Just In
Don't Miss
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಿಲ್ಮ್‌ಫೇರ್ ರೆಡ್ ಕಾರ್ಪೆಟ್‌ಗೆ ರಂಗು ತುಂಬಿದ ಪ್ರೀತಿ ಜಿಂಟಾರ ಫ್ಲೋರಲ್ ಗೌನ್
2018 ರ ಫಿಲ್ಮ್‌ಫೇರ್ ಅವಾರ್ಡ್ ಸಮಾರಂಭ ಆರಂಭವಾಗಿಬಿಟ್ಟಿದೆ. ಬಾಲಿವುಡ್‌ನ ಅತ್ಯದ್ಭುತ ಹೆಸರಾಂತ ಸೆಲೆಬ್ರಿಟಿಗಳು ತಮ್ಮ ಸುಂದರ ಉಡುಗೆಗಳಿಂದ ಅವಾರ್ಡ್‌ನ ರೆಡ್ ಕಾರ್ಪೆಟ್ ಅನ್ನು ಇನ್ನಷ್ಟು ಸೊಗಸಾಗಿಸುತ್ತಿದ್ದಾರೆ. ಕೆಲವರು ಹಾಲಿವುಡ್‌ನ ನಟಿಯರ ದಿರಿಸುಗಳನ್ನು ಕಾಪಿ ಮಾಡಿ ಧರಿಸುತ್ತಿದ್ದರೆ ಇನ್ನು ಕೆಲವರು ಹೆಸರಾಂತ ವಸ್ತ್ರ ವಿನ್ಯಾಸಕರ ಮೂಲಕ ತಮ್ಮ ಉಡುಪುಗಳನ್ನು ವಿನ್ಯಾಸಪಡಿಸಿಕೊಂಡು ತಮ್ಮದೇ ಸ್ವಂತ ಶೈಲಿಯಲ್ಲಿ ಅವಾರ್ಡ್‌ನ ರಂಗಿನ ಜಗತ್ತನ್ನು ಆಳುವ ತವಕದಲ್ಲಿದ್ದಾರೆ.
ಇಂದಿನ ಲೇಖನದಲ್ಲಿ ನಾವು ರೆಡ್ ಕಾರ್ಪೆಟ್ ಅನ್ನು ಆಳಿದ ಸುಂದರಿ ಪ್ರೀತಿ ಜಿಂಟಾರ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ರೆಡ್ ಕಾರ್ಪೆಟ್ ಅನ್ನು ಈ ಸುಂದರಿ ಪ್ರವೇಶಿಸಿದ ಬಗೆಯೇ ಅತ್ಯಂತ ಮನಮೋಹಕವಾಗಿತ್ತು. ಪಿಂಕ್ ಬಣ್ಣದ ಗೌನ್ ಅನ್ನು ಧರಿಸಿದ್ದ ಪ್ರೀತಿ ಅಕ್ಷರಶಃ ಅಪ್ಸರೆಯಂತೆಯೇ ಕಂಗೊಳಿಸುತ್ತಿದ್ದರು. ಗೌನ್‌ನ ಕೆಳಭಾಗದಲ್ಲಿ ಫ್ರಿಲ್‌ಗಳಿದ್ದು ಇದು ನೆಲವನ್ನು ತಾಗುತ್ತಿತ್ತು ಹಾಗೂ ಇದುವೇ ಗೌನ್‌ಗೆ ಅತ್ಯದ್ಭುತ ನೋಟವನ್ನು ನೀಡಿತ್ತು. ಬಹಳ ಕಾಲದ ನಂತರ ಪ್ರೀತಿಯ ಈ ಮನಮೋಹ ನೋಟವನ್ನು ನಾವು ಕಣ್ತುಂಬಿಕೊಂಡಿದ್ದೇವೆ ಎಂದು ಹೇಳಬಹುದು...