For Quick Alerts
ALLOW NOTIFICATIONS  
For Daily Alerts

ಕಳೆದ ಬಾರಿಯ ಆಸ್ಕರ್ ಅವಾರ್ಡ್‌ನಲ್ಲಿ ಮಿಂಚಿದ ನಟಿಮಣಿಯರು

By Deepu
|

ಹೆಚ್ಚು ಗೌರವಾನ್ವಿತ ಪ್ರಶಸ್ತಿ ಎಂದೇ ಖ್ಯಾತವಾಗಿರುವ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಆರಂಭವಾಗಿಬಿಟ್ಟಿದೆ. 2018 ರ ಆಸ್ಕರ್ ಅವಾರ್ಡ್ ನಾಮಿನಿಗಳ ಅತ್ಯದ್ಭುತ ನೋಟವನ್ನು ನಮ್ಮ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವರ ಕೇಶ ಶೃಂಗಾರದಿಂದ ಹಿಡಿದು ದಿರಿಸಿನವರೆಗೆ ಪ್ರತಿಯೊಂದು ಅತ್ಯಂತ ಗಮನಾರ್ಹ ಎಂದೆನಿಸಲಿದೆ.

ಅತ್ಯುತ್ತಮ ನಾಯಕಿ ಪ್ರಶಸ್ತಿಯನ್ನು ಗರಿಗೇರಿಸಿಕೊಂಡ 5 ಮಹಿಳೆಯರು ಈ ಬಾರಿ ರೆಡ್ ಕಾರ್ಪೆಟ್ ಅನ್ನು ಆಳಲಿದ್ದಾರೆ. ಬನ್ನಿ ಅವರ ಕುರಿತು ಅವರು ಧರಿಸಿದ್ದ ದಿರಿಸಿನ ಕುರಿತು ಮಾಹಿತಿ ತಿಳಿದುಕೊಳ್ಳೋಣ....

ಮಾರ್ಗಟ್ ರೋಬಿ

ಮಾರ್ಗಟ್ ರೋಬಿ

"ಐ ಟೋನ್ಯ" ಚಲನಚಿತ್ರದಕ್ಕಾಗಿ ಮಾರ್ಗಟ್ ರೋಬಿಯನ್ನು ಈ ಬಾರಿಯ ಆಸ್ಕರ್‌ಗಾಗಿ ಆಯ್ಕೆಮಾಡಲಾಗಿದೆ. 2015 ರಲ್ಲಿ ಅವರು ಹೊಳೆಯುವ ಕಪ್ಪು ಗೌನ್ ಅನ್ನು ಧರಿಸಿ ರೆಡ್ ಕಾರ್ಪೆಟ್‌ಗೆ ಆಗಮಿಸಿದ್ದರು. ನಟಿಯ ಅತ್ಯಂತ ಉತ್ತಮ ನೋಟ ಇದಾಗಿತ್ತು. ವ್ಯಾನ್ ಕ್ಲೀಪ್-ಆರ್ಪೆಲ್‌ಗಳ ನೆಕ್ಲೇಸ್ ಅನ್ನು ಕೂಡ ನಟಿ ಧರಿಸಿದ್ದರು.

 ಸೈರೋಸ್ ರೋನಮ್

ಸೈರೋಸ್ ರೋನಮ್

"ಲೇಡಿ ಬರ್ಡ್" ಚಿತ್ರಕ್ಕಾಗಿ ಉತ್ತಮ ನಟಿ ವರ್ಗದಲ್ಲಿ ಸೈರೋಸ್ ಸ್ಥಾನ ಪಡೆದುಕೊಂಡಿದ್ದಾರೆ. ಹಾಲಿವುಡ್‌ನ ಫ್ಯಾಶನ್ ದಿವಾ ಆಗಿರುವ ಸೈರೋಸ್ ಹಸಿರು ಗೌನ್ ತೊಟ್ಟು 2016 ರ ಆಸ್ಕರ್ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದರು.

ಸ್ಯಾಲಿ ಹಾವ್‌ಕಿನ್ಸ್

ಸ್ಯಾಲಿ ಹಾವ್‌ಕಿನ್ಸ್

ಹಾಲಿವುಡ್‌ನ ಅತ್ಯದ್ಭುತ ನಟಿಯಾಗಿರುವ ಸ್ಯಾಲಿ "ದ ಶೇಪ್ ಆಫ್ ವಾಟರ್" ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2014 ರ ಅವಾರ್ಡ್ ಸಮಯದಲ್ಲಿ ಕ್ಲಾಸಿ ಶೀತ್ ಬೀಜ್ ಗೌನ್ ಅನ್ನು ಧರಿಸಿದ್ದರು.

ಫ್ರಾನ್ಸಿಸ್ ಮೆಕ್‌ಡೋರ್ಮಂಡ್

ಫ್ರಾನ್ಸಿಸ್ ಮೆಕ್‌ಡೋರ್ಮಂಡ್

ಹೆಚ್ಚಿನ ಚಲನಚಿತ್ರಗಳಲ್ಲಿನ ಅತ್ಯುತ್ತಮ ನಟನೆಗಾಗಿ ಫ್ರಾನ್ಸಿಸ್ ಖ್ಯಾತರಾಗಿದ್ದಾರೆ. "ತ್ರಿ ಬಿಲ್‌ಬೋರ್ಡ್ಸ್ ಔಟ್‌ಸೈಡ್ ಎಬ್ಬಿಂಗ್" ಚಿತ್ರಕ್ಕಾಗಿ ಈ ಬಾರಿಯ ಆಸ್ಕರ್ ಅವಾರ್ಡ್‌ಗೆ ಅವರು ಆಯ್ಕೆಗೊಂಡಿದ್ದಾರೆ. 1996 ರಲ್ಲಿ ಫ್ರಾನ್ಸಿಸ್ ನೀಲಿ ಬಣ್ಣದ ಗೌನ್ ಧರಿಸಿ ಎಲ್ಲರ ಮನವನ್ನು ಅಕರ್ಷಿಸಿದ್ದರು.

ಮೆರೀಲ್ ಸ್ಟ್ರೀಪ್

ಮೆರೀಲ್ ಸ್ಟ್ರೀಪ್

ಈ ವರ್ಷದ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೆರೀಲ್ ಎಲ್ಲರ ಮನವನ್ನು ಕದಿಯುವುದಂತೂ ಖಂಡಿತ. ಕಳೆದ ವರ್ಷ ಕೂಡ ರಾಯಲ್ ನೀಲಿ ಬಣ್ಣದ ಹೊಳೆಯುವ ಗೌನ್ ಧರಿಸಿ ಎಲ್ಲರ ಮನವನ್ನು ರಂಜಿಸಿದ್ದರು.

English summary

best-oscar-looks-of-2018-academy-awards-nominees

The most prestigious Academy Awards, also known as the Oscars, are going to be held on the 4th of March. The 90th edition of the prestigious award ceremony is going to mark the presence of all the stunning Oscars 2018 nominees. The nominess for the Best Actress category has five stunning ladies who are known to slay with their style statements always as they hit the red carpet. We have compiled the best look of each of them from the previous years' Academy Awards.
X