For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಹೆಚ್ಚಿಸುವ ವಿಟಮಿನ್ ಇ ಸುರಕ್ಷಿತವೇ? ಇದರ ಫೇಸ್‌ಪ್ಯಾಕ್‌ಗಳನ್ನು ತಯಾರಿಸಲು ಇಲ್ಲಿದೆ ಟಿಪ್ಸ್

|

ಚರ್ಮದ ಆರೋಗ್ಯ ಉತ್ತಮವಾಗಿ ಇರಬೇಕು ಎಂದರೆ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್‌ಗಳು ಪೂರಕವಾಗಿ ಇರಬೇಕು. ನಿತ್ಯ ಬಳಸುವ ಸೌಂದರ್ಯ ವರ್ಧಕ ಉತ್ಪನ್ನಗಳು, ಧೂಳು, ಕಳಪೆ ಮಟ್ಟ ಆರೈಕೆ, ಆನುವಂಶಿಕ ತೊಂದರೆ, ಔಷಧಗಳ ಅಡ್ಡ ಪರಿಣಾಮ, ಸೂರ್ಯನ ವಿಕಿರಣ ಸೇರಿದಂತೆ ಇನ್ನಿತರ ಕಾರಣಗಳಿಗೆ ತ್ವಚೆಯು ಬಹುಬೇಗ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚರ್ಮಕ್ಕೆ ರಕ್ಷಣೆ ನೀಡುವ ವಿಟಮಿನ್ ಇ ಎಣ್ಣೆಯ ಆರೈಕೆಗೆ ಮುಂದಾಗುವುದು ಸಾಮಾನ್ಯ.

ಇತ್ತೀಚಿನ ದಿನಗಳಲ್ಲಿ ಚರ್ಮದ ರಕ್ಷಣೆಗಾಗಿ ಅಧಿಕ ಜನರು ವಿಟಮಿನ್ ಇ ಮಾತ್ರೆಯ ಮೊರೆ ಹೋಗುತ್ತಿದ್ದಾರೆ. ಇದು ಆನ್‌ಲೈನ್ ಮಾರುಕಟ್ಟೆಯಲ್ಲಿ ಹಾಗೂ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವುದು. ಬಹುತೇಕ ಜನರು ಈ ಮಾತ್ರೆಯ ಎಣ್ಣೆಯನ್ನು ಮುಖದ ಮೇಲೆ ನೇರವಾಗಿ ಅನ್ವಯಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಅದರ ಸೇವನೆಯ ಮೂಲಕ ಚರ್ಮದ ಆರೈಕೆ ಮಾಡುತ್ತಾರೆ. ಚರ್ಮದ ರಕ್ಷಣೆಗಾಗಿ ಅನುಸರಿಸುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಸುರಕ್ಷಿತ? ಎನ್ನುವುದು ಗಮನಾರ್ಹ ಸಂಗತಿ.

Vitamin E

ವಿಟಮಿನ್ ಇ ಮಾತ್ರೆಯಿಂದ ಚರ್ಮದ ರಕ್ಷಣೆ ಹೇಗೆ ಉಂಟಾಗುವುದು? ಇದನ್ನು ಹಚ್ಚುವ ಕ್ರಮ ಏನು? ಎಷ್ಟು ಬಾರಿ ಇದರ ಆರೈಕೆ ಪಡೆದುಕೊಳ್ಳುವುದು ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಬೇಕು. ಎನ್ನುವಂತಹ ಅನೇಕ ಗೊಂದಲಗಳು ನಮ್ಮಲ್ಲಿ ಇವೆ. ಈ ವಿಷಯಗಳ ಕುರಿತು ಒಂದಿಷ್ಟು ಮಾಹಿತಿಯನ್ನು ನೀವು ಲೇಖನದ ಮುಂದಿನ ಭಾಗದಲ್ಲಿ ಪಡೆದುಕೊಳ್ಳಬಹುದು.

ವಿಟಮಿನ್ ಇ ಮಾತ್ರೆಯಿಂದ ಉಂಟಾಗುವ ಉಪಯೋಗಗಳು

1. ಆಂಟಿಆಕ್ಸಿಡೆಂಟ್ ಗುಣಗಳಿಂದ ಕೂಡಿದೆ

1. ಆಂಟಿಆಕ್ಸಿಡೆಂಟ್ ಗುಣಗಳಿಂದ ಕೂಡಿದೆ

ಸಾಕಷ್ಟು ಚರ್ಮದ ಉತ್ಪನ್ನಗಳು ಟೊಕೊಫೆರಾಲ್ ಎಂಬ ಘಟಕಾಂಶವನ್ನು ಒಳಗೊಂಡಿರುತ್ತದೆ. ಅದೇ ರೀತಿಯಲ್ಲಿ ವಿಟಮಿನ್ ಇ ಮಾತ್ರೆಯು ಆಲ್ಫಾ ಟೊಕೊಫೆರಾಲ್ ಅನ್ನು ಒಳಗೊಂಡಿರುತ್ತದೆ. ಇದು ಚರ್ಮವನ್ನು ಹಾನಿಮಾಡುವ ಸ್ವತಂತ್ರ ರಾಡಿಕಲ್ಸಗಳಿಂದ ರಕ್ಷಣೆ ನೀಡುವುದು. ಹಲವಾರು ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಅಂಶವನ್ನು ಸಮೃದ್ಧವಾಗಿ ಬಳಸಲಾಗುತ್ತದೆ. ಅವು ಚರ್ಮದ ಆರೋಗ್ಯವನ್ನು ಕಾಪಾಡುವುದು.

2. ಮೊಡವೆಗಳ ನಿಯಂತ್ರಣ ಮಾಡುವುದು

2. ಮೊಡವೆಗಳ ನಿಯಂತ್ರಣ ಮಾಡುವುದು

ವಿಟಮಿನ್ ಇ ಮೊಡವೆಯನ್ನು ನಿಯಂತ್ರಿಸುತ್ತದೆ. ಚರ್ಮದ ಮೇಲಾಗುವ ಹಾನಿ ಹಾಗೂ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಚರ್ಮರೋಗಕ್ಕೆ ಸಂಬಂಧಿಸಿದ ಕೆಲವು ಅಧ್ಯನಗಳ ಪ್ರಕಾರ ವಿಟಮಿನ್ ಇ ಮೊಡವೆಗಳ ನಿವಾರಣೆಗೆ ಸಹಾಯ ಮಾಡುವುದು. ಅಲ್ಲದೆ ಮೊಡವೆಯಿಂದ ಚರ್ಮದ ಮೇಲೆ ಉಂಟಾಗುವ ಕಲೆ ಗುರುತುಗಳನ್ನು ನಿವಾರಿಸಿ, ಆರೋಗ್ಯಕರ ತ್ವಚೆಯನ್ನಾಗಿ ಮಾಡುವುದು ಎಂದು ವರದಿ ಮಾಡಿದೆ.

3. ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುವುದು

3. ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುವುದು

ವಿಟಮಿನ್ ಇ ಅಂಶವು ಚರ್ಮದ ಮೇಲೆ ಬೀಳುವ ಯುವಿ ಕಿರಣಗಳಿಂದ ರಕ್ಷಣೆ ನೀಡುವುದಿಲ್ಲ, ಆದರೆ ಯುವಿ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಹೊಂದಿರುವ ಸೌಂದರ್ಯ ವರ್ಧಕ ಉತ್ಪನ್ನಗಳ ಜೊತೆಗೆ ಉತ್ತಮ ಸಂಯೋಜನೆಯನ್ನು ಪಡೆದುಕೊಳ್ಳುವುದು. ಇದರೊಟ್ಟಿಗೆ ತ್ವಚೆಗೆ ಅಗತ್ಯವಾದ ಆರೈಕೆಯನ್ನು ನೀಡುವುದರ ಮೂಲಕ ಉತ್ತಮ ಆರೋಗ್ಯವನ್ನು ಕಲ್ಪಿಸುವುದು. ಅಲ್ಲದೆ ಚರ್ಮದ ಮೇಲೆ ಉಂಟಾಗುವ ಹಾನಿಗಳನ್ನು ಸುಲಭವಾಗಿ ತಡೆಯುವುದು.

4. ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು

4. ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು

ವಿಟಮಿನ್ ಇ ಮಾತ್ರೆಯಲ್ಲಿ ಅಥವಾ ಎಣ್ಣೆಯಲ್ಲಿ ಟೊಕೊಫೆರಾಲ್ ಮತ್ತು ಟೊಕೊಟ್ರಿಯೆನಾಲ್ ಗಳನ್ನು ಹೇರಳವಾಗಿರುತ್ತವೆ. ಅವು ಚರ್ಮದಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಚರ್ಮವು ಇವುಗಳಿಂದಾಗಿ ಉತ್ತಮ ಹೊಳಪು ಹಾಗೂ ಮೃದುತ್ವವನ್ನು ಪಡೆದುಕೊಳ್ಳುವುದು. ವಿಟಮಿನ್ ಇ ಮಾತ್ರೆಯ ಎಣ್ಣೆಯನ್ನು ಅನ್ವಯಿಸಿಕೊಳ್ಳುವುದರಿಂದ ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಚರ್ಮದ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

5. ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತದೆ

5. ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತದೆ

ಹಲವಾರು ಅಧ್ಯಯನಗಳು ವಿಟಮಿನ್ ಇ ಮಾತ್ರೆಗಳು ಚರ್ಮದ ಮೇಲೆ ಉಂಟಾಗುವ ಉರಿಯೂತದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ದೃಢಪಡಿಸಿವೆ. ವಿಟಮಿನ್ ಇ ಚರ್ಮದ ಮೇಲೆ ಇರುವ ನಿರ್ಜೀವ ಕೋಶಗಳನ್ನು ನಿವಾರಿಸಿ, ಚರ್ಮದಲ್ಲಿ ಹೊಸ ಕೋಶಗಳ ಉತ್ಪಾದನೆಗೆ ಪ್ರಚೋದನೆ ನೀಡುವುದು. ಇದರಿಂದಾಗಿ ಚರ್ಮವು ಬಾಹ್ಯ ಪರಿಸರದಿಂದ ಉಂಟಾಗುವ ಹಾನಿಯಿಂದ ರಕ್ಷಣೆ ಪಡೆದುಕೊಳ್ಳುವುದು. ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುವುದು.

ವಿಟಮಿನ್ ಇ ಮಾತ್ರೆ ಅಥವಾ ಎಣ್ಣೆಯನ್ನು ಬಳಸುವುದರಿಂದ ಚರ್ಮಕ್ಕೆ ಸಾಕಷ್ಟು ಧನಾತ್ಮಕ ಪ್ರಯೋಜನಗಳು ಉಂಟಾಗುತ್ತವೆ. ಅಂತೆಯೇ ವಿಟಮಿನ್ ಇ ಬಳಕೆಯಿಂದ ಕೆಲವು ಅಪಾಯಕಾರಿ ತೊಂದರೆಗಳು ಉಂಟಾಗುವುದು ಎಂದು ಸಹ ಹೇಳಲಾಗುವುದು.

ವಿಟಮಿನ್ ಇ ಮಾತ್ರೆ ಅಥವಾ ಎಣ್ಣೆಯನ್ನು ನೇರವಾಗಿ ಮುಖಕ್ಕೆ ಹಚ್ಚುವ ಬಗೆ

ವಿಟಮಿನ್ ಇ ಮಾತ್ರೆ ಅಥವಾ ಎಣ್ಣೆಯನ್ನು ನೇರವಾಗಿ ಮುಖಕ್ಕೆ ಹಚ್ಚುವ ಬಗೆ

ವಿಟಮಿನ್ ಇ ಎಣ್ಣೆಯಲ್ಲಿ ಸುಲಭವಾಗಿ ಕರಗುವ ಗುಣವನ್ನು ಹೊಂದಿರುತ್ತದೆ. ಇದು ಚರ್ಮದಲ್ಲಿ ತೇವಾಂಶದ ಗುಣ ಇರುವಂತೆ ಕಾಪಾಡುವುದು. ಚಳಿಗಾಲದಂತಹ ಶುಷ್ಕ ವಾತಾವರಣದಲ್ಲಿ ಇದು ಅದ್ಭುತ ರೀತಿಯ ಪೋಷಣೆ ನೀಡುವುದು. ಶುಷ್ಕ ಚರ್ಮ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ವಿಟಮಿನ್ ಇ ವಿಶೇಷವಾದ ಆರೈಕೆ ನೀಡುವುದು.

ಎಣ್ಣೆಯುಕ್ತ ಅಥವಾ ಜಿಡ್ಡಿನ ತ್ವಚೆಯನ್ನು ಹೊಂದಿರುವವರು ಮತ್ತು ಮೊಡವೆಯಿಂದ ಕೂಡಿರುವವರು ವಿಟಮಿನ್ ಇ ಮಾತ್ರೆ ಅಥವಾ ಎಣ್ಣೆಯನ್ನು ಬಳಸಬಾರದು. ಅವರ ಚರ್ಮದ ಸಮಸ್ಯೆಯನ್ನು ಇದು ದ್ವಿಗುಣ ಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಎಣ್ಣೆಯು ಉರಿಯೂತದ ಗುಣಗಳಿಂದ ಕೂಡಿರುವ ಕೋಶಗಳ ಪುನರುತ್ಪಾದನೆಯ ಕ್ರಿಯೆಯನ್ನು ಹೆಚ್ಚಿಸುವುದು. ಸನ್‍ಸ್ಕ್ರೀನ್, ವಯಸ್ಸು ವಿರೋಧಿ ಸೀರಮ್ ಗಳು ಮತ್ತು ಮಾಯ್ಚಿರೈಸ್ ಗಳು ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ ಉತ್ಪನ್ನಗಳು ವಿಟಮಿನ್ ಇ ಅನ್ನು ಒಳಗೊಂಡಿರುತ್ತದೆ. ಹಾಗಾಗಿ ವಿಟಮಿನ್ ಇ ಎಣ್ಣೆಯನ್ನು ನೇರವಾಗಿ ಮುಖದ ಮೇಲೆ ಅನ್ವಯಿಸಲು ಬಯಸುವವರು ಈ ಉತ್ಪನ್ನಗಳನ್ನು ಬಳಸುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

1. ಚರ್ಮದ ಹೊಳಪಿಗಾಗಿ

1. ಚರ್ಮದ ಹೊಳಪಿಗಾಗಿ

ವಿಟಮಿನ್ ಇ ಎಣ್ಣೆ+ ಮೊಸರು+ ನಿಂಬೆ ರಸ+ ಜೇನುತುಪ್ಪ

ಈ ಮಿಶ್ರಣವು ಸುಕ್ಕು ಉಂಟಾಗದಂತೆ ತಡೆಯುವುದು. ಜೊತೆಗೆ ಚರ್ಮದಲ್ಲಿ ಇರುವ ಕಲ್ಮಶಗಳನ್ನು ತೆಗೆದು ಶುದ್ಧವಾದ ತ್ವಚೆಯನ್ನು ನೀಡುವುದು. ಚರ್ಮವು ಉತ್ತಮ ಸ್ಥಿತಿಸ್ಥಾಪಕತ್ವವನ್ನು ಪಡೆದುಕೊಳ್ಳುತ್ತದೆ. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸಿ, ಚರ್ಮದಲ್ಲಿ ತೇವಾಂಶ ಇರುವಂತೆ ಪೋಷಣೆ ನೀಡುವುದು. ನಿಂಬೆ ರಸವು ನೈಸರ್ಗಿಕವಾಗಿ ಚರ್ಮವು ಉತ್ತಮ ಆರೋಗ್ಯದಿಂದ ಹೊಳೆಯುವಂತೆ ಮಾಡುವುದು.

ವಿಧಾನ:

- 2-3 ವಿಟಮಿನ್ ಇ ಮಾತ್ರೆಯಲ್ಲಿನ ಎಣ್ಣೆಯನ್ನು ಬೇರ್ಪಡಿಸಿಕೊಳ್ಳಿ.

- ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ, ಮೊಸರು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖಕ್ಕೆ ಹಚ್ಚಿರಿ ಒಣಗಲು ಬಿಡಿ.

- ಸಂಪೂರ್ಣವಾಗಿ ಒಣಗಿದ ಬಳಿಕ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ವಾರದಲ್ಲಿ ಎರಡು ಬಾರಿ ಬಳಸಿ.

- ಸೂಕ್ಷ್ಮ ತ್ವಚೆ ಹೊಂದಿದವರಿಗೆ ನಿಂಬೆ ರಸವು ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ ಅಂತಹವರು ಈ ಕ್ರಮವನ್ನು ಅನುಸರಿಸದೆ ಇರುವುದು ಉತ್ತಮ.

2. ಮೊಡವೆ ನಿವಾರಣೆಗೆ ವಿಟಮಿನ್ ಇ ಮಾತ್ರೆ

2. ಮೊಡವೆ ನಿವಾರಣೆಗೆ ವಿಟಮಿನ್ ಇ ಮಾತ್ರೆ

ವಿಟಮಿನ್ ಇ ಆಂಟಿಆಕ್ಸಿಡೆಂಟ್ ಗುಣವನ್ನು ಹೊಂದಿರುತ್ತದೆ. ಅದು ಹಾನಿಗೆ ಒಳಗಾದ ಚರ್ಮದ ಕೋಶಗಳನ್ನು ಸರಿಪಡಿಸಿ, ಕಲೆಗಳನ್ನು ನಿವಾರಿಸುತ್ತದೆ.

ವಿಧಾನ:

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ರಾತ್ರಿ ಮಲಗುವ ಮುನ್ನ ಆ ಎಣ್ಣೆಯನ್ನು ನೇರವಾಗಿ ಮುಖ ಮತ್ತು ಸಮಸ್ಯೆ ಇರುವ ಪೀಡಿತ ಪ್ರದೇಶಗಳ ಮೇಲೆ ಹಚ್ಚಿರಿ.

- ನಂತರ ಮುಂಜಾನೆ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

- ಮೊಡವೆಗಳು ನಿವಾರಣೆ ಹೊಂದುವ ತನಕ ನಿತ್ಯವೂ ಈ ಕ್ರಮವನ್ನು ಅನುಸರಿಸಿ.

3. ಕಪ್ಪು ಕಲೆಗಳ ನಿವಾರಣೆಗೆ ವಿಟಮಿನ್ ಇ ಎಣ್ಣೆ

3. ಕಪ್ಪು ಕಲೆಗಳ ನಿವಾರಣೆಗೆ ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆಯು ಮುಖದ ಮೇಲಿರುವ ಕಪ್ಪು ಕಲೆ, ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ವರ್ತುಲ ಮತ್ತು ಉಬ್ಬುವಿಕೆಯನ್ನು ಸುಲಭವಾಗಿ ನಿವಾರಿಸಲು ಸಹಾಯ ಮಾಡುವುದು.

ವಿಧಾನ

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ಎಣ್ಣೆಯನ್ನು ನೇರವಾಗಿ ಮುಖಕ್ಕೆ ಹಚ್ಚಿರಿ.

- ನಂತರ ನಿಧಾನವಾಗಿ ಸ್ವಲ್ಪ ಸಮಯ ಮಸಾಜ್ ಮಾಡಿ. ರಾತ್ರಿ ಹಾಗೆಯೇ ಮುಖದ ಮೇಲೆ ಆರಲು ಬಿಡಿ.

- ನಂತರ ಮುಂಜಾನೆ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2-3 ಬಾರಿ ಈ ಕ್ರಮವನ್ನು ಅನುಸರಿಸಿ.

4. ಹೊಳೆಯುವ ತ್ವಚೆಗೆ ವಿಟಮಿನ್ ಇ+ ಪಪ್ಪಾಯ+ ಜೇನುತುಪ್ಪದ

4. ಹೊಳೆಯುವ ತ್ವಚೆಗೆ ವಿಟಮಿನ್ ಇ+ ಪಪ್ಪಾಯ+ ಜೇನುತುಪ್ಪದ

ವಿಟಮಿನ್ ಇ, ಪಪ್ಪಾಯ, ಜೇನುತುಪ್ಪ ಮೂರು ಉತ್ಪನ್ನಗಳ ಮಿಶ್ರಣವು ತ್ವಚೆಯ ಮೇಲೆ ಅದ್ಭುತ ಪರಿಣಾಮ ಬೀರುತ್ತವೆ. ತ್ವಚೆಯ ಆರೋಗ್ಯ ಕಾಪಾಡುವುದರ ಜೊತೆಗೆ ನೈಸರ್ಗಿಕ ಹೊಳಪನ್ನು ನೀಡುವುದು.

ವಿಧಾನ:

- 3-4 ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ಅದಕ್ಕೆ ಪಪ್ಪಾಯ ಸಿಪ್ಪೆಯ ಪೇಸ್ಟ್, ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ಮೃದುವಾದ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ.

- ಸ್ವಲ್ಪ ಸಮಯ ಆರಲು ಬಿಡಿ. ನಂತರ ಮೃದು ನೀರಿನಲ್ಲಿ ತೊಳೆಯಿರಿ.

- ಉತ್ತಮ ಫಲಿತಾಂಶವನ್ನು ಪಡೆಯಲು ವಾರದಲ್ಲಿ ಕನಿಷ್ಠ ಮೂರುಬಾರಿ ಈ ಕ್ರಮವನ್ನು ಅನುಸರಿಸಬೇಕು.

5. ಹೈಪರ್ ಪಿಗ್ಮಂಟೇಷನ್: ವಿಟಮಿನ್ ಇ + ಆಲಿವ್ ಎಣ್ಣೆ

5. ಹೈಪರ್ ಪಿಗ್ಮಂಟೇಷನ್: ವಿಟಮಿನ್ ಇ + ಆಲಿವ್ ಎಣ್ಣೆ

ವಿಟಮಿನ್ ಇ ಮತ್ತು ಆಲಿವ್ ಎಣ್ಣೆಯ ಮಿಶ್ರಣವು ಚರ್ಮದ ಕೋಶಗಳ ಆರೋಗ್ಯವನ್ನು ಕಾಪಾಡುವುದು. ಜೊತೆಗೆ ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ. ಕೋಶಗಳು ಪುನರುತ್ಪಾದನೆ ಆಗಲು ಪ್ರೇರೇಪಿಸುವುದು.

ವಿಧಾನ:

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ನಂತರ ಅದರೊಂದಿಗೆ ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

- ಮಿಶ್ರಿತ ಎಣ್ಣೆಯನ್ನು ನೇರವಾಗಿ ಮುಖದ ಮೇಲೆ ಹಚ್ಚಿರಿ.

- ಸ್ವಲ್ಪ ಸಮಯ ನಿಧಾನವಾಗಿ ಮಸಾಜ್ ಮಾಡಿ.

- ಕನಿಷ್ಠ ಒಂದು ಗಂಟೆ ಅಥವಾ ರಾತ್ರಿಯಿಡೀ ಹಾಗೇ ಮುಖದ ಮೇಲೆ ಆರಲು ಬಿಡಿ.

- ಮುಂಜಾನೆ ಶುದ್ಧ ನೀರಿನಿಂದ ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2-3 ಬಾರಿ ಈ ಕ್ರಮವನ್ನು ಅನುಸರಿಸಿ.

6. ಚರ್ಮದ ಶುಷ್ಕತೆ ನಿವಾರಣೆಗೆ: ವಿಟಮಿನ್ ಇ ಎಣ್ಣೆ+ ಹಾಲು+ ಜೇನುತುಪ್ಪ

6. ಚರ್ಮದ ಶುಷ್ಕತೆ ನಿವಾರಣೆಗೆ: ವಿಟಮಿನ್ ಇ ಎಣ್ಣೆ+ ಹಾಲು+ ಜೇನುತುಪ್ಪ

ಹಾಲಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ಹಗುರಗೊಳಿಸುವುದು. ಜೇನುತುಪ್ಪವು ಚರ್ಮದಲ್ಲಿ ತೇವಾಂಶವನ್ನು ಹಿಡಿದಿಡುತ್ತದೆ. ವಿಟಮಿನ್ ಇ ಚರ್ಮದ ಕೋಶಗಳನ್ನು ರಿಪೇರಿ ಮಾಡುವುದು.

ವಿಧಾನ:

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ನಂತರ ಅದರೊಂದಿಗೆ ಹಾಲು ಮತ್ತು ಜೇನುತುಪ್ಪವನ್ನು ಮಿಶ್ರಗೊಳಿಸಿ.

- ಮೃದುವಾದ ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ.

- ಮುಖದ ಮೇಲೆ ಆರಿದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ವಾರದಲ್ಲಿ ಮೂರು ಬಾರಿ ಈ ಮಿಶ್ರಣವನ್ನು ಹಚ್ಚಿರಿ.

7. ಮೃದುವಾದ ಚರ್ಮಕ್ಕೆ: ವಿಟಮಿನ್ ಇ ಎಣ್ಣೆ+ ಗುಲಾಬಿ ನೀರು+ ಗ್ಲಿಸರಿನ್

7. ಮೃದುವಾದ ಚರ್ಮಕ್ಕೆ: ವಿಟಮಿನ್ ಇ ಎಣ್ಣೆ+ ಗುಲಾಬಿ ನೀರು+ ಗ್ಲಿಸರಿನ್

ಇವುಗಳ ಮಿಶ್ರಣವು ಚರ್ಮದಲ್ಲಿ ತೇವಾಂಶವನ್ನು ಹಿಡಿದಿಡುವುದರ ಮೂಲಕ ತ್ವಚೆಯನ್ನು ಮೃದು ಹಾಗೂ ಆಕರ್ಷಕವಾಗಿರುವಂತೆ ಮಾಡುವುದು.

ವಿಧಾನ

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ನಂತರ ವಿಟಮಿನ್ ಇ ಎಣ್ಣೆ, ಸ್ವಲ್ಪ ಗುಲಾಬಿ ನೀರು ಮತ್ತು ಗ್ಲಿಸರಿನ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

- ಮೃದುವಾದ ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ.

- ರಾತ್ರಿಯಿಡೀ ಮುಖದ ಮೇಲೆ ಆರಲು ಬಿಡಿ.

- ಮುಂಜಾನೆ ಮರದುವಾದ ನೀರಿನಲ್ಲಿ ತೊಳೆಯಿರಿ.

- ಉತ್ತಮ ಫಲಿತಾಂಶ ಪಡೆದುಕೊಳ್ಳಲು ವಾರದಲ್ಲಿ 2-3 ಬಾರಿ ಕ್ರಮವನ್ನು ಅನುಸರಿಸಿ.

8. ಬಿರಿದ ತುಟಿಗಳ ಆರೈಕೆಗೆ: ವಿಟಮಿನ್ ಇ ಎಣ್ಣೆ + ಲಿಪ್ ಬಾಮ್

8. ಬಿರಿದ ತುಟಿಗಳ ಆರೈಕೆಗೆ: ವಿಟಮಿನ್ ಇ ಎಣ್ಣೆ + ಲಿಪ್ ಬಾಮ್

ಈ ಎರಡು ಉತ್ಪನ್ನಗಳ ಮಿಶ್ರಣವು ಒಡೆದ ತುಟಿ ಮತ್ತು ಉರಿಯೂತದಿಂದ ಕೂಡಿರುವ ಚರ್ಮಗಳಿಗೆ ಉತ್ತಮ ಆರೈಕೆ ನೀಡುತ್ತವೆ.

ವಿಧಾನ:

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ವಿಟಮಿನ್ ಇ ಎಣ್ಣೆಗೆ ಸ್ವಲ್ಪ ಲಿಪ್ ಬಾಮ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಬಿರಿದ ತುಟಿಗೆ ಮತ್ತು ಪೀಡಿತ ಪ್ರದೇಶಗಳಿಗೆ ಹಚ್ಚಿರಿ.

- ನಿತ್ಯವೂ ಇದನ್ನು ತುಟಿಗೆ ಆಗಾಗ ಅನ್ವಯಿಸುತ್ತಾ ಇದ್ದರೆ ಸಮಸ್ಯೆ ಪರಿಹಾರ ಕಾಣುವುದು.

9. ಅಲರ್ಜಿ ಪೀಡಿತ ತ್ವಚೆಯ ರಕ್ಷಣೆಗೆ: ವಿಟಮಿನ್ ಇ ಎಣ್ಣೆ, ಟೀ ಟ್ರೀ ಎಣ್ಣೆ,ತೆಂಗಿನ ಎಣ್ಣೆ ,ಲ್ಯಾವೆಂಡರ್ ಎಣ್ಣೆ

9. ಅಲರ್ಜಿ ಪೀಡಿತ ತ್ವಚೆಯ ರಕ್ಷಣೆಗೆ: ವಿಟಮಿನ್ ಇ ಎಣ್ಣೆ, ಟೀ ಟ್ರೀ ಎಣ್ಣೆ,ತೆಂಗಿನ ಎಣ್ಣೆ ,ಲ್ಯಾವೆಂಡರ್ ಎಣ್ಣೆ

ಈ ಸಾರಭೂತ ಎಣ್ಣೆಗಳ ಮಿಶ್ರಣವು ಚರ್ಮಕ್ಕೆ ಅದ್ಭುತ ಆರೈಕೆಯನ್ನು ಮಾಡುವುದು. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ತ್ವಚೆಗೆ ಸಂಬಂಧಿಸಿ ಉಂಟಾಗುವ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತವೆ.

ವಿಧಾನ:

- 2 ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ಅದರೊಂದಿಗೆ ಸ್ವಲ್ಪ ಟೀ ಟ್ರೀ ಎಣ್ಣೆ, ತೆಂಗಿನ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ಮಿಶ್ರಣದ ಈ ಎಣ್ಣೆಯನ್ನು ತ್ವಚೆಯ ಮೇಲೆ ಹಾಗೂ ಮುಖಕ್ಕೆ ಹಚ್ಚಿರಿ.

- ಸುಮಾರು 30-60 ನಿಮಿಷಗಳ ಕಾಲ ಆರಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶಕ್ಕೆ ನಿತ್ಯವೂ ಎರಡು ಬಾರಿ ಹಚ್ಚಿರಿ.

11. ಕಪ್ಪು ಕಲೆಗಳ ನಿಯಂತ್ರಣಕ್ಕೆ: ವಿಟಮಿನ್ ಇ ಎಣ್ಣೆ , ಅಲೋವೆರಾ ಮುಖವಾಡ

11. ಕಪ್ಪು ಕಲೆಗಳ ನಿಯಂತ್ರಣಕ್ಕೆ: ವಿಟಮಿನ್ ಇ ಎಣ್ಣೆ , ಅಲೋವೆರಾ ಮುಖವಾಡ

ಅಲೋವೆರಾ ಸೂರ್ಯನ ಕಿರಣ ಹಾಗೂ ಅಲರ್ಜಿಯಿಂದ ಉಂಟಾದ ಕಪ್ಪು ಕಲೆಗಳನ್ನು ಸುಲಭವಾಗಿ ನಿಯಂತ್ರಿಸುವುದು. ಇದರೊಂದಿಗೆ ವಿಟಮಿನ್ ಇ ಸೇರಿಸುವುದರಿಂದ ಅದರ ಶಕ್ತಿಯು ದ್ವಿಗುಣಗೊಳ್ಳುವುದು. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ಬೇರ್ಪಡಿಸಿ.

- ಅದರೊಂದಿಗೆ 1 ಟೇಬಲ್ ಚಮಚ ಅಲೋವೆರಾ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ.

- 15-20 ನಿಮಿಷಗಳ ಕಾಲ ಆರಲು ಬಿಡಿ. ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

- ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಮೂರು ಬಾರಿ ಹಚ್ಚಿರಿ.

ಎಚ್ಚರಿಕೆ

ಎಚ್ಚರಿಕೆ

ಯಾವುದೇ ಉತ್ಪನ್ನಗಳು ಆರೋಗ್ಯಕ್ಕೆ ಹಿತಕರವಾಗಿದ್ದರೂ ಅದು ಕೆಲವೊಮ್ಮೆ ಅಹಿತಕರವಾದ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೀವು ನಿಮ್ಮ ವೈದ್ಯರನ್ನು ಒಮ್ಮೆ ಭೇಟಿಯಾಗಿ ನಿಮ್ಮ ಚರ್ಮ ಹಾಗೂ ಅದರ ಆರೋಗ್ಯದ ಬಗ್ಗೆ ಸೂಕ್ತ ತಪಾಸಣೆ ಮತ್ತು ಮಾಹಿತಿಯನ್ನು ಪಡೆದುಕೊಳ್ಳಿ. ಯಾವ ಕ್ರಮವು ನಿಮ್ಮ ತ್ವಚೆಗೆ ಕಿರಿಕಿರಿಯನ್ನು ಉಂಟುಮಾಡುತ್ತದೆಯೋ ಅದನ್ನು ತಕ್ಷಣವೇ ಚರ್ಮದಿಂದ ತೆಗೆದು ಸ್ವಚ್ಛಗೊಳಿಸಿ. ಬಳಸುವ ಉತ್ಪನ್ನಗಳು ನಿಮ್ಮ ಚರ್ಮಕ್ಕೆ ಒಗ್ಗುವುದೇ ಎನ್ನುವುದನ್ನು ಮೊದಲು ಪರೀಕ್ಷಿಸಿಕೊಳ್ಳುವುದು ಉತ್ತಮ.

English summary

Is It Safe To Use Vitamin E For Face And Face Pack Ideas

Vitamin E is a common ingredient found in skincare products. Vitamin E capsules are readily available online or in drugstores and are used by skincare enthusiasts. A few people pop a few capsules and use the oil on their face or consume it. But the question is, is it the right thing to do?
Story first published: Friday, November 29, 2019, 16:31 [IST]
X
Desktop Bottom Promotion