For Quick Alerts
ALLOW NOTIFICATIONS  
For Daily Alerts

ಡಿಯರ್ ಲೇಡೀಸ್, ನಿಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಎಂದಿಗೂ ಮಿಸ್‌ ಮಾಡಬೇಡಿ

|

ಹೆಂಗಳೆಯರಿಗೂ, ಹ್ಯಾಂಡ್‌ಬ್ಯಾಗ್‌ಗೂ ಅವಿನಾಭಾವ ಸಂಬಂಧ. ಎಲ್ಲೇ ಹೋದರೂ, ತಮ್ಮ ನೆಚ್ಚಿನ ಬ್ಯಾಗ್‌ಗಳನ್ನು ಕೊಂಡೊಯ್ಯುತ್ತಾರೆ, ಅದು ಆಫೀಸ್, ಪಾರ್ಟಿ ಅಥವಾ ಯಾವುದೇ ಸಮಾರಂಭಗಳಿರಲಿ. ಆದರೆ, ಆ ಬ್ಯಾಗ್‌ನಲ್ಲಿ ಏನೆಲ್ಲಾ ತೆಗೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದರಿಂದ, ಆಗಾಗ ಸಮಸ್ಯೆಗಳನ್ನು ಎದುರಿಸುವುದೂ ಉಂಟು. ಏಕೆಂದರೆ, ಅವಶ್ಯಕತೆಯಿರುವುದನ್ನು ಬಿಟ್ಟು, ಉಳಿದೆಲ್ಲವನ್ನು ತಮ್ಮ ಬ್ಯಾಗ್‌ನಲ್ಲಿ ತುಂಬಿಸಿರುತ್ತಾರೆ. ಹಾಗಾಗಿ ನಾವಿಂದು, ಹೊಹೋಗುವಾಗ ನಿಮ್ಮ ಬ್ಯಾಗ್‌ನಲ್ಲಿ ಯಾವೆಲ್ಲಾ ವಸ್ತುಗಳು ಇರಲೇಬೇಕು ಎಂಬುದನ್ನು ವಿವರಿಸಲಿದ್ದೇವೆ.

ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಯಾವೆಲ್ಲಾ ವಸ್ತುಗಳು ಇರಲೇಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಟಿಶ್ಯು ಪ್ಯಾಕ್:

ಟಿಶ್ಯು ಪ್ಯಾಕ್:

ನೀವು ಸೀನುವ ಸಮಯದಿದ ಹಿಡಿದು, ನಿಮ್ಮ ಕೈಗಳನ್ನು ಒಣಗಿಸುವವರೆಗೆ ಟಿಶ್ಯೂ ಬೇಕಾಗುತ್ತದೆ. ಆದ್ದರಿಂದ ಇದು ನಿಮ್ಮ ಬ್ಯಾಗ್‌ನಲ್ಲಿ ಇರಬೇಕಾದ ಅತ್ಯಗತ್ಯ ವಸ್ತುಗಳಲ್ಲಿ ಒಂದು. ನಿಮ್ಮ ಮೇಕಪ್ ಹಾಳಾದರೆ, ಬೆವರಿದರೆ ಅಥವಾ ಏನಾದರೂ ತಿಂದ ಬಳಿಕ ಕೈ ಒರೆಸಿಕೊಳ್ಳಲು ಈ ಟಿಶ್ಯು ಬ್ಯಾಗ್‌ನಲ್ಲಿದ್ದರೆ, ಸಹಕಾರಿ.

ತಿಂಡಿಗಳು:

ತಿಂಡಿಗಳು:

ಮನೆಯಿಂದ ಹೊರಡುವಾಗ ನಮ್ಮಲ್ಲಿ ಹಲವರು ಅವಸರದಲ್ಲಿರುತ್ತಾರೆ. ಹಾಗಾಗಿ, ಚಿಪ್ಸ್ ಅಥವಾ ಬಿಸ್ಕತ್ತುಗಳ ಪ್ಯಾಕೆಟ್ ಅನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದು ಒಂದು ಬುದ್ಧಿವಂತ ಆಯ್ಕೆ. ಮೆಟ್ರೋದಲ್ಲಿ ಕೆಲಸಕ್ಕೆ ಹೋಗುವಾಗ ಅಥವಾ ಆಫೀಸ್ ಸಮಯದಲ್ಲಿ 15 ನಿಮಿಷಗಳ ಸಣ್ಣ ವಿರಾಮದ ನಡುವೆ ತಿನ್ನಲು ಮೊದಲೇ ಸೇಬಿನಂತಹ ಹಣ್ಣು ಇಟ್ಟುಕೊಂಡಿದ್ದರೆ, ಬಹಳ ಪ್ರಯೋಜನಕಾರಿಯಾಗುವುದು. ಇದು, ನಮ್ಮ ಹಸಿವನ್ನು ಆ ಕ್ಷಣಕ್ಕೆ ಕಡಿಮೆ ಮಾಡುವ ವಿಧಾನವಾಗಿದೆ.

ಪೋರ್ಟಬಲ್ ಚಾರ್ಜರ್:

ಪೋರ್ಟಬಲ್ ಚಾರ್ಜರ್:

ನಮ್ಮ ಜೀವನವು ವರ್ಷಗಳಿಂದ ತಂತ್ರಜ್ಞಾನದ ಸುತ್ತ ಸುತ್ತುತ್ತಿದ್ದು, ಫೋನ್ ಇಲ್ಲದೇ ಜೀವನ ಸಾಗದು. ಎಲ್ಲದಕ್ಕೂ ಫೋನ್‌ ನ್ನೇ ಅವಲಂಬಿರುವಂತಹ ಈ ಸಮಯದಲ್ಲಿ ಪೋರ್ಟಬಲ್ ಚಾರ್ಜರ್ ನಿಮ್ಮ ಜೊತೆಗಿರುವುದು ಬಹಳ ಮುಖ್ಯ. ಎಲ್ಲಾದರೂ ಭೇಟಿಕೊಟ್ಟಾಗ ಅಥವಾ ಯಾವುದೋ ಆಫೀಸ್ ಮೀಟಿಂಗ್ ನಡುವೆ ಬ್ಯಾಟರಿ ಕಡಿಮೆಯಾದರೆ, ಈ ಚಾರ್ಜರ್ ಸಹಾಯಕ್ಕೆ ಬರುವುದು.

ಮಿಂಟ್ಸ್ ಚಾಕೋಲೇಟ್:

ಮಿಂಟ್ಸ್ ಚಾಕೋಲೇಟ್:

ನಾವು ಪ್ರತಿದಿನ ತಿನ್ನುವ ಆಹಾರಗಳಿಂದ ನಮ್ಮ ಬಾಯಿ ಕೆಲವೊಮ್ಮೆ ದುರ್ವಾಸನೆ ಬೀರಬಹುದು ಅಥವಾ ತಿಂದ ಆಹಾರ ಕಣಗಳು ಸ್ವಲ್ಪ ಸಮಯದ ನಂತರ ವಾಸನೆಯನ್ನು ಉಂಟುಮಾಡಬಹುದು. ಅದಕ್ಕಾಗಿ, ನಿಮ್ಮ ಬ್ಯಾಗ್‌ನಲ್ಲಿ ಪರಿಮಳದ ಮಿಂಟ್ಸ್ ಅಥವಾ ಚಾಕೋಲೇಟ್ ಇಟ್ಟುಕೊಳ್ಳಬೇಕು. ಆಗ ಒಂದು ಪ್ರಮುಖ ಸಭೆಗೆ ಹೋಗುವ ಮೊದಲು, ಸ್ನೇಹಿತರು ಅಥವಾ ಗ್ರಾಹಕರೊಂದಿಗೆ ಮಾತನಾಡುವ ಮೊದಲು ಬ್ರೀತ್ ಮಿಂಟ್ ಬಾಯಿಗೆ ಹಾಕಿಕೊಂಡು ಹೋಗಬಹುದು.

ಹೆಡ್ ಫೋನ್‌ಗಳು:

ಹೆಡ್ ಫೋನ್‌ಗಳು:

ನಾವು ಸಾರ್ವಜನಿಕ ಸಾರಿಗೆಯಲ್ಲಿ ಏಕಾಂಗಿಯಾಗಿ ಪ್ರಯಾಣಿಸಬೇಕಾದಾಗ ಅಥವಾ ಇನ್ನೊಬ್ಬ ವ್ಯಕ್ತಿ ಬರಲು ನೀವು ಎಲ್ಲೋ ಕಾಯಬೇಕಾದಾಗ ಹೆಡ್‌ಫೋನ್ ಸಹಾಯಕ್ಕೆ ಬರುತ್ತವೆ.

ಹೇರ್ ಟೈ:

ಹೇರ್ ಟೈ:

ನಾವು ನಮ್ಮ ಕೂದಲನ್ನು ಫ್ರಿ ಆಗಿ ಬಿಟ್ಟು ಹೊರಟಾಗ, ಹೇರ್ ಟೈ ಅನ್ನು ಮರೆತುಬಿಡುತ್ತೇವೆ. ಅದಕ್ಕಾಗಿಯೇ ಹೆಚ್ಚುವರಿ, ರಬ್ಬರ್ ಅಥವಾ ಕ್ಲಿಪ್‌ಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕು. ಆಗ ನಮಗೆಂದಾದರೂ, ಕೂದಲನ್ನು ಕಟ್ಟುವ ಅಗತ್ಯ ಬಂದರೆ, ಇದು ಸಹಾಯಕ್ಕೆ ಬರುವುದು. ಇಲ್ಲವಾದಲ್ಲಿ, ಮಳೆ ಅಥವಾ ಇತರ ಸಂದರ್ಭಗಳಲ್ಲಿ ಫ್ರೀ ಹೇರ್‌ನಿಂದ ಸಮಸ್ಯೆ ಎದುರಿಸುತ್ತೇವೆ.

ಟ್ಯಾಂಪೂನ್/ಸ್ಯಾನಿಟರಿ ಪ್ಯಾಡ್ :

ಟ್ಯಾಂಪೂನ್/ಸ್ಯಾನಿಟರಿ ಪ್ಯಾಡ್ :

ಜಗತ್ತು ನಿಲ್ಲುವುದಿಲ್ಲ, ಅವಧಿಯೂ ನಿಲ್ಲುವುದಿಲ್ಲ. ಯಾವುದೇ ದಿನ ಅಥವಾ ಸಮಯದಲ್ಲಿ ಪಿರಿಯಡ್ ಎದುರಾಗಬಹುದು. ಆದ್ದರಿಂದ ಇಂತಹ ಸಮಯಗಳಿಗಾಗಿ ಯಾವಾಗಲೂ ಟ್ಯಾಂಪೂನ್/ಸ್ಯಾನಿಟರಿ ಪ್ಯಾಡ್ ಅನ್ನು ಇಟ್ಟುಕೊಳ್ಳಿ. ಇದರಿಂದ ಕಲೆಗಳಿಂದ ಮುಜುಗರಕ್ಕೊಳಗಾಗುವುದು ತಪ್ಪುತ್ತದೆ ಜೊತೆಗೆ ಬೇರೆಯವರನ್ನು ಕೇಳುವ ಅವಶ್ಯಕತೆಯೂ ಬರುವುದಿಲ್ಲ.

Read more about: fashion ಫ್ಯಾಷನ್
English summary

Things You Should Always Keep in Your Hangbag in Kannada

Here we talking about Things You Should Always Keep in Your Hangbag in Kannada, read on
Story first published: Saturday, January 1, 2022, 17:38 [IST]
X
Desktop Bottom Promotion