For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಆದಷ್ಟು ಇಂತಹ ಬಟ್ಟೆಗಳನ್ನು ಮಾತ್ರ ಧರಿಸಬೇಡಿ!

|

ಮಳೆಗಾಲದಲ್ಲಿ ನಮಗೆ ಇಷ್ಟಬಂದಂತಹ ಬಟ್ಟೆಗಳನ್ನು ಧರಿಸಲು ಸಾಧ್ಯವಾಗಲ್ಲ. ಇದಕ್ಕೆ ಕಾರಣಗಳು ಇದೆ. ಬಟ್ಟೆಗಳು ಮಳೆಯಲ್ಲಿ ಒದ್ದೆಯಾಗುವುದು, ಸರಿಯಾಗಿ ಒಣಗದೆ ಇರುವುದು ಇತ್ಯಾದಿಗಳು. ಮಳೆಗಾಲದಲ್ಲಿ ಹೆಚ್ಚಾಗಿ ಹೊರಗಡೆ ಹೋಗುವ ವೇಳೆ ಜನರು ತಪ್ಪನ್ನು ಮಾಡುತ್ತಾರೆ. ಇದರಲ್ಲಿ ಮುಖ್ಯವಾಗಿ ಧರಿಸುವಂತಹ ಬಟ್ಟೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ಮಾಡುವಂತಹ ಬಟ್ಟೆಗಳ ತಪ್ಪುಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಮತ್ತು ಅದಕ್ಕೆ ಕೆಲವೊಂದು ಸಲಹೆಗಳನ್ನು ಕೂಡ ನೀಡುತ್ತೇವೆ. ನೀವು ಇದನ್ನು ಪಾಲಿಸಿಕೊಂಡು ಹೋಗಿ.

Clothes Not to Wear in Monsoon

ಬಿಳಿ ಬಟ್ಟೆಗಳನ್ನು ಬದಿಗಿಡಿ

ಭಾರೀ ಮಳೆಯಾಗುವಂತಹ ಸಂದರ್ಭದಲ್ಲಿ ಬಿಳಿ ಬಟ್ಟೆ ಧರಿಸಬೇಡಿ. ಬಿಳಿ ಬಟ್ಟೆಗಳಲ್ಲಿ ಕಲೆ ಆಗುವುದು ಹೆಚ್ಚಾಗುತ್ತದೆ. ಬಿಳಿ ಬಟ್ಟೆಯು ಒದ್ದೆಯಾದರೆ ಆಗ ಅದು ಪಾರದರ್ಶಕವಾಗುವುದು.

ಉದ್ದದ ಬಟ್ಟೆಗಳನ್ನು ಧರಿಸಬೇಡಿ

ಮಳೆಗಾಲದಲ್ಲಿ ನೀವು ಉದ್ದಗಿನ ಬಟ್ಟೆಗಳನ್ನು ಹಾಗೆ ಕಪಾಟಿನಲ್ಲಿ ಬದಿಗೆ ಇಟ್ಟುಬಿಡಿ. ಎಲ್ಲಾ ಕಡೆಯಲ್ಲೂ ನೀರು ಮತ್ತು ಕೆಸರು ಇರುವ ಕಾರಣದಿಂದಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಮೊಣಕಾಲಿನ ತನಕದ ಬಟ್ಟೆ ಧರಿಸಿದರೆ ಒಳ್ಳೆಯದು. ಇದರಿಂದ ಬಟ್ಟೆಗೆ ಹಾನಿಯಾಗುವುದು ಅಥವಾ ಒದ್ದೆಯಾಗುವುದು ತಪ್ಪುವುದು.

ಒಣಗಲು ಕಷ್ಟವಾಗುವ ಬಟ್ಟೆಗಳನ್ನು ಬದಿಗಿಡಿ

ಒಣಗಲು ತುಂಬಾ ಸಮಯ ತೆಗೆದುಕೊಳ್ಳುವಂತಹ ಬಟ್ಟೆಗಳನ್ನು ಒಂದು ಕಡೆ ಇಟ್ಟುಬಿಡಿ. ಇದರಲ್ಲಿ ಮುಖ್ಯವಾಗಿ ಹತ್ತಿ ಮತ್ತು ಲಿನೆನ್ ಬಟ್ಟೆಗಳು. ಜಾರ್ಜೆಟ್‌ಗಳು ಮತ್ತು ಚಿಫನ್‌ಗಳು ಬಟ್ಟೆಗಳನ್ನು ನೀವು ಮಳೆಗಾಲದಲ್ಲಿ ಹೆಚ್ಚಾಗಿ ಬಳಕೆ ಮಾಡಿ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಬೇಗನೆ ಒಣಗುವಂತಹ ಬಟ್ಟೆಗಳನ್ನು ಬಳಸಿಕೊಳ್ಳಿ.

ಡೆನೀಮ್ ಬಳಸಬೇಡಿ

ಡೆನೀಮ್ ಗಳು ಒಣಗಲು ತುಂಬಾ ಸಮಯ ತೆಗೆದುಕೊಳ್ಳುವುದು. ಇದರಿಂದ ಮಳೆಗಾಲದಲ್ಲಿ ನೀವು ಇದನ್ನು ಬಳಸಬೇಡಿ. ಇದರ ಬದಲಿಗೆ ನೀವು ಕಾರ್ಡುರಾಯ್ಸ್ ಬಳಸಿಕೊಳ್ಳಿ. ಇದು ತುಂಬಾ ಹಗುರವಾಗಿದೆ.

ಚರ್ಮ ಮತ್ತು ಸ್ಯೂಡ್ ಚಪ್ಪಲಿಗಳನ್ನು ಧರಿಸಬೇಡಿ

ಚರ್ಮ ಮತ್ತು ಸ್ಯೂಡ್ ಚಪ್ಪಲಿಗಳನ್ನು ಧರಿಸಬೇಡಿ. ಯಾಕೆಂದರೆ ಇದಕ್ಕೆ ನೀರು ಬಿದ್ದರೆ ಆಗ ಅದು ಬೇಗನೆ ಹಾಳಾಗುವುದು. ನೀರು ಹೀರಿಕೊಳ್ಳುವಂತಹ ಬಟ್ಟೆಗಳನ್ನು ನೀವು ದೂರವಿಟ್ಟುಕೊಳ್ಳಿ. ಸ್ಯಾಂಡಲ್ ಗಳನ್ನು ಧರಿಸಿಕೊಳ್ಳಿ. ಯಾಕೆಂದರೆ ಇದು ನೀರು ಹೀರಿಕೊಳ್ಳಲ್ಲ. ನಿಮಗೆ ಮುಚ್ಚಿರುವಂತಹ ಶೂ ಧರಿಸಬೇಕಿದ್ದರೆ ಆಗ ನೀವು ಗಮ್ ಬೂಟ್ ತೆಗೆದುಕೊಳ್ಳಿ. ಇದು ಮಳೆಗಾಲದಲ್ಲಿ ತುಂಬಾ ಒಳ್ಳೆಯದು.

ಬಿಗಿ ಬಟ್ಟೆಗಳನ್ನು ಕಡೆಗಣಿಸಿ

ಮಳೆಗಾಲದಲ್ಲಿ ನೀವು ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಯಾಕೆಂದರೆ ಇದು ಒದ್ದೆಯಾದ ಕೂಡಲೇ ಅದು ದೇಹಕ್ಕೆ ಅಂಟಿಕೊಳ್ಳುವುದು. ಇದರಿಂದ ನಿಮಗೆ ತುಂಬಾ ಕಿರಿಕಿರಿ ಮತ್ತು ಅಸಮಾಧಾನ ಉಂಟಾಗುವುದು. ನೀವು ಶಾಪಿಂಗ್ ಗೆ ಹೋಗುವ ವೇಳೆ ಇಂತಹ ಬಟ್ಟೆಗಳ ಬಗ್ಗೆ ಗಮನಹರಿಸಿ.

ಇನ್ನು ಕೆಲವು ಸಲಹೆಗಳು ಮತ್ತು ಎಚ್ಚರಿಕೆಗಳು

*ತುಂಬಾ ದೀರ್ಘ ಸಮಯದ ತನಕ ಒದ್ದೆ ಶೂ ಧರಿಸಬೇಡಿ. ಒದ್ದೆ ಶೂ ಒಣಗದೆ ಇದ್ದರೆ ಆಗ ಅದರಲ್ಲಿ ಕೆಲವೊಂದು ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವುದು. ಇದರಿಂದ ಕಾಲಿಗೆ ಸೋಂಕು ತಗುಲಬಹುದು.
*ಹೊರಗಡೆ ಹೋಗುವ ಮೊದಲು ನೀವು ಶೂಗಳ ಬಗ್ಗೆ ಹೆಚ್ಚಿನ ಗಮನಹರಿಸಿ. ಶೂ ತುಂಬಾ ಮೆತ್ತಗಿನ ಅಡಿಭಾಗ ಹೊಂದಿರಬಾರದು. ಹೀಗೆ ಇದ್ದರೆ ನೀವು ಜಾರುವುದು ಹೆಚ್ಚಾಗುವುದು.
*ಮಳೆಗಾಲದಲ್ಲಿ ನೀವು ಒದ್ದೆಯಾಗುವ ಸಾಧ್ಯತೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂದು ಜತೆ ಬಟ್ಟೆಗಳನ್ನು ಹಿಡಿದುಕೊಂಡು ಹೋಗಿ.

English summary

Clothes Not to Wear in Monsoon

Monsoon is not only about getting drenched in the rain or sipping coffee overlooking rain showers, but also stepping out in style. In the middle of excitement to rush outdoors and enjoy the weather, we tend to make major wardrobe mistakes. Here are some tips to avoid making mistakes in terms of outfit during monsoon.
X
Desktop Bottom Promotion