For Quick Alerts
ALLOW NOTIFICATIONS  
For Daily Alerts

ಈ ಫೇಸ್ ಟೋನರ್ ತ್ವಚೆ ಕಾಂತಿ ಹೆಚ್ಚಲು ತುಂಬಾನೇ ಸಹಕಾರಿ

|

ತ್ವಚೆಯ ರಕ್ಷಣೆಯ ವಿಷಯಕ್ಕೆ ಬಂದರೆ, ಟೋನಿಂಗ್ ಎನ್ನುವುದು ನೀವು ಎಂದಿಗೂ ಮರೆಯಬಾರದಂತಹ ವಿಚಾರ. ಫೇಸ್ ಟೋನರ್ಗಳು ತ್ವಚೆಗೆ ತುಂಬಾ ಕಠಿಣ ಮತ್ತು ಅನಗತ್ಯವೆಂದು ಪರಿಗಣಿಸಲಾಗಿದ್ದ ಸಮಯವಿತ್ತು. ಆದರೆ ಆ ದಿನಗಳು ಹಾಗೂ ಆ ಉತ್ಪನ್ನಗಳು ಕಳೆದುಹೋಗಿವೆ. ಇಂದು, ಟೋನಿಂಗ್ ಆರೋಗ್ಯಕರ ಮುಖದ ರಕ್ಷಣೆಯ ಅವಿಭಾಜ್ಯ ಅಂಗವಾಗಿದೆ. ಫೇಸ್ ಟೋನರ್ ತ್ವಚೆಯ ಆರೋಗ್ಯಕ್ಕೆ ಪ್ರಮುಖ ಸಾಧನವಾಗಿದೆ. ಮುಖದ ಆರೈಕೆಗೆ ಸಂಬಂಧಿಸಿದ ನಿಮ್ಮದಿನಚರಿಯ ಮೂರು ಹಂತಗಳಲ್ಲಿ ಟೋನಿಂಗ್ ಕೂಡ ಒಂದು.

ಉಳಿದ ಕ್ಲೆನ್ಸಿಂಗ್ ಹಾಗೂ ಮಾಯಿಶ್ಚರೈಸಿಂಗ್ ಹಂತಗಳು ಸೇರಿ ಆರೋಗ್ಯಕರ ಹಾಗೂ ಕಾಂತಿಯುತ್ ಚರ್ಮವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತವೆ. ಉತ್ತಮ ಟೋನರ್ ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ರಂಧ್ರವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ, ನಿಮಗೆ ಹೊಳೆಯುವ ಚರ್ಮವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಮುಖಕ್ಕೆ ಸೂಕ್ತವಾದ ಫೇಸ್ ಟೋನರ್ಗೆ ನೀವು ಹೂಡಿಕೆ ಮಾಡಬಹುದು. ಅಥವಾ ಮನೆಯಲ್ಲಿಯೇ ನೀವು ಒಂದು ಟೋನರ್ ಅನ್ನು ತಯಾರಿಸಬಹುದು.

ಅದಕ್ಕಾಗಿ ನೀವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ನೈಸರ್ಗಿಕ ಟೋನರ್ ಇಲ್ಲಿದೆ. ಆದರೆ ಅದಕ್ಕೂ ಮೊದಲು, ಅದನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂದು ನೀವು ತಿಳಿದಿರಬೇಕು.

ಟೋನರ್ ಅನ್ನು ಹೇಗೆ ಬಳಸುವುದು?:

ಟೋನರ್ ಅನ್ನು ಹೇಗೆ ಬಳಸುವುದು?:

ನಿಮ್ಮ ಚರ್ಮಕ್ಕೆ ಸೂಕ್ತವಾದ ಫೇಸ್ ವಾಶ್ ಸಹಾಯದಿಂದ ಮುಖ ತೊಳೆಯುವುದು ಮೊದಲ ಹಂತವಾಗಿದೆ. ನಂತರ ಟೋನರ್ ನ್ನು ಬಳಸಲಾಗುತ್ತದೆ. ಹತ್ತಿ ಉಂಡೆಯ ಮೇಲೆ ಸ್ವಲ್ಪ ಟೋನರು ಸುರಿಯಿರಿ ಮತ್ತು ಅದನ್ನು ತ್ವಚೆಗೆ ಅಪ್ಲೈ ಮಾಡಿ.

ಲೋಳೆರಸ ಮತ್ತು ರೋಸ್ ವಾಟರ್ ನಿಂದ ಮನೆಯಲ್ಲಿ ತಯಾರಿಸಿದ ಟೋನರ್:

ಲೋಳೆರಸ ಮತ್ತು ರೋಸ್ ವಾಟರ್ ನಿಂದ ಮನೆಯಲ್ಲಿ ತಯಾರಿಸಿದ ಟೋನರ್:

ಅಲೋವೆರಾ ಅಥವಾ ಲೋಳೆರಸ ಮತ್ತು ರೋಸ್ ವಾಟರ್, ಎರಡೂ ಮುಖಕ್ಕೆ ಅದ್ಭುತ ಫಲಿತಾಂಶ ನೀಡುತ್ತವೆ. ಇವೆರಡೂ ಶತಮಾನಗಳಿಂದ ಗಿಡಮೂಲಿಕೆ ಔಷಧಿಗಳ ಒಂದು ಭಾಗವಾಗಿದೆ. ಲೋಳೆರಸ ಚರ್ಮವನ್ನು ಮಾಯಿಶ್ಚರೈಸ್ ಮಾಡಿ, ಮೊಡವೆ, ಬಿಸಿಲಿನಿಂದ ಸುಟ್ಟ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತೊಂದೆಡೆ ರೋಸ್ ವಾಟರ್, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ತ್ವಚೆಯ ಕೆಂಪು ಗುಳ್ಳೆ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಟೋನ್ ಅನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ. ಈ ಎರಡೂ ಅದ್ಭುತ ಪದಾರ್ಥಗಳನ್ನು ಬಳಸಿಕೊಂಡು ಸ್ಕಿನ್ ಟೋನರನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.

 ನೈಸರ್ಗಿಕ ಟೋನರ್ ತಯಾರಿಸುವ ವಿಧಾನ:

ನೈಸರ್ಗಿಕ ಟೋನರ್ ತಯಾರಿಸುವ ವಿಧಾನ:

ಲೋಳೆಗಿಡವನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಅದರ ಜೆಲ್ ಅನ್ನು ತೆಗೆಯಿರಿ. ಈಗ, ಸ್ವಲ್ಪ ತಾಜಾ ಗುಲಾಬಿ ದಳಗಳನ್ನು ತೆಗೆದುಕೊಂಡು ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಪೇಸ್ಟ್ ಮಾಡಿ. ನಂತರ ರೋಸ್ ವಾಟರ್ ಗೆ ಜೆಲ್ ಸೇರಿಸಿ ಮತ್ತೆ ಮಿಶ್ರಣ ಮಾಡಿ. ನೀವು ಕೆಲವು ಸಾರಭೂತ ತೈಲಗಳನ್ನು ಈ ಮಿಶ್ರಣಕ್ಕೆ ಸೇರಿಸಬಹುದು. ಇದು ಟೋನರ್ ಹದಕ್ಕೆ ಬರುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ನಿಮ್ಮ ಕೈಯಲ್ಲಿ ನೀವೇ ತಯಾರಿಸಿದ ನೈಸರ್ಗಿಕ ಟೋನರ್ ಇದ್ದು, ಅದು ಶುಷ್ಕತೆಯನ್ನು ನಿವಾರಿಸುವುದಲ್ಲದೆ ಉತ್ತಮ ಚರ್ಮವನ್ನು ನೀಡುತ್ತದೆ.

ಸಂಗ್ರಹಿಸಿಟ್ಟು ಬಳಸಬಹುದು

ಸಂಗ್ರಹಿಸಿಟ್ಟು ಬಳಸಬಹುದು

ಈ ಟೋನರನ್ನು ತಾಜಾವಾಗಿಡಲು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಇದನ್ನು ನಿಯಮಿತವಾಗಿ ಬಳಸಿ.

ಗಮನಿಸಿ: ಲೇಖನದಲ್ಲಿ ಉಲ್ಲೇಖಿಸಲಾದ ಪದಾರ್ಥಗಳು ನೈಸರ್ಗಿಕವಾಗಿದ್ದರೂ, ಅವುಗಳಲ್ಲಿ ಕೆಲವು ನಿಮಗೆ ಅಲರ್ಜಿಯಾಗಿರುವ ಸಾಧ್ಯತೆಯಿದೆ. ನಿಮ್ಮ ಚರ್ಮದ ರಕ್ಷಣೆಗೆ ಯಾವುದೇ ಪದಾರ್ಥಗಳನ್ನು ಸೇರಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಲು ಖಚಿತಪಡಿಸಿಕೊಳ್ಳಿ.

English summary

Homemade Skin Toner With Aloe Vera And Rose Water for Brightest, Smoothest Skin

Here we told about Homemade Skin Toner With Aloe Vera And Rose Water for Brightest, Smoothest Skin, Read on.
X
Desktop Bottom Promotion