For Quick Alerts
ALLOW NOTIFICATIONS  
For Daily Alerts

ಹೊಳೆಯುವ ತ್ವಚೆ ನಿಮ್ಮದಾಗಲು ನಿತ್ಯ ಬೆಳಗ್ಗೆ ಈ ಅಭ್ಯಾಸ ರೂಢಿಸಿಕೊಳ್ಳಿ

|

ಪ್ರತಿಯೊಬ್ಬರೂ ಕೂಡ ಆರೋಗ್ಯವಾಗಿರುವ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಹುಡುಗರೇ ಆಗಿರಲಿ, ಹುಡುಗಿಯರೇ ಆಗಿರಲಿ ಪ್ರತಿಯೊಬ್ಬರಿಗೂ ತಮ್ಮ ಚರ್ಮ ಸುಂದರವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದೇ ಕಾರಣಕ್ಕಾಗಿ ಪಾರ್ಲರ್ ಗೆ ಹೋಗೋದು, ಬೇರೆಬೇರೆ ರೀತಿಯ ಚಿಕಿತ್ಸೆಗಳನ್ನು ಮಾಡೋದು, ಅಷ್ಟೇ ಯಾಕೆ ದುಬಾರಿಯಾಗಿರುವ ಬ್ಯೂಟಿ ಪ್ರೊಡಕ್ಟ್ ಗಳನ್ನು ಬಳಸುವುದು ಸೇರಿದಂತೆ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಮೇಕಪ್ ಗಾಗಿ ಎಷ್ಟೋ ಹಣ ವ್ಯಯಿಸುವವರೂ ಇದ್ದಾರೆ. ಎಲ್ಲವೂ ಕೂಡ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕಾಗಿ ಅಷ್ಟೇ.

Morning Skincare Routines to Get Glowing Skin Naturally in Kannada

ಯಾವುದೇ ಪ್ರಯತ್ನ ಮಾಡಿದರೂ ಕೂಡ ಚರ್ಮ ಸ್ವಚ್ಛವಾಗುವುದಿಲ್ಲ, ಹೊಳೆಯುವುದಿಲ್ಲ, ರಾಸಾಯನಿಕಯುಕ್ತ ಪ್ರೊಡಕ್ಟ್ ಗಳೆಲ್ಲವೂ ಕೂಡ ಅಪ್ರಯೋಜನಕಾರಿಯಾಗಿ ಬಿಡುತ್ತದೆ. ಇಂತಹ ಸಂದರ್ಬದಲ್ಲಿ ಸರಿಯಾದ ಚರ್ಮದ ಆರೈಕೆ ಬಹಳ ಮುಖ್ಯ. ಶುಷ್ಕತೆ, ಮೊಡವೆಗಳು ಸೇರಿದಂತೆ ಅನೇಕ ದುಷ್ಪರಿಣಾಮಗಳು ಕೆಮಿಕಲ್ ಗಳಿಂದಾಗಿ ಚರ್ಮದ ಮೇಲೆ ಆಗುವ ಸಾಧ್ಯತೆ ಇರುತ್ತದೆ.

ಸರಿಯಾದ ರೀತಿಯ ಚರ್ಮದ ಕಾಳಜಿಯೂ ನಿಮ್ಮನ್ನು ಸಮಸ್ಯೆಯಿಂದ ದೂರವಿಡಬಲ್ಲದು. ಹಾಗಾದ್ರೆ ಸರಿಯಾದ ಚರ್ಮದ ಕಾಳಜಿ ಯಾವುದು? ಹೇಗೆ ಮಾಡಬೇಕು? ಏನು ಮಾಡಬೇಕು? ಈ ಬಗ್ಗೆ ನಾವಿಲ್ಲಿ ಕೆಲವು ಸರಳ ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ.

ಬೆಳಗ್ಗೆಯೇ ಸರಿಯಾದ ರೀತಿಯಲ್ಲಿ ಚರ್ಮಕ್ಕೆ ಕಾಳಜಿ ಮಾಡುವುದರಿಂದಾಗಿ ನೀವು ನಿಮ್ಮ ಚರ್ಮವನ್ನು ಹೆಚ್ಚು ಸುರಕ್ಷಿತವಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹಾಗಾದ್ರೆ ಯಾವುದು ಸರಿಯಾದ ಕ್ರಮ ತಿಳಿಯೋಣ.

ತಣ್ಣನೆಯ ಫೇಸ್ ವಾಷ್

ತಣ್ಣನೆಯ ಫೇಸ್ ವಾಷ್

ಬೆಳಿಗ್ಗೆ ಎದ್ದ ನಂತರ, ಮುಖವನ್ನು ಮೊದಲು ತಣ್ಣನೆಯ ನೀರಿನಿಂದ ತೊಳೆಯಿರಿ. ಇದರಿಂದಾಗಿ ರಾತ್ರಿಯ ವೇಳೆಯ ಬದಲಾದ ಚರ್ಮವು ಮರುಸ್ಥಾಪಿತವಾಗುತ್ತದೆ. ಸತ್ತ ಚರ್ಮದ ಜೀವಕೋಶಗಳು ಸುಲಭವಾಗಿ ತೆಗೆಯಲು ಇದು ನೆರವಾಗುತ್ತದೆ.

ಕ್ಲೆನ್ಸರ್

ಕ್ಲೆನ್ಸರ್

ರಾತ್ರಿಯ ವೇಳೆ ನೈಟ್ ಕ್ರೀಮ್ ನ್ನು ಹಚ್ಚಿಕೊಂಡು ನಿದ್ರಿಸಿ. ಇದರಿಂದಾಗಿ ಕೊಳೆಯು ಇದರ ಮೇಲ್ಬಾಗದಲ್ಲಿ ಸಂಗ್ರಹವಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಮುಖವನ್ನು ಮೃದುವಾದ ಫೇಸ್ ವಾಷ್ ಬಳಸಿ ತಣ್ಣನೆಯ ನೀರಿನಿಂದ ತೊಳೆಯಿರಿ. ಒಂದು ವೇಳೆ ಚರ್ಮವು ಎಣ್ಣೆ ತ್ವಚೆಯಾಗಿದ್ದರೆ, ಗಾಢ ಫೇಸ್ ವಾಶ್ ಕೂಡ ಸಹಾಯ ಮಾಡುತ್ತದೆ. ಸಹಜ ಚರ್ಮಕ್ಕೆ ಮೃದುವಾದ ಫೇಸ್ ವಾಷ್ ಉತ್ತಮವಾದದ್ದಾಗಿರುತ್ತದೆ.

ಟೋನರ್

ಟೋನರ್

ಹೆಚ್ಚಿನ ಮಹಿಳೆಯರು ತಮ್ಮ ದೈನಂದಿನ ಬಳಕೆಯಲ್ಲಿ ಟೋನರ್ ಬಳಸುವುದಿಲ್ಲ. ಆದರೆ ಉತ್ತಮ ಗುಣಮಟ್ಟದ ಟೋನರ್ ಬಳಸುವುದರಿಂದಾಗಿ ಚರ್ಮದ ರಂದ್ರಗಳು ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಚರ್ಮದ ಪಿಹೆಚ್ ಮಟ್ಟವು ನಿಯಂತ್ರಣದಲ್ಲಿಡಲ್ಪಡುತ್ತದೆ. ಟೋನರ್ ಬಳಸುವುದರಿಂದಾಗಿ ಚರ್ಮದ ಸತ್ತ ಜೀವಕೋಶಗಳು ಚರ್ಮದಿಂದ ಹೊರಹಾಕಲ್ಪಡುತ್ತದೆ ಮತ್ತು ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಸಿರಮ್

ಸಿರಮ್

ಅತ್ಯುತ್ತಮ ಸಿರಮ್ ಚರ್ಮವನ್ನು ಶುದ್ಧವಾಗಿಸುತ್ತದೆ. ವಿಟಮಿನ್ ಸಿ, ಇ ರಿಂದ ಶ್ರೀಮಂತವಾಗಿರುವ ಸಿರಮ್ ಗಳು ಚರ್ಮಕ್ಕೆ ಹೆಚ್ಚು ಲಾಭದಾಯಕವಾಗಿರುತ್ತದೆ. ಇದು ಚರ್ಮವನ್ನು ಗಟ್ಟಿಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತದೆ. ಮಾಯ್ಚರೈಸರ್ ಬಳಕೆಗೂ ಮುನ್ನ ಕೆಲವು ಹನಿಗಳಷ್ಟು ಸಿರಮ್ ನ್ನು ಹಚ್ಚುವುದರಿಂದಾಗಿ ಚರ್ಮದಲ್ಲಿ ಉಂಟಾಗುವ ಸಣ್ಣಸಣ್ಣ ಗೆರೆಗಳನ್ನು ನಿಯಂತ್ರಿಸಬಹುದು. ಪಿಗ್ಮೆಂಟೇಷನ್ ಮತ್ತು ನೆರಿಗೆಗಳನ್ನು ತಡೆಯುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಚರ್ಮವು ಉತ್ತಮ ಟೋನ್ ಗೆ ಒಳಪಡುತ್ತದೆ. ಸಿರಮ್ ನ್ನು ಮಸಾಜ್ ಮಾಡುವುದರಿಂದಾಗಿ ಚರ್ಮಕ್ಕೆ ಹೊಸ ಜೀವನ ಸಿಗುತ್ತದೆ.

English summary

Morning Skincare Routines to Get Glowing Skin Naturally in Kannada

Here we are discussing about Morning Skincare Routines to Get Glowing Skin Naturally in Kannada. let's know what those skincare routines are.Read more.
X
Desktop Bottom Promotion