For Quick Alerts
ALLOW NOTIFICATIONS  
For Daily Alerts

ಒಣ ಚರ್ಮ ಹೊಂದಿರುವವರು ಚಳಿಗಾಲದಲ್ಲಿ ಇವುಗಳಿಂದ ದೂರವಿರಿ..

|

ನೀವು ಒಣ ಚರ್ಮವನ್ನು ಹೊಂದಿದ್ದೀರಾ? ನಿಮ್ಮ ಚರ್ಮವು ವರ್ಷದುದ್ದಕ್ಕೂ ಒಡೆದಂತೆ ಆಗುತ್ತಿದೆಯೇ? ಶುಷ್ಕ ಚರ್ಮವನ್ನು ಹೊಂದಿರುವ ಯಾರಿಗಾದರೂ, ಚಳಿಗಾಲದ ಅವಧಿ ಬಹಳ ಕೆಟ್ಟದಾಗಿರುತ್ತದೆ. ಯಾಕಂದ್ರೆ ಚಳಿಗಾಲದಲ್ಲಿ ಒಣ ಚರ್ಮವು ಮತ್ತಷ್ಟು ಹಾನಿಯಾಗಿ ಒಡೆದಂತೆ, ಹಾವಿನ ಪೊರೆಯಂತೆ ಕಾಣುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚು ಕಾಳಜಿಯ ಅಗತ್ಯವಿದೆ. ಚರ್ಮದಲ್ಲಿನ ತೇವಾಂಶದ ಕೊರತೆಯಿಂದ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಚಳಿಗಾಲದ ಗಾಳಿಯು ಶುಷ್ಕವಾಗಿರುತ್ತದೆ ಮತ್ತು ಇದು ಚರ್ಮದ ಮೇಲಿನ ಪದರ ತನ್ನ ತೇವಾಂಶವನ್ನು ಕಳೆದುಕೊಂದು ಶುಷ್ಕ ಚರ್ಮ ಅಥವಾ ತ್ವಚೆಗೆ ಕಾರಣವಾಗುತ್ತದೆ.

ಆದ್ದರಿಂದ, ಚಳಿಗಾಲದಲ್ಲಿ ನೀವು ಅತ್ಯಂತ ಹೆಚ್ಚು ಜಾಗರೂಕರಾಗಿರಬೇಕು. ಚಳಿಗಾಲವು ನಿಮ್ಮ ಚರ್ಮದ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀಳದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನೀವು ಈ ಕೆಳಗಿನ ವಿ‌ಷಯಗಳನ್ನು ಮಾಡುವುದನ್ನು ತಪ್ಪಿಸಿ, ನಿಮ್ಮ ಒಣ ಚರ್ಮ ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳಬೇಕು.

ಒಣ ಚರ್ಮ ಹೊಂದಿರುವವರು ದೂರವಿಡಬೇಕಾದ ಸಂಗತಿಗಳು:

ಒಣ ಚರ್ಮ ಹೊಂದಿರುವವರು ದೂರವಿಡಬೇಕಾದ ಸಂಗತಿಗಳು:

ನಿಮ್ಮ ತ್ವಚೆಯನ್ನು ಹೆಚ್ಚು ಕ್ಲೆನ್ಸ್ ಅಥವಾ ಹೆಚ್ಚು ಶುದ್ಧಿಕರಿಸುವುದನ್ನು ನಿಲ್ಲಿಸಿ:

ಹೌದು, ಯಾವುದೇ ಚರ್ಮದ ರಕ್ಷಣೆಯ ದಿನಚರಿಯಲ್ಲಿ ಕ್ಲೆನ್ಸಿಂಗ್ ಮುಖ್ಯವಾಗಿದೆ, ಆದರೆ ಅದರಲ್ಲಿ ಹೆಚ್ಚಿನವು ಒಣ ಚರ್ಮವನ್ನು ಉಂಟುಮಾಡುತ್ತದೆ. ಆದರೆ ಒಣ ಚರ್ಮವನ್ನು ಹೊಂದಿರುವವರಿಗೆ ಇದು ಒಳ್ಳೆಯದಲ್ಲ. ಶುಷ್ಕ ಚರ್ಮಕ್ಕೆ ಸೌಮ್ಯ ಮತ್ತು ಉತ್ತಮವಾದ ಕ್ಲೆನ್ಸರ್ ಅನ್ನು ನೀವು ಬಳಸುತ್ತೀರಾ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ತ್ವಚೆಯನ್ನು ದಿನಕ್ಕೆ ಎರಡು ಬಾರಿ ಮಾತ್ರ ಸ್ವಚ್ಛಗೊಳಿಸುವಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಆದ್ದರಿಂದ ನಿಮ್ಮ ಚರ್ಮವನ್ನು ಹೆಚ್ಚು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

ಬಿಸಿನೀರಿನ ಸ್ನಾನ ಮಾಡಬೇಡಿ:

ಬಿಸಿನೀರಿನ ಸ್ನಾನ ಮಾಡಬೇಡಿ:

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನಕ್ಕಿಂತ ಬೇರೆನೂ ಆರಾಮದಾಯಕ ಎನಿಸುವುದಿಲ್ಲ. ಆದರೆ ಇದು ನಿಮ್ಮ ಚರ್ಮಕ್ಕೆ ಅಷ್ಟು ಒಳ್ಳೆಯದಲ್ಲ. ದೇಹಕ್ಕೆ ತುಂಬಾ ಬಿಸಿಯಿರುವ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮವನ್ನು ಶುಷ್ಕಗೊಳಿಸಬಹುದು. ಆದ್ದರಿಂದ, ಮುಂದಿನ ಬಾರಿ ನೀವು ಸ್ನಾನ ಮಾಡುವಾಗ ತಣ್ಣೀರಿನಲ್ಲಿ ಮಾಡಿದರೆ ಉತ್ತಮ.

ಅತಿಯಾದ ಎಕ್ಸ್ಫೋಲಿಯೇಟಿಂಗ್ ನಿಲ್ಲಿಸಿ:

ಅತಿಯಾದ ಎಕ್ಸ್ಫೋಲಿಯೇಟಿಂಗ್ ನಿಲ್ಲಿಸಿ:

ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನೀವು ಎಷ್ಟು ಬಾರಿ ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಬೇಕು ಎಂಬುದನ್ನು ಕಂಡುಹಿಡಿಯುವುದು ಬಹಳ ಮುಖ್ಯ. ಒಣ ಚರ್ಮ ಹೊಂದಿರುವ ಯಾರಾದರೂ ದೈನಂದಿನ ಎಕ್ಸ್ಫೋಲಿಯೇಶನ್ ಅನ್ನು ನಿಭಾಯಿಸಲು ಸಾಧ್ಯವಾಗದಿರಬಹುದು. ನಿಮ್ಮ ಚರ್ಮವು ಎಫ್ಫೋಲಿಯೇಶನ್ ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಬಗ್ಗೆ ನೀವು ಗಮನ ಹರಿಸಬೇಕು. ಶುಷ್ಕ ಚರ್ಮವುಳ್ಳವರು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಬೇಕೆಂದು ಸೂಚಿಸಲಾಗುತ್ತದೆ.

ಸನ್ಸ್ಕ್ರೀನ್ ಅನ್ನು ಎಂದಿಗೂ ಮರೆಯಬೇಡಿ:

ಸನ್ಸ್ಕ್ರೀನ್ ಅನ್ನು ಎಂದಿಗೂ ಮರೆಯಬೇಡಿ:

ಒಣ ಚರ್ಮ ಅಥವಾ ಯಾವುದೇ ಚರ್ಮ ಪ್ರಾಕಾರ ಹೊಂದಿರುವವರು ಯಾವುದೇ ಕಾರಣಕ್ಕೂ ಸನ್‌ಸ್ಕ್ರೀನ್ ಹಚ್ಚದೇ ಹೊರ ಹೋಗಬೇಡಿ. ಇದು ನಿಮ್ಮ ಚರ್ಮಕ್ಕೆ ಅಗತ್ಯವಿರುವ ರಕ್ಷಣೆಯನ್ನು ನೀಡುತ್ತದೆ. ಆಹಾರ ಮತ್ತು ಔಷಧ ಆಡಳಿತದ ಪ್ರಕಾರ, ಚರ್ಮದ ತೊಂದರೆಗಳನ್ನು ತಪ್ಪಿಸಲು ನೀವು 15 ಅಥವಾ ಅದಕ್ಕಿಂತ ಹೆಚ್ಚಿನ ಎಸ್‌ಪಿಎಫ್ ಇರುವ ಸನ್ ಸ್ಕ್ರೀನ್ ಧರಿಸಬೇಕು. ನಿಮ್ಮ ಚರ್ಮ ಒಣಗುವಿಕೆಯನ್ನು ತಡೆಯುವ ಸೌಮ್ಯವಾದ ಸನ್‌ಸ್ಕ್ರೀನ್ ಆಯ್ಕೆಮಾಡಿ.

ಮಾಯಿಶ್ಚರೈಸರ್ ಹಚ್ಚುವ ಮೊದಲು ನಿಮ್ಮ ಮುಖ ಒಣಗಿಸುವುದನ್ನು ತಪ್ಪಿಸಿ:

ಮಾಯಿಶ್ಚರೈಸರ್ ಹಚ್ಚುವ ಮೊದಲು ನಿಮ್ಮ ಮುಖ ಒಣಗಿಸುವುದನ್ನು ತಪ್ಪಿಸಿ:

ಸ್ನಾನದ ನಂತರ ನಿಮ್ಮ ಮುಖವನ್ನು ಒರೆಸಲು ಟವೆಲ್ ಅನ್ನು ಎತ್ತಿಕೊಳ್ಳುವವರು ನೀವಾಗಿದ್ದರೆ ಅದನ್ನು ನಿಲ್ಲಿಸಿ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ನೀವು ಒರೆಸಬೇಡಿ. ಇದು ನಿಮ್ಮ ಮುಖವನ್ನು ಆರ್ಧ್ರಕಗೊಳಿಸಲು ಉತ್ತಮ ಸಮಯ ಎಂದು ಶಿಫಾರಸು ಮಾಡುತ್ತದೆ. ಇದು ಹೈಡ್ರೇಶನ್ ಅನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಶುಷ್ಕ ಚರ್ಮವನ್ನು ತೊಡೆದುಹಾಕಲು ಅತ್ಯಂತ ಅವಶ್ಯಕವಾಗಿದೆ.

ಲೋಷನ್ ಅಥವಾ ಮಾಯಿಶ್ಚರೈಸರ್ ಬಳಸದೇ ಹೊರಹೋಗಬೇಡಿ:

ಲೋಷನ್ ಅಥವಾ ಮಾಯಿಶ್ಚರೈಸರ್ ಬಳಸದೇ ಹೊರಹೋಗಬೇಡಿ:

ಲೋಷನ್ ಅಥವಾ ಮಾಯಿಶ್ಚರೈಸರ್ ಅನ್ನು ನಿಯಮಿತವಾಗಿ ಬಳಸುವುದು ಮುಖ್ಯ, ವಿಶೇಷವಾಗಿ ನೀವು ಒಣ ಚರ್ಮವನ್ನು ಹೊಂದಿದ್ದರೆ. ಆದರೆ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದದನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯ. ನಿಮ್ಮ ಚರ್ಮದ ಮೇಲೆ ತಡೆಗೋಡೆ ರೂಪಿಸುವ ಮತ್ತು ತೇವಾಂಶದ ನಷ್ಟವನ್ನು ತಡೆಯುವ ಸೆರಾಮೈಡ್ ಗಳನ್ನು ಒಳಗೊಂಡಿರುವ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡಿ.

English summary

Things To Avoid If You Have Dry Skin In Kannada

People who have Dry skin have to be extra careful during the winter. If you don’t want the winter season to be harsh on your skin, you need to avoid these things. Here we told about Things To Avoid If You Have Dry Skin in Kannada, have a look
X
Desktop Bottom Promotion