Just In
Don't Miss
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Finance
"ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ನಗದು ಸಾಲಕ್ಕೆ ಬಡ್ಡಿ ಇಲ್ಲ"
- Sports
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
- Automobiles
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೋಹಕ ತಾರೆ ಶ್ರೀದೇವಿಯ ಸಾಧನೆಯ ಹೆಜ್ಜೆ...
"ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ ವಿಧಿವಶರಾಗಿದ್ದಾರೆ. 54ನೇ ವರ್ಷದಲ್ಲಿದ್ದ ಇವರು ನಿನ್ನೆ ರಾತ್ರಿ 11.30ಕ್ಕೆ ದುಬೈನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೋಹಕತಾರೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿ ಬಾಲಿವುಡ್ ಚಿತ್ರರಂಗಕ್ಕೆ ಅನಭಿಷಿಕ್ತ ರಾಣಿಯಾಗಿದ್ದರು. ಇದೀಗ ಇವರು ಕಲಾ ಜಗತ್ತು ಇವರನ್ನು ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿಯಾಗಿದೆ."
ಆಪ್ತರಾದ ಮೋಹಿತ್ ಮಾರ್ವಾಹ್ ಅವರ ವಿವಾಹ ದುಬೈನಲ್ಲಿ ನೆರವೇರಿತ್ತು. ಕುಟುಂಬ ಸದಸ್ಯರ ವಿವಾಹ ಸಮಾರಂಭಕ್ಕಾಗಿ ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ತೆರಳಿದ್ದರು. ಎರಡು ದಿನಗಳ ಹಿಂದೆ ವಿವಾಹ ಸಮಾರಂಭದಲ್ಲಿ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಆರ್ಗಾನ್‍ಜಾ ಸೀರೆಯನ್ನು ಧರಿಸಿದ್ದರು. ಅದು 2018ರ ಬೇಸಿಗೆಯ ಸಂಗ್ರಹವಾಗಿತ್ತು. ಈ ಉಡುಗೆಯಲ್ಲಿ ಶ್ರೀದೇವಿ ಸೊಗಸಾಗಿ ಕಾಣುತ್ತಿದ್ದರು ಎನ್ನಲಾಗುತ್ತಿದೆ.
ತನ್ನದೇ ಆದ ವಿಶೇಷ ನಟನೆ, ನೋಟ, ಹಾವ-ಭಾವಗಳಿಂದ ಜನರ ಮನಸ್ಸನ್ನು ಗೆದ್ದಿದ್ದ ಶ್ರೀದೇವಿ ಬಾಲಿವುಡ್ ಕ್ಷೇತ್ರಕ್ಕೆ ಒಂದು ಪರಿಪೂರ್ಣ ಕಲಾವಿದೆಯಾಗಿದ್ದರು. ಭರತನಾಟ್ಯದಲ್ಲೂ ಪ್ರವೀಣೆಯಾದ ಇವರು ನಡೆದು ಬಂದ ಹಾದಿ ಹಾಗೂ ಅವರ ಜೀವನದ ಕುರಿತು ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ...

ಬಾಲ್ಯ
1963ರ ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ 1978ರಲ್ಲಿ ಸೊಲ್ವ ಸಾವನ್ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಸುಮಾರು 215 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವಿವಿಧ ಭಾಷೆಯಲ್ಲಿ ಶ್ರೀದೇವಿ
ಮಲಯಾಳಂ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ಶ್ರೀದೇವಿ ನಟಿಸಿದ್ದರು. ಕನ್ನಡದ ಹೆಣ್ಣು ಸಂಸಾರದ ಕಣ್ಣು, ಭಕ್ತ ಕುಂಬಾರ. ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋದ ಕೃಷ್ಣ, ಹಾಗೂ ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದರು.

ಪ್ರಶಸ್ತಿಯ ಗರಿ
ಇನ್ನು ಶ್ರೀದೇವಿ ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪರಸ್ಕರಿಸಲಾಗಿತ್ತು. 5 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದ ಶ್ರೀದೇವಿ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದವು.

ಮತ್ತೆ ಸೆಳೆದ ಬಾಲಿವುಡ್
ಜುದಾಯಿ ಚಿತ್ರದ ನಂತರ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಶ್ರೀದೇವಿ ಇಂಗ್ಲಿಷ್ -ವಿಂಗ್ಲಿಷ್ ಸಿನಿಮಾ ಮೂಲಕ 2012 ರಲ್ಲಿ ಬಾಲಿವುಡ್ ಗೆ ವಾಪಸ್ ಬಂದಿದ್ದರು, ನವಾಜುದ್ದೀನ್ ಸಿದ್ಧಿಕಿ ಜೊತೆ ಮಾಮ್ ಸಿನಿಮಾದಲ್ಲಿ ನಟಿಸಿದ್ದರು. ಶಾರೂಕ್ ಖಾನ್ ಮುಂದಿನ ಸಿನಿಮಾ ಝೀರೋ ದಲ್ಲೂ ಕೂಡ ವಿಶೇಷ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದರು.

ಇತ್ತೀಚೆಗೆ ಶ್ರೀದೇವಿ ಅವರು ಕಾಣಿಸಿಕೊಂಡ ಪರಿ
ಮಾಸ್ಕೋದಲ್ಲಿ ಒಂದು ಕಾರ್ಯಕ್ರಮ:
ಮಾಸ್ಕೋದಲ್ಲಿ ನಡೆದ ವರ್ಷದ ಕೊನೆಯ ಸಂಭ್ರಮದಲ್ಲಿ ಶ್ರೀದೇವಿ ಪಾಲ್ಗೊಂಡಿದ್ದರು. ಅಲ್ಲಿ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಏಕವರ್ಣದ ಲೆಹೆಂಗಾವನ್ನು ಧರಿಸಿದ್ದರು. ಈ ಉಡುಗೆಯಲ್ಲಿ ಶ್ರೀದೇವಿ ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದರು.

ಲ್ಯಾಕ್‍ಮೀ ಫ್ಯಾಷನ್ ವೀಕ್2018
ಸದಾ ಆಕರ್ಷಕ ವ್ಯಕ್ತಿತ್ವದಿಂದ ಜನರನ್ನು ಸೆಳೆಯುತ್ತಿದ್ದವರು ಇವರು. ಲ್ಯಾಕ್‍ಮೀ ಫ್ಯಾಷನ್ ವೀಕ್2018 ಸಮಾರಂಭದಲ್ಲಿ ಭಾಗವಹಿಸಿದ್ದರು. ಜಾನ್ವೀ ಕಪೂರ್ ಜೊತೆ ಬಂದ ಇವರು ಅನಿತಾ ಡೊಂಗ್ರೆ ವಿನ್ಯಾಸ ಮಾಡಿರುವ ನೀಲಿ ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದರು.

ಐಎಫ್‍ಎಫ್ಐ 2017 ಸಮಾರಂಭ
ಐಎಫ್‍ಎಫ್ಐ 2017 ಸಮಾರಂಭದಲ್ಲಿ ಮಗಳಾದ ಜಾನ್ವೀ ಜೊತೆ ಶ್ರೀದೇವಿ ಆಗಮಿಸಿದ್ದರು. ತಾಯಿ ಮಗಳು ಇಬ್ಬರೂ ಮೋಹಕ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸಿದ್ದರು. ಶ್ರೀದೇವಿ ಸೀರೆಯನ್ನು ಧರಿಸಿದ್ದರು. ಜೊತೆಗೆ ಆಕರ್ಷಕ ಪದಕವನ್ನು ಹೊಂದಿರುವ ಚಿನ್ನದ ಸರವನ್ನು ಧರಿಸಿದ್ದರು.

ಮಾಮ್ ಪ್ರಚಾರಕ್ಕೆ
ಶ್ರೀದೇವಿ ತನ್ನ ಕೊನೆಯ ಚಿತ್ರ "ಮಾಮ್" ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೀದೇವಿ ಮನೀಶ್ ಮಲ್ಹೋತ್ರಾ ಅವರ ವಿನ್ಯಾಸದ ಉಡುಗೆ ಹಾಗೂ ಆಕರ್ಷಕ ಆಭರಣಗಳನ್ನು ಧರಿಸಿ ಜನರನ್ನು ಮೋಡಿ ಮಾಡಿದ್ದರು.