For Quick Alerts
ALLOW NOTIFICATIONS  
For Daily Alerts

ಸನ್ ಸ್ಕ್ರೀನ್ ಮುಖಕಷ್ಟೇ ಹಚ್ಚಿಕೊಳ್ಳುವುದಲ್ಲ, ದೇಹದ ಈ ಭಾಗಗಳಿಗೂ ಅಗತ್ಯವಿದೆ..

|

ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿಕೊಳ್ಳಲು ಹೊರಗೆ ಹೋಗುವ ಮೊದಲು, ಸಾಮಾನ್ಯವಾಗಿ ಸನ್ ಸ್ಕ್ರೀನ್ ಹಚ್ಚಿಕೊಳ್ಳುತ್ತೇವೆ. ಆದರೆ ಚರ್ಮ ವೈದ್ಯರು ಹೇಳುವಂತೆ ಇದು ಕೇವಲ ಹೊರಗೆ ಹೋಗುವಾಗ ಅಷ್ಟೇ ಅಲ್ಲ, ಮನೆಯೊಳಗಿರುವಾಗಲೂ, ಪ್ರತಿದಿನ ಬಳಸಬೇಕು.

ಆದರೆ ನಾವು ಈ ಸನ್ ಸ್ಕ್ರೀನ್ ಹಚ್ಚಿಕೊಳ್ಳುವಾಗ ಕೆಲವೊಂದು ತಪ್ಪುಗಳನ್ನ ಮಾಡುತ್ತೇವೆ. ಅದೇನಂದರೆ, ಕೇವಲ ಮುಖ ಹಾಗೂ ಕೈ-ಕಾಲಿಗಷ್ಟೇ ಹಚ್ಚಿಕೊಂಡು ಸುಮ್ಮನಿರುತ್ತೇವೆ. ಏಕೆಂದರೆ ಸನ್ ಸ್ಕ್ರೀನ್ ಅವಶ್ಯಕತೆಯಿರುವ ಭಾಗಗಳು ಇನ್ನೂ ಅನೇಕವಿವೆ. ಸಂಶೋಧನೆಯ ಮೂಲಕ ತಿಳಿದುಬಂದಿದೇನೆಂದರೆ, ಸೂರ್ಯನ ಬೆಳಕು ಎಲ್ಲೆಲ್ಲಿ ಬೀಳುತ್ತವೆಯೋ ಆ ಪ್ರದೇಶಗಳಿಗೆಲ್ಲಾ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.

ಹಾಗಾದರೆ ಬನ್ನಿ, ನಾವೆಲ್ಲಾ ಸಾಮಾನ್ಯವಾಗಿ ಸನ್ ಸ್ಕ್ರೀನ್ ಹಚ್ಚಿಕೊಳ್ಳುವಾದ ಮಿಸ್ ಮಾಡುವ ಆ ಜಾಗಗಳಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸನ್ ಸ್ಕ್ರೀನ್ ಹಚ್ಚಿಕೊಳ್ಳುವಾದ ಮಿಸ್ ಮಾಡುವ ಆ ಜಾಗಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸನ್ ಸ್ಕ್ರೀನ್ ಹಚ್ಚಿಕೊಳ್ಳುವಾದ ಮಿಸ್ ಮಾಡುವ ಆ ಜಾಗಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಕಿವಿಗಳು

ಮುಖ, ಕೈಕಾಲಿನಂತೆ ಕಿವಿಯೂ ಸಹ ಸಾಕಷ್ಟು ಸೂರ್ಯನಿಗೆ ತೆರೆದುಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಬಿಟ್ಟುಬಿಡಬೇಡಿ. ನಿಮ್ಮ ಉದ್ದ ಕೂದಲು ಇದೆ, ಅದೇ ರಕ್ಷಣೆ ನೀಡುತ್ತದೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಕಿವಿಯ ಹಿಂಭಾಗದಲ್ಲಿ ಚರ್ಮದ ಕ್ಯಾನ್ಸರ್ ಹುಟ್ಟಿಕೊಳ್ಳುವ ಸಾಮಾನ್ಯ ಸ್ಥಳವಾಗಿದೆ. ಆದ್ದರಿಂದ ಕಿವಿಯ ಸುತ್ತಲೂ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಮುಖ್ಯ. ಅಪಾಯವನ್ನು ಕಡಿಮೆ ಮಾಡಲು SPF 30 ಅಥವಾ ಅದಕ್ಕಿಂತ ಹೆಚ್ಚಿರುವ ಸನ್‌ಸ್ಕ್ರೀನ್ ಅನ್ನು ಹಚ್ಚಿ. ಜೊತೆಗೆ ಸಾಧ್ಯವಾದಷ್ಟು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಂಡು ನೆರಳಿನಲ್ಲಿ ಓಡಾಡುವುದು ಕೂಡ ಲಾಭದಾಯಕವಾಗಿದೆ.

2. ನೆತ್ತಿ:

2. ನೆತ್ತಿ:

ನಿಮ್ಮ ಕೂದಲು ನೆತ್ತಿಯನ್ನು ರಕ್ಷಿಸುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ನೆತ್ತಿಯು ದೇಹದ ಅತ್ಯುನ್ನತ ಬಿಂದುವಾಗಿದ್ದು, ಇತರ ಪ್ರದೇಶಗಳಿಗಿಂತ ಸುಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಚರ್ಮದ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡಲು, ಸನ್ ಸ್ಕ್ರೀನ್ ನ್ನು ಯಾವಾಗಲೂ ನೆತ್ತಿಗೆ ಮತ್ತು ಕೂದಲಿಗೆ ಹಚ್ಚಬೇಕು. ನೆತ್ತಿ ಹಾಗೂ ಕೂದಲನ್ನು ಜಿಡ್ಡು ಮಾಡದಂತ ಸನ್ ಸ್ಕ್ರೀನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೆತ್ತಿಯ ಮೇಲಿನ ಚರ್ಮದ ಕ್ಯಾನ್ಸರ್ ವಿರಳವಾಗಿದ್ದರೂ, ಸುರಕ್ಷಿತವಾಗಿರುವುದು ಮುಖ್ಯವಾಗಿದೆ. ಇದಕ್ಕಾಗಿ ಟೋಪಿ ಧರಿಸುವುದು ಸಹ ಸಹಾಯ ಮಾಡಬಹುದು.

3. ಕಣ್ಣಿನ ರೆಪ್ಪೆಗಳು:

3. ಕಣ್ಣಿನ ರೆಪ್ಪೆಗಳು:

ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವು ತೆಳ್ಳಗಿರುತ್ತದೆ. ಇದು ಚರ್ಮ ಕ್ಯಾನ್ಸರ್ ಹಾಗೂ ವಯಸ್ಸಾಗುವಿಕೆಯ ಲಕ್ಷಣಗಳಾದ ಸುಕ್ಕುಗಳು ಮತ್ತು ಕಪ್ಪು ಚುಕ್ಕೆಗಳಂತಹವುಗಳಿಗೆ ಒಳಗಾಗುವಂತೆ ಮಾಡುತ್ತದೆ. ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿಯ ವೆಬ್‌ಸೈಟ್‌ನ ಕ್ಯಾನ್ಸರ್‌.ನೆಟ್ ಪ್ರಕಾರ, ಕಣ್ಣಿನ ರೆಪ್ಪೆಗಳ ಮೇಲೆ ಚರ್ಮದ ಕ್ಯಾನ್ಸರ್ ಶೇ. 10 ಪ್ರತಿಶತದವರೆಗೆ ಕಂಡು ಬರುತ್ತದೆ. ಅದು ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಸನ್ ಸ್ಕ್ರೀನ್ ಹಚ್ಚಲು ಹೋಗುವುದಿಲ್ಲ. ಆದ್ದರಿಮದ ಟೈಟಾನಿಯಂ ಡೈಆಕ್ಸೈಡ್ ಅಥವಾ ಜಿಂಕ್ ಆಕ್ಸೈಡ್ ಹೊಂದಿರುವ ಸನ್‌ಸ್ಕ್ರೀನ್ ನ್ನು ಬಳಸಿ. ಇದರ ಜೊತೆಗೆ ಹೊರಗೆ ಸೂರ್ಯನ ಬಿಸಿಲಿಗೆ ಹೋಗುವಾಗ ಸನ್ಗ್ಲಾಸ್ ಬಳಸಿ. ಇದು ಣ್ಣಿನ ರೆಪ್ಪೆಗಳನ್ನು ಸೂರ್ಯನ ಕಿರಣಗಳಿಂದ ಚುರುಕುಗೊಳ್ಳುವ ವಯಸ್ಸಾದ ಚಿಹ್ನೆಗಳಿಂದ ಮತ್ತಷ್ಟು ರಕ್ಷಿಸಲು ಸಹಾಯ ಮಾಡುತ್ತದೆ.

4. ತುಟಿಗಳು:

4. ತುಟಿಗಳು:

ನಿಮ್ಮ ತುಟಿಗಳಲ್ಲೂ ಚರ್ಮದ ಕ್ಯಾನ್ಸರ್ ಬೆಳೆಯಬಹುದು. ಈ ಪ್ರದೇಶವನ್ನು ರಕ್ಷಿಸುವುದು ಸರಳವಾಗಿದೆ. ನಿಮಗೆ ಬೇಕಾಗಿರುವುದು 30 ಅಥವಾ ಅದಕ್ಕಿಂತ ಹೆಚ್ಚಿನ ಎಸ್‌ಪಿಎಫ್ ಹೊಂದಿರುವ ಲಿಪ್ ಬಾಮ್. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, SPF ಇರುವ ಲಿಪ್ ಬಾಮ್ ಅನ್ನು ಬಳಸುವುದು ಆ ಪ್ರದೇಶದಲ್ಲಿ ಚರ್ಮದ ಕ್ಯಾನ್ಸರ್ ಮತ್ತು ಸುಕ್ಕುಗಳ ಬೆಳವಣಿಗೆಯನ್ನು ತಡೆಯಲು ಉತ್ತಮ ಮಾರ್ಗವಾಗಿದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಲಿಪ್ ಬಾಮ್ ಅನ್ನು ಹಚ್ಚುತ್ತಿರಿ.

5. ಕುತ್ತಿಗೆ ಮತ್ತು ಎದೆ:

5. ಕುತ್ತಿಗೆ ಮತ್ತು ಎದೆ:

ನೀವು ಮನೆಯಿಂದ ಹೊರಡುವ ಮೊದಲು ನಿಮ್ಮ ಮುಖಕ್ಕೆ ಹೇಗೆ ಸನ್‌ಸ್ಕ್ರೀನ್ ಅನ್ನು ಶ್ರದ್ಧೆಯಿಂದ ಹಚ್ಚುತ್ತಿರೋ ಅದೇ ರೀತಿ, ನಿಮ್ಮ ಕುತ್ತಿಗೆ ಹಾಗೂ ಎದೆಯ ಭಾಗಕ್ಕೂ ಹಚ್ಚಬೇಕು. JAMA Otolaryngology - Head & Neck Surgery ನಲ್ಲಿ ಅಕ್ಟೋಬರ್ 2019 ರಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಚರ್ಮ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 20 ಪ್ರತಿಶತದಷ್ಟು ತಲೆ ಮತ್ತು ಕುತ್ತಿಗೆ ಪ್ರದೇಶದಲ್ಲಿ ಕಂಡುಬರುತ್ತದೆ. ಎದೆಯ ಮತ್ತು ಕುತ್ತಿಗೆಯ ಮೇಲೆ ಜಿಂಕ್ ಆಕ್ಸೈಡ್ ಇರುವ ಸನ್ ಸ್ಕ್ರೀನ್ ಬಳಸಿ.

6. ಪಾದಗಳು:

6. ಪಾದಗಳು:

ನಿಮ್ಮ ಕಾಲುಗಳಿಗೆ ಶೂ ಧರಿಸದಿದ್ದರೆ, ಸನ್ ಸ್ಕ್ರೀನ್ ಬಳಸುವುದು ಮುಖ್ಯವಾಗುತ್ತದೆ. ನಮ್ಮ ಪಾದಗಳ ಮೇಲ್ಭಾಗವು ಹೆಚ್ಚಾಗಿ ಸೂರ್ಯನಿಗೆ ಒಡ್ಡಿಕೊಳ್ಳುತ್ತದೆ, ಆದ್ದರಿಂದ ಆ ಜಾಗಕ್ಕೆ ಸನ್ ಸ್ಕ್ರೀನ್ ಹಚ್ಚಬೇಕು. ಆದರೆ ಸತ್ತ ಚರ್ಮದ ಕೋಶಗಳ ದಪ್ಪ ಪದರದಿಂದಾಗಿ ನಿಮ್ಮ ಪಾದದ ಅಡಿಭಾಗಗಳು ಸಾಮಾನ್ಯವಾಗಿ ಹೆಚ್ಚು ರಕ್ಷಣೆ ಪಡೆಯುತ್ತವೆ. ಒಂದು ವೇಳೆ ನೀವು ಸಮುದ್ರತೀರದಲ್ಲಿ ಬರಿಗಾಲಿನಲ್ಲಿ ಮಲಗಿದ್ದರೆ - ಆಗ ಪಾದದ ಕೆಳಗೆ ಸನ್ ಸ್ಕ್ರೀನ್ ಹಚ್ಚಬೇಕು. ಏಕೆಂದರೆ ಅಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯವ ಸಾಧ್ಯತೆ ಇರುತ್ತವೆ.

English summary

Places Most People Miss to Apply Sunscreen

Here we talking about Places Most People Miss to Apply Sunscreen, read on
X
Desktop Bottom Promotion