For Quick Alerts
ALLOW NOTIFICATIONS  
For Daily Alerts

  ಬಿಳಿ ಉಡುಗೆಯ ದೇವತೆ- ಬಾಲಿವುಡ್‌ನ ದೀಪಿಕಾ ಪಡುಕೋಣೆ!

  By Jaya subramanya
  |

  ಬಾಲಿವುಡ್‎ನಲ್ಲಿ ಬಿಳಿ ಬಟ್ಟೆಗಳನ್ನು ಧರಿಸುವ ಬೆಡಗಿ ಯಾರೆಂದರೆ ಥಟ್ಟನೆ ನೆನಪಾಗುವುದು ದೀಪಿಕಾ ಪಡುಕೋಣೆ. ದೀಪಿಕಾರಿಗೆ ಬಿಳಿ ಎಂದರೆ ಹೆಚ್ಚು ಅಚ್ಚುಮೆಚ್ಚು ಏಕೆಂದರೆ ನಮಗೆ ಅರಿವಾಗಿದ್ದು ಆಕೆ ಹೆಚ್ಚು ಬಿಳಿ ಉಡುಗೆಗಳನ್ನೇ ಆಯ್ಕೆಮಾಡಿದಾಗ. ದೀಪಿಕಾ ಹೆಚ್ಚು ಕಂಡುಬಂದಿದ್ದು ಬಿಳಿ ಬಣ್ಣದ ದಿರಿಸಿನಲ್ಲೇ ಎಂದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ತೆಳುವಾದ ನೆಟ್ ಸೀರೆಯಲ್ಲಿ ದೀಪಿಕಾರ ಹೊಸ ಸ್ಟೈಲ್

  ಇಂದಿನ ಲೇಖನದಲ್ಲಿ ದೀಪಿಕಾರ 15 ಬಿಳಿ ಬಣ್ಣದ ಉಡುಗೆಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು ಇದು ನಿಮ್ಮನ್ನು ಬಿಳಿ ಬಣ್ಣಕ್ಕೆ ಮಾರುಹೋಗುವಂತೆ ಮಾಡುವುದು ಖಂಡಿತ...

  ಬಿಳಿ ಫಾರ್ಮಲ್ ಲುಕ್

  ಬಿಳಿ ಫಾರ್ಮಲ್ ಲುಕ್

  ಬಿಳಿ ಬಣ್ಣದ ಪೂರ್ಣ ಸ್ಲೀವ್‎ನಲ್ಲಿ ದೀಪಿಕಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೊಡೆಯವರೆಗೆ ಇರುವ ಈ ದಿರಿಸು ಅವರನ್ನು ಇನ್ನಷ್ಟು ಸ್ಲಿಮ್ ಮತ್ತು ಸುಂದರಿಯನ್ನಾಗಿಸಿದೆ.

  ಮೂವಿ ನೈಟ್ ಲುಕ್

  ಮೂವಿ ನೈಟ್ ಲುಕ್

  ಕುತ್ತಿಗೆಯವರೆಗೆ ಇರುವ ಶಿಫಾನ್ ದಿರಿಸಿನಲ್ಲಿ ದೀಪಿಕಾ ಇನ್ನಷ್ಟು ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ದಿರಿಸಿನಲ್ಲಿ ಪಾಕೆಟ್‎ಗಳಿವೆ. ಚಿನ್ನದ ಹೀಲ್ಡ್ ಧರಿಸಿ ದೀಪಿಕಾ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿಕೊಂಡಿದ್ದಾರೆ.

  ಕೇನ್ಸ್ ರೆಡ್ ಕಾರ್ಪೆಟ್

  ಕೇನ್ಸ್ ರೆಡ್ ಕಾರ್ಪೆಟ್

  ದೀಪಿಕಾರ ಹೆಚ್ಚು ಜನಪ್ರಿಯ ಲುಕ್‎ನಲ್ಲಿ ಇದೂ ಒಂದು. ಗೋಲ್ಡನ್ ಬೋರ್ಡರ್‎ ಅಂಚುಳ್ಳ ಸೀರೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ದೀಪಿಕಾ ಹೆಜ್ಜೆಯನ್ನಿಟ್ಟಿದ್ದಾರೆ.

  ಬಿಳಿ ಲೆಹೆಂಗಾ

  ಬಿಳಿ ಲೆಹೆಂಗಾ

  ಲೇಬಲ್ ಸಬ್ಯಸಾಚಿಯಿಂದ ಹೊಳೆಯುವ ಲೆಹೆಂಗಾವನ್ನು ದೀಪಿಕಾ ಧರಿಸಿಕೊಂಡಿದ್ದಾರೆ. ಇದಕ್ಕೆ ಹೊಂದುವ ಬಿಳಿ ಕುರ್ತಾ ಮತ್ತು ದುಪ್ಪಟ್ಟಾವನ್ನು ದೀಪಿಕಾ ಆಯ್ದುಕೊಂಡಿದ್ದಾರೆ.

  ಡೇಟ್ ನೈಟ್ ಲುಕ್

  ಡೇಟ್ ನೈಟ್ ಲುಕ್

  ತಮ್ಮ ಚಲನ ಚಿತ್ರ ಪ್ರಮೋಶನ್‎ಗಾಗಿ ದೀಪಿಕಾ ಈ ಬಿಳಿ ಬಣ್ಣದ ದಿರಿಸನ್ನು ತೊಟ್ಟಿದ್ದಾರೆ. ಆಫ್ ಶೋಲ್ಡರ್ ದಿರಿಸು ಇದಾಗಿದ್ದು, ನಮ್ಮ ಗಮನವನ್ನು ಇದು ತನ್ನೆಡೆಗೆ ಆಕರ್ಷಿಸಿದ್ದು ಮಾತ್ರ ಸುಳ್ಳಲ್ಲ.

  ದೀಪಾವಳಿ ಪೂಜಾ ಸೂಟ್‎

  ದೀಪಾವಳಿ ಪೂಜಾ ಸೂಟ್‎

  ಬಿಳಿ ಅನಾರ್ಕಲಿ ಸೂಟ್‎ನಲ್ಲಿ ದೀಪಿಕಾ ಇನ್ನಷ್ಟು ಬೆಡಗಿನಿಂದ ಕಾಣುತ್ತಿದ್ದಾರೆ. ತಮ್ಮ ನೀಳ್ಗೂದಲನ್ನು ಇಳಿಬಿಟ್ಟು ಹೊಳೆಯುವ ಕಪ್ಪು ಕಣ್ಣುಗಳಿಂದ ಸೆಳೆದಿದ್ದಾರೆ.

  ರೆಡ್ ಕಾರ್ಪೆಟ್ ಲುಕ್

  ರೆಡ್ ಕಾರ್ಪೆಟ್ ಲುಕ್

  ಬಿಳಿ ಬಣ್ಣದ ಉಡುಗೆಯಲ್ಲಿ ಏಂಜಲ್‎ನಂತೆ ಕಾಣುತ್ತಿರುವ ದೀಪಿಕಾ ಇಫಾದಲ್ಲಿ ಮಿಂಚಿನ ನೋಟವನ್ನು ಬೀರುತ್ತಿದ್ದಾರೆ. ಸಬ್ಯಸಾಚಿಯ ಈ ದಿರಿಸಿಗೆ ಆಭರಣವನ್ನು ತೊಟ್ಟುಕೊಂಡಿದ್ದಾರೆ.

  ಬಿಳಿ ಕೆಂಪು ಕಾರ್ಪೆಟ್ ದಿರಿಸು

  ಬಿಳಿ ಕೆಂಪು ಕಾರ್ಪೆಟ್ ದಿರಿಸು

  ಪ್ರಶಸ್ತಿ ಸಮಾರಂಭದಲ್ಲಿ ದೀಪಿಕಾ ಬಿಳಿ ಬಣ್ಣದ ಗೌನ್ ತೊಟ್ಟು ತಮ್ಮ ಅಂದವನ್ನು ಪ್ರಸ್ತುತಪಡಿಸಿದ್ದಾರೆ.

  ಬಿಳಿ ಸೂಟ್‎

  ಬಿಳಿ ಸೂಟ್‎

  ಬಿಳಿ ಬಣ್ಣದ ಹೊಳೆಯುವ ಸೂಟ್‎ನಲ್ಲಿ ದೀಪಿಕಾ ತಮ್ಮ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾರೆ. ನಿಜಕ್ಕೂ ಸುಂದರಿ ದೀಪಿಕಾ ಚೆಲುವಿನಿಂದ ಕಂಗೊಳಿಸುತ್ತಿದ್ದಾರೆ.

  ಬಿಳಿ ಸಪರೇಟ್ಸ್

  ಬಿಳಿ ಸಪರೇಟ್ಸ್

  ಬಿಳಿ ಸಪರೇಟ್ಸ್‎ನಲ್ಲಿ ದೀಪಿಕಾ ನಿಜಕ್ಕೂ ಅದ್ಭುತವಾಗಿ ಕಾಣುತ್ತಿದ್ದಾರೆ. ಕ್ರಾಪ್ ಟಾಪ್ ಮತ್ತು ಪೆನ್ಸಿಲ್ ಸ್ಕರ್ಟ್‎ನಲ್ಲಿ ದೀಪಿಕಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.

  ಹೊಳೆಯುವ ಬಿಳಿ ಸೀರೆ

  ಹೊಳೆಯುವ ಬಿಳಿ ಸೀರೆ

  ನಮ್ಮ ಗಮನವನ್ನು ಸೆಳೆಯುವ ಬಿಳಿ ಸೀರೆಯಲ್ಲಿ ದೀಪಿಕಾ ಮುದ್ದಾಗಿ ಚೆಲುವಿನಿಂದ ಕಾಣಿಸಿಕೊಂಡಿದ್ದಾರೆ.

  ಸರಳ ಬಿಳಿ ಉಡುಗೆ

  ಸರಳ ಬಿಳಿ ಉಡುಗೆ

  ಪ್ಲಂಗಿಂಗ್ ನೆಕ್ ಇರುವ ಬಿಳಿ ಉಡುಗೆಯನ್ನು ಡಿಪ್ಪಿ ತೊಟ್ಟುಕೊಂಡಿದ್ದು ಇದು ಪೂರ್ಣ ಸ್ಲೀವ್ ಅನ್ನು ಹೊಂದಿದೆ ಇದಕ್ಕೆ ಹೊಂದುವ ಚಪ್ಪಲಿಯನ್ನು ಅವರು ಧರಿಸಿ ನಿಜಕ್ಕೂ ಮೋಡಿ ಮಾಡುವಂತಹ ನೋಟದಲ್ಲಿ ನಮ್ಮೆದುರಿಗೆ ಬಂದಿದ್ದಾರೆ.

  ಸೀರೆಯ ಚೆಲುವೆ

  ಸೀರೆಯ ಚೆಲುವೆ

  ಲೇಬಲ್ ಸಬ್ಯಸಾಚಿ ವಿನ್ಯಾಸದ ಈ ಸೀರೆಯಲ್ಲಿ ದೀಪಿಕಾ ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಚಿತ್ರವೇ ಆಕೆಯ ಬಗ್ಗೆ ಸಾಕಷ್ಟನ್ನು ಹೇಳುತ್ತಿದೆ.

  ಬಿಳಿ ನೆಟ್ ಸೀರೆ

  ಬಿಳಿ ನೆಟ್ ಸೀರೆ

  ದೀಪಿಕಾರ ಹಳೆಯ ಸಾಂಪ್ರದಾಯಿಕ ನೋಟ ಇದಾಗಿದೆ.

  ಬಿಳಿ ಮ್ಯಾಕ್ಸಿ ದಿರಿಸು

  ಬಿಳಿ ಮ್ಯಾಕ್ಸಿ ದಿರಿಸು

  ಬಿಳಿ ಮ್ಯಾಕ್ಸಿ ದಿರಿಸಿನಲ್ಲಿ ಮುದ್ದು ಮೊಗದ ಸುಂದರಿ ದೀಪಿಕಾ

   

  English summary

  deepika padukone white dresses a list of top 15 look books

  If someone in Bollywood can wear white right, it is, undoubtedly, Deepika Padukone. Bollywood diva has caught the frenzy of the colour white. But it was Deepika who started all this. In fact, when we were putting together this article, we came across a minimum of 15 looks sported by Deepika in white.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more