For Quick Alerts
ALLOW NOTIFICATIONS  
For Daily Alerts

ತ್ವಚೆಯ ಎಲ್ಲಾ ಸಮಸ್ಯೆಗಳನ್ನು ದೂರಮಾಡಲು ಈ ಹಣ್ಣು ಸೇವಿಸಿದರೆ ಸಾಕು

|

ದಾಳಿಂಬೆ ಹಣ್ಣಿನ ಸಿಪ್ಪೆ ಸುಲಿಯಲು ಕಷ್ಟವೆಂದು ಅದನ್ನು ಖರೀದಿಸುವುದು ಕಡಿಮೆ. ಆದರೆ ಈ ಹಣ್ಣಿನ ರಸವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೇ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.

ಈ ಪೌಷ್ಟಿಕಾಂಶಭರಿತ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಸೌಂದರ್ಯವನ್ನೂ ಬೆಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದ್ದು, ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾದರೆ ದಾಳಿಂಬೆ ಹಣ್ಣಿನಿಂದ ನಿಮ್ಮ ತ್ವಚೆಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ದಾಳಿಂಬೆ ಹಣ್ಣಿನ ಸೇವನೆಯಿಂದ ತ್ವಚೆಗೆ ಸಂಬಂಧಿಸಿದಂತೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತ್ವಚೆಯ ಕೋಶಗಳ ಪುನರುತ್ಪಾದನೆ:

ತ್ವಚೆಯ ಕೋಶಗಳ ಪುನರುತ್ಪಾದನೆ:

ಇದು ಚರ್ಮದ ಹೊರ ಪದರವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಈ ಹಣ್ಣು ಚರ್ಮವನ್ನು ಕಾಂತಿಯುತಗೊಳಿಸಲು ಮತ್ತು ಅಂಗಾಂಶಗಳ ದುರಸ್ತಿಗೆ ಸಹಾಯ ಮಾಡುತ್ತದೆ. ಅಂದರೆ ಹೊಸ ಕೋಶಗಳ ಉತ್ಪಾದನೆಗೆ ಉತ್ತೇಜನ ನೀಡುತ್ತದೆ.

ವಯಸ್ಸಾಗುವಿಕೆಯನ್ನು ತಡೆಯುವುದು:

ವಯಸ್ಸಾಗುವಿಕೆಯನ್ನು ತಡೆಯುವುದು:

ಹೈಪರ್ಪಿಗ್ಮೆಂಟೇಶನ್ ವಯಸ್ಸಾದಂತೆ ಎಲ್ಲರನ್ನೂ ಕಾಡುವ ಸಾಮಾನ್ಯ ತ್ವಚೆಯ ಸಮಸ್ಯೆಗಳಲ್ಲಿ ಒಂದು. ಆದರೆ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಈ ಕಾಲದಲ್ಲಿ ಬರುವ ಪಿಗ್ಮೆಂಟೇಶನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸೂರ್ಯನ ಕಿರಣ, ಧೂಳು ಮೊದಲಾದವುಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಇದರಿಂದ ವಯಸ್ಸಾದ ಮೇಲೆ ಕಾಣುವ ಚಿಹ್ನೆಗಳ ಗೋಚರತೆ ಕಡಿಮೆ ಮಾಡುತ್ತದೆ.

ಕಾಲಜನ್ ಉತ್ಪಾದನೆ:

ಕಾಲಜನ್ ಉತ್ಪಾದನೆ:

ಕಾಲಜನ್ ಒಂದು ಘಟಕಾಂಶವಾಗಿದ್ದು, ಚರ್ಮ ಸುಕ್ಕು ಮುಕ್ತ ಮತ್ತು ದೃಢವಾಗಿರಲು ಇದು ಅವಶ್ಯಕವಾಗಿದೆ. ಪೌಷ್ಟಿಕಾಂಶಗಳ ಕೊರತೆ ಅಥವಾ ವಯೋಸಹಜವಾಗಿ ಇದರ ಉತ್ಪಾದನೆ ಕಡಿಮೆಯಾದಾಗ ಮುಖದಲ್ಲಿ ಸುಕ್ಕು, ರೇಖೆಗಳು ಉಂಟಾಗಲು ಆರಂಭವಾಗುತ್ತದೆ. ಆದರೆ ಈ ದಾಳಿಂಬೆ ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಿ, ಮೃದುವಾದ ಚರ್ಮವನ್ನು ನೀಡುತ್ತದೆ.

ಉತ್ಕರ್ಷಣ ನಿರೋಧಕ:

ಉತ್ಕರ್ಷಣ ನಿರೋಧಕ:

ದಾಳಿಂಬೆ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಚರ್ಮವನ್ನು ಸ್ವತಂತ್ರ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇವುಗಳಿಂದಲೇ ನಿಮ್ಮ ತ್ವಚೆ ಮೊಡವೆ, ಸುಕ್ಕು ಅಥವಾ ಡಾರ್ಕ್ ಸರ್ಕಲ್ ಗಳಿಗೆ ಒಳಗಾಗುವುದು. ದಾಳಿಂಬೆ ಹಣ್ಣಿನಲ್ಲಿ ಇವುಗಳ ವಿರುದ್ಧ ಹೋರಾಡುವ ಶಕ್ತಿಯಿದ್ದು, ನಿಮ್ಮ ಚರ್ಮವನ್ನು ವಯಸ್ಸಾಗದಂತೆ ಇಡುತ್ತದೆ.

ತ್ವಚೆಗೆ ಹೊಳಪು:

ತ್ವಚೆಗೆ ಹೊಳಪು:

ದಾಳಿಂಬೆಯಲ್ಲಿ ವಿಟಮಿನ್ ಸಿ ಇದ್ದು ಚರ್ಮದಲ್ಲಿ ಹೊಳಪು ಹೆಚ್ಚಿಸುತ್ತದೆ. ಇದಲ್ಲದೆ, ಹಣ್ಣಿನ ಕೆಂಪು ರಸವನ್ನು ಕೆನ್ನೆ ಮತ್ತು ತುಟಿಗಳಿಗೆ ನೇರವಾಗಿ ಹಚ್ಚವುದರಿಂದ ಕೆನ್ನೆ ಮತ್ತು ತುಟಿಗಳ ಮೇಲೆ ಬ್ಲಶ್ ಸ್ಟೇನ್ ನೋಟವನ್ನು ಕಾಣಬಹುದು. ಇದು ನೈಸರ್ಗಿಕ ಹಾಗೂ ಯಾವುದೇ ರೀತಿಯ ಸಂರಕ್ಷಕಗಳನ್ನು ಹೊಂದಿರದ ಕಾರಣ, ಯಾವುದೇ ಹಾನಿ ಮಾಡುವುದಿಲ್ಲ ಮತ್ತು ಬದಲಿಗೆ ಚರ್ಮದ ನೋಟವನ್ನು ಸುಧಾರಿಸುತ್ತದೆ.

English summary

Reasons to use Pomegranate to Get Glowing skin in Kannada

Here we taking about Reasons to use Pomegranate to get glowing skin in kannada, read on
Story first published: Saturday, July 24, 2021, 16:41 [IST]
X
Desktop Bottom Promotion