For Quick Alerts
ALLOW NOTIFICATIONS  
For Daily Alerts

ದೀಪಾವಳಿ 2021: ದೀಪಾವಳಿ ಹಬ್ಬಕ್ಕೆ ಟ್ರೆಂಡಿಗ್‌ ಡ್ರೆಸ್‌ ಐಡಿಯಾ

|

ಹಬ್ಬ ಎಂದರೆ ನೆನಪಾಗುವುದು ಹೊಸ ಬಟ್ಟೆ, ಪೂಜೆ, ಸಿಹಿ ತಿಂಡಿ, ನೆಂಟರು, ಸಂಭ್ರಮ. ಹೆಣ್ಣುಮಕ್ಕಳು ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ತೊಟ್ಟು, ನೆರೆಹೊರೆಯವರು, ನೆಂಟರ ನಡುವೆ ಬೀಗುವುದೇ ಒಂದು ಖುಷಿ. ಇನ್ನೂ ಮುಖ್ಯವಾಗಿ ವಿಧ-ವಿಧ ಭಂಗಿಯ ಪೋಟೋಗಳನ್ನು ಕ್ಲಿಕ್ಕಿಸಿ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಇಂದಿನ ಹೆಣ್ಣುಮಕ್ಕಳ ನೆಚ್ಚಿನ ಪ್ರವೃತ್ತಿಯೂ ಹೌದು.

ದೀಪಾವಳಿ

ಇನ್ನೇನು ದೀಪಾವಳಿ ಹಬ್ಬ ಶುರುವಾಗಿದೆ. 25ರಿಂದ ಆರಂಭವಾಗಿರುವ ದೀಪಾವಳಿ 29ರವರೆಗೆ ಐದು ದಿನಗಳು ಅಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮುಖ್ಯವಾಗಿ 27ರಂದು ನರಕ ಚತುರ್ದಶಿ ಹಾಗೂ 28ರಂದು ಲಕ್ಷ್ಮೀ ಪೂಜೆಯಂದು ಹಬ್ಬದ ಸಂಭ್ರಮ ಕಳೆಗಟ್ಟಲಿದೆ. ಈ ಹಬ್ಬಕ್ಕೆ ಹೊಸ ವಿನ್ಯಾಸದ, ಆಕರ್ಷಕ ಉಡುಗೆ ಯಾವುದು, ಎಂಥಾ ವಿನ್ಯಾಸ ನಮಗೆ ಒಪ್ಪುತ್ತದೆ ಎಂಬ ಗೊಂದಲವಿದೆಯೇ. ಚಿಂತೆ ಬೇಡ ನಾವು ನಿಮಗೆ ಸಹಾಯ ಮಾಡುತ್ತೇವೆ.

ನಮ್ಮ ಸ್ಯಾಂಡಲ್ ವುಡ್ ನ ನಟಿಮಣಿಯರು ಧರಿಸಿರುವ ಆಕರ್ಷಕ ಹಾಗೂ ಸಾಂಪ್ರಾದಾಯಿಕ ವಿನ್ಯಾಸದ ಉಡುಗೆಗಳ ಬಗ್ಗೆ ಮುಂದೆ ಲೇಖನದಲ್ಲಿ ವಿರಿಸಿದ್ದೇವೆ. ನಿಮಗೆ ಒಪ್ಪುವ ವಿನ್ಯಾಸದ ವಸ್ತ್ರವನ್ನು ಖರೀದಿಸಿ ದೀಪಾವಳಿಯನ್ನು ಸಡಗರದಿಂದ ಸಂಭ್ರಮಿಸಿ.

1. ಎವರ್ ಟ್ರೆಂಡಿಗ್ ರೇಷ್ಮೆ ಅಂಚಿನ ಸೀರೆ

ಸಂಪೂರ್ಣ ಬಿಳಿಬಣ್ಣದ ರೇಷ್ಮೇ ಸೀರೆಗೆ ಕೆಂಪು ಅಂಚಿನ ಒತ್ತು ಬಾರ್ಡರ್ ಎಂದಿಗೂ ಆಕರ್ಷಣೀಯ. ಅಲ್ಲದೇ ಇದಕ್ಕೆ ತುಂಬು ತೋಳು ರೇಷ್ಮೆ ವಿನ್ಯಾಸದ ಬ್ಲೌಸ್ (ರವಿಕೆ) ಸೀರೆಗೆ ಇನ್ನಷ್ಟು ಮೆರಗನ್ನು ನೀಡುತ್ತದೆ. ಈ ದೀಪಾವಳಿಗೆ ನೀವು ಸಹ ಸೀರೆ ಉಡುವ ಮನಸಿದ್ದರೆ ಈ ವಿನ್ಯಾಸದ ಸೀರೆ ಹಾಗೂ ಅದಕ್ಕೆ ಒಪ್ಪುವ ಆಭರಣಗಳು ಧರಿಸಿದರೆ ದೀಪಾವಳಿಗೆ ಹೇಳಿ ಮಾಡಿಸಿದಂತಿರುತ್ತದೆ.

2. ರೇಷ್ಮೆಯ ಲಾಂಗ್ ಕುರ್ತಾ (ಗೌನ್)

ಈಗ ಟ್ರೆಂಡಿ ಆಗಿರುವ ವಿನ್ಯಾಸ ಲಾಂಗ್ ಕುರ್ತಾ ಅಥವಾ ಗೌನ್. ಆದರೆ ಮಾಡ್ರರ್ನ್ ವಿನ್ಯಾಸದ ಗೌನ್ ಬದಲಿಗೆ ರೇಷ್ಮೇ ಸೀರೆಯಲ್ಲಿ ಹೊಲಿಸುವ ಗೌನ್ ಹಬ್ಬಕ್ಕೆ ವಿಶೇಷ ಮೆರಗನ್ನು ಕೊಡುತ್ತದೆ. ರೇ‍ಷ್ಮೆ ಸೀರೆ ಉಟ್ಟು ಬೇಸರ ಎನಿಸಿದರೆ ಅದರಲ್ಲೂ ಸಹ ಗೌನ್ ಹೊಲೆಸಬಹುದು. ಇದಕ್ಕೆ ಸಿಂಪಲ್ ಆಭರಣಗಳೇ ಸಾಕು ರಿಚ್ ಲುಕ್ ಕೊಡುತ್ತದೆ. ಇಂತಹ ಗೌನ್ ಗಳು ನೋಡಲು ಹೆಚ್ಚು ಆಕರ್ಷಣೆ ಜತೆಗೇ, ಸೀರೆಯಂತೆ ಹೆಚ್ಚು ತ್ರಾಸದಾಯಕ ಎನಿಸದು.

3. ವರ್ಕ್ ಸೆಲ್ವಾರ್

ಚೂಡಿದಾರ ಅಥವಾ ಸೆಲ್ವಾರ್ ಬಹುತೇಕರು ಇಷ್ಟಪಡುವ ಧಿರಿಸು. ಸಿಂಪಲ್ ಆಗಿದ್ದರೂ ಗ್ರಾಂಡ್ ಲುಕ್ ಇರಬೇಕು ಎಂದು ಇಷ್ಟಪಡುವವರು ಸ್ಟೋನ್ ವರ್ಕ್, ಎಂಬ್ರಾಡರಿ ವರ್ಕ್ ಅಥವಾ ಜರಿ ಅಂಚಿನ ವಿನ್ಯಾಸದ ಚೂಡಿದಾರಗಳನ್ನು ಧರಿಸಬಹುದು. ಚೂಡಿದಾರದಲ್ಲೂ ಪಟ್ಯಾಲ ಪ್ಯಾಂಟ್, ಸ್ಟ್ರೈಟ್ ಕಟ್ ಪ್ಯಾಂಟ್, ಪೆನ್ಸಿಲ್ ಪ್ಯಾಂಟ್ ಸೇರಿದಂತೆ ವಿವಿಧ ವಿನ್ಯಾಸದ, ಆಕರ್ಷಕ ಬಣ್ಣಗಳ ನೂರಾರು ಕಾಂಬಿನೇಷನ್ ನಲ್ಲಿ ಚೂಡಿದಾರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೂ ಈ ಬಾರಿ ಸಿಂಪಲ್ ಆಗಿ ಕಾಣಬೇಕು ಎಂದು ಬಯಸಿದ್ದರೆ ಆಕರ್ಷಕ ವಿನ್ಯಾಸ ಚೂಡಿದಾರವನ್ನು ಪ್ರಯತ್ನಿಸಬಹುದು.

4. ಲೆಹೆಂಗಾ

ಹಿಂದಿನಿಂದಲೂ ಇಂದಿಗೂ ಹೆಣ್ಣು ಮಕ್ಕಳು ಇಷ್ಟಪಡುವ ಸಾಂಪ್ರದಾಯಿಕ ಧಿರಿಸು ಲೆಹೆಂಗಾ. ಈ ವಿನ್ಯಾಸದಲ್ಲಿ ಸಿಂಪಲ್ ವಿನ್ಯಾಸದಿಂದ ಅತಿ ಹೆಚ್ಚು ಸ್ಟೋನ್, ಜರ್ದೋಸಿ ವರ್ಕ್ ಇರುವ ಭಾರವಾದ ಅಂತೆಯೇ ಅತ್ಯಾಕರ್ಷಕ ವಿನ್ಯಾಸದ ಲೆಹೆಂಗಾಗಳು ಇದೀಗ ಮಾತುಕಟ್ಟೆಯಲ್ಲಿದೆ. ಲೆಹೆಂಗಾವನ್ನು ಹೆಣ್ಣು ಮಕ್ಕಳು ಹೆಚ್ಚು ಇಷ್ಟ ಪಡಲು ಕಾರಣ ಇದರ ದುಪ್ಪಾಟವನ್ನು ವಿವಿಧ ವಿನ್ಯಾಸದಲ್ಲಿ ತೊಟ್ಟಾಗ ವಿಭಿನ್ನ ಲುಕ್ ನೀಡುತ್ತದೆ ಎನ್ನುವುದು. ಎರಡು ಮೂರು ವಿಭಿನ್ನ ಲೆಹೆಂಗಾಗಳು ಇದ್ದರೆ ವಿಭಿನ್ನ ಕಾಂಬಿನೇಷನ್ ನಲ್ಲಿ ಸಹ ಹಾಕಿಕೊಳ್ಳಬಹುದು. ನೀವು ಸಹ ಅತ್ಯಾಕರ್ಷಕ ವಿನ್ಯಾಸದ ಬಟ್ಟೆಯನ್ನು ಧರಿಸುವ ಮನಸಿದ್ದರೆ ಲೆಹೆಂಗಾ ಧರಿಸಿ. ಅದಕ್ಕೆ ಒಪ್ಪುವ ಕಾಂಬಿನೇಷನ್ ನ ಚೋಕರ್, ಬಳೆ, ಓಲೆಗಳನ್ನು ಧರಿಸಿ.

5. ಟ್ರೆಂಡಿ ವಿನ್ಯಾಸ ಸಿಂಪಲ್ ಡ್ರೆಸ್

ಹಬ್ಬ ಎಂದರೆ ಹೆಚ್ಚು ವಿಜೃಂಭಣೆಯಿಂದ ಸಿದ್ಧಗೊಳ್ಳಬೇಕು ಎಂದು ಇಷ್ಟಪಡುವಷ್ಟೇ ಮಂದಿ ಬಹಳ ಸಿಂಪಲ್ ಆಗಿ ಕಾಣಲು ಇಷ್ಟಪಡುತ್ತಾರೆ. ಲೆಹೆಂಗಾ, ಸೀರೆ, ಚೂಡಿದಾರ್ ಇಷ್ಟಪಡದವರು ಹೊಸದಾಗಿ ಬಂದಿರುವ ಟ್ರೆಂಡಿ ಹಾಗೂ ಸಿಂಪಲ್ ವಿನ್ಯಾಸದ ಧಿರಿಸುಗಳನ್ನು ಧರಿಸಬಹುದು.

English summary

Deepavali 2021: Deepavali Special Traditional and Trendy Outfits

Diwali is almost here and if you haven’t picked out your outfit yet then we have you covered. Find all forms of styles and designs available in ethnic wear for both men and women. Check the mentioned outfits for Diwali and pick the one which will suit you the best and you will not have to compromise on your style and comfort.
X
Desktop Bottom Promotion