For Quick Alerts
ALLOW NOTIFICATIONS  
For Daily Alerts

ಪಿಗ್ಮೆಂಟೇಷನ್‌ ಹೋಗಲಾಡಿಸಲು ಮನೆಯಲ್ಲಿಯೇ ಮಾಡಿ ಈ ಚಿಕಿತ್ಸೆ

|

ಮುಖದ ತ್ವಚೆ ಮೇಲೆ ಅದರಲ್ಲೂ ಕೆನ್ನೆ, ಹಣೆ, ಮೂಗು ಮೇಲೆ ಇದ್ದಕ್ಕಿದ್ದಂತೆ ಕಪ್ಪು ಕಲೆ ಬೀಳುತ್ತದೆ. ಈ ಕಲೆ ಏಕೆ ಬಂತು, ಹೇಗೆ ಹೋಗಲಾಡಿಸುವುದು ಒಂದೂ ಗೊತ್ತಾಗುವುದಿಲ್ಲ. ಇದನ್ನು ಪಿಗ್ಮೆಂಟೇಷನ್ ಎಂದು ಕರೆಯುತ್ತಾರೆ.

ದೇಹದಲ್ಲಿ ಮೆಲನಿನ್ ಹೆಚ್ಚಾದಾಗ ಪಿಗ್ಮೆಂಟೇಷನ್ ಉಂಟಾಗುತ್ತದೆ. ಮೆಲನಿನ್ ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ, ಹಾರ್ಮೋನ್‌ ಬದಲಾವಣೆ, ತ್ವಚೆಗೆ ಹಾನಿ ಹೀಗೆ ಅನೇಕ ಕಾರಣಗಳಿಂದ ಉಂಟಾಗುತ್ತದೆ.

ಮಾಮೂಲಿ ಮುಖಕ್ಕೆ ಹಚ್ಚುವ ಕ್ರೀಮ್ ಬಳಸುತ್ತೇವೆ ಹೋಗುವುದಿಲ್ಲ, ಇನ್ನು ಫೇಶಿಯಲ್‌, ಫೇಸ್‌ ಮಾಸ್ಕ್‌ ಹಚ್ಚಿದಾಗ ಕಪ್ಪು ಬಣ್ಣ ಸ್ವಲ್ಪ ಮಾಸಿದಂತೆ ಕಂಡರೂ ಸಂಪೂರ್ಣವಾಗಿ ಹೋಗುವುದಿಲ್ಲ.

ಅಲ್ಲದೆ ಮೇಕಪ್‌ನಿಂದ ಮರೆ ಮಾಚಲು ಪ್ರಯತ್ನಿಸಿದರೂ ಮುಖದ ಕಳೆ ಹೆಚ್ಚುವುದಿಲ್ಲ. ಮುಖ ಮೊದಲಿನ ಚೆಲುವು ಪಡೆಯಬೇಕೆಂದರೆ ಸಂಪೂರ್ಣವಾಗಿ ಕಲೆ ಮಾಯವಾಗಬೇಕು. ಇಲ್ಲಿ ಕೆಲ ಮನೆಮದ್ದು ಹೇಳಿದ್ದೇವೆ. ಕಲೆ ಹೋಗಲು ಸ್ವಲ್ಪ ಸಮಯ ಹಿಡಿದರೂ ಈ ಮನೆಮದ್ದುಗಳು ಪರಿಣಾಮಕಾರಿಯಾಗಿವೆ ನೋಡಿ:]

ಪಿಗ್ಮೆಂಟೇಷನ್‌ಗೆ ಮನೆಯಲ್ಲಿ ಚಿಕಿತ್ಸೆ

ಪಿಗ್ಮೆಂಟೇಷನ್‌ಗೆ ಮನೆಯಲ್ಲಿ ಚಿಕಿತ್ಸೆ

ಪಿಗ್ಮೆಂಟೇಷನ್ ಹೋಗಲಾಡಿಸಲು ಹಲವಾರು ಮನೆಮದ್ದುಗಳು. ಇಲ್ಲಿ ನೀಡಿರುವ ಮದ್ದು ಪರಿಣಾಮಕಾರಿ ಎಂದು ಸಾಬೀತಾಗಿವೆ, ಆ ಮನೆಮದ್ದುಗಳು ಯಾವುವು ಎಂದು ನೋಡೋಣ:

ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡರ್ ವಿನೆಗರ್ ಪಿಗ್ಮಂಟೇಷನ್ ಕಡಿಮೆ ಮಾಡುವುದರಲ್ಲಿ ಪರಿಣಾಮಕಾರಿ ಎಂದು ಸಂಶೋಧನೆಗಳು ಹೇಳಿವೆ.

ಬಳಸುವುದು ಹೇಗೆ?

  • ಒಂದು ಕಪ್‌ನಲ್ಲಿ ಆ್ಯಪಲ್ ಸಿಡರ್‌ ವಿನೆಗರ್ 2 ಚಮಚ ಹಾಕಿದರೆ ಅಷ್ಟೇ ಪ್ರಮಾಣದ ನೀರು ಹಾಕಿ ಮಿಶ್ರ ಮಾಡಿ.
  • ಅದನ್ನು ಕಪ್ಪು ಕಲೆಯ ಮೇಲೆ ಹಚ್ಚಿ 2-3 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು.
  • ಉತ್ತಮ ಫಲಿತಾಂಶಕ್ಕೆ ದಿನದಲ್ಲಿ ಎರಡು ಬಾರಿ ಈ ರೀತಿ ಮಾಡಿ.

     ಲೋಳೆಸರ

    ಲೋಳೆಸರ

    ಲೋಳೆಸರ ತ್ವಚೆಯ ಸಮಸ್ಯೆ ಹೋಗಲಾಡಿಸುವುದು ಮಾತ್ರವಲ್ಲ ತ್ವಚೆಯ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ.

    • ಲೋಳೆಸರ ರಸವನ್ನು ಮಲಗುವ ಮುನ್ನ ಮುಖಕ್ಕೆ ಹಚ್ಚಿ, ಮಾರನೆಯ ದಿನ ಬೆಳಗ್ಗೆ ಮುಖ ತೊಳೆಯಿರಿ.
    • ತ್ವಚೆಯಲ್ಲಿ ಕಪ್ಪು ಬಣ್ಣ ಮಾಸುವವರೆಗೆ ಈ ರೀತಿ ಮಾಡಿ. ಒಂದು ತಿಂಗಳಿನಲ್ಲಿಯೇ ತ್ವಚೆಯಲ್ಲಿರುವ ಕಲೆ ಮಾಸಿ ಅಂದ ಹೆಚ್ಚುವುದು.
    •  ಕೆಂಪು ಈರುಳ್ಳಿ

      ಕೆಂಪು ಈರುಳ್ಳಿ

      ಈರುಳ್ಳಿಯಲ್ಲಿರುವ Allium cepa ಎಂಬ ಅಂಶ ತ್ವಚೆ ಕಲೆ ಹೋಗಲಾಡಿಸಲು ತುಂಬಾನೇ ಸಹಕಾರಿ. ಈರುಳ್ಳಿ ರಸ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಕಲೆ ಬೇಗನೆ ಇಲ್ಲವಾಗುವುದು.

       ಗ್ರೀನ್‌ ಟೀ

      ಗ್ರೀನ್‌ ಟೀ

      ಗ್ರೀನ್‌ ಟೀ ಕುಡಿದರೆ ಅದು ದೇಹವನ್ನು ಡಿಟಾಕ್ಸ್ ಮಾಡಿ ಅಂದ ಹೆಚ್ಚಿಸುವುದು. ಇದನ್ನು ತ್ವಚೆ ಆರೈಕೆಗೆ ಬಾಹ್ಯವಾಗಿ ಕೂಡ ಬಳಸಬಹುದು. ಹೇಗೆ ಬಳಸುವುದು ಎಂದು ನೋಡೋಣ:

      • ಟೀ ಬ್ಯಾಗ್ ಅನ್ನು ಅರ್ಧ ಲೋಟ ಬಿಸಿ ನೀರಿನಲ್ಲಿ ಅದ್ದಿ, ಈಗ ನೀರು ತಣ್ಣಗಾಗುವವರೆಗೆ ಹಾಗೇ ಬಿಡಿ.
      • ಈಗ ಆ ಬ್ಯಾಗ್‌ ಅನ್ನು ಪ್ಯಾಚ್‌ ಮೇಲೆ ಹಚ್ಚಿ.
      • ಈ ರೀತಿ ದಿನದಲ್ಲಿ ಎರಡು ಬಾರಿ ಹಚ್ಚಿದರೆ ಕಲೆ ಕಡಿಮೆಯಾಗುವುದು.
      •  ಬ್ಲ್ಯಾಕ್‌ ಟೀ

        ಬ್ಲ್ಯಾಕ್‌ ಟೀ

        ಬ್ಲ್ಯಾಕ್‌ ಟೀ ತಯಾರಿಸಿ ಅದು ತಣ್ಣಗಾದ ಮೇಲೆ ಅದರಲ್ಲಿ ಕಾಟನ್ ಅದ್ದಿ ಅದನ್ನು ಮುಖದ ಮೇಲೆ ಹಚ್ಚಿ, ಈ ರೀತಿ ದಿನದಲ್ಲಿ ಎರಡು ಬಾರಿ ಮಾಡಿ. ಈ ರೀತಿ ಒಂದು ತಿಂಗಳು ಮಾಡಿದರೆ ಸಾಕು ಕಲೆ ಕಡಿಮೆಯಾಗುವುದು.

        ಹಾಲು

        ಹಾಲು

        ಹಾಲು, ಮೊಸರು ಇವು ತ್ವಚೆಯ ಕಲೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ.

        ತಣ್ಣನೆಯ ಹಾಲು ಅಥವಾ ಮೊಸರಿನಲ್ಲಿ ಹತ್ತಿಯನ್ನು ಅದ್ದಿ, ಅದನ್ನು ಮುಖದ ಮೇಲೆ ಅದ್ದಿ, 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಕಲೆ ಕಡಿಮೆಯಾಗುವುದು.

        ಟೊಮೆಟೊ ರಸ

        ಟೊಮೆಟೊ ರಸ

        ಟೊಮೆಟೊ ರಸದಲ್ಲಿ ಲೈಕೋಪೆನೆ ಅಂಶ ಅಧಿಕವಿರುವುದರಿಂದ ತ್ವಚೆ ರಕ್ಷಣೆಯಲ್ಲಿ ತುಂಬಾನೇ ಸಹಕಾರಿ. ಟೊಮೆಟೊ ರಸವನ್ನು ಆಲೀವ್ ಎಣ್ಣೆ ಜೊತೆ ಮಿಶ್ರ ಮಾಡಿ ಹಚ್ಚುತ್ತಾ ಬಂದರೆ ಕಲೆ ಕಡಿಮೆಯಾಗುವುದು.

English summary

How To Do Pigmentation Treatment At Home

Here are home remedies to get rid from Pigmentation, read on...
Story first published: Saturday, November 7, 2020, 15:57 [IST]
X
Desktop Bottom Promotion