For Quick Alerts
ALLOW NOTIFICATIONS  
For Daily Alerts

ಶಸ್ತ್ರಚಿಕಿತ್ಸೆಯ ಗಾಯ ವೇಗವಾಗಿ ಗುಣವಾಗಲು ಸಹಾಯ ಮಾಡೋ ಟಿಪ್ಸ್ ಗಳಿವು

|

ಸಾಮಾನ್ಯವಾಗಿ ನಮಗೆ ಯಾವುದಾದರು ಶಸ್ತ್ರಚಿಕಿತ್ಸೆ ಆದಾಗ, ಅದರ ಗಾಯ ಗುಣ ಆಗಲು ಅಥವಾ ಒಣಗಳು ಸುಮಾರು ಸಮಯ ಹಿಡಿಯುತ್ತದೆ. ಆ ಗಾಯ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಅದರಿಂದ ನಮಗೆ ಬೇರೇನೂ ಮಾಡಲು ಆಗುವುದಿಲ್ಲ. ಇನ್ನೂ ಏನಾದರೂ ಮಧುಮೇಹದಂತ ಆರೋಗ್ಯ ಸಮಸ್ಯೆಗಳಿದ್ದರೆ, ಗಾಯ ಗುಣವಾಗುವ ಪ್ರಕ್ರಿಯೆ ಮತ್ತಷ್ಟು ವಿಳಂಬ. ಹಾಗಾದರೆ ಆಪರೇಷನ್ ಗಾಯ ಬೇಗ ಗುಣ ಆಗೋದಿಕ್ಕೆ ಬೇರೆ ದಾರಿ ಅಥವಾ ಪರಿಹಾರನೇ ಇಲ್ವಾ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಇಲ್ಲಿ ಆ ಪ್ರಶ್ನೆಗೆ ಉತ್ತರ ನೀಡ್ತಾ ಇದೀವಿ. ಹೀಗೆ ಮಾಡೋದ್ರಿಂದ ನಿಮ್ಮ ಆಪರೇಷನ್ ಗಾಯ ಬೇಗ ಆಗಬಹುದು.

ಶಸ್ತ್ರಚಿಕಿತ್ಸೆಯ ಗಾಯವನ್ನು ಗುಣಪಡಿಸುವ ಸಲಹೆಗಳು ಇಲ್ಲಿವೆ.

1. ವೈದ್ಯರ ಮಾತು ಕೇಳಿ :

1. ವೈದ್ಯರ ಮಾತು ಕೇಳಿ :

ಇದು ಎಲ್ಲದಕ್ಕೂ ಮುನ್ನ ಮಾಡಬೇಕಾದ ಕೆಲಸ. ನಿಮ್ಮ ಗಾಯಕ್ಕೆ ತೆಗೆದುಕೊಳ್ಳಬೇಕಾದ ಎಲ್ಲಾ ಮೊನ್ನೆಚ್ಚರಿಕೆಗಳನ್ನು ನಿಮ್ಮ ವೈದ್ಯರ ಬಳಿ ಕೇಳಿ, ಅದನ್ನು ಸರಿಯಾಗಿ ಅನುಸರಿಸಿ. ಅವರ ಮಾತಿಗೆ ನಿರ್ಲಕ್ಷ್ಯ ಬೇಡ. ಅವರ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿ.

2.ಸ್ವಚ್ಛತೆ ಕಾಪಾಡಿಕೊಳ್ಳಿ:

2.ಸ್ವಚ್ಛತೆ ಕಾಪಾಡಿಕೊಳ್ಳಿ:

ಸೋಂಕನ್ನು ತಡೆಗಟ್ಟಲು ಸಹಾಯ ಮಾಡಲು, ಆಪರೇಷನ್ ಆದ ಜಾಗವನ್ನು ಸ್ಪರ್ಶಿಸುವ ಮೊದಲು ಮತ್ತು ನಂತರ ಯಾವಾಗಲೂ ನಿಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅಮೇರಿಕನ್ ಕಾಲೇಜ್ ಆಫ್ ಸರ್ಜನ್ಸ್ (ಎಸಿಎಸ್) ಪ್ರಕಾರ, ನೀವು ಕನಿಷ್ಟ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸೋಪ್ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಬೇಕು ಮತ್ತು ನಂತರ ಸ್ವಚ್ಛವಾದ ಟವೆಲ್ನಿಂದ ಒರೆಸಿ ಒಣಗಿಸಬೇಕು. ನಿಮಗೆ ಸೋಪ್ ಮತ್ತು ನೀರನ್ನು ಬಳಸಲು ಸಾಧ್ಯವಾಗದಿದ್ದರೆ, ಆಲ್ಕೋಹಾಲ್ ಆಧಾರಿತ ಕ್ಲೆನ್ಸರ್ ಅಥವಾ ಸ್ಯಾನಿಟೈಸರ್ ಬಳಸಿ. ಅಲ್ಲದೆ, ನಿಮ್ಮ ಗಾಯ ಗುಣ ಆಗಿದ್ದರೂ ಅಥವಾ ತೀವ್ರ ತುರಿಕೆ ಇದ್ದರೂ ಸಹ ಆ ಚರ್ಮವನ್ನು ಕೆರೆದುಕೊಳ್ಳಬೇಡಿ.

3. ಗಾಯವನ್ನು ಮುಚ್ಚಿ:

3. ಗಾಯವನ್ನು ಮುಚ್ಚಿ:

ಗಾಯಕ್ಕೆ ಬೇಕಾದ ಅನೇಕ ರೀತಿಯ ಡ್ರೆಸ್ಸಿಂಗ್ ಅಸ್ತಿತ್ವದಲ್ಲಿದೆ. ಅವುಗಳಲ್ಲಿ ಬಹುತೇಕ ಎಲ್ಲವನ್ನೂ ಗಾಯವನ್ನು ತೇವವಾಗಿಡಲು, ಹೊಸ ಅಂಗಾಂಶಗಳ ಬೆಳವಣಿಗೆಯನ್ನು ಹೆಚ್ಚಿಸಲು, ಗಾಯಕ್ಕೆ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾ ತಾಗದಿರಲು ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಈ ಬ್ಯಾಂಡೇಜ್ ಅನ್ನು ಎಷ್ಟು ಬಾರಿ ಬದಲಾಯಿಸಬೇಕು ಎಂಬುದರ ಕುರಿತು ಸೂಚನೆಗಳನ್ನು ನಿಮ್ಮ ವೈದ್ಯರ ಬಳಿ ಕೇಳಿ ಅನುಸರಿಸಿ.

4. ಪೋಷಣೆಗೆ ಆದ್ಯತೆ ನೀಡಿ:

4. ಪೋಷಣೆಗೆ ಆದ್ಯತೆ ನೀಡಿ:

ಹೌದು, ಪೋಷಕಾಂಶಯುಕ್ತ ಆಹಾರ ಸೇವನೆ ಗಾಯವನ್ನು ಬೇಗ ಗುಣಪಡಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಗಾಯದ ಮೇಲೆ ಹೊಸ ಅಂಗಾಂಶ ಮತ್ತು ಚರ್ಮ ಹುಟ್ಟಲು ಅಮೈನೋ ಆಮ್ಲಗಳು, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಕ್ಯಾಲೊರಿಗಳು ಹೆಚ್ಚು ಬೇಕಾಗಿರುತ್ತದೆ. ಈ ಪ್ರಮುಖ ಪೋಷಕಾಂಶಗಳಿಲ್ಲದೆ, ಗುಣಪಡಿಸುವ ಪ್ರಕ್ರಿಯೆಯು ನಿಧಾನವಾಗಬಹುದು ಅಥವಾ ಸರಿಯಾಗಿ ಆಗದೇ ಇರಬಹುದು. ಆದ್ದರಿಂದ, ಸಾಕಷ್ಟು ನೀರು, ದ್ರವ ಭರಿತ ಆಹಾರ, ವಿಟಮಿನ್ ಭರಿತ ಹಣ್ಣುಗಳು ಮತ್ತು ತರಕಾರಿಗಳು, ಪ್ರೋಟೀನ್ಗಳು ಮತ್ತು ಧಾನ್ಯಗಳ ಸಮತೋಲಿತ ಆಹಾರವನ್ನು ಸೇವಿಸಿ.

5. ನಿಯಮಿತವಾಗಿ ಗಾಯದ ಮೇಲೆ ಐಸ್ ಮಸಾಜ್ ಮಾಡಿ:

5. ನಿಯಮಿತವಾಗಿ ಗಾಯದ ಮೇಲೆ ಐಸ್ ಮಸಾಜ್ ಮಾಡಿ:

ಗಾಯ ಇರುವ ಪ್ರದೇಶವನ್ನು ತಂಪಾಗಿರಿಸುವುದರಿಂದ ರಕ್ತದ ಹರಿವನ್ನು ಕಡಿಮೆ ಮಾಡುವ ಮೂಲಕ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಶಸ್ತ್ರಚಿಕಿತ್ಸೆಯ ನಂತರ ನೈಸರ್ಗಿಕವಾಗಿ ಉಂಟಾಗುವ ಊತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6. ಹಗುರವಾಗಿ ತೆಗೆದುಕೊಳ್ಳಬೇಡಿ :

6. ಹಗುರವಾಗಿ ತೆಗೆದುಕೊಳ್ಳಬೇಡಿ :

ಗಾಯ ಎಲ್ಲಿದೆ ಎಂದು ನಿಮಗೆ ತಿಳಿದಿರುವುದರಿಂದ ಅದನ್ನು ಒತ್ತುವ, ಹೊಲಿಗೆಗಳನ್ನು ಕೀಳುವ ಸಾಧ್ಯತೆ ಇರುವ ಕೆಲಸಗಳನ್ನು ಮಾಡಬೇಡಿ. ನೀವು ಯಾವಾಗ ಸಾರಾಗವಾಗಿ ಕೆಲಸ ಮಾಡಬಹುದು ಎಂದು ನಿಮ್ಮ ವೈದ್ಯರನ್ನು ಕೇಳಿ. ಅಲ್ಲಿವರೆಗೆ ವಿಶ್ರಾಂತಿ ತೆಗೆದುಕೊಳ್ಳಿ. ಇದು ಐಚ್ಚಿಕವಲ್ಲ, ಅತ್ಯಗತ್ಯವಾಗಿದೆ. ನಿಮ್ಮ ಆಪರೇಷನ್ ಗಾಯವನ್ನು ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲ.

7. ಹೊಗೆ ಮುಕ್ತವಾಗಿರಿ:

7. ಹೊಗೆ ಮುಕ್ತವಾಗಿರಿ:

ನೀವು ಧೂಮಪಾನ ಮಾಡುವವರಾಗಿದ್ದರೆ ಶಾಶ್ವತವಾಗಿ ತ್ಯಜಿಸಬೇಕು. ನಿಮಗೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಶಸ್ತ್ರಚಿಕಿತ್ಸೆಗೆ ಮುನ್ನ ನಾಲ್ಕರಿಂದ ಎಂಟು ವಾರಗಳವರೆಗೆ ಮತ್ತು ನಂತರ ಕನಿಷ್ಠ ಎರಡು ತಿಂಗಳಾದರೂ ಧೂಮಪಾನ ಬಿಡಬೇಕು. ಧೂಮಪಾನವು ಗಾಯವನ್ನು ಗುಣಪಡಿಸಲು ಅಡ್ಡಿಪಡಿಸುತ್ತದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಈ ಸಮಯದಲ್ಲಿ ಧೂಮಪಾನ ತ್ಯಜಿಸುವಿಕೆಯು ಗಾಯದ ತೊಡಕುಗಳ ಪ್ರಮಾಣವನ್ನು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ ಎಂದು ತೋರಿಸಿದೆ.

English summary

Post-Surgery Tips to Help Your Incision Heal in Kannada

Here we talking about Post-Surgery Tips to Help Your Incision Heal in Kannada, read on
Story first published: Saturday, May 29, 2021, 20:53 [IST]
X
Desktop Bottom Promotion