ದುರ್ಗಾ ಪೂಜೆ ವಿಶೇಷ: ಕಲರ್ ಕಲರ್ ಸೀರೆಗೆ ಮ್ಯಾಚಿಂಗ್‌ ಬ್ಲೌಸ್‌‌ಗಳು

By: Jaya subramanya
Subscribe to Boldsky

ಸೀರೆಯಲ್ಲಿ ಯಾವುದೇ ನಾರಿ ಕೂಡ ಅದ್ಭುತವಾಗಿ ಕಾಣಿಸುತ್ತಾರೆ. ಅದಕ್ಕಾಗಿಯೇ ಈ ಬಾರಿಯ ದುರ್ಗಾ ಪೂಜೆಗಾಗಿ ಬಂಗಾಳಿ ನಾರಿಯರು ಸೀರೆಯನ್ನೇ ವಿಶೇಷವಾಗಿ ಆಯ್ಕೆಮಾಡಿಕೊಂಡಿರುವುದು. ಹಬ್ಬದ ಪ್ರತಿ ದಿನ ಕೂಡ ನೀವು ಒಂದೊಂದು ಸೀರೆ ಮತ್ತು ಅದಕ್ಕೊಪ್ಪುವ ನವೀನ ಮಾದರಿಯ ರವಿಕೆಯನ್ನು ಆಯ್ಕೆಮಾಡಿಕೊಂಡು ದುರ್ಗಾಪೂಜೆಯಂದು ಮಿಂಚಬಹುದಾಗಿದೆ.

ಸೀರೆಗೆ ರವಿಕೆಯು ವಿನ್ಯಾಸದಲ್ಲಿದ್ದರೆ ಮಾತ್ರವೇ ಸೀರೆಯ ಅಂದ ಎದ್ದುಗಾಣುತ್ತದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ವಿಧ ವಿಧ ಮಾದರಿಯ ರವಿಕೆಗಳ ವಿನ್ಯಾಸವನ್ನು ತೋರಿಸಿಕೊಡುತ್ತಿದ್ದೇವೆ. ನೀವು ಈ ಬಾರಿ ದುರ್ಗಾಪೂಜೆಗಾಗಿ ಇದನ್ನು ಟ್ರೈ ಮಾಡಿ...

ಪಂಚಮಿ

ಪಂಚಮಿ

ದುರ್ಗಾಪೂಜೆಯ ಆರಂಭ ದಿನವಾದ ಪಂಚಮಿಯು ಬಂಗಾಳಿಗರಿಗೆ ಅತಿ ಮಹತ್ವದ ದಿನವಾಗಿದೆ. ಈ ದಿನಕ್ಕಾಗಿ ಒನ್ ಶೋಲ್ಡರ್ ಬ್ಲೌಸ್ ಅನ್ನು ನಾವು ನಿಮಗೆ ಪರಿಚಯಪಡಿಸುತ್ತಿದ್ದೇವೆ.ಒನ್ ಶೋಲ್ಡರ್ ಬ್ಲೌಸ್ ನಿಮಗೆ ಬೇಡ ಎಂದಾದಲ್ಲಿ ಅದಕ್ಕೆ ಭುಜವನ್ನು ಹೊಲಿಸಿಕೊಳ್ಳಬಹುದಾಗಿದೆ. ಆದರೆ ಒನ್ ಶೋಲ್ಡರ್ ಬ್ಲೌಸ್ ಅನ್ನು ನೀವು ಬಳಸಿ ನೋಡಲೇಬೇಕು.

ಷಷ್ಟಿ

ಷಷ್ಟಿ

ಈ ದಿನ ನೀವು ಹೆಚ್ಚು ಕ್ಲಾಸಿಯಾಗಿ ಕಾಣಿಸಿಕೊಳ್ಳಬೇಕು ತಾನೇ? ಹಾಗಿದ್ದರೆ ಮೊಣಕೈವರೆಗಿನ ಬ್ಲೌಸ್ ಟ್ರೈ ಮಾಡಿ. ಇದು ಧರಿಸಲು ಸುಲಭ ಮತ್ತು ನೋಡಲು ಸುಂದರ ಕೂಡ.

ಸಪ್ತಮಿ

ಸಪ್ತಮಿ

ಹಬ್ಬದ ಮಧ್ಯಭಾಗದಲ್ಲಿ ಬರುವ ಸಪ್ತಮಿಯಂದು ಏನಾದರೂ ಕಲರ್‌ಫುಲ್ ಆಗಿರುವುದನ್ನು ತೊಡಿ ಎಂದು ನಾವು ಸಲಹೆ ನೀಡುತ್ತಿದ್ದೇವೆ. ಗ್ರಾಫಿಕ್ ಪ್ರಿಂಟ್ ಉಳ್ಳ ಬ್ಲೌಸ್ ಅನ್ನು ನಿಮ್ಮ ಸೀರೆಗೆ ಧರಿಸಿ.

ಅಷ್ಟಮಿ

ಅಷ್ಟಮಿ

ದುರ್ಗಾಪೂಜೆಯಂದು ಅಷ್ಟಮಿ ಹೆಚ್ಚು ಮಹತ್ವದ್ದಾಗಿದೆ. "ಪುಷ್ಪಾಂಜಲಿ" ಕಾರ್ಯಕ್ರಮವನ್ನು ಸ್ತ್ರೀಯರು ಮುಂಜಾನೆಯೇ ಮಾಡುತ್ತಾರೆ. ಚೈನೀಸ್ ಕಾಲರ್ಡ್ ಬ್ಲೌಸ್ ಅನ್ನು ಈ ದಿನ ನೀವು ಧರಿಸಬಹುದಾಗಿದೆ. ಇದು ನಿಮ್ಮನ್ನು ಸ್ಮಾರ್ಟ್ ಆಗಿ ಮಾಡುವುದಲ್ಲದೆ ಸಾಂಪ್ರದಾಯಿಕ ಸ್ಪರ್ಶವನ್ನು ನೀಡಲಿದೆ.

ನವಮಿ

ನವಮಿ

ಹಬ್ಬದ ಎರಡನೆಯ ದಿನದ ಸಂಭ್ರಮವಾಗಿದೆ ನವಮಿ. ಬೋಟ್ ನೆಕ್ ಬ್ಲೌಸ್ ಅನ್ನು ಈ ದಿನ ನಿಮಗೆ ತೊಡಬಹುದಾಗಿದೆ. ಇದು ಸೀರೆಗೆ ಸೂಟ್ ಆಗಲಿದ್ದು ನಿಮ್ಮನ್ನು ಸುಂದರಿನ್ನಾಗಿಸಲಿದೆ. ವರ್ಷದ ಹೆಚ್ಚು ಟ್ರೆಂಡಿಂಗ್ ಬ್ಲೌಸ್ ವಿನ್ಯಾಸವಾಗಿದೆ ಬೋಟ್ ನೆಕ್.

ದಶಮಿ

ದಶಮಿ

ವಿಜಯದಶಮಿಯ ಆಚರಣೆ ಇಲ್ಲದೆ ದೇವಿಗೆ ಮಾಡುವ ಪೂಜೆ ಅಸಂಪೂರ್ಣವಾಗುತ್ತದೆ. ಈ ದಿನ ಕೆಂಪು ಬಣ್ಣದ ಶಾದಾ ಸೀರೆಯನ್ನು ನಾರಿಯರು ಉಡುತ್ತಾರೆ. ಈ ಸೀರೆಗೆ ಮ್ಯಾಚಿಂಗ್ ಆಗಿ ನಿಮಗೆ ಕೆಂಪು ರವಿಕೆ ಬೇಕು ಮತ್ತು ಇದು ಬಂಗಾಳಿ ಸಂಪ್ರದಾಯಕ್ಕೆ ಉತ್ತಮವಾಗಿ ಹೊಂದುತ್ತದೆ. "ಗೋಟಿ ಹಟಾ" ಬ್ಲೌಸ್ ಅಥವಾ ಪಫ್‌ಡ್ ಸ್ಲೀವ್ ಬ್ಲೌಸ್ ಅನ್ನು ಈ ದಿನ ನೀವು ಧರಿಸಿ ನೋಡಿ.

English summary

Perfect Blouse Designs Fit For Durga Puja Days

Saris make Bengali women look the best and on the auspicious occasion of Durga Puja, you would like to be versatile about choosing blouse designs. As you select each day of the festival to wear a sari, you should also know the blouse designs which would fit each day. We are listing down the blouse designs which would be the best fit according to each day in the Durga Puja calendar.
Story first published: Friday, September 15, 2017, 23:41 [IST]
Subscribe Newsletter