Just In
Don't Miss
- Movies
ಗಬ್ಬಾ ನಲ್ಲಿ ಆಸ್ಟ್ರೇಲಿಯಾದ ಗರ್ವಭಂಗ: ಕುಣಿದ ಬಾಲಿವುಡ್
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್‌ಬಾಸ್ ಸ್ಪರ್ಧಿ ಹೀನ ಖಾನ್ ಫ್ಯಾಷನ್ ಝಲಕ್
ಬಿಗ್‌ಬಾಸ್ ಸೀಸನ್ 11 ರಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು ಹೀನಾ ಖಾನ್‌ರದ್ದಾಗಿದೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಸ್ಟೈಲಿಶ್ ದಿವಾ ಎಂದಾಗಿ ಇವರನ್ನು ಕರೆಯಬಹುದಾಗಿದೆ. ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ಧಗೊಂಡಿರುವ ಹೀನಾ ಖಾನ್ ಈಗ ಬಿಗ್‌ಬಾಸ್‌ನಲ್ಲಿ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಚರ್ಚೆಯಲ್ಲಿದ್ದಾರೆ. ತಮ್ಮ ವೃತ್ತಿ ಆರಂಭವನ್ನು ಈ ನಟಿ ಮಾಡಿದ್ದು "ಯೆ ರಿಶ್ತ ಕ್ಯ ಕೆಹಲಾತಾ ಹೇ" ಎಂಬ ಧಾರವಾಹಿಯ ಮೂಲಕ. ತಮ್ಮ ಅದ್ಭುತ ಅಭಿನಯ ಮತ್ತು ಮೋಡಿ ಮಾಡುವ ಸೌಂದರ್ಯದಿಂದ ಹೀನಾ ರಾತ್ರಿ ಬೆಳಗಾಗುವುದರಲ್ಲಿ ಮನೆಮಾತಾದರು.
ಸ್ಟೈಲ್ ವಿಷಯಕ್ಕೆ ಬಂದಾಗ ಹೀನಾ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಕಾಣುವ ಪ್ರಯತ್ನದಿಂದ ಅವರು ಹಿಂದೆ ಸರಿದಿಲ್ಲ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ನಟಿಯ ಎಲ್ಲಾ ವಿಭಿನ್ನ ಸ್ಟೈಲ್‌ಗಳು ವರ್ಷದಿಂದ ವರ್ಷಕ್ಕೆ ಭಿನ್ನ ಮತ್ತು ಅವರ ಸೌಂದರ್ಯಕ್ಕೆ ಪುಷ್ಟಿ ನೀಡಿದಂತಿವೆ...

2009
ಈ ವರ್ಷದಲ್ಲಿ ಆಕೆ ಹೆಚ್ಚು ಸರಳವಾಗಿ ಜನರ ಮುಂದೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿರುವುದು "ಯೆ ರಿಶ್ತ ಕ್ಯ ಕೆಹಲಾತಾ ಹೇ" ಒಂದು ಈವೆಂಟ್‌ನದ್ದಾಗಿದೆ. ಆಕೆ ಸರಳವಾಗಿ ದಿರಿಸನ್ನು ಧರಿಸಿಕೊಂಡಿದ್ದರು. ಆಕೆಯ ಈ ಸ್ಟೈಲ್ ನಿಮಗೆ ಇಷ್ಟವಾಯಿತೇ?

2012
ಪ್ಲೇನ್ ಪ್ರಿಂಟೆಡ್ ಟಾಪ್ ಮತ್ತು ಲೋ ವೇಸ್ಟ್ ಜೀನ್ಸ್ ಅನ್ನು ಅವರು ಧರಿಸಿದ್ದರೂ ಆಕೆ ತಮ್ಮ ಸ್ಟೈಲ್‌ನಲ್ಲಿ ಹೆಚ್ಚಿನ ಬದಲಾವಣೆಯನ್ನು ತಂದುಕೊಂಡಿರಲಿಲ್ಲ. 20 ನೇ ಶತಮಾನದಲ್ಲಿನ ಸ್ಕೂಲ್ ಗರ್ಲ್ ನೋಟ ಇದಾಗಿದೆ. ಟಕಿನ್ ಮಾಡಿದ ಟಾಪ್, ಹೇರ್‌ಬ್ಯಾಂಡ್ ಇದೆಲ್ಲವೂ ಸ್ಕೂಲ್ ಗರ್ಲ್ ನೋಟವನ್ನು ನೀಡುತ್ತಿದೆ.

2015
ಈ ನೋಟವು ಹೀನಾರ ಸೌಂದರ್ಯವನ್ನು ಎತ್ತಿಹಿಡಿದಿದೆ. ನಮ್ಮ ಬಾಯಲ್ಲಿ ಮೆಚ್ಚುಗೆ ಬರುವಂತಹ ಸ್ಟೈಲ್ ಅನ್ನು ಹೀನ ನೀಡಿದ್ದಾರೆ. ಸ್ಟಾರ್ ಪರಿವಾರ್ ಅವಾರ್ಡ್ 2015 ಗಾಗಿ ಹೀನಾ ಈ ದಿರಿಸನ್ನು ಧರಿಸಿದ್ದರು.

2016
ಹೀನಾರ 2016 ರ ಬೆಸ್ಟ್ ನೋಟವನ್ನು ನಾವು ಸೆರೆಹಿಡಿದಿದ್ದೇವೆ. ಕೆಲವೇ ವರ್ಷಗಳ ಅಂತರದಲ್ಲಿ ಹೀನಾ ತಮ್ಮ ಸ್ಟೈಲ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವುದನ್ನು ನಾವು ನೋಡಬಹುದಾಗಿದೆ. ಮುಂಬೈ ಗ್ಲೋಬಲ್ ಅಚೀವರ್ ಅವಾರ್ಡ್‌ಗಾಗಿ ನೀಲಿ ಮತ್ತು ಗೋಲ್ಡನ್ ದಿರಿಸನ್ನು ಧರಿಸಿದ್ದರು. ಇನ್ನೊಂದು ಸ್ಟೈಲ್ ಲಂಡನ್ ಪ್ರವಾಸದಲ್ಲಿದ್ದಾಗ ಅವರು ಧರಿಸಿದ ಪಿಂಕ್ ಮತ್ತು ಬಿಳಿಯ ಬೇಸಿಗೆ ಉಡುಗೆಯಾಗಿದೆ.

2017
ಬಿಗ್ ಬಾಸ್ ಹೌಸ್ 2017 ಅನ್ನು ಪ್ರವೇಶಿಸುವ ಮುನ್ನ, ಹೀನಾ ಧರಿಸಿರುವ ಉಡುಗೆಗಳು ನಮ್ಮನ್ನು ಹೆಚ್ಚು ಆಕರ್ಷಿಸಿದವು ಎಂದೆನ್ನಬಹುದು. ಫ್ಯಾಶನ್ ದಿವಾ ಎಂದ ಹೆಸರಿಗೆ ಇವರು ಕೊನೆಗೂ ಭಾಜನರಾದರು. ಮಸ್ಬಾದ ಕೆಂಪಿನ ಪ್ರಿಂಟ್ ಉಳ್ಳ ದಿರಿಸನ್ನು ಇವರು ಧರಿಸಿರುವುದನ್ನು ನಮಗೆ ಚಿತ್ರದಲ್ಲಿ ಕಾಣಬಹುದು.ಹೀನಾರ ಯಾವ ಲುಕ್ ನಿಮಗೆ ಇಷ್ಟವಾಯಿತು ಎಂಬುದನ್ನು ನಮಗೂ ತಿಳಿಸಿ.