಾಬ್ರಿಕ್ ಮೇಲೆ ಚಿನ್ನದ ಬಣ್ಣ, ಪಾರದರ್ಶಕ ಬಟ್ಟೆ, ಸೂಕ್ಷ್ಮವಾಗಿ ಮಾಡಲಾದ ಜರ್ದಾರಿ ಎಂಬ್ರಾಯಿಡರಿ ಮತ್ತು ಕ್ರೀಮ್ ಬಣ್ಣದ ಎಂಬ್ರಾಯಿಡ್ ಮಾಡಲಾದ ಸಿಲ್‌ಹಟ್‌ಗಳು ಬಟೆರ್ ಎಂದು ಕರೆಯಲಾಗುತ್ತಿದ್ದ ಇವರ ವಸ್ತ್ರ ಸಂಗ್ರಹಗಳಲ್ಲಿ ಎದ್ದು ಕಾಣುತ್ತಿದ್ದವು.

ಇವರು ಪ್ರಸ್ತುತಪಡಿಸಿದ ಎಂಬ್ರಾಯಿಡಿಂಗ್ ಮಾಡಲಾದ ಲೆಹೆಂಗಾಗಳು ಮತ್ತು ಜಾಕೆಟ್‌ಗಳ ನೋಡುವವರ ಮನಸೂರೆಗೊಳ್ಳುತ್ತಿದ್ದವು. ಅಷ್ಟೇ ಅಲ್ಲದೆ ತಮ್ಮ ಹಲವಾರು ದಿರಿಸುಗಳಲ್ಲಿ ಚಿನ್ನದ ಶೇಡ್‌ಗಳನ್ನು ಅವರು ಬಳಸಿದ್ದು ಸರಳವಾದ ದಿರಿಸುಗಳು ಫ್ಯಾಷನ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಅಮೆಜಾನ್ ಫ್ಯಾಷನ್ ಹಬ್ಬದಲ್ಲಿ ರಾಜೇಶ್ ಅವರ ದಿರಿಸುಗಳು ನಿಜಕ್ಕೂ ಕಲಾಭಿಮಾನಿಗಳನ್ನು ಸೆಳೆದಿದೆ. ಹಾಗಿದ್ದರೆ ಫ್ಯಾಷನ್ ಲೋಕದ ಇನ್ನಷ್ಟು ಮಜಲುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ, ಮುಂದೆ ಓದಿ...

ಬಿಳಿ ಬಣ್ಣ

ಬಿಳಿ ಬಣ್ಣ

ಚಿನ್ನದ ಕಸೂತಿ ಕೆಲಸವನ್ನು ಹೊಂದಿರುವ ನೆಲ ಮುಟ್ಟುವ ದಿರಿಸು

ಅತ್ಯಾಕರ್ಷಕ ಉಡುಗೆ

ಅತ್ಯಾಕರ್ಷಕ ಉಡುಗೆ

ಮೆಟಾಲಿಕ್ ಕಪ್ಪು ಬಣ್ಣ ಮತ್ತು ಚಿನ್ನದ ಕಸೂತಿ ವರ್ಣನೆ

ಚಿನ್ನದ ಎಳೆಯ ಉಡುಗೆ ಮತ್ತು ಪ್ರಿಂಟೆಡ್ ಜಾಕೆಟ್

ಚಿನ್ನದ ಎಳೆಯ ಉಡುಗೆ ಮತ್ತು ಪ್ರಿಂಟೆಡ್ ಜಾಕೆಟ್

ಪ್ರಿಂಟೆಡ್ ಜಾಕೆಟ್‌ನೊಂದಿಗೆ ಸ್ಯಾಟೀನ್ ಚಿನ್ನದ ಸ್ಪರ್ಶವನ್ನು ರಾಜೇಶ್ ಅವರು ದಿರಿಸಿಗೆ ನೀಡಿದ್ದಾರೆ.

ಮೈತುಂಬಿದ ಜಾಕೆಟ್

ಮೈತುಂಬಿದ ಜಾಕೆಟ್

ಚಿನ್ನದ ಬಣ್ಣದ ಜಾಕೆಟ್‌ಗೆ ಇಲ್ಲಿ ಸಾಥ್ ನೀಡಿರುವುದು ಬಿಳಿ ಬಣ್ಣದ ಮ್ಯಾಕ್ಸಿ ಸ್ಕರ್ಟ್ ಆಗಿದೆ.

ಚಿನ್ನದ ಬಣ್ಣ ಹೊಂದಿರುವ ಜಾಕೆಟ್

ಚಿನ್ನದ ಬಣ್ಣ ಹೊಂದಿರುವ ಜಾಕೆಟ್

ಮೊನಾರ್ಕ್ ಗೋಲ್ಡ್ ಜಾಕೆಟ್ ಜೊತೆಗೆ ಬಿಳಿಯ ಟ್ಯೂನಿಕ್ ದಿರಿಸು ಉತ್ತಮ ಕಾಂಬಿನೇಶನ್ ಎಂದೆನಿಸಿದೆ.

English summary

Rajesh Pratap Singh Wows The Audiences!

New Delhi-based designer Rajesh Pratap Singh has stolen the show at the Amazon India Fashion Week Autumn/Winter 2016 Day 2. His unusual clean and contemporary silhouettes took the audiences by blow. In this collection, Singh delivers a high-octane work. The collection is bewitching. The use of gold is rather admirable. Singh has used shades of gold in various fabrics, presenting a different demeanour of the hue.
Story first published: Friday, March 18, 2016, 20:28 [IST]
X
Desktop Bottom Promotion