For Quick Alerts
ALLOW NOTIFICATIONS  
For Daily Alerts

ಮೂರು ಸುಂದರವಾದ ಬಣ್ಣ, ಹಾಗೂ ಮೂರು ವೈಶಿಷ್ಟ್ಯತೆಗಳಲ್ಲಿ ಒಪ್ಪೋ ಎಫ್9 ಪ್ರೋ

By Divya
|

ಸ್ಮಾರ್ಟ್ ಫೋನ್ ಎನ್ನುವುದು ಇಂದಿನ ದಿನದಲ್ಲಿ ಅತ್ಯಗತ್ಯ ವಸ್ತುಗಳಲ್ಲಿ ಒಂದಾಗಿದೆ. ದೂರದ ವ್ಯಕ್ತಿಯೊಂದಿಗೆ ಮಾತನಾಡಲು ಬಳಸುವ ಈ ಸಾಧನ ಇಂದು ಪ್ರಪಂಚದ ವಿಸ್ಮಯ ಹಾಗೂ ವಿನೂತನ ವಿಚಾರಗಳನ್ನು ಅಂಗೈಯಲ್ಲಿಯೇ ತೋರಿಸಿಕೊಡುತ್ತದೆ. ಸಂವಹನಕ್ಕೆ ಬಳಸಲಾಗುತ್ತಿದ್ದ ಈ ಸಾಧನ ಇದೀಗ ವ್ಯವಹಾರದ ಉಪಯೋಗಕ್ಕೆ ಹಾಗೂ ವ್ಯಕ್ತಿಯ ಶ್ರೀಮಂತಿಕೆ ಮತ್ತು ವ್ಯಕ್ತಿತ್ವವನ್ನು ಗುರುತಿಸುವ ಸಾಧನವಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ವಿವಿಧ ಬಗೆಯ ಸ್ಮಾರ್ಟ್ ಫೋನ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಸೂಕ್ತ ಆಯ್ಕೆ ಹಾಗೂ ವಿನ್ಯಾಸಗಳು ವ್ಯಕ್ತಿಯ ಜೀವನಶೈಲಿಯ ಒಂದು ಪ್ರತಿನಿಧಿಯಾಗಿದೆ. ಅಲ್ಲದೆ ಸ್ವಯಂ ಚಿತ್ರಣವನ್ನು ಪೋಷಿಸುವ ಒಂದು ಪ್ರಮುಖ ಪರಿಕರವೂ ಹೌದು. ಫ್ಯಾಷನ್ ಹಾಗೂ ಆಧುನಿಕ ಪರಿಕಲ್ಪನೆಗೆ ತೆರೆದುಕೊಳ್ಳುವವರು ಅಗತ್ಯವಾಗಿ ಸೂಕ್ತ ಸ್ಮಾರ್ಟ್ ಫೋನ್ ಆಯ್ಕೆ ಮಾಡಬೇಕಾಗುವುದು.

ಕೆಲಸದ ವಿಚಾರ ಹಾಗೂ ವಿರಾಮಕ್ಕೆ ಸಂಬಂಧಿಸಿದಂತೆ ಎರಡು ಸಂದರ್ಭದಲ್ಲೂ ಪರಿಪೂರ್ಣ ಸಂಗಾತಿಯಾಗಬಲ್ಲ ಸ್ಮಾರ್ಟ್ ಫೋನ್ ಎಂದರೆ "ಓಪ್ಪೋ ಎಫ್9 ಪ್ರೋ". ಇದು ತೀಕ್ಷ್ಣವಾದ ತಂತ್ರಜ್ಞಾನ ಮತ್ತು ಪ್ರಗತಿಶೀಲ ಫ್ಯಾಷನ್‍ಗಳ ಅದ್ಭುತ ಮಿಶ್ರಣವಾಗಿದೆ. ಸೂಪರ್ ಗ್ಲ್ಯಾಮ್, ಪುನರ್ವಿನ್ಯಾಸಗೊಳಿಸಿದ ವಾಟರ್ ಡ್ರಾಪ್ ಸ್ಕ್ರೀನ್, ವೋಕ್ ಫ್ಲ್ಯಾಶ್ ಚಾರ್ಚಿಂಗ್ ತಂತ್ರಜ್ಞಾನದೊಂದಿಗೆ ಸುಂದರವಾದ ಗ್ರೇಡಿಯಂಟ್ ಛಾಯೆಯೊಂದಿಗೆ ಅನನ್ಯತೆಯನ್ನು ಒಳಗೊಂಡಿದೆ. ತೆಳುವಾದ ದೇಹ ವಿನ್ಯಾಸವನ್ನು ಪಡೆದುಕೊಂಡ "ಓಪ್ಪೋ ಎಫ್9 ಪ್ರೋ" ನಿಮ್ಮ ಮುಂದಿನ ಆಶಯದ ಪಟ್ಟಿಯಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅನನ್ಯವಾದ ಇಳಿಜಾರು ದೇಹ ವಿನ್ಯಾಸ:

ಓಪ್ಪೋ ಎಫ್7 ಸ್ಮಾರ್ಟ್ ಫೋನ್‍ನ ವಿನ್ಯಾಸ ಹಾಗೂ ಬಳಕೆಯನ್ನು ಇಷ್ಟಪಟ್ಟಿರುವಾಗಲೇ ಇದೀಗ ಇನ್ನೊಂದು ಸೆಲ್ಫೀ ಎಕ್ಸ್‍ಫರ್ಟ್ ಓಪ್ಪೋ ಎಫ್9 ಪ್ರೋ ಆಗಸ್ಟ್ 21ರಂದು ಅನಾವರಣಗೊಂಡಿತು. ಕಳೆದ ಎರಡು ವಾರಗಳಿಂದ ಓಪ್ಪೋ ಎಫ್9 ಪ್ರೋ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತಿದೆ. ಈ ಸ್ಮಾರ್ಟ್ ಫೋನ್ ಅಲ್ಲಿ ಮೂರು ವಿಭಿನ್ನವಾದ ಬಣ್ಣಗಳ ಆಯ್ಕೆಯನ್ನು ಕಾಣಬಹುದು. ಸ್ಟೇರಿ ಪರ್ಪಲ್, ಸನ್‍ರೈಸ್ ರೆಡ್ ಮತ್ತು ಟ್ವಿಲೈಟ್ ಬ್ಲೂ ಬಣ್ಣವನ್ನು ಒಳಗೊಂಡಿದೆ. ಇವು ಮೊಬೈಲ್‍ನ ಮೇಲೆ ಇಳಿಜಾರು/ಗ್ರೇಡಿಯಂಟ್ ವಿನ್ಯಾಸದಲ್ಲಿ ಆಕರ್ಷಿಸುತ್ತದೆ.

ಅನನ್ಯವಾದ ವಿನ್ಯಾಸ:

ಓಪ್ಪೋ ಎಫ್9 ಪ್ರೋ ಮೊಬೈಲ್‍ನ ಅನನ್ಯ ವಿನ್ಯಾಸವು ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸುವ ಒಂದು ಪ್ರಮುಖ ಕಾರಣವಾಗಿದೆ ಎನ್ನಬಹುದು. ಮೊಬೈಲ್‍ನ ಹಿಂಭಾಗದಲ್ಲಿ ಸುಂದರ ಬಣ್ಣಗಳ ಪರಿಕಲ್ಪನೆಯಲ್ಲಿ ಇಳಿಜಾರು ವಿನ್ಯಾಸ ಇರುವುದರಿಂದ ಇತರ ಮೊಬೈಲ್‍ಗಳಿಗಿಂತ ವಿಭಿನ್ನ ಹಾಗೂ ಆಕರ್ಷಣೆಯನ್ನು ಪಡೆದುಕೊಂಡಿದೆ. ಗ್ಲಾಸ್ ಮತ್ತು ಮೆಟಲ್ ಯುನಿಬಾಡಿಯ ಪ್ರೀಮಿಯಂ ನೋಟವು ಉತ್ತಮ ಅನುಭವ ಹಾಗೂ ಅಪೇಕ್ಷಣೀಯ ಸಾಧನವನ್ನಾಗಿ ಮಾಡಿದೆ. ಉತ್ತಮ ವಿನ್ಯಾಸ ಹಾಗೂ ಸೂಕ್ಷ್ಮವಾದ ತಂತ್ರಜ್ಞಾನವು ದೂರುಗಳಿಂದ ಮುಕ್ತಗೊಳಿಸುತ್ತವೆ.

ಅನನ್ಯವಾದ ಚಾರ್ಜಿಂಗ್ ಸಾಮಥ್ರ್ಯ:

ಓಪ್ಪೋ ಎಫ್9 ಪ್ರೋ 3,500ಮೆಗಾ ಬ್ಯಾಟರಿ ಹೊಂದಿದೆ. ವೋಕ್ ಫ್ಲ್ಯಾಶ್ ಚಾರ್ಚ್ ಟೆಕ್ನಾಲಜಿಯಿಂದ ನಡೆಸಲ್ಪಡುವ ಅಂತರ್ನಿರ್ಮಿತ ಎಐ ಸಾಮಥ್ರ್ಯವನ್ನು ಒಳಗೊಂಡಿದೆ. ಹಾಗಾಗಿ 5 ನಿಮಿಷಗಳ ಕಾಲ ಓಪ್ಪೋ ಎಫ್9 ಪ್ರೋ ಮೊಬೈಲ್‍ನ ಚಾರ್ಜ್ ಮಾಡಿದರೆ ಸಾಕು. ಎರಡು ಗಂಟೆಗಳ ಕಾಲ ಮಾತನಾಡುವಷ್ಟು ಚಾರ್ಚ್ ಆಗುವುದು.

ಎಂಜಿನಿಯರಿಂಗ್‍ನ ವಿಶಿಷ್ಟ ಸಾಧನ:

ಓಪ್ಪೋ ಎಫ್9 ಪ್ರೋ ಅತ್ಯುತ್ತಮ ಕ್ಯಾಮೆರಾ ಸಾಮಥ್ರ್ಯವನ್ನು ಒಳಗೊಂಡಿರುವುದನ್ನು ನೋಡಬಹುದು. ಇದು ಈ ಮೊಬೈಲ್‍ನ ಇನ್ನೊಂದು ಪ್ರಮುಖ ವಿಶಿಷ್ಟತೆ ಎನ್ನಬಹುದು. ತೀಕ್ಷ್ಣವಾದ ಮತ್ತು ಉತ್ತಮ ಛಾಯಾಚಿತ್ರಗಳ ಭರವಸೆಯನ್ನು ಓಪ್ಪೋ ಎಫ್9 ಪ್ರೋ ನೀಡುತ್ತದೆ. ಇದರಲ್ಲಿ ಎಐ-ಚಾಲಿತ ಡ್ಯೂಯಲ್ ರೇರ್ ಕ್ಯಾಮೆರಾಗಳನ್ನು ಒಳಗೊಂಡಿದೆ.

ಇದು 16ಎಮ್‍ಪಿ+2ಎಮ್‍ಪಿ ಡ್ಯೂಯಲ್ ಸೆಟಪ್ ಹೊಂದಿದೆ. ಸೆಲ್ಫಿಗಾಗಿ ಎಐ ಸೌಂದರ್ಯವರ್ಧಕ ಸಾಮಥ್ರ್ಯವನ್ನು ಹೊಂದಿರುವ 25ಎಮ್‍ಪಿ ಶೂಟರ್ ಅನ್ನು ಪಡೆದುಕೊಳ್ಳಬಹುದು.

ಓಪ್ಪೋ ಎಫ್9 ಪ್ರೋ ಅನ್ನು 2ಜಿಎಚ್‍ಝಡ್ ಟೆಕ್ ಹೆಲಿಯೊ ಪಿ60 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್ ಗಾಗಿ ಮಾಲಿ-ಜಿ72 ಎಮ್‍ಪಿ3 ಜಿಪಿಯು ಒಳಗೊಂಡಿದೆ. ಇದು ಮಲ್ಟಿ ರೇಂಜ್ ಸ್ಮಾರ್ಟ್‍ಫೋನ್‍ಗಳಲ್ಲಿ 6ಜಿಬಿ ರಾಮ್‍ನೊಂದಿಗೆ ಹೊಸ ಗುಣಮಟ್ಟವನ್ನು ಪಡೆದುಕೊಂಡಿದೆ. ಹಾಗಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಸಹಕರಿಸುವುದು. ಅಲ್ಲದೆ ಮೈಕ್ರೋ ಎಸ್‍ಡಿ ಕಾರ್ಡ್ ಮೂಲಕ 25 ಜಿಬಿ ವರೆಗೆ ವಿಸ್ತರಿಸಬಹುದಾದ 64 ಜಿಬಿ ಆಂತರಿಕ ಸ್ಟೋರೇಜ್‍ಅನ್ನು ಒಳಗೊಂಡಿದೆ.

ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೂ ಓಎಸ್ ಅಡಿಯಲ್ಲಿ ಸುತ್ತುವರಿದ ಕಲರ್‍ಓಎಸ್ 5.2 ನಿಂದ ಕಾರ್ಯನಿರ್ವಹಿಸುವುದು. ಅಲ್ಲದೆ ಈ ಸಾಧನವು ಗೂಗಲ್ ಲೆನ್ಸ್ ನಿಂದ ಸಹಕರಿಸುತ್ತದೆ. ಹಾಗಾಗಿ ಬಳಕೆದಾರರು ವಸ್ತುಗಳ ಗುರುತಿಸಲು ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಫ್ರೇಮ್‍ನ ವ್ಯಾಪ್ತಿಯಲ್ಲಿಯೇ ಪಡೆದುಕೊಳ್ಳಬಹುದು.

Read more about: oppo
English summary

New OPPO F9 Pro: Unique Design, Gradient Body, Charging Capabilities andPiece Of Engineering

The OPPO F9 Pro has hit the shelves in three distinct colour variations—Starry Purple, Sunrise Red and Twilight Blue. All three options represent a unique gradient design which emits a combination of colours that changes depending on the angle and light.OPPO F9 Pro's design is one of its major selling points.
X