For Quick Alerts
ALLOW NOTIFICATIONS  
For Daily Alerts

ಹಿಮ್ಮಡಿ ನೋವಾಗದಂತೆ ಹೈ ಹೀಲ್ಸ್‌ ಧರಿಸಲು ಟಿಪ್ಸ್‌

|

ಹೈ ಹೀಲ್ಸ್‌ ಚಪ್ಪಲಿ ಧರಿಸುವುದು ಎಲ್ಲಾ ಕಾಲಕ್ಕೂ ಟ್ರೆಂಡ್‌. ಧಿರಿಸಿಗೆ ಅನುಗುಣವಾಗಿ ಭಿನ್ನವಾದ ಹೈ ಹೀಲ್ಸ್‌ ಚಪ್ಪಲಿ ಧರಿಸುತ್ತಾರೆ. ಎತ್ತರ ಕಡಿಮೆ ಇರುವವರಿಗೆ ಮಾತ್ರ ಸೀಮಿತವಲ್ಲದೆ ಈಗ ಎಲ್ಲರೂ ಹೈ ಹೈಹೀಲ್ಸ್‌ ಧರಿಸಲು ಇಷ್ಟಪಡುತ್ತಾರೆ. ಇದು ನಿಮ್ಮನ್ನು ತಕ್ಷಣವೇ ಮನಮೋಹಕ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

heels

ಆದರೆ ಎಲ್ಲ ಸಂದರ್ಭದಲ್ಲೂ ಈ ಹೈ ಹೀಲ್ಸ್‌ ಚಪ್ಪಲಿ ಧರಿಸುವುದು ಅಸಾಧ್ಯವೇ ಹೌದು. ಇದು ಹಿಮ್ಮಡಿಗೆ ಅಸಹನೀಯ ನೋವನ್ನು ನೀಡುತ್ತದೆ. ಆದರೆ ಯಾವುದೇ ನೋವು ಇಲ್ಲದೆ, ಆರಾಮವಾಗಿ ಹೈ ಹೀಲ್ಸ್‌ ಚಪ್ಪಲಿ ಧರಿಸಲು ಸಾಧ್ಯವಿಲ್ಲದೆ ಎಂದೆನಿಸಬಹುದು. ಸಾಧ್ಯವಿದೆ ನಾವು ಈ ಕೆಳಗೆ ಹೇಳಲಿರುವ ಸಲಹೆಗಳನ್ನು ಪಾಲಿಸಿದರೆ ನೀವು ಯಾವುದೇ ನೋವು, ಸಮಸ್ಯೆ ಇಲ್ಲದೆ ಹೈ ಹೀಲ್ಸ್‌ ಧರಿಸಬಹುದು:
ಪಾದಗಳನ್ನು ಚೆನ್ನಾಗಿ ತೇವಗೊಳಿಸಿ/ಮಾಶ್ಚಿರೈಸ್‌ ಮಾಡಿ

ಪಾದಗಳನ್ನು ಚೆನ್ನಾಗಿ ತೇವಗೊಳಿಸಿ/ಮಾಶ್ಚಿರೈಸ್‌ ಮಾಡಿ

ನೀವು ಹೈ ಹೀಲ್ಸ್‌ ಧರಿಸುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೇವಗೊಳಿಸಿ ಅಥವಾ ಮಾಶ್ಚಿರೈಸ್‌ ಮಾಡಿ. ಇದರಿಂದ ಚಲಿಸುವಾಗ ಕಡಿಮೆ ಘರ್ಷಣೆ ಇರುತ್ತದೆ ಮತ್ತು ನೀವು ಗುಳ್ಳೆಗಳು ಮತ್ತು ಸುಟ್ಟಗಾಯಗಳನ್ನು ಪಡೆಯುವುದಿಲ್ಲ.

ಪಾದದ ಗಾತ್ರವನ್ನು ಸರಿಯಾಗಿ ಪಡೆಯಿರಿ

ಪಾದದ ಗಾತ್ರವನ್ನು ಸರಿಯಾಗಿ ಪಡೆಯಿರಿ

ಪಾದದ ಗಾತ್ರವನ್ನು ಸರಿಯಾಗಿ ಹೊಂದಿಸುವುದು ಬಹಳ ಮುಖ್ಯ. ಚಪ್ಪಲಿ ಖರೀದಿಸುವ ಮೊದಲು, ಸರಿಯಾದ ಪಾದದ ಗಾತ್ರವನ್ನು ಹೇಳಲು ಅಂಗಡಿಯಲ್ಲಿ ನಿಮಗೆ ಸಹಾಯ ಮಾಡುವ ವ್ಯಕ್ತಿಯನ್ನು ಕೇಳಿ. ನೀವು ಬೆಳೆಯುತ್ತಿದ್ದಂತೆ ನಿಮ್ಮ ಪಾದದ ಗಾತ್ರವೂ ಬದಲಾಗುತ್ತದೆ, ಆದ್ದರಿಂದ ವರ್ಷಕ್ಕೆ ಎರಡು ಬಾರಿಯಾದರೂ ನಿಮ್ಮ ಪಾದದ ಅಳತೆ ಪರಿಶೀಲಿಸಿ.

ಪಾದಗಳ ಆಕಾರಕ್ಕೆ ಗಮನ ಕೊಡಿ

ಪಾದಗಳ ಆಕಾರಕ್ಕೆ ಗಮನ ಕೊಡಿ

ನಮ್ಮಲ್ಲಿ ಕೆಲವರಿಗೆ ಕಿರಿದಾದ ಪಾದಗಳಿವೆ, ಕೆಲವರಿಗೆ ಅಗಲವಿದೆ; ಕೆಲವರು ಸಣ್ಣ ಬೆರಳುಗಳನ್ನು ಹೊಂದಿದ್ದರೆ, ಕೆಲವರು ಉದ್ದವಾದ ಬೆರಳುಗಳನ್ನು ಹೊಂದಿರಬಹುದ, ಹೀಗೆ ಹಲವು ವ್ಯತ್ಯಾಸಗಳಿವೆ. ನೀವು ಅಗಲವಾದ ಪಾದಗಳನ್ನು ಹೊಂದಿದ್ದರೆ, ಮುಚ್ಚಿದ ಮೊನಚಾದ ಬೂಟುಗಳನ್ನು ಧರಿಸದಂತೆ ನಾನು ಸಲಹೆ ನೀಡುತ್ತೇವೆ.

ಅಗಲವಾದ ಮುಂಭಾಗದ ಮುಚ್ಚಿದ ಅಥವಾ ತೆರೆದ ಟೋಗಳನ್ನು ಧರಿಸಿ. ಸಣ್ಣ ಕಾಲ್ಬೆರಳುಗಳನ್ನು ಹೊಂದಿರುವವರು ಮುಚ್ಚಿದ ಅಗಲವಾದ ಮುಂಭಾಗದ ಬೂಟುಗಳನ್ನು ಆರಿಸಿಕೊಳ್ಳಬೇಕು. ಮೊನಚಾದ ಮುಂಭಾಗದ ಬೂಟುಗಳು ನಿಮ್ಮ ಕಾಲ್ಬೆರಳುಗಳನ್ನು ಹಿಸುಕು ಮಾಡುತ್ತದೆ ಮತ್ತು ಅದನ್ನು ತುಂಬಾ ಅನಾನುಕೂಲಗೊಳಿಸುತ್ತದೆ. ದುರದೃಷ್ಟವಶಾತ್, ಒಂದು ಗಂಟೆ ಅದನ್ನು ಧರಿಸುವುದೇ ಕಿರಿಕರಿ ಎನಿಸುತ್ತದೆ.

ಪಾದಗಳ ಅನುಕೂಲಕ್ಕಾಗಿ ತೆಳುವಾದ ಅಡಿಭಾಗಗಳು

ಪಾದಗಳ ಅನುಕೂಲಕ್ಕಾಗಿ ತೆಳುವಾದ ಅಡಿಭಾಗಗಳು

ಪಾದಗಳ ಅನುಕೂಲಕ್ಕಾಗಿ ತೆಳುವಾದ ಅಡಿಭಾಗವನ್ನು ಹೊಂದಿರುವ ಶೂಗಳು ಉತ್ತಮ. ಇದು ನಿಮ್ಮ ಪಾದಗಳ ಕೆಳಭಾಗದಲ್ಲಿ ನೋವನ್ನು ಉಂಟುಮಾಡುವುದನ್ನು ಕಡಿಮೆ ಮಾಡುತ್ತದೆ. ಶಾಕ್ ಅಬ್ಸಾರ್ಬರ್‌ನಂತೆ ಕಾರ್ಯನಿರ್ವಹಿಸುವುದರಿಂದ ಕುಶನ್ ಉಳ್ಳ ಚಪ್ಪಲಿ ಖರೀದಿಸಿ.

ಪಾದಗಳಿಗೆ ವಿಶ್ರಾಂತಿ ಮಾಡಿ

ಪಾದಗಳಿಗೆ ವಿಶ್ರಾಂತಿ ಮಾಡಿ

ಹೈ ಹೀಲ್ಸ್ ಧರಿಸಿದಾಗ ಪಾದಗಳಿಗೆ ಆಗಾಗ ಸ್ವಲ್ಪ ವಿಶ್ರಾಂತಿ ನೀಡಿ. ನಿಮ್ಮ ಪಾದಗಳನ್ನು ಸ್ವಲ್ಪ ಹಿಗ್ಗಿಸಿ. ನಿಮ್ಮ ಪಾದಗಳಿಗೆ ಬೇಕಾದ ವಿರಾಮ ಸಿಗುತ್ತದೆ.

ಮುನ್ನೆಚ್ಚರಿಕೆಗಳು

ಮುನ್ನೆಚ್ಚರಿಕೆಗಳು

* ನೀವು ಬೂಟುಗಳನ್ನು ತೆಗೆದ ನಂತರ ಯಾವಾಗಲೂ ಪಾದವನ್ನು ವಿಸ್ತರಿಸಿ. ಪಾದಗಳ ವ್ಯಾಯಾಮ ಮಾಡಿ.

* ಪಾದದ ಹಿಂಬದಿಯ ಮೇಲೆ ಐಸ್ ಪ್ಯಾಕ್ ಹಾಕಿದರೆ ನೋವನ್ನು ಶೀಘ್ರ ದೂರ ಮಾಡುತ್ತದೆ.

* ಒಮ್ಮೊಮ್ಮೆ ಕಾಲು ಮಸಾಜ್ ಮಾಡುವುದು ತುಂಬಾ ಒಳ್ಳೆಯದು.

English summary

Tips to wear high heels without pain in kannada

Here we are discussing about Tips to wear high heels without pain in kannada. Read more.
X
Desktop Bottom Promotion