For Quick Alerts
ALLOW NOTIFICATIONS  
For Daily Alerts

ಈ ಯೋಗ ಮಾಡಿದರೆ ಡಾರ್ಕ್‌ಸರ್ಕಲ್‌ ಬರೋದೆ ಇಲ್ಲ

|

ತ್ವಚೆ ಹೊಳೆಯುವಂತಿದೆ, ಚರ್ಮಕ್ಕೆ ಹೊಂದುವಂಥ ಮೇಕಪ್‌ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸಿದೆ, ಆದರೂ ಮುಖದಲ್ಲಿ ಕಳೆಯೇ ಇಲ್ಲದಂತೆ ಕಾಣುತ್ತಿದೆ ಎಂದು ನಿಮಗೆ ಹಲವು ಬಾರಿ ಎನಿಸಿರಬಹುದು, ಇದಕ್ಕೆ ಕಾರಣ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಕಲೆ. ನೀವು ಎಷ್ಟೇ ಸೌಂದರ್ಯವತಿಯಾಗಿದ್ದರೂ ಅಥವಾ ಎಂಥಾ ದುಬಾರಿ ಸೌಂದರ್ಯ ವರ್ಧಕ ಬಳಸಿದರೂ ಕಣ್ಣಿನ ಸುತ್ತಲಿನ ಕಪ್ಪು ಕಲೆ ಕಳೆಗುಂದಿಸುತ್ತದೆ.

yoga reduce dark circle

ಕಣ್ಣಿನ ಕಪ್ಪು ವರ್ತುಲಕ್ಕೆ ನಮ್ಮ ಜೀವನಶೈಲಿಗೆ ಬಹುಮುಖ್ಯ ಕಾರಣವಾಗುತ್ತದೆ. ಹೆಚ್ಚು ಆಯಾಸಗೊಳ್ಳುವುದು, ಒತ್ತಡ, ನಿದ್ರೆಯ ಕೊರತೆ ಮತ್ತು ಕೆಲವು ಸಂದರ್ಭಗಳಲ್ಲಿ ನಿರಂತರ ಅನಾರೋಗ್ಯದ ಕಾರಣದಿಂದಾಗಿ ಉಂಟಾಗುವ ಆಲೋಚನೆ, ಆಮ್ಲಜನಕದ ಕೊರತೆ ಕಣ್ಣಿನ ಸುತ್ತ ಕಪ್ಪು ಕಲೆ ನಿರ್ಮಿಸಲು ಕಾರಣವಾಗುತ್ತದೆ.

ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ತ್ವಚೆಯ ಎಲ್ಲಾ ಭಾಗಗಗಳಿಗೂ ಅಗತ್ಯ ಪ್ರಮಾಣದ ರಕ್ತಸಂಚಾರ ಆಗುತ್ತಿದೆಯೇ ಎಂದು?. ಅದಕ್ಕಾಗಿಯೇ ಆಯುರ್ವೇದ ಪಾಲಿಸುವವರು ಮತ್ತು ಯೋಗಾಭ್ಯಾಸ ಮಾಡುವವರು ಮುಖಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಮತ್ತು ಇದು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಂಬುತ್ತಾರೆ. ಆದ್ದರಿಂದ ಕಪ್ಪು ವರ್ತುಲ(ಡಾರ್ಕ್‌ಸರ್ಕಲ್‌)ಗಳನ್ನು ತೊಡೆದುಹಾಕಲು ವಿವಿಧ ರಾಸಾಯನಿಕ ಮತ್ತು ಸೌಂದರ್ಯವರ್ಧಕ ವಿಧಾನಗಳನ್ನು ಪ್ರಯತ್ನಿಸುವ ಬದಲು, ಅತ್ಯುತ್ತಮವಾದ ನೈಸರ್ಗಿಕ ವಿಧಾನವಾದ ಯೋಗದ ಮೂಲಕ ಡಾರ್ಕ್‌ಸರ್ಕಲ್‌ ನಿವಾರಿಸುವುದು ಹೇಗೆ ಇಲ್ಲಿದೆ.

ಹಸ್ತಪಾದಾಸನ

ಹಸ್ತಪಾದಾಸನ

ನಿಮ್ಮ ಭುಜದ ಅಗಲಕ್ಕೆ ಸಮನಾಗಿ ನೇರವಾಗಿ ನಿಂತುಕೊಳ್ಳಿ. ಈಗ ನಿಮ್ಮ ಎರಡೂ ಕೈಗಳನ್ನು ಮುಂದಕ್ಕೆ ಮತ್ತು ಮೇಲಕ್ಕೆ ಚಾಚಿ, ಈ ವೇಳೆ ನಿಮ್ಮ ಬೆನ್ನುಮೂಳೆ ವಿಸ್ತರಿಸಿದಂತೆ ಭಾಸವಾಗುತ್ತಿದೆಯೇ ಈ ಬಗ್ಗೆ ಖಚಿತಪಡಿಸಿಕೊಳ್ಳಿ. ನಿಮ್ಮ ಅಂಗೈಗಳು ನೆಲವನ್ನು ಮುಟ್ಟುವವರೆಗೆ ಮತ್ತು ನಿಮ್ಮ ತಲೆ ನಿಮ್ಮ ಮೊಣಕಾಲುಗಳನ್ನು ಮುಟ್ಟುವವರೆಗೆ ನಿಧಾನವಾಗಿ ಬಾಗಲು ಪ್ರಾರಂಭಿಸಿ. ಬಹುತೇಕರಿಗೆ ಮೊದಲ ಬಾರಿಗೇ ಕೈಗಳನ್ನು ನೆಲಕ್ಕೆ ಸ್ಪರ್ಶಿಸುವುದು ಕಷ್ಟವಾಗಬಹುದು ಚಿಂತಿಸಬೇಡಿ, ನೀವು ಆ ಭಂಗಿಗೆ ಬರಲು ಎಷ್ಟು ಸಾಧ್ಯವಷ್ಟು ಮಾತ್ರ ಪ್ರಯತ್ನಿಸುತ್ತಿರಿ. ಈ ಸ್ಥಾನಕ್ಕೆ ಬಂದ ನಂತರ ಸಾಮಾನ್ಯವಾಗಿ ಉಸಿರಾಡಿ ಮತ್ತು ನೀವು ಆರಾಮವಾಗಿರುವವರೆಗೂ ಆಸನವನ್ನು ಮುಂದುವರೆಸಿ.

ವಿಪರೀತ ಕರಣಿ

ವಿಪರೀತ ಕರಣಿ

ಗೋಡೆಯ ಬಳಿ ನೆಲದ ಮೇಲೆ ಚಪ್ಪಟೆಯಾಗಿ ಮಲಗಿಕೊಳ್ಳಿ. ಈಗ ನಿಮ್ಮ ಕಾಲುಗಳನ್ನು ಗೋಡೆಯ ಉದ್ದಕ್ಕೂ ಆರಾಮವಾಗಿ ವಿಶ್ರಾಂತಿ ಪಡೆಯುವ ರೀತಿಯಲ್ಲಿ ಮೇಲಕ್ಕೆತ್ತಿ ಮತ್ತು ನಿಮ್ಮ ಬೆನ್ನಿನ ಕೆಳಭಾಗ ಗೋಡೆಗೆ ಸ್ಪರ್ಶಿಸುವಂತಿರಲಿ. ನಂತರ ನಿಮ್ಮ ಕೈಗಳನ್ನು ವಿಸ್ತರಿಸಿ ಕೆಲವು ನಿಮಿಷ ವಿಶ್ರಾಂತಿ ಪಡೆಯಿರಿ. ಈ ನಿಮಗೆ ಸಾಧ್ಯವಾದರೆ ನಿಮ್ಮ ಗಲ್ಲವನ್ನು ಮೇಲ್ಛಾವಣಿಯ ಕಡೆಗೆ ಚಾಚಲು ಪ್ರಯತ್ನಿಸಿ. ಆದರೆ ಈ ಭಂಗಿ ಮಾಡುವಾಗ ನಿಮ್ಮ ಕುತ್ತಿಗೆಗೆ ಹೆಚ್ಚು ಒತ್ತು ನೀಡಬೇಡಿ. ಕಣ್ಣುಗಳನ್ನು ಮುಚ್ಚಿ ಮತ್ತು ಆಳವಾಗಿ ಉಸಿರಾಡಿ ಸಾಧ್ಯವಾದಷ್ಟು ಸಮಯ ಇದೇ ಭಂಗಿಯಲ್ಲಿ ವಿಶ್ರಾಂತಿ ಪಡೆಯಿರಿ. ನಿಮಗೆ ಆರಾಮ ಎನಿಸುವವರೆಗೂ ಇದೇ ಭಂಗಿಯಲ್ಲೇ ಇರಿ.

ಶಾಂಭವಿ ಮುದ್ರ

ಶಾಂಭವಿ ಮುದ್ರ

ನಿಮ್ಮ ಮನೆಯಲ್ಲಿ ಹೆಚ್ಚು ಪ್ರಶಾಂತವಾಗಿರುವ ಸ್ಥಳದಲ್ಲಿ ಆರಾಮವಾಗಿ ಕುಳಿತು ನಿಮ್ಮ ಅಂಗೈಗಳು ಮೇಲಕ್ಕೆ ಮುಖ ಮಾಡುವಂತೆ ತೊಡೆಯ ಮೇಲೆ ಇರಿಸಿ. ಇದರಿಂದ ಶಕ್ತಿಯ ಸಮಾನ ಹಂಚಿಕೆ ಆಗುತ್ತದೆ. ಈಗ ನಿಮ್ಮ ಎರಡೂ ಹುಬ್ಬುಗಳನ್ನು ನೋಡುವಂತೆ ನಿಮ್ಮ ಕಣ್ಣಿನ ಗುಡ್ಡೆಗಳನ್ನು ತಿರುಗಿಸಿ. ಈ ವೇಳೆ ನೀವು ಅಕ್ಷರಶಃ ನಿಮ್ಮ ಹುಬ್ಬುಗಳ ಮಧ್ಯಭಾಗವನ್ನು ನೋಡಲು ಪ್ರಯತ್ನಿಸುತ್ತಿದ್ದೀರಿ ಎಂಬುದು ನಿಮಗೆ ತಿಳಿದಿರಲಿ. ಸಾಮಾನ್ಯವಾಗಿ ಉಸಿರಾಡಿ ಮತ್ತು ಈ ಭಂಗಿಯನ್ನು ಕನಿಷ್ಠ 20 ಸೆಕೆಂಡ್‌ ಮುಂದುವರೆಸಿ.

ಈ ಸಂದರ್ಭದಲ್ಲಿ ನೀವು ಹಮ್ ‘ಓಂ' ಕಾರಗಳನ್ನು ಉಚ್ಛರಿಸಬಹುದು. ಇದು ಯಾವುದೇ ರೀತಿಯಲ್ಲಿ ಧಾರ್ಮಿಕವಲ್ಲ, ಆದರೆ ‘ಓಂ' ಎಂಬ ಪದವು ಜಪಿಸಿದಾಗ ದೇಹದಾದ್ಯಂತ ಒಂದು ರೀತಿಯ ಕಂಪನವನ್ನು ಉಂಟುಮಾಡುತ್ತದೆ, ಇದು ನರಮಂಡಲವನ್ನು ಮಸಾಜ್ ಮಾಡಲು ಮತ್ತು ಚಕ್ರಗಳನ್ನು ಸಕ್ರಿಯಗೊಳಿಸಲು ಬಹಳ ಪ್ರಯೋಜನಕಾರಿಯಾಗಿದೆ ಎಂಬ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆ. ಮುದ್ರಾವನ್ನು ಅಂತ್ಯಗೊಳಿಸುವ ವೇಳೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಂತರ ನಿಧಾನವಾಗಿ ಕಣ್ಣುಗಳನ್ನು ಅವುಗಳ ಸಾಮಾನ್ಯ ಸ್ಥಿತಿಗೆ ತಂದುಕೊಳ್ಳಿ. ಸ್ವಲ್ಪ ಸಮಯದವರೆಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಂತರ ನಿಧಾನವಾಗಿ ತೆರೆಯಿರಿ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ ಸಾಕಷ್ಟು ಆಮ್ಲಜನಕೀಕರಣದ ಮೂಲಕ ದೇಹದ ಅಂಗಗಳನ್ನು ನಿರ್ವಿಷಗೊಳಿಸುವಲ್ಲಿ ಆಳವಾದ ಪರಿಣಾಮವನ್ನು ಬೀರುತ್ತದೆ ಮತ್ತು ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ. ಇದು 12 ದೈಹಿಕ ಭಂಗಿಗಳ ಸರಣಿಯಾಗಿದೆ. ಈ ದೇಹವನ್ನು ಹಿಂದಕ್ಕೆ, ಮುಂದಕ್ಕೆ ಬಾಗುವಂತೆ ಮಾಡುತ್ತದೆ, ಮತ್ತು ಬೆನ್ನುಹುರಿಯನ್ನು ವಿಸ್ತರಿಸುತ್ತವೆ ಮತ್ತು ಇಡೀ ದೇಹವು ಸಂಪೂರ್ಣವಾಗಿ ವಿಸ್ತರಿಸಿದಂತಾಗುತ್ತದೆ. ಸೂರ್ಯ ನಮಸ್ಕಾರವನ್ನು ಮಾಡುವುದು ಹೇಗೆ ಎದು ತಿಳಿಯಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಚಿತ್ರ ಮಾಹಿತಿ: ಸೂರ್ಯನಮಸ್ಕಾರದ 12 ಭಂಗಿಗಳು

English summary

Yoga Poses To Get Rid Of Dark Circles

Here we are discussing about how yoga poses helpfull to get rid of dark circles. Ayurveda and yoga practitioners believe that by increasing the blood flow to one’s face it can help resolve the dark circles problem. So instead of trying various chemical and cosmetic methods to get rid of them, here is an all natural way to zap those dark circles away.
Story first published: Thursday, January 30, 2020, 14:22 [IST]
X
Desktop Bottom Promotion