Just In
Don't Miss
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೆರಿಲ್ ಸ್ಟ್ರೀಪ್ ಆಸ್ಕರ್‌ಗೆ ವಿನ್ಯಾಸದ ಬಟ್ಟೆಗಳು
2018ರ ಆಸ್ಕರ್ ಶ್ರೇಷ್ಠ ನಟಿ ಯಾರೆಂಬ ನಿಮಗೆ ತುಂಬಾ ಕುತೂಹಲವಿದೆ ತಾನೇ? ಆಕೆ ಬೇರಾರು ಅಲ್ಲ, ಮೋಹಕತಾರೆ, ಪ್ರತಿಭಾವಂತ ನಟಿ ಮೆರಿಲ್ ಸ್ಟ್ರೀಪ್. ಆಕೆ ನಟಿಸಿರುವ ದ ಪೋಸ್ಟ್' ಚಿತ್ರಕ್ಕೆ ಈ ಪ್ರಶಸ್ತಿ ಸಂದಿದೆ. ಈ ವರ್ಷ ಆಸ್ಕರ್ ನ ಶ್ರೇಷ್ಠ ನಟಿ ಪ್ರಶಸ್ತಿ ಪಡೆದುಕೊಂಡಿರುವ ಸ್ಟ್ರೀಪ್ ರತ್ನಗಂಬಳಿಯಲ್ಲಿ ನಡೆಯಲು ಯಾವ ಬಟ್ಟೆ ಧರಿಸುವುದು ಎನ್ನುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಹಿಂದಿನ ವರ್ಷಗಳಲ್ಲಿ ಸ್ಟ್ರೀಪ್ ಆಸ್ಕರ್ ಪ್ರಶಸ್ತಿ ಸಮಾರಂಭದ ವೇಳೆ ಯಾವ ರೀತಿಯ ಧಿರಿಸು ಧರಿಸಿದ್ದರು ಎಂದು ತಿಳಿದುಕೊಳ್ಳುವ....

2017ರಲ್ಲಿ ಎಲಿ ಸಾಬ್
89ನೇ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಮೆರಿಲ್ ಸ್ಟ್ರೀಪ್ ಶನೆಲ್ ಧರಿಸುತ್ತಾರೆಂದು ಪ್ರತಿಯೊಬ್ಬರು ನಿರೀಕ್ಷೆಯಲ್ಲಿದ್ದರು. ಆದರೆ ಆಕೆ ಎಲಿ ಸಾಬ್ ಧರಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು. ಭುಜಗಳಿಲ್ಲದ ರಾಯಲ್ ಬ್ಲೂ ಗೌನ್ ಧರಿಸಿದ್ದು, ಇದಕ್ಕೆ ಸೀಕ್ವಿನ್ ಟಾಪ್ ಇತ್ತು. ಅದೇ ಕೆಳಭಾಗವು ಟ್ರೌಸರ್ ಜತೆಗೆ ಸೈಡ್ ಸ್ಲಿಟ್ ಹೊಂದಿತ್ತು. ಆಕೆ ಇದನ್ನು ತುಂಬಾ ಚೆನ್ನಾಗಿ ಧರಿಸಿ ರತ್ನಗಂಬಳಿಯಲ್ಲಿ ತಿರುಗಿದರು.

2015 ಲಾನ್ವಿನ್
ಮೆರ್ಲಿ ಲಾನ್ವಿನ್ ನ್ನು ಹೆಚ್ಚು ಇಷ್ಟಪಡುವುದು 87ನೇ ಪ್ರಶಸ್ತಿ ಸಮಾರಂಭದಲ್ಲೂ ಕಂಡು ಬಂತು. ಇದೇ ಆಕೆ ಫ್ರಾನ್ಸ್ ನ ಡಿಸೈನರ್ ಫ್ಯಾಶನ್ ಏಕವರ್ಣದ ಫಾರ್ಮಲ್ ಗಳಿಂದ ಗಮನಸೆಳೆದಳು. ಇದರಲ್ಲಿ ಬಿಳಿಯ ಟಾಪ್, ಕಪ್ಪಬಣ್ಣದ ಟುಕ್ಸೆಡೊ ಬ್ಲೇಜರ್ ಮತ್ತು ಗೆರೆಯ ಮ್ಯಾಕ್ಸಿ ಶರ್ಟ್ ಹೊಂದಿತ್ತು.

2014 ಲಾನ್ವಿನ್
2014ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಲಾನ್ವಿನ್ ನ ಎರಡು ಪ್ರತ್ಯೇಕ ಜೋಡಿಯು ರತ್ನಗಂಬಳಿಯಲ್ಲಿ ಎಲ್ಲರ ಗಮನಸೆಳೆಯಿತು. ಭುಜಗಳು ಇಲ್ಲದೆ ಇರುವ ಕ್ರೀಮ್ ಬಣ್ಣದ ಟಾಪ್ ಮತ್ತು ಕಪ್ಪು ಶರ್ಟ್. ಇದಕ್ಕೆ ಹರಳುಗಳಿರುವ ಬೆಲ್ಟ್ ಮತ್ತು ವಿವಿಧ ಆಭರಣಗಳು ಇದ್ದವು.

2013 ಶನೆಲ್
2013ರಲ್ಲಿ ಮರ್ಲಿ ಸ್ಟ್ರೀಪ್ ಮತ್ತೊಂದು ರೀತಿಯ ಉಡುಗೆಯೊಂದಿಗೆ ಎಲ್ಲರನ್ನು ಸೆಳೆದರು. ಈ ವರ್ಷ ಆಕೆ ಶನೆಲ್ ಸೀಕ್ವೀನ್ ಜಾಮ್ ಸೂಟ್ ಧರಿಸಿದ್ದರು. ಇದು ಆಕೆಗೆ ಅದ್ಭುತವಾಗಿ ಕಾಣಿಸುತ್ತಿದ್ದು, ನೋಡುಗರ ಗಮನಸೆಳೆಯಿತು. ಇದಕ್ಕೆ ಹೊಂದುವ ಕಿವಿಯೋಲೆ ಮತ್ತು ಬಳೆಗಳನ್ನು ಧರಿಸಿದ್ದಳು.

2012 ಅಲ್ಬೆರ್ ಎಲ್ಬಜ್
ಆಸ್ಕರ್ ವೇಳೆ ಮರ್ಲಿ ಸ್ಟ್ರೀಪ್ ಧರಿಸಿದ ಅತ್ಯಂತ ಸುಂದರ ಉಡುಗೆ ಇದಾಗಿದೆ. ಸೀಕ್ವೀನ್ ಲಾನ್ವಿನ್ ಗೌನ್ ನ್ನು ಖ್ಯಾತ ಡಿಸೈನರ್ ಅಲ್ಬರ್ ಎಲ್ಬಜ್ ವಿನ್ಯಾಸಗೊಳಿಸಿದ್ದರು. ಸುಂದರ ನಟಿಗೆ ಇದನ್ನು ವಿನ್ಯಾಸಗೊಳಿಸಲು ಆತ ನಿದ್ದೆಯಿಲ್ಲದ ಹಲವಾರು ರಾತ್ರಿಗಳನ್ನು ಕಳೆದಿದ್ದ. ಚಿನ್ನದ ಬಣ್ಣದ ಈ ಗೌನ್ ಧರಿಸಿ ಆಕೆ ರತ್ನಗಂಬಳಿಯಲ್ಲಿ ನಡೆದಾಗ ಅಪ್ಸರೇ ಸ್ವರ್ಗದಿಂದ ಬಂದಂತಿತ್ತು.