Just In
- 3 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
- 9 hrs ago
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- 11 hrs ago
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
- 12 hrs ago
ಹಳದಿ ಉಗುರನ್ನು ನಿವಾರಿಸಲು ಈ 4 ಮನೆಮದ್ದನ್ನು ಬಳಸಿ ನೋಡಿ
Don't Miss
- Sports
ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ; ನಂಬಿಕಸ್ಥ ಆಟಗಾರ ಔಟ್!
- News
ಟೆಕ್ಸಾಸ್ ದಾಳಿ: ಅಮೆರಿಕ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಾಟ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Automobiles
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೇವ್ ನಂತರ ಕಾಡುವ ಚರ್ಮ ಸಮಸ್ಯೆಗೆ ಸಲಹೆಗಳು
ಪುರುಷರಿಗೆ ನಿತ್ಯ ಅಥವಾ ವಾರಕ್ಕೆ ಮೂರು ಬಾರಿ ಕ್ಷೌರ ಮಾಡುವುದು ಕಿರಿಕಿರಿ ಎನಿಸದೇ ಇರದು. ಅದರಲ್ಲೂ ಶೇವಿಂಗ್ ನಂತರ ತ್ವಚೆಯ ಮೇಲೆ ಉಂಟಾಗುವ ತುರಿಕೆ, ಮೊಡವೆಗಳು ಇತರೆ ಚರ್ಮದ ಸಮಸ್ಯೆಗಳು ಶೇವಿಂಗ್ ಬೇಡವೇ ಬೇಡ ಎನ್ನುವಷ್ಟು ಬೇಸರ ಮೂಡಿಸುತ್ತದೆ.
ಇದಕ್ಕೆ ನಿಜವಾದ ಕಾರಣ ಎಂದರೆ ಸರಿಯಾದ ಕ್ರಮದಲ್ಲಿ ಶೇವಿಂಗ್ ಮಾಡದೇ ಇರುವುದು ಹಾಗೂ ಶೇವಿಂಗ್ ನಂತರ ಅಗತ್ಯ ಕ್ರಮ ಕೈಗೊಳ್ಳದೇ ಇರುವುದು. ಅಂದರೆ ಶೇವಿಂಗ್ ಹೇಗೆ ಮಾಡಬೇಕು, ಶೇವ್ ಮಾಡುವ ಮುನ್ನ ಹಾಗೂ ನಂತರ ಯಾವೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಮುಂದೆ ನೋಡೋಣ:

ತ್ವಚೆ ಶುಷ್ಕವಾಗಿರಲಿ
ನಿಮ್ಮ ಚರ್ಮವು ಶುಷ್ಕವಾಗಿರುವಂತೆ ಎಚ್ಚರವಹಿಸಿ, ಕ್ಷೌರದ ನಂತರ ಕಿರಿಕಿರಿಯನ್ನು ತಪ್ಪಿಸಲು ಹಾಗೂ ಸುಲಭ ಶೇವ್‌ಗೆ ಇದು ಸಹಾಯ ಮಾಡುತ್ತದೆ. ಕ್ಷೌರ ಮಾಡುವ ಮೊದಲು ಕನಿಷ್ಠ 6-12 ಗಂಟೆಗಳ ಮೊದಲು ನಿಮ್ಮ ಚರ್ಮವನ್ನು ತೇವಗೊಳಿಸಿ. ಅಂದರೆ ಮಾಯಿಶ್ಚರೈಸರ್ ಅಥವಾ ಅಲೋ ಜೆಲ್ ಅನ್ನು ರಾತ್ರಿಯೇ ಹಚ್ಚಿ ಬಳಸಿ.

ಮೊದಲು ಉದ್ದನೆಯ ಕೂದಲನ್ನು ಟ್ರಿಮ್ ಮಾಡಿ
ನೀವು ರೇಜರ್ ಅನ್ನು ನೇರವಾಗಿ ಬಳಸುವುದಾದರೆ, ಉದ್ದನೆಯ ಕೂದಲ ಸ್ಥಳದಲ್ಲಿ ಹಲವಾರು ಬಾರಿ ಹಿಂತಿರುಗಬೇಕಾಗುತ್ತದೆ, ಇದು ಚರ್ಮದ ಆ ಭಾಗಕ್ಕೆ ಹೆಚ್ಚಿನ ಆಘಾತಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಕ್ಷೌರದ ಮೊದಲು ಉದ್ದವಾದ ವಿಭಾಗಗಳನ್ನು ಟ್ರಿಮ್ ಮಾಡುವುದು ಉತ್ತಮ.

ಕೂದಲು ಬೆಳವಣಿಗೆಯ ದಿಕ್ಕಿನಲ್ಲಿ ಕ್ಷೌರ ಮಾಡಿ
ನೆನಪಿಡಿ, ನೀವು ಕೂದಲು ಬೆಳೆದ ವಿರುದ್ಧ ದಿಕ್ಕಿನಲ್ಲಿ ಕ್ಷೌರ ಮಾಡಿ, ಇದು ಸುಲಭವಾಗಿ ಕೂದಲು ಶೇವ್ ಆಗಲು ಸಹಾಯ ಮಾಡುತ್ತದೆ. ಬೇಗ ಕ್ಷೌರ ಮಾಡಬಹುದು, ತ್ವಚೆಗೂ ಸುರಕ್ಷಿತ.

ಸರಿಯಾದ ಶೇವಿಂಗ್ ಕ್ರೀಮ್ ಬಳಸಿ
ಶೇವ್ ಮಾಡಬೇಕಾದರೆ ನಿಮ್ಮ ಶವರ್ ಜೆಲ್‌ಗಳು ಅಥವಾ ಸೋಪ್‌ಗಳನ್ನು ಬಳಸಬೇಡಿ. ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿ, ಶೇವಿಂಗ್ ಕ್ರೀಮ್ / ಫೋಮ್ / ಜೆಲ್ ಅನ್ನು ಸಹ ಆಯ್ಕೆ ಮಾಡಿ, ಇದು ಪೋಷಣೆಯನ್ನು ನೀಡುತ್ತದೆ.

ತ್ವಚೆ ಉಸಿರಾಡಲು ಬಿಡಿ
ಶೇವ್ ಮಾಡಿದಾಗ ಅಥವಾ ನಿಮಗೆ ಯಾವುದೇ ರೀತಿಯ ತುರಿಕೆ ಇದ್ದರೆ, ಅದನ್ನು ಸ್ಕ್ರಾಚ್ ಮಾಡಬೇಡಿ. ತುರಿಕೆ ಇನ್ನಷ್ಟು ಹೆಚ್ಚುವುದನ್ನು ತಪ್ಪಿಸಲು ಕ್ಷೌರ ಮಾಡಿದ ಚರ್ಮವನ್ನು ಗಾಳಿಗೆ ಬಿಡಿ, ಅದಕ್ಕೆ ಯಾವುದೇ ರೀತಿಯ ಬಟ್ಟೆಯಿಂದ ಮುಚ್ಚಬೇಡಿ.

ಅಂತಿಮವಾಗಿ ಕ್ರೀಂ ಬಳಸಿ
ನಿಮ್ಮ ಕಿರಿಕಿರಿ ಚರ್ಮವನ್ನು ಶಮನಗೊಳಿಸಲು ಅಲೋವೆರಾ ಜೆಲ್ ಅಥವಾ ಕೂಲಿಂಗ್ ಆಫ್ಟರ್ ಶೇವ್ ಲೋಷನ್ ಬಳಸಿ, ಇದು ಕ್ಷೌರದ ನಂತರ ಕಿರಿಕಿರಿಯುಂಟು ಮಾಡುವ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.