Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೆಳುವಾದ ನೆಟ್ ಸೀರೆಯಲ್ಲಿ ದೀಪಿಕಾರ ಹೊಸ ಸ್ಟೈಲ್
ಸಿನಿ ಕ್ಷೇತ್ರದಲ್ಲಿ ಫ್ಯಾಷನ್, ಸ್ಟೈಲ್, ದಿರಿಸುಗಳು ಚಿತ್ರದ ಪ್ರಚಾರದಂತೆಯೇ ಭರ್ಜರಿಯಾಗಿ ವೀಕ್ಷಕರನ್ನು ತಟ್ಟುತ್ತದೆ. ಅದಕ್ಕಾಗಿಯೇ ತಮ್ಮ ಹೊಸ ಸಿನಿಮಾಗಳ ಪ್ರಚಾರದೊಂದಿಗೆ ಸಿನಿ ತಾರೆಯರು ನವೀನ ಮಾದರಿಯ ದಿರಿಸುಗಳ ಪ್ರಚಾರವನ್ನು ಭರ್ಜರಿಯಾಗಿಯೇ ನಡೆಸುತ್ತಾರೆ. ಸೀರೆ, ಮ್ಯಾಕ್ಸಿ ಗೌನ್, ಲೆಹೆಂಗಾ, ಸಲ್ವಾರ್ ಕಮೀಜ್, ಜೀನ್ಸ್ ಟಾಪ್ ಹೀಗೆ ವಿಧ ವಿಧದ ದಿರಿಸುಗಳೊಂದಿಗೆ ಬಾಲಿವುಡ್ ಚೆಲುವೆಯರು ಮೋಡಿ ಮಾಡುವ ಪರವಶತೆಯಿಂದ ವೀಕ್ಷಕರನ್ನು ಸೆಳೆದಿಡುತ್ತಾರೆ.
ಇಂದು ಸೀರೆಯಲ್ಲಿ ಮನಸೂರೆಗೊಳಿಸಿರುವ ನೀರೆ ಬಾಜಿರಾವ್ ಮಸ್ತಾನಿ ನಾಯಕಿ ದೀಪಿಕಾ ಪಡುಕೋಣೆ. ತಮ್ಮ ಹೊಸ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿಯೇ ನಡೆಸುತ್ತಿರುವ ತಮಾಷಾ ಸುಂದರಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿರುವ ಸುವರ್ಣಗಳಿಗೆ. ಇತ್ತೀಚೆಗೆ ತಾನೇ ರಣವೀರ್ ಬಾಜಿರಾವ್ ಮಸ್ತಾನಿ ಚಿತ್ರಕ್ಕಾಗಿ ಸಾಂಪ್ರದಾಯಿಕ ದಿರಿಸುಗಳಲ್ಲಿ ಹುಚ್ಚೆಬ್ಬಿಸಿದ್ದರೆ ಇದೀಗ ದೀಪಿಕಾ ಕೂಡ ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ.

ಸ್ವರಾಗಿನಿ ಸೆಟ್‌ನಲ್ಲಿ ದೀಪಿಕಾರ ಅದ್ಭುತ ಸೀರೆ ನೋಟದಲ್ಲಿ ನಿಜಕ್ಕೂ ನಮ್ಮನ್ನು ಬೆಚ್ಚಿಬೀಳುವಂತೆ ಮಾಡಿದ್ದಾರೆ. ತೆಳುವಾದ ನೆಟ್ ಸೀರೆಯಲ್ಲಿ ಮನಮೋಹಕಿಯಾಗಿ ಕಾಣುತ್ತಿದ್ದ ದೀಪಿಕಾ ಯಾವ ದಿರಿಸುಗಳಲ್ಲಿಯೂ ತಾವು ಸೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಉದ್ದ ತೋಳಿನ ಪ್ರಿಂಟ್ ರವಿಕೆಯನ್ನು ಸೀರೆಗೆ ಮ್ಯಾಚಿಂಗ್ ಆಗಿ ದೀಪಿಕಾ ಧರಿಸಿದ್ದು ಸೀರೆಯನ್ನು ಆಧುನಿಕ ಲುಕ್‌ನಲ್ಲಿ ಇಷ್ಟಪಡುವ ನೀರೆಯರಿಗೆ ಇದೊಂದು ಸೊಗಾಸಾದ ವಿಧಾನವಾಗಿದೆ. ಸೀರೆಗೆ ಸೂಕ್ತವಾಗಿ ಒಪ್ಪುವ ಕಿವಿಯಾಭರಣವನ್ನು ಕೂಡ ದೀಪಿಕಾ ಧರಿಸಿಕೊಂಡಿದ್ದಾರೆ.
ಚಳಿಗಾಲದ ವಿವಾಹ ಕಾರ್ಯಕ್ರಮಗಳಿಗೆ ಸೀರೆಯಲ್ಲಿ ನೀವು ಮನಮೋಹಕರಾಗಿ ಕಾಣಬೇಕು ಎಂದಾದಲ್ಲಿ ಈ ಸ್ಟೈಲ್ ಅನ್ನು ನಿಮಗೆ ಅನುಸರಿಸಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ ಈ ಸೀರೆ ಸ್ಟೈಲ್ ಅನ್ನು ನೀವು ಅನುಸರಿಸಿ ಚೆಂದ ಕಾಣಿರಿ.



Click it and Unblock the Notifications
