For Quick Alerts
ALLOW NOTIFICATIONS  
For Daily Alerts

ಫ್ಯಾಷನ್ ಲೋಕದ ಸುಂದರಿ ಶಿಲ್ಪಾ ಶೆಟ್ಟಿಯವರು ಸ್ಟೈಲಿಶ್ ಲುಕ್

|

ಇತ್ತೀಚಿನ ದಿನಗಳಲ್ಲಿ ಬಾಸ್ಸಿ ಪ್ಯಾಂಟ್ಗಳನ್ನು ಧರಿಸುವುದರಿಂದ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಖ್ಯಾತರಾಗಿದ್ದಾರೆ ಎಂದೇ ಹೇಳಬಹುದು.ನೆನ್ನೆ ಅವರು ಕೆಂಪು ಮತ್ತು ಗುಲಾಬಿ ಮಿಶ್ರಿತ ಕ್ರಾಪ್ ಟಾಪ್ ಹಾಗು ಪ್ಯಾಂಟ್ ಅನ್ನು ಧರಿಸಿದ್ದರು.ಅದೇ ರೀತಿ ಇತ್ತೀಚಿಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ನಡೆದ ಅವರ ಹೊಸ ಶೋ "ಹಿಯರ್ ಟು ಲವ್ ಮಿ "ಯ ಪ್ರಾರಂಭದ ದಿನದಂದು ಕೂಡ ಇದೇ ರೀತಿಯ ವಸ್ತ್ರಗಳನ್ನು ಧರಿಸಿ ಅತ್ಯಂತ ಸುಂದರವಾಗಿ ಕಾಣಿಸಿ ಎಲ್ಲರ ಗಮನವನ್ನು ಸೆಳೆದಿದ್ದರು.

ಶಿಲ್ಪಾ ಒಂದು ತೋಳಿನ ಟಾಪ್ ಹಾಗು ಪ್ಯಾಂಟ್ ಅನ್ನು ಧರಿಸಿದ್ದರು.ಅವರು ಬೇರೆ ಬೇರೆ ಪ್ಯಾಂಟ್ ಹಾಗು ಟಾಪ್ ಅನ್ನು ಮಿಶ್ರ ಮಾಡಿ ಅದ್ಭುತವಾಗಿ ಕಾಣುವ ಹಾಗೆ ಸಿದ್ಧವಾಗಿದ್ದರು.ಅವರ ಟಾಪ್ ಪ್ರಕಾಶಮಾನವಾದ ಬಿಳಿಯ ಬಣ್ಣದಿಂದ ಕೂಡಿದ್ದು ಒಂದು ಕಡೆ ಪೂರ್ತಿ ತೋಳನ್ನು ಹೊಂದಿತ್ತು.ಕ್ರಾಪ್ ಟಾಪ್ ಗೆ ಒಂದು ಅದ್ಭುತವಾದ ಆಯಾಮವನ್ನು ನೀಡಿದಂತೆ ಕಾಣುತ್ತ ಇತ್ತು.ಇದು ಎಲ್ಲರಿಗು ಇಷ್ಟವಾಗದೇ ಇರಬಹುದು ಆದರೆ ಶಿಲ್ಪ ಮಾತ್ರ ಇದನ್ನು ಬಹಳ ಆತ್ಮವಿಶ್ವಾಸದಿಂದ ಧರಿಸಿದ್ದರು.

Most Read: ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...

ಈ ಟಾಪ್ ಅನ್ನು ಕಂದು-ಹ್ಯೂಡ್ ಕೋರ್ಡುರೈ ಪ್ಯಾಂಟ್ ನೊಂದಿಗೆ ಶಿಲ್ಪ ಹೊಂದಿಸಿ ಧರಿಸಿದ್ದರು.ಅದು ಸ್ವಲ್ಪ ಸಡಿಲವಾಗಿ ಜೋಲಾಡುವಂತೆ ಇದ್ದರೂ ಅವರ ಕ್ರಾಪ್ ಟಾಪ್ ನೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೆ ಯಾಗುತ್ತಿತ್ತು. ಈ ವಸ್ತ್ರದೊಂದಿಗೆ ಶಿಲ್ಪ ಮತ್ತೊಮ್ಮೆ ವೈವಿಧ್ಯ ವಸ್ತ್ರಗಳ ಜೋಡಿಗೆ ಸಾಕ್ಷಿಯಾದರು.ಅವರು ಹಳೆಯ ಜೀನ್ಸ್ ಅನ್ನು ಕೂಡ ಮತ್ತೆ ಪ್ರಖ್ಯಾತವಾಗುವಂತೆ ಮಾಡಿದ್ದಾರೆ.ಶಿಲ್ಪಾರವರ ಈ ಪ್ರತ್ಯೇಕ ವಸ್ತ್ರಗಳ ಶೈಲಿಯನ್ನು ನಾವು ಮೆಚ್ಚಿಕೊಂಡಿದ್ದೇವೆ ಹಾಗು ಅವರು ಇದಕ್ಕಾಗಿ ಹಲವು ಮೆಚ್ಚುಗೆಗಳನ್ನು ಪಡೆದಿದ್ದಾರೆ.

ಇದರೊಂದಿಗೆ ಲೋಹೀಯ ಡ್ಯಾಂಗ್ಲರ್ಗಳನ್ನು ಶಿಲ್ಪಾ ಧರಿಸಿದ್ದರು.ಅವರ ಮೇಕಪ್ ಕೂಡ ಗಾಢವಾದ ಲಿಪ್ಸ್ಟಿಕ್ ನಿಂದ ಹೊಳೆಯುವಂತೆ ಕಾಣುತ್ತ ಇತ್ತು ಮತ್ತು ಅವರ ನಯವಾದ ಉದ್ದ ಕೂದಲು ಕೂಡ ಅವರ ಸೌಂದರ್ಯಕ್ಕೆ ಮೆರಗನ್ನು ನೀಡಿತ್ತು.

Most Read : ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!

ಶಿಲ್ಪ ತಮ್ಮ ಹೊಸ ದಿರಿಸಿನಲ್ಲಿ ಅತ್ಯದ್ಭುತವಾಗಿ ಕಾಣುತ್ತಾ ಇದ್ದರು.ಅವರ ಹೊಸ ಶೋ ಪ್ರಖ್ಯಾತವಾಗಲಿ ಎಂದು ನಾವು ಹರಸೋಣ.ಇದರೊಂದಿಗೆ ಶಿಲ್ಪ ಫ್ಯಾಷನ್ ಲೋಕದಲ್ಲಿ ಹೊಸ ಮೆಟ್ಟಿಲುಗಳನ್ನು ಏರಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ ?

English summary

Shilpa Shetty Shines In Separates

Shilpa Shetty Kundra is quite evidently donning the bossy pants these days. The actress was seen wearing red and pink cropped top and pants yesterday, and recently she pulled off a similar style at the launch of her show, 'Hear Me Love Me' on Amazon Prime. She wore the separates attire again and looked gorgeous as ever.
Story first published: Thursday, September 27, 2018, 15:40 [IST]
X