For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ

|

ಹೆಚ್ಚಿನವರು ಚಳಿಗಾಲವನ್ನು ಇಷ್ಟಪಡುತ್ತಾರೆ, ಏಕೆಂದರೆ ಈ 2-3 ತಿಂಗಳುಗಳು ಸಂಪೂರ್ಣವಾಗಿ ಬೆವರು-ಮುಕ್ತವಾಗಿರಬಹುದೆಂಬ ಕಾರಣಕ್ಕೆ. ಅದರಲ್ಲೂ ಮಹಿಳೆಯರ ಪಾಲಿಗಂತೂ ಇದು ಒಂದು ರೀತಿಯ ವರವಿದ್ದಂತೆ, ಏಕೆಂದರೆ ಬೆವರಿಲ್ಲದೇ, ಮಾಡಿಕೊಂಡ ಮೇಕಪ್ ಹಾಗೆಯೇ ಉಳಿಯುತ್ತದೆ. ಆದರೆ, ಚಳಿಗಾಲದಲ್ಲಿ ಅದೇ ಹಳೆಯ ಮೇಕಪ್ ವಿಧಾನ ಬಳಸುವುದು ಸರಿಯಲ್ಲ. ಈ ಋತುವಿಗಾಗಿ, ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಹೆಚ್ಚಿನವರು ಚಳಿಗಾಲವನ್ನು ಇಷ್ಟಪಡುತ್ತಾರೆ, ಏಕೆಂದರೆ ಈ 2-3 ತಿಂಗಳುಗಳು ಸಂಪೂರ್ಣವಾಗಿ ಬೆವರು-ಮುಕ್ತವಾಗಿರಬಹುದೆಂಬ ಕಾರಣಕ್ಕೆ. ಅದರಲ್ಲೂ ಮಹಿಳೆಯರ ಪಾಲಿಗಂತೂ ಇದು ಒಂದು ರೀತಿಯ ವರವಿದ್ದಂತೆ, ಏಕೆಂದರೆ ಬೆವರಿಲ್ಲದೇ, ಮಾಡಿಕೊಂಡ ಮೇಕಪ್ ಹಾಗೆಯೇ ಉಳಿಯುತ್ತದೆ.
ಆದರೆ, ಚಳಿಗಾಲದಲ್ಲಿ ಅದೇ ಹಳೆಯ ಮೇಕಪ್ ವಿಧಾನ ಬಳಸುವುದು ಸರಿಯಲ್ಲ. ಈ ಋತುವಿಗಾಗಿ, ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದರ ಜೊತೆಗೆ ಚಳಿಗಾಲದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಈ ಕೆಳಗಿನ ತಪ್ಪುಗಳಿಂದಲೂ ದೂರವಿರಬೇಕು.

ಚಳಿಗಾಲದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಮಾಡಬಾರದ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರೈಮರ್ ಬಿಡುವುದು:

ಪ್ರೈಮರ್ ಬಿಡುವುದು:

ಮಾಯಿಶ್ಚರೈಸಿಂಗ್ ನಮ್ಮ ತ್ವಚೆಯ ದಿನಚರಿಯ ಪ್ರಮುಖ ಭಾಗವಾಗಿದ್ದು, ಚಳಿಗಾಲವು ನಿಯಮಿತವಾದ ಆರ್ಧ್ರಕವನ್ನು ಬಯಸುತ್ತದೆ. ಆದರೆ ಮಾಯಿಶ್ಚರೈಸರ್ ಹಚ್ಚಿದ ನಂತರ ಮೇಕಪ್‌ಗೆ ಧುಮುಕಬೇಡಿ. ಪ್ರೈಮರ್ ಬಿಟ್ಟುಬಿಡುವುದರಿಂದ ನಿಮಗೆ ಮೃದುವಾದ ಬೇಸ್ ಸಿಗುವುದಿಲ್ಲ. ಆದ್ದರಿಂದ ಯಾವಾಗಲೂ ಎಲ್ಲಾ ಅಗತ್ಯ ಪದಾರ್ಥಗಳನ್ನು ಒಳಗೊಂಡಿರುವ ಹೈಡ್ರೇಟಿಂಗ್ ಪ್ರೈಮರ್ ಒಂದನ್ನು ಆಯ್ಕೆಮಾಡಿ.

ಸನ್‌ಸ್ಕ್ರೀನ್ ಬಳಸದೇ ಇರುವುದು:

ಸನ್‌ಸ್ಕ್ರೀನ್ ಬಳಸದೇ ಇರುವುದು:

ಚಳಿಗಾಲದಲ್ಲಿ ಸೂರ್ಯನು ಬೆಳಗುವುದಿಲ್ಲವೇ? ಹಾಗಾದರೆ ಸನ್‌ಸ್ಕ್ರೀನ್ ಅನ್ನು ಏಕೆ ಬಿಟ್ಟುಬಿಡಬೇಕು? ನೀವು ಕಡಿಮೆ ಉಷ್ಣತೆಯನ್ನು ಅನುಭವಿಸಿದರೂ ಸಹ ಕಿರಣಗಳು ಕಠಿಣವಾಗಿರುತ್ತವೆ. ಆದ್ದರಿಂದ 30 ಕ್ಕಿಂತ ಹೆಚ್ಚಿನ SPF ಅನ್ನು ಆಯ್ಕೆಮಾಡಿ ಮತ್ತು ಅದನ್ನು ಬಳಸಲು ಮರೆಯಬೇಡಿ.

ಫೌಂಡೇಷನ್ ಹಚ್ಚಲು ಬ್ರಷ್ ಬಳಸುವುದು:

ಫೌಂಡೇಷನ್ ಹಚ್ಚಲು ಬ್ರಷ್ ಬಳಸುವುದು:

ನೀವು ವರ್ಷಪೂರ್ತಿ ಫ್ಲಾಟ್ ಬ್ರಷ್ ಅನ್ನು ಬಳಸುತ್ತಿದ್ದರೆ, ಈ ಋತುವಲ್ಲಿ ಅದನ್ನು ಬದಲಾಯಿಸುವ ಸಮಯ. ಫೌಂಡೇಷನ್ ಮಿಶ್ರಣ ಮಾಡಲು ಒದ್ದೆಯಾದ ಸ್ಪಾಂಜ್ ಅನ್ನು ಬಳಸಲು ಪ್ರಯತ್ನಿಸಿ ಇದರಿಂದ ಅದು ಮೃದುವಾದ ಬೇಸ್ ಅನ್ನು ನೀಡುತ್ತದೆ.

ಹೆಚ್ಚು ಬ್ರಾಂಜರ್ ಹಚ್ಚುವುದು:

ಹೆಚ್ಚು ಬ್ರಾಂಜರ್ ಹಚ್ಚುವುದು:

ಹೌದು, ನಾವೆಲ್ಲರೂ ಆರೋಗ್ಯಕರ ಹೊಳಪನ್ನು ಇಷ್ಟಪಡುತ್ತೇವೆ, ಬೇಸಿಗೆಕಾಲದಲ್ಲಿ ಅದನ್ನು ಸರಳವಾದ ಬ್ರಾಂಜರ್ ಬಳಸಿ ಮಾಡಬಹುದು. ಆದರೆ ಚಳಿಗಾಲದಲ್ಲಿ, ಅದನ್ನು ಹೆಚ್ಚು ಹಚ್ಚುವುದನ್ನು ಬಿಡುವುದು ಒಳ್ಳೆಯದು.

ವಾಟರ್ ಪ್ರೂಫ್ ಮೇಕಪ್ ಬಳಸದೇ ಇರುವುದು:

ವಾಟರ್ ಪ್ರೂಫ್ ಮೇಕಪ್ ಬಳಸದೇ ಇರುವುದು:

ಚಳಿಗಾಲದಲ್ಲಿ ಬೆವರದೇ ಇರುವುದರಿಂದ ಸಾಮಾನ್ಯ ಮೇಕಪ್ ಉತ್ಪನ್ನಗಳನ್ನು ಬಳಸುವುದು ಸರಿ ಎಂದು ಕೆಲವರು ಭಾವಿಸಬಹುದು. ಆದರೆ ಇದು ಸರಿಯಲ್ಲ. ಚಳಿಗೆ ಹಾಕಿಕೊಳ್ಳುವ ಟೋಪಿಗಳು ನಿಮ್ಮ ಮೇಕಪ್ ಹಾಳು ಮಾಡುವ ಸಾಧ್ಯತೆಯಿದೆ. ಆದ್ದರಿಂದ ವಾಟರ್ ಪ್ರೂಫ್ ಮಸ್ಕರಾ ಮತ್ತು ಲೈನರ್ ಹಚ್ಚವುದು ಉತ್ತಮ.

ಹೆಚ್ಚು ಪೌಡರ್ ಬಳಸುವುದು:

ಹೆಚ್ಚು ಪೌಡರ್ ಬಳಸುವುದು:

ಮೇಕಪ್ ಹೊಂದಿಸಲು, ಜನರು ಬಹಳಷ್ಟು ಪೌಡರ್ ಬಳಸುತ್ತಾರೆ ಆದರೆ ಅದು ಹೆಚ್ಚು ಶುಷ್ಕತೆಗೆ ಕಾರಣವಾಗುತ್ತದೆ. ಬದಲಾಗಿ, ನಿಮ್ಮ ಮುಖವು ಎಣ್ಣೆಯುಕ್ತವಾಗಿರುವ ಪ್ರದೇಶಗಳ ಮೇಲೆ ಲಘುವಾಗಿ ಟ್ಯಾಪ್ ಮಾಡಿ.

ಲಿಪ್‌ಬಾಮ್ ಬಳಸದೇ ಇರುವುದು:

ಲಿಪ್‌ಬಾಮ್ ಬಳಸದೇ ಇರುವುದು:

ಈ ಚಳಿಗಾಲದಲ್ಲಿ ಹೆಂಗಸರು ತಮ್ಮ ತುಟಿಗಳ ಮೂಲಕ ಬೋಲ್ಡ್ ಆಗಿ ಕಾಣಲು ಇಷ್ಟಪಡುತ್ತಾರೆ ಆದರೆ ಲಿಪ್ ಬಾಮ್‌ಗಳನ್ನು ತಪ್ಪಿಸುವುದರಿಂದ ಅವರು ಆಕರ್ಷಕವಾಗಿ ಕಾಣುವುದಿಲ್. ಹೈಡ್ರೇಟಿಂಗ್ ಲಿಪ್ ಬಾಮ್ ಅನ್ನು ಬಳಸದಿರುವುದು ಒಡೆದ ಮತ್ತು ಒಣ ತುಟಿಗಳು ಎಂದರ್ಥ. ಅದು ಯಾರಿಗೂ ಬೇಡ. ಆದ್ದರಿಂದ ಉತ್ತಮ ಲಿಪ್‌ ಬಾಮ್ ಬಳಸಿ.

English summary

Mistakes you should avoid While doing Makeup in Winter in Kannada

Here we talking about Mistakes you should avoid while doing makeup in winter in kannada, read on
Story first published: Friday, November 19, 2021, 10:19 [IST]
X
Desktop Bottom Promotion