ದೀಪಿಕಾಳ ಅಮೋಘ ಸೌಂದರ್ಯಕ್ಕೆ ಮಾರುಹೋಗದವರು ಯಾರು?

By: Hemanth
Subscribe to Boldsky

ಕೇನ್ಸ್‌‌ನ ಚಿತ್ರ ಮಹೋತ್ಸವದ ಮೊದಲ ದಿನದಂದೇ ದೀಪಿಕಾ ಪಡುಕೋಣೆ ತನ್ನ ಮಾದಕ ಸೌಂದರ್ಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ಇಂದು ಆಕೆ ರತ್ನಗಂಬಳಿಯಲ್ಲಿ ಮಾರ್ಜಾಲ ನಡಿಗೆಯನ್ನಿಡುವ ಮೊದಲು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಗ್ಲಾವನ್ ಲಂಡನ್‌ನ ಮೆಟ್ಯಾಲಿಕ್ ನ್ಯೂಡ್ ಮೌವೆ ಡ್ರೆಸ್ ನಲ್ಲಿ ಆಕೆ ಕಾಣಿಸಿಕೊಂಡಿದ್ದಾಳೆ. 

Deepika’s Festival de Cannes Red Carpet Look

ಆಕೆ ಧರಿಸಿರುವಂತಹ ಚಪ್ಪಳಿಗಳು ಕೂಡ ಆ ಉಡುಪಿಗೆ ಸರಿಯಾಗಿ ಹೊಂದಿಕೊಂಡಿದೆ. ಮೊದಲ ದಿನದಂದೇ ತನ್ನ ಉಡುಗೆ ಮತ್ತು ಸೌಂದರ್ಯದಿಂದ ದೀಪಿಕಾ ಎಲ್ಲರನ್ನು ಬೆರಗಾಗಿಸಿದ್ದಾಳೆ. ಕ್ಯಾನ್ಸ್ ಚಿತ್ರಮಹೋತ್ಸವಕ್ಕೆ ಆಕೆಯ ಪಾದಾರ್ಪಣೆ ತುಂಬಾ ಅದ್ಭುತವಾಗಿತ್ತು ಎಂದು ಹೇಳಬಹುದು. ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲು ಸಾಧ್ಯ? 

Deepika’s Festival de Cannes Red Carpet Look

ಮರ್ಚೆಸಾ ನೊಟ್ಟೆ ವಿನ್ಯಾಸಗೊಳಿಸಿದಂತಹ ಆಭರಣಗಳನ್ನು ದೀಪಿಕಾ ಧರಿಸಿದ್ದಾಳೆ. ಕಪ್ಪುಬಣ್ಣದ ಉಡುಗೆಯು ರತ್ನಗಂಬಳಿಯನ್ನು ಮುತ್ತಿಕ್ಕುತ್ತಾ ಸಾಗುತ್ತಾ ಇರುವಾಗ ದೀಪಿಕಾ ಸ್ವರ್ಗದಿಂದ ಇಳಿದ ಅಪ್ಸರೆಯಂತೆ ಕಾಣಿಸುತ್ತಾ ಇದ್ದಳು. ಡೆ ಗ್ರಿಸೊಗೊನೊ ಅವರ ಜಿಮ್ಮೆ ಚೂ ಆಕೆಯ ಉಡುಗೆಗೆ ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಾ ಇತ್ತು.

Deepika’s Festival de Cannes Red Carpet Look

ಲಾ ಒರಿಯಲ್ ನಿಂದ ಮಾಡಿದಂತಹ ಆಕೆಯ ಮೇಕಪ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ತನ್ನ ತುಟಿಗಳಿಗೆ ಲಾ ಒರಿಯಲ್ ಲಿಪ್ ಸ್ಟಿಕ್ ಹಾಕಿಕೊಂಡಿದ್ದಾಳೆ.

Deepika’s Festival de Cannes Red Carpet Look
Deepika’s Festival de Cannes Red Carpet Look
Deepika’s Festival de Cannes Red Carpet Look
Deepika’s Festival de Cannes Red Carpet Look
English summary

Don't Miss! Deepika’s Festival de Cannes Red Carpet Look

It is just the first day and Deepika Padukone has already slayed us down with her variety of looks on the first day of Festival de Cannes. She completely floored us with her day's look. She was back with another look of hers before she walked the festival's red carpet today.
Subscribe Newsletter