For Quick Alerts
ALLOW NOTIFICATIONS  
For Daily Alerts

ಕನ್ನಡಕ ಧರಿಸಿ ಕಲೆ ಬಿದ್ದಿದೆಯೇ? ಈ ಮನೆಮದ್ದು ಟ್ರೈ ಮಾಡಿ

|

ಮೂಗಿರುವುದು ಕನ್ನಡಕ ಇರಿಸಲು ಎಂದು ಬೀಚಿಯವರು ತಮ್ಮ ಅನರ್ಥಕೋಶದಲ್ಲಿ ವಿವರಿಸಿದ್ದಾರೆ. ಸತತವಾಗಿ ಕನ್ನಡಕವನ್ನು ಧರಿಸಿಯೇ ಇರುವವರಿಗೆ ಕನ್ನಡಕದ ನಡುವಣ ಭಾಗ ಮೂಗಿನ ಮೇಲೆ ಬಿದ್ದಲ್ಲಿ ಕೊಂಚ ಆಳವಾದ ಕುಳಿಯನ್ನುಂಟು ಮಾಡುವ ಜೊತೆಗೇ ಈ ಭಾಗದ ಚರ್ಮದ ಬಣ್ಣವನ್ನೂ ಬದಲಾಗಿಸಿ ಕನ್ನಡಕ ಧರಿಸಿಲ್ಲದ ಸಮಯದಲ್ಲಿ ಮುಖದ ಲಕ್ಷಣವನ್ನೇ ಬದಲಿಸಬಹುದು. ಇದೇ ಕಾರಣಕ್ಕೆ ಹಲವರು ಕನ್ನಡಕದ ಗೋಜಿಗೆ ಹೋಗದೇ ಕ್ಯಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ. ಆದರೆ ಕಾಂಟಾಕ್ಟ್ ಲೆನ್ಸ್ ಗಳಿಗೆ ತಮ್ಮದೇ ಆದ ಮಿತಿಗಳಿವೆ ಮತ್ತು ಇವು ದುಬಾರಿಯೂ ಅಲ್ಪಾಯುಷಿಯೂ ಆಗಿವೆ.

Spectacle Marks

ಹಾಗಾಗಿ ಕನ್ನಡಕ ಧರಿಸುವುದು ಅನಿವಾರ್ಯವಾಗಿದ್ದರೆ ಮೂಗಿನ ಮೇಲೆ ಗುರುತು ಮೂಡುವುದೂ ಅನಿವಾರ್ಯವಾಗಿಬಿಡುತ್ತದೆ. ಕಾಲಕಳೆದಂತೆ ಈ ಗುರುತು ಹೆಚ್ಚು ಹೆಚ್ಚು ಆಳವಾಗುತ್ತಾ ಕನ್ನಡಕ ಧರಿಸದೇ ಯಾರೊಬ್ಬರ ಮುಂದೆ ನಿಲ್ಲುವುದಕ್ಕೆ ಮುಜುಗರವಾಗುತ್ತದೆ.

ಅಷ್ಟಕ್ಕೂ, ಮೂಗಿನ ಮೇಲೆ ಕಲೆ ಮತ್ತು ಗುರುತು ಏಕೆ ಉಳಿಯುತ್ತದೆ?

ಅಷ್ಟಕ್ಕೂ, ಮೂಗಿನ ಮೇಲೆ ಕಲೆ ಮತ್ತು ಗುರುತು ಏಕೆ ಉಳಿಯುತ್ತದೆ?

ಕನ್ನಡಕ ಯಾವುದೇ ಇರಲಿ, ಎಷ್ಟೇ ಅನುಕೂಲಕರವಾಗಿರಲಿ, ಇದು ಮೂಗಿನ ಮೇಲೆ ಕುಳಿತುಕೊಳ್ಳಲೇಬೇಕು. ಹೀಗಾದಾಗ ಕನ್ನಡಕ ಕುಳಿತ ಭಾಗದ ಚರ್ಮ ಸ್ವಾಭಾವಿಕವಾಗಿಯೇ ಗಾಳಿಯ ಸಂಪರ್ಕವನ್ನು ಕಳೆದುಕೊಳ್ಳುತ್ತದೆ. ಅಲ್ಲದೇ, ಎಷ್ಟೇ ಹಗುರವಾಗಿದ್ದರೂ ಕನ್ನಡಕದ ಭಾರ ಈ ಭಾಗದ ಮೇಲೆ ಸತತವಾಗಿ ಕುಳಿತಿದ್ದು ಚರ್ಮವನ್ನು ಸತತವಾಗಿ ಒತ್ತುತ್ತಿರುತ್ತದೆ. ಅಷ್ಟೇ ಅಲ್ಲ, ಗಾಳಿಯಲ್ಲಿರುವ ಧೂಳು ಮತ್ತು ಸೂಕ್ಷ್ಮಕಣಗಳು ಈ ಭಾಗದಲ್ಲಿ ಸಿಲುಕಿಕೊಂಡು ಚರ್ಮದ ಸೂಕ್ಷ್ಮರಂಧ್ರಗಳಿಂದ ಒಳಗಿಳಿಯುತ್ತದೆ. ಕನ್ನಡಕ ನಿಮ್ಮ ಮೂಗಿನ ರಚನೆಗೆ ಅನುಗುಣವಾಗಿದ್ದಷ್ಟೂ ಅನುಕೂಲಕರ. ಆದರೆ ಇದು ಎಲ್ಲಾ ಸಂದರ್ಭಗಳಲ್ಲಿ ಸಾಧ್ಯವಾಗದ ಕಾರಣ ಕೊಂಚವಾದರೂ ಅನಾನುಕೂಲತೆ ಇದ್ದೇ ಇರುತ್ತದೆ. ಇದು ನೋವಿಗೆ ಕಾರಣವಾಗುತ್ತದೆ.

ತಜ್ಞರು ಹೀಗೆ ಎದುರಾಗುವ ನೋವುಗಳನ್ನು ಈ ಕೆಳಗಿನಂತೆ ವಿಂಗಡಿಸಿದ್ದಾರೆ

ತಜ್ಞರು ಹೀಗೆ ಎದುರಾಗುವ ನೋವುಗಳನ್ನು ಈ ಕೆಳಗಿನಂತೆ ವಿಂಗಡಿಸಿದ್ದಾರೆ

ಮೂಗಿನ ಮೂಳೆಯ ನೋವು (Nose Bridge Pain) - ಕನ್ನಡಕದ ನಡುವಣ ಭಾಗ ಸರಿಯಾಗಿ ಚರ್ಮದ ಮೇಲೆ ಆವರಿಸುವಂತೆ ಕುಳಿತುಕೊಳ್ಳದೇ ಒಂದು ಪಾರ್ಶ್ವ ಒತ್ತುವಂತಿದ್ದಾಗ ಇದ್ದರೆ ಈ ನೋವು ಎದುರಾಗುತ್ತದೆ. ಒಂದು ವೇಳೆ ತುಂಬಾ ಭಾರವಾದ ಕನ್ನಡಕ ಧರಿಸಿದ್ದರೂ ಈ ನೋವು ಎದುರಾಗುತ್ತದೆ.

ಕಿವಿಗಳ ಹಿಂಭಾಗದ ನೋವು (Pain Behind The Ears)- ಒಂದು ವೇಳೆ ಕನ್ನಡಕದ ಅಂಚಿನಿಂದ ಕಿವಿಯ ಹಿಂದೆ ಬರುವ ಕಮಾನಿನ ಭಾಗ ಅಗತ್ಯವಿರುವಷ್ಟಿಲ್ಲದೇ ಕಿರಿದಾಗಿದ್ದರೆ ಇದು ಸತತವಾಗಿ ಕಿವಿಯನ್ನು ಸೆಳೆಯುತ್ತ ನೋವು ಉಂಟು ಮಾಡುತ್ತದೆ. ಇದು ಎದುರಾದರೆ ತಕ್ಷಣವೇ ಕನ್ನಡಕ ವಿತರಕರನ್ನು ಕಂಡು ಇದನ್ನು ಸರಿಪಡಿಸಿಕೊಳ್ಳಬೇಕು.

ಕಣ್ಣಿನ ಒತ್ತಡದಿಂದ ಎದುರಾಗುವ ತಲೆನೋವು (Headache Due To Eye Strain)

ನೇತ್ರವೈದ್ಯರು ಸಲಹೆ ಮಾಡಿದ ಕನ್ನಡಕದ ಸಂಖ್ಯೆಗೆ ನಿಮ್ಮ ಕನ್ನಡಕ ಸಮರ್ಪಕವಾಗಿಲ್ಲದಿದ್ದರೆ ಇದು ದೃಷ್ಟಿಗೆ ಹೆಚ್ಚಿನ ಒತ್ತಡ ನೀಡುತ್ತದೆ ಹಾಗೂ ತಲೆನೋವು ಎದುರಾಗುತ್ತದೆ. ಹೀಗಾದರೆ ತಕ್ಷಣವೇ ನಿಮ್ಮ ನೇತ್ರತಜ್ಞರನ್ನು ಕಂಡು ಕನ್ನಡಕ ಅವರು ಸಲಹೆ ನೀಡಿದಂತೆಯೇ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ವೈದ್ಯರ ಸಲಹೆಯ ಪ್ರಕಾರ ಸೂಕ್ತ ಬದಲಾವಣೆಯನ್ನು ನಿರ್ವಹಿಸಿಕೊಳ್ಳಬೇಕು.

ಒಂದು ವೇಳೆ ನಿಮ್ಮ ಕನ್ನಡಕ ಮೂಗಿನ ಮೇಲೆ ಕಲೆ ಮೂಡಿಸಿರುವ ಬಗ್ಗೆ ನೀವು ಕಳಕಳಿ ಹೊಂದಿದ್ದರೆ ಈಗ ಚಿಂತಿಸುವ ಅಗತ್ಯವಿಲ್ಲ. ಈ ಕಲೆಗಳನ್ನು ಸಮರ್ಥವಾಗಿ ಮತ್ತು ನೈಸರ್ಗಿಕವಾಗಿ ನಿವಾರಿಸುವ ಹತ್ತು ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ ನೋಡೋಣ:

1. ಲೋಳೆಸರ (Aloe Vera)

1. ಲೋಳೆಸರ (Aloe Vera)

ಲೋಳೆಸರ ಸೌಂದರ್ಯ ಪ್ರಸಾದನದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಸಾಮಾಗ್ರಿಯಾಗಿದೆ. ಇದು ಅತ್ಯುತ್ತಮ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ದೇಹದ ಹೊರಗಿನಿಂದಲೂ ಒಳಗಿನಿಂದಲೂ ಉತ್ತಮ ಆರೈಕೆ ನೀಡುತ್ತದೆ. ವಿಶೇಷವಾಗಿ ತ್ವಚೆಯ ಕಲೆಗಳನ್ನು ಮತ್ತು ಗುರುತುಗಳನ್ನು ನಿವಾರಿಸುವಲ್ಲಿ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

1 ಲೋಳೆಸರದ ಕೋಡು

ತೇವಕಾರಕ (Moisturizer-ಐಚ್ಛಿಕ)

ಅನುಸರಿಸಬೇಕಾದ ಕ್ರಮ

ಲೋಳೆಸರದ ಈಗತಾನೇ ಕೊಯ್ದ ಕೋಡನ್ನು ತೆರೆದು ತಿರುಳನ್ನು ಸಂಗ್ರಹಿಸಿ.

ಈ ತಿರುಳನ್ನು ನೇರವಾಗಿ ಕಲೆ ಇರುವ ಭಾಗದ ಮೇಲೆ ಹಚ್ಚಿಕೊಳ್ಳಿ.

ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ ಬಳಿಕ ತೊಳೆದುಕೊಳ್ಳಿ.

ಮಲಗುವ ಮುನ್ನ ಹಚ್ಚಿ ಇಡಿಯ ರಾತ್ರಿ ಬಿಡುವಂತಾದರೆ ಇನ್ನೂ ಒಳ್ಳೆಯದು.

ಅಗತ್ಯವೆನಿಸಿದರೆ ಇದನ್ನು ತೊಳೆದ ಬಳಿಕ ನಿಮ್ಮ ಆಯ್ಕೆಯ ತೇವಕಾರಕ ಹಚ್ಚಿ.

ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ಹಚ್ಚಿಕೊಳ್ಳಿ.

2. ಆಲೂಗಡ್ಡೆ

2. ಆಲೂಗಡ್ಡೆ

ಆಲೂಗಡ್ಡೆಯ ರಸ ಅತ್ಯುತ್ತಮ ಬಿಳಿಚುಕಾರಕವಾಗಿದೆ. ಒಂದು ವೇಳೆ ಕನ್ನಡಕ ಇರಿಸಿದ ಭಾಗ ಕಪ್ಪಗಾಗಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ, ಮುಖದಲ್ಲಿರುವ ಇತರ ಭಾಗದ ಕಲೆಗಳನ್ನೂ ಇದು ಹೋಗಲಾಡಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

1 ಹಸಿ ಆಲೂಗಡ್ಡೆ

ಅನುಸರಿಸಬೇಕಾದ ಕ್ರಮ

ಆಲೂಗಡ್ಡೆಯನ್ನು ಸಿಪ್ಪಸಹಿತ ಚಿಕ್ಕದಾಗಿ ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ನೇರವಾಗಿ ಕಲೆಗಳ ಮೇಲೆ ಹಚ್ಚಿಕೊಳ್ಳಿ.

ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ದಿನಕ್ಕೆ ಒಂದರಿಂದ ಎರಡು ಬಾರಿ ಅನುಸರಿಸಬಹುದು.

3. ಸೌತೆಕಾಯಿ

3. ಸೌತೆಕಾಯಿ

ಉರಿಯೂತಕ್ಕೆ ಒಳಗಾಗಿರುವ ಚರ್ಮಕ್ಕೆ ಶಮನ ನೀಡುವಲ್ಲಿ ಸೌತೆಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ, ಒಂದು ವೇಳೆ ಕನ್ನಡಕ ಇರಿಸಿದ್ದ ಭಾಗದಲ್ಲಿ ಉರಿ ಎನಿಸಿದರೆ ಸೌತೆಕಾಯಿ ಉತ್ತಮ ಅಯ್ಕೆಯಾಗಿದೆ. ಇದು ಚರ್ಮದ ನೆರಿಗೆಗಳನ್ನು ಇಲ್ಲವಾಗಿಸುವುದು ಹಾಗೂ ಬಿಸಿಲಿಗೆ ಕಪ್ಪಗಾಗಿದ್ದ ಭಾಗವನ್ನೂ ತಿಳಿಗೊಳಿಸಿ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ತಾಜಾ ಎಳೆ ಸೌತೆಕಾಯಿಯ 2 ಬಿಲ್ಲೆಗಳು

ಅನುಸರಿಸಬೇಕಾದ ಕ್ರಮ

ಈ ಬಿಲ್ಲೆಗಳನ್ನು ನೇರವಾಗಿ ಕಲೆ ಇರುವ ಭಾಗದ ಮೇಲೆ ಇರಿಸಿ ಹೆಚ್ಚಿನ ಒತ್ತಡವಿಲ್ಲದೇ ನಯವಾಗಿ ವೃತ್ತಾಕರದಲ್ಲಿ ಉಜ್ಜಿಕೊಳ್ಳಿ.

ಕೆಲವು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ. ಈ ಕಲೆಗಳು ಮಾಯವಾಗುತ್ತಾ ಬಂದಂತೆ ದಿನಕ್ಕೊಂದು ಬಾರಿ ಅನುಸರಿಸಿದರೆ ಸಾಕು. ಈ ಕಲೆಯ ಜೊತೆಗೇ ಕಣ್ಣಿಗೂ ಕೊಂಚ ಮಸಾಜ್ ಮಾಡಿಕೊಳ್ಳುವ ಮೂಲಕ ಕಣ್ಣಿಗೂ ಆರಾಮ ದೊರಕುತ್ತದೆ.

4. ಲಿಂಬೆರಸ

4. ಲಿಂಬೆರಸ

ಲಿಂಬೆರಸದಲ್ಲಿರುವ ವಿಟಮಿನ್ ಸಿ ಉತ್ತಮ ಚರ್ಮದ ಬಣ್ಣ ಬಿಳಿಚುಕಾರಕವಾಗಿದೆ. ಇದು ಗಾಢವಾಗಿದ್ದ ಕಲೆಗಳನ್ನು ತಿಳಿಗೊಳಿಸುತ್ತದೆ. ಒಂದು ವೇಳೆ ಕನ್ನಡಕ ಕುಳಿತ ಭಾಗದ ಸಹಿತ ಸುತ್ತಮುತ್ತಲ ಚರ್ಮವೂ ಕಲೆಗಳಿಂದ ಕೂಡಿದ್ದರೆ ಈ ವಿಧಾನ ಸೂಕ್ತ ಆಯ್ಕೆಯಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

ಒಂದು ಚಿಕ್ಕ ಬೋಗುಣಿ

ಒಂದು ಚಿಕ್ಕ ಲಿಂಬೆ

ಒಂದು ಹತ್ತಿಯುಂಡೆ

ಅನುಸರಿಸಬೇಕಾದ ಕ್ರಮ

ಬೋಗುಣಿಯಲ್ಲಿ ಲಿಂಬೆರಸವನ್ನು ಸಂಗ್ರಹಿಸಿ.

ಹತ್ತಿಯುಂಡೆಯನ್ನು ಈ ರಸದಲ್ಲಿ ಮುಳುಗಿಸಿ ಈಗತಾನೇ ತೊಳೆದು ಒರೆಸಿಕೊಂಡ ಮುಖದಲ್ಲಿ ಕಲೆಗಳಿರುವಲ್ಲೆಲ್ಲಾ ಒತ್ತಿ ಹಚ್ಚಿಕೊಳ್ಳಿ.

ಕಡೆಯದಾಗಿ ಈ ಹತ್ತಿಯುಂಡೆಯನ್ನು ಎರಡು ಭಾಗವಾಗಿಸಿ ಕನ್ನಡಕದ ಕಲೆ ಇದ್ದಲ್ಲಿ ಇರಿಸಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಇದನ್ನು ದಿನಕ್ಕೊಂದು ಬಾರಿ ಅನುಸರಿಸಿದರೆ ಸಾಕು. ರಾತ್ರಿ ಮಲಗುವ ಮುನ್ನ ನಿರ್ವಹಿಸಿದರೆ ಅತ್ಯುತ್ತಮ. ಸಾಧ್ಯವಾಗದಿದ್ದಲ್ಲಿ ನಿಮ್ಮ ನಿತ್ಯದ ಸ್ನಾನಕ್ಕೂ ಮುಂಚಿನ ಸಮಯದಲ್ಲಿ ಅನುಸರಿಸಿ.

5. ಗುಲಾಬಿ ನೀರು

5. ಗುಲಾಬಿ ನೀರು

ನಿತ್ಯದ ಚರ್ಮದ ಆರೈಕೆಯಲ್ಲಿ ಗುಲಾಬಿ ನೀರಿನ ಬಳಕೆ ವಿಶ್ವದಾದ್ಯಂತ ಪ್ರಚಲಿತವಾಗಿದೆ. ವಿಶೇಷವಾಗಿ ಮುಖದ ಚರ್ಮದ ಆರೈಕೆಯಲ್ಲಿ ಗುಲಾಬಿ ನೀರು ಹೆಚ್ಚಿನ ಮಹತ್ವ ಪಡೆದಿದೆ. ಇದು ತಕ್ಷಣವೇ ಚರ್ಮದ ಬಣ್ಣವನ್ನು ತಿಳಿಗೊಳಿಸುವ ಗುಣ ಹೊಂದಿದ್ದು ಮುಖ್ಯ ಕಾರ್ಯಕ್ರಮದಲ್ಲಿ ಭಾಗವನಿಸುವ ಮುನ್ನ ಮುಖದ ತ್ವಚೆಯ ಕಾಂತಿ ಹೆಚ್ಚಿಸಲು ಬಳಸಲಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ಕೊಂಚ ಗುಲಾಬಿ ನೀರು

ಒಂದು ಹತ್ತಿಯುಂಡೆ

ಅನುಸರಿಸಬೇಕಾದ ಕ್ರಮ

ಹತ್ತಿಯುಂಡೆಯನ್ನು ಗುಲಾಬಿ ನೀರಿನಲ್ಲಿ ಮುಳುಗಿಸಿ ನೀರನ್ನು ಕಲೆ ಇರುವ ಭಾಗದ ಮೇಲೆ ಹಚ್ಚಿಕೊಳ್ಳಿ.

ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ, ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಹಚ್ಚಿಕೊಳ್ಳಬಹುದು. ಬೆಳಗ್ಗಿನ ಸಮಯದಲ್ಲಿ ಸ್ನಾನದ ಬಳಿಕ ಹತ್ತರಿಂದ ಹದಿನೈದು ನಿಮಿಷ ಇರಿಸಿದರೆ ಸಾಕು. ಉಳಿದಂತೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆ ತೊಳೆದುಕೊಳ್ಳಿ.

6. ಜೇನು

6. ಜೇನು

ಸೌಂದರ್ಯವರ್ಧಕವಾಗಿ ಹಾಗೂ ಬಿಳಿಚುಕಾರಕವಾಗಿ ಜೇನನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇದು ಗಾಯಗಳನ್ನು ಮಾಗಿಸುವುದು, ತೇವ ಒದಗಿಸುವುದು, ಅಂಗಾಂಶಗಳ ಬೆಳವಣಿಗೆಗೆ ನೆರವಾಗುವುದು ಮೊದಲಾದವುಗಳ ಮೂಲಕ ತ್ವಚೆ ನೈಸರ್ಗಿಕ ಕಾಂತಿಯನ್ನು ಪಡೆಯಲು ನೆರವಾಗುತ್ತದೆ. ಹಾಗಾಗಿ, ಕನ್ನಡಕದ ಭಾರದಿಂದಾಗಿ ಆಳವಾದ ಕುಳಿ ಬಿದ್ದಿದ್ದರೆ ಜೇನಿನ ಆಯ್ಕೆ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

1 ಚಿಕ್ಕ ಚಮಚ ಜೇನು.

1 ಚಿಕ್ಕ ಚಮಚ ಹಾಲು

ಅನುಸರಿಸಬೇಕಾದ ಕ್ರಮ

ಚಿಕ್ಕ ಬೋಗುಣಿಯಲ್ಲಿ ಇವೆರಡನ್ನೂ ಬೆರೆಸಿ.

ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಎರಡು ಭಾಗಗಳಾಗಿಸಿ.

ಈ ಎರಡು ಭಾಗಗಳನ್ನು ಮೂಗಿನ ಎರಡೂ ಕಡೆ ಕಲೆ ಇರುವ ಭಾಗದ ಮೇಲಿರಿಸಿ ಹದಿನೈದು ನಿಮಿಷ ಹಾಗೇ ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಲೆಗಳು ತಿಳಿಯಾಗುವವರೆಗೂ ದಿನಕ್ಕೆರಡು ಬಾರಿ ಅನುಸರಿಸಿ. ಬಳಿಕ ದಿನಕ್ಕೊಂದು ಬಾರಿ ನಿರ್ವಹಿಸಿದರೆ ಸಾಕು.

7. ಕಿತ್ತಳೆಯ ಸಿಪ್ಪೆ

7. ಕಿತ್ತಳೆಯ ಸಿಪ್ಪೆ

ಕಿತ್ತಳೆಯ ಸಿಪ್ಪೆಯೂ ಹಲವಾರು ಪೋಷಕಾಂಶಗಳ ಆಗರವಾಗಿದ್ದು ಹಲವಾರು ಸೌಂದರ್ಯ ಪ್ರಸಾದನಗಳಲ್ಲಿ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ಮುಖಲೇಪ, ಬಿಳಿಚುಕಾರಕ ಮೊದಲಾದವುಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಅಲ್ಲದೇ ಇದರ ಬಿಳಿಚುಕಾರಕ ಗುಣ ಕನ್ನಡಕದ ಕಲೆಯನ್ನು ನಿವಾರಿಸಲೂ ಯೋಗ್ಯವಾಗಿದೆ. ಒಂದು ವೇಳೆ ಗುಳಿ ಬೀಳದೇ ಕೇವಲ ಚರ್ಮ ಅತಿ ಎನಿಸುವಷ್ಟು ಕಪ್ಪಗಾಗಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

2 ಕಿತ್ತಳೆಗಳ ಸಿಪ್ಪೆ, ಚೆನ್ನಾಗಿ ಒಣಗಿಸಿ ಕುಟ್ಟಿ ಮಾಡಿದ ಪುಡಿ

1 ದೊಡ್ಡ ಚಮಚ ಹಾಲು

ಅನುಸರಿಸಬೇಕಾದ ಕ್ರಮ

ಈ ಪುಡಿಯನ್ನು ಒಣದಾಗಿರುವಂತೆಯೇ ನುಣ್ಣಗೆ ಅರೆದು ನಯವಾಗಿಸಿ.

ಅಗತ್ಯ ಪ್ರಮಾಣದ ಹಾಲು ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳುವಷ್ಟು ಗಾಢವಾದ ಲೇಪವಾಗಿಸಿ.

ಕಲೆಯ ಭಾಗಕ್ಕೆ ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಲೆಗಳು ಮಾಯವಾಗುವವರೆಗೂ ದಿನಕ್ಕೊಂದು ಬಾರಿ ಅನುಸರಿಸಿದರೆ ಸಾಕು.

8. ಟೊಮಾಟೋ

8. ಟೊಮಾಟೋ

ಟೊಮಾಟೋ ತ್ವಚೆಗೆ ಒಳಗಿನಿಂದಲೂ ಹೊರಗಿನಿಂದಲೂ ಉತ್ತಮ ಆರೈಕೆ ನೀಡುತ್ತದೆ. ಇದರಲ್ಲಿರುವ ಆಮ್ಲಗಳು ಚರ್ಮದ ಅಗತ್ಯಕ್ಕೆ ತಕ್ಕಷ್ಟೇ ಪ್ರಬಲವಾಗಿರುವ ಕಾರಣ ಚರ್ಮದ ಹೊರಭಾಗದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ಸೌಮ್ಯ ಮತ್ತು ಕಾಂತಿಯುಕ್ತವಾಗಿಸಲು ನೆರವಾಗುತ್ತದೆ. ಒಂದು ವೇಳೆ ಕನ್ನಡಕ ಇರಿಸಿದ್ದ ಭಾಗದ ಚರ್ಮ ವರ್ಷಗಳಿಂದ ಕಪ್ಪಗಾಗಿ ಉಬ್ಬಿದಂತಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

ತಾಜಾ ಟೊಮಾಟೋವೊಂದರ 2 ಅಡ್ಡಲಾಗಿ ಕತ್ತರಿಸಿದ ಬಿಲ್ಲೆಗಳು

ಅನುಸರಿಸಬೇಕಾದ ಕ್ರಮ

ಈ ಬಿಲ್ಲೆಗಳನ್ನು ಕಪ್ಪಗಾಗಿದ್ದ ಭಾಗದ ಮೇಲೆ ಸುಮಾರು ಒಂದು ನಿಮಿಷದ ಕಾಲ ನಯವಾಗಿ ಉಜ್ಜಿಕೊಳ್ಳಬೇಕು.

ಬಳಿಕ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ನಿತ್ಯವೂ ಒಂದು ಬಾರಿಯಂತೆ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಅನುಸರಿಸಿ.

9. ಬಾದಾಮಿ ಎಣ್ಣೆಯ ಮಸಾಜ್

9. ಬಾದಾಮಿ ಎಣ್ಣೆಯ ಮಸಾಜ್

ಒಂದು ವೇಳೆ ಮೊಡವೆ ಒಡೆದು ಚರ್ಮ ಸೀಳಿದ್ದರೆ ಇದನ್ನು ಸರಿಪಡಿಸುವಲ್ಲಿ ಬಾದಾಮಿ ಎಣ್ಣೆ ಅತ್ಯುತ್ತಮ ಆರೈಕೆ ನೀಡುತ್ತದೆ. ಅಲ್ಲದೇ ಚರ್ಮದ ಕಲೆಗಳನ್ನು ಹೋಗಲಾಡಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಕಣ್ಣುಗಳ ಕೆಳಭಾಗದಲ್ಲಿ ಕಪ್ಪಗಾಗಿದ್ದು ನೆರಿಗೆಗಳು ಮೂಡಿದಂತಿದ್ದರೆ ಈ ವಿಧಾನ ಸೂಕ್ತ ಆಯ್ಕೆಯಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

ಬಾದಾಮಿ ಎಣ್ಣೆಯ ಕೆಲವು ತೊಟ್ಟುಗಳು.

ಅನುಸರಿಸಬೇಕಾದ ಕ್ರಮ

ಈಗ ತಾನೇ ತೊಳೆದು ಒರೆಸಿಕೊಂಡ ತ್ವಚೆಯ ಭಾಗದಲ್ಲಿ ಕೆಲವು ತೊಟ್ಟು ಬಾದಾಮಿ ಎಣ್ಣೆಯನ್ನು ಹಾಕಿ ಹೆಚ್ಚಿನ ಒತ್ತಡವಿಲ್ಲದೇ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.

ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಎರಡು ವಾರದ ಅವಧಿಯಲ್ಲಿ ನಿತ್ಯವೂ ಅನುಸರಿಸಿ.

10. ಸೇಬಿನ ಶಿರ್ಕಾ (Apple Cider Vinegar)

10. ಸೇಬಿನ ಶಿರ್ಕಾ (Apple Cider Vinegar)

ಇದೊಂದು ನೈಸರ್ಗಿಕ ಕ್ಷಾರೀಯ ದ್ರವವಾಗಿದ್ದು ತ್ವಚೆಯಲ್ಲಿರುವ ಕಲ್ಮಶಗಳನ್ನು ನಿವಾರಿಸುವಲ್ಲಿ ಹೆಚ್ಚಿನ ನೆರವು ನೀಡುತ್ತದೆ. ಇದೇ ಗುಣ ಕಲೆಗಳು, ಗಾಯದ ಗುರುತುಗಳು ಹಾಗೂ ಬಿಸಿಲಿಗೆ ಕಪ್ಪಗಾಗಿದ್ದ ಭಾಗಗಳನ್ನು ಸಹಜವರ್ಣ ಪಡೆಯಲು ನೆರವಾಗುತ್ತದೆ. ಬಿಸಿಲಿಗೆ ಸತತವಾಗಿ ಒಡ್ಡಿದ್ದ ಭಾಗ ಕನ್ನಡಕ ಇರುವಲ್ಲಿ ಬಿಳಿಚಿದ್ದು ಉಳಿದ ಸುತ್ತಲ ಭಾಗ ಕಪ್ಪಗಾಗಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

1 ಚಿಕ್ಕ ಚಮಚ ಸೇಬಿನ ಶಿರ್ಕಾ

ಒಂದು ಕಪ್ ನೀರು

ಒಂದು ಹತ್ತಿಯುಂಡೆ.

ಅನುಸರಿಸಬೇಕಾದ ಕ್ರಮ

ಶಿರ್ಕಾವನ್ನು ನೀರಿಗೆ ಬೆರೆಸಿ ಈ ನೀರಿನಲ್ಲಿ ಹತ್ತಿಯುಂಡೆಯನ್ನು ಅದ್ದಿ ಮೂಗಿನ ಸಹಿತ ಕಪ್ಪಗಾಗಿದ್ದ ಭಾಗದಲ್ಲೆಲ್ಲಾ ಹಚ್ಚಿಕೊಳ್ಳಿ.

ಸುಮಾರು ಹತ್ತರಿದ ಹದಿನೈದು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಲೆಗಳು ಪೂರ್ಣವಾಗಿ ಮಾಯವಾಗುವವರೆಗೂ ನಿತ್ಯವೂ ರಾತ್ರಿ ಮಲಗುವ ಮುನ್ನ ಅನುಸರಿಸಿ.

ಒಂದು ವೇಳೆ ಮೇಲಿನ ವಿಧಾನಗಳಲ್ಲಿ ನಿಮಗೆ ಸೂಕ್ತವಾದ ಒಂದಕ್ಕಿಂತ ಹೆಚ್ಚು ವಿಧಾನಗಳಿದ್ದರೆ ಇವುಗಳ ಸಂಯೋಜನೆಯನ್ನೂ ನೀವು ಪ್ರಯತ್ನಿಸಬಹುದು.

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

ಕಲೆಗಳನ್ನು ನಿವಾರಿಸಿದ ಬಳಿಕ ಕೆಲವು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಹಾಗೂ ಈ ಮೂಲಕ ಮತ್ತೆ ಕಲೆಗಳು ಮರುಕಳಿಸುವುದನ್ನು ತಡೆಯಬಹುದು.

1. ಕನ್ನಡಕ ನಿಮ್ಮ ಮೂಗಿನ ಮೇಲೆ ಕಲೆ ಉಳಿಸಂತೆ ಮಾಡಬೇಕಾದರೆ ಯಾವ ಕ್ರಮಗಳನ್ನು ಅನುಸರಿಸಬೇಕು?

ನಿಮ್ಮ ಕನ್ನಡಕ ಆದಷ್ಟೂ ನಿಮ್ಮ ಮೂಗಿನ ರಚನೆಗೆ ಸೂಕ್ತವಾಗಿರಬೇಕು, ಎಂದರೆ ಇದರ ಮೂಗಿನ ಮೇಲೆ ಬರಬೇಕಾದ ಭಾಗ ಸೂಕ್ತವಾದ ಕೋನ ಹೊಂದಿದ್ದು ಚರ್ಮದ ಮೇಲೆ ಆವರಿಸಿ ಕುಳಿತುಕೊಳ್ಳುವಂತಿರಬೇಕು. ನಿತ್ಯವೂ ನಿಮ್ಮ ಕನ್ನಡಕವನ್ನು ತೊಳೆದು ಸ್ವಚ್ಛಗೊಳಿಸಿ ಕೊಳೆ, ಮೇಕಪ್ ಅಥವಾ ಇತರ ಕಣಗಳಿಲ್ಲದಂತೆ ಇರಿಸಬೇಕು.

2. ನಿತ್ಯವೂ ಮುಖದ ತ್ವಚೆಗೆ ತೇವಕಾರಕ (ಮಾಯಿಶ್ಚರೈಸರ್) ಅಥವ ಟೋನರ್ ದ್ರವವನ್ನು ಹಚ್ಚಿಕೊಂಡು ಚರ್ಮ ಒಣಗುವುದನ್ನು ತಪ್ಪಿಸಬೇಕು. ಒಣಚರ್ಮದಲ್ಲಿ ಶೀಘ್ರವೇ ಕೆಂಪಗಾಗುವುದು ಮತ್ತು ಉರಿ ಕಾಣಿಸಿಕೊಳ್ಳುತ್ತದೆ.

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

3. ಕನ್ನಡಕಗಳನ್ನು ನುರಿತ ಕನ್ನಡಕದ ಅಂಗಡಿಗಳಲ್ಲಿ, ತಜ್ಞ ದೃಷ್ಟಿಮಾಪನಕಾರ (optometrist) ರಿಂದಲೇ ನಿಮ್ಮ ಕನ್ನಡಕದ ಅಳತೆಯನ್ನು ಪಡೆದುಕೊಂಡು ಸೂಕ್ತ ಕನ್ನಡಕವನ್ನು ಮಾಡಿಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಮೂಗಿನ ಮೇಲೆ ಕುಳಿತುಕೊಳ್ಳುವ ಭಾಗ ಆದಷ್ಟೂ ಮೃದುವಾಗಿರುವಂತೆ ನೋಡಿಕೊಳ್ಳಬೇಕು.

4. ಕನ್ನಡಕ ಆದಷ್ಟೂ ಹಗುರವಾಗಿರಬೇಕು. ನಿಮ್ಮ ಮೂಗಿನ ಮೇಲೆ ಕಲೆ ಉಳಿಸದಂತೆ ಇರುವ ಕನ್ನಡಕವನ್ನೇ ತೋರಿಸುವಂತೆ ದೃಷ್ಟಿಮಾಪನಕಾರಲ್ಲಿ ವಿನಂತಿಸಿಕೊಳ್ಳಬೇಕು.

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

ಮತ್ತೆ ಕಲೆ ಮರುಕಳಿಸದಿರಲು ಟಿಪ್ಸ್

5. ಬೆವರುವ ಸಂದರ್ಭದಲ್ಲಿ, ಆಗಾಗ ಕನ್ನಡಕ ನಿವಾರಿಸಿ ಸ್ವಚ್ಛಗೊಳಿಸುತ್ತಿರಬೇಕು. ಹೀಗೆ ಮಾಡದೇ ಇದ್ದರೆ, ಈ ಭಾಗದಲ್ಲಿ ಹೆಚ್ಚಿನ ಬೆವರು ಸಂಗ್ರಹಗೊಂಡು ಕೆಂಪು ಅಥವಾ ಕಪ್ಪು ಕಲೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ಮೂಡುವ ಸಾಧ್ಯತೆ ಇದೆ.

6. ದಿನದ ಅವಧಿಯಲ್ಲಿ ಆಗಾಗ, ಕೊಂಚ ಹೊತ್ತಿನವರೆಗೆ ಕನ್ನಡಕವನ್ನು ತೆಗೆದಿರಿಸಬೇಕು. ಇದರಿಂದ ಚರ್ಮದ ಸೂಕ್ಷ್ಮರಂಧ್ರಗಳಿಗೆ ಉಸಿರಾಡಲು ಅವಕಾಶ ಸಿಕ್ಕಂತಾಗುತ್ತದೆ.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದ್ದೇ ಆದರೆ ನಿಮ್ಮ ಕನ್ನಡಕ ನಿಮ್ಮ ಸೌಂದರ್ಯವನ್ನು ಕುಂದಿಸುವ ಸಾಧ್ಯತೆ ತೀರಾ ಕಡಿಮೆಯಾಗುತ್ತದೆ.

English summary

Natural Ways To Get Rid Of Spectacle Marks On Your Nose

Do you prefer glasses over contact lenses? Glasses not only make a fashion statement but also protect your eyes and improve your vision.But, the downside is, you may develop marks on the nose and under the eyes eventually if you use glasses continuously. You wonder if you are going to be stuck with these marks for life and if they are going to make your eyes look sunken.
X
Desktop Bottom Promotion