For Quick Alerts
ALLOW NOTIFICATIONS  
For Daily Alerts

ಬೇಡದ ಕೂದಲನ್ನು ನಿವಾರಿಸುವ 7 ಅತ್ಯುತ್ತಮ ಮನೆಮದ್ದುಗಳು

|

ದೇಹದಲ್ಲಿರುವ ಅನಗತ್ಯ ಕೂದಲನ್ನು ತಾತ್ಕಾಲಿಕ ಹಾಗೂ ಶಾಶ್ವತವಾಗಿ ನಿವಾರಿಸಲು ಇತ್ತೀಚೆಗೆ ಹಲವು ಆಧುನಿಕ ವಿಧಾನಗಳು ಬಂದಿದೆ, ಅಲ್ಲದೇ ಹಲವು ಪ್ರಾಡಕ್ಟ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದೆಲ್ಲವೂ ಸತತವಾಗಿ ಬಳಸುತ್ತಾ ತ್ವಚೆಗೆ ಒಂದಿಲ್ಲೊಂದು ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಸೂಕ್ಷ್ಮ ತ್ವಚೆಯವರಂತೂ ಬಹಳ ಎಚ್ಚರಿಂದ ಇಂತಹ ಪ್ರಾಡಕ್ಟ್‌ಗಳು ಅಥವಾ ನೂತನ ವಿಧಾನಗಳನ್ನು ಬಳಸಬೇಕಾಗುತ್ತದೆ.

unwanted hair

ದೇಹದ ಅನಗತ್ಯ ಕೂಲದ ನಿವಾರಣೆಗೆ ನೈಸರ್ಗಿಕವಾಗಿಯೇ ಹಲವು ವಿಧಾನಗಳಿದ್ದರೂ ಆಧುನಿಕತೆಯ ಮೊರೆ ಹೋಗಿ ನಾವಿಂದು ತ್ವಚೆಯ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಇರುವ ಅನಗತ್ಯ ಕೂದಲ ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿವೆ. ಇವುಗಳ ನಿರಂತರ ಬಳಕೆಯಿಂದಲೇ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕವಾಗಿ ಬೇಡದ ಕೂದಲನ್ನು ನಿವಾರಿಸಬಹುದು. ಹಾಗಿದ್ದರೆ ಯಾವೆಲ್ಲಾ ಮನೆಮದ್ದುಗಳು ಕೂದಲ ನಿವಾರಣೆಗೆ ಸಹಕಾರಿ, ಇದನ್ನು ಬಳಸುವುದು ಹೇಗೆ ಎಂಬುದನ್ನು ಮುಂದೆ ಲೇಖನದಲ್ಲಿ ತಿಳಿಯೋಣ.

1. ಪ್ಪಪಾಯ+ಅರಿಶಿನ

1. ಪ್ಪಪಾಯ+ಅರಿಶಿನ

ನಿಮ್ಮ ಕೂಲದ ನಿವಾರಣೆಗೆ ನೀವು ದೀರ್ಘಕಾಲೀನ ಪರಿಹಾರವನ್ನು ಹುಡುಕುತ್ತಿದ್ದರೆ ಪಪ್ಪಾಯವನ್ನು ತಪ್ಪದೇ ಬಳಸಿ. ಪಪ್ಪಾಯ ಹಣ್ಣು ರಾತ್ರೋ, ರಾತ್ರಿ ನಿಮ್ಮ ಕೂದಲನ್ನು ನಿವಾರಿಸುತ್ತದೆ ಎಂದು ಹೇಳಾಗುವುದಿಲ್ಲ. ಆದರೆ ಈ ಹಣ್ಣಿನಲ್ಲಿರುವ ಪಪ್ಪೈನ್ ಎಂಬ ಕಿಣ್ವಗಳು (ಎನ್ಜೈಮ್) ಕೂದಲಿನ ಮೂಲವನ್ನು ದುರ್ಬಲಗೊಳಿಸಿತ್ತದೆ ಹಾಗೂ ಮತ್ತೆ ಕೂದಲು ಬೆಳೆಯದಂತೆ ಮಾಡುತ್ತದೆ.

* ಒಂದರಿಂದ ಎರಡು ಸ್ಪೂನ್ ಮ್ಯಾಶ್ ಮಾಡಿರುವ ಪಪ್ಪಾಯ ಹಾಗೂ ಅರ್ಧ ಸ್ಪೂನ್ ಅರಿಶಿನವನ್ನು ಚೆನ್ನಾಗಿ ಬೆರೆಸಿ

* ಪಪ್ಪಾಯ ಮಿಶ್ರಣವನ್ನು ಕೂದಲ ಬುಡದವರೆಗೂ ತಲುಪುವಂತೆ ಚೆನ್ನಾಗಿ ಮಸಾಜ್ ಹಚ್ಚಿ

* ಕನಿಷ್ಠ 15 ನಿಮಿಷ ಹಾಗೇ ಬಿಡಿ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ

ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಹಚ್ಚಿ ಮೂರು ತಿಂಗಳ ಬಳಿಕ ಉತ್ತಮ ಫಲಿತಾಂಶ ನಿಮ್ಮದಾಗಲಿದೆ.

2. ಅರಿಶಿನ+ಹಾಲು

2. ಅರಿಶಿನ+ಹಾಲು

ಕೂದಲ ನಿವಾರಣೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

* ಮೂರು ಸ್ಪೂನ್ ಅರಿಶಿನಕ್ಕೆ ಹಾಗೂ ಒಂದು ಸ್ಪೂನ್ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ

* ಮಿಶ್ರಣವನ್ನು ಕೂದಲು ಬೆಳೆದಿರುವ ದಿಕ್ಕಿಗೆ ತ್ವಚೆ ಸಂಪೂರ್ಣ ಮರೆಯಾಗುವಂತೆ ಹಚ್ಚಿ

* ತ್ವಚೆ ಒಣಗುವವರೆಗೂ ಹಾಗೆ ಬಿಡಿ (ಕನಿಷ್ಠ 15 ನಿಮಿಷ)

* ನಂತರ ಅಂಗೈಗೆ ಸ್ವಲ್ಪ ನೀರನ್ನು ಹಾಕಿಕೊಂಡು ತ್ವಚೆಯ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ

* ಅಂತಿಮವಾಗಿ ಬೆಚ್ಚಗಿನ ನೀರಿನಲ್ಲಿ ಸೋಪು ಹಚ್ಚದೆ ಮುಖವನ್ನು ಚೆನ್ನಾಗಿ ತೊಳೆಯಿರಿ

ಈ ಅಭ್ಯಾಸವನ್ನು ಸತತವಾಗಿ ಮಾಡುತ್ತಿರುವುದರಿಂದ ಅನಗತ್ಯ ಕೂದಲ ಬೆಳವಣಿಗೆ ನಿಧಾನವಾಗಿ ನಿವಾರಣೆಯಾಗುತ್ತದೆ.

3. ಅರಿಶಿನ+ಕಡಲೆಹಿಟ್ಟು+ ಮೊಸರು

3. ಅರಿಶಿನ+ಕಡಲೆಹಿಟ್ಟು+ ಮೊಸರು

ಅರಿಶಿನ ಕೂದಲ ನಿವಾರಣೆಗೆ ಸಹಕಾರಿಯಾದರೆ ಕಡೆಲೆಹಿಟ್ಟು ತ್ವಚೆಯನ್ನು ಮೃದುಗೊಳಿಸಲು ಹಾಗೂ ಮೊಡೆವೆಗಳ ನಿವಾರಣೆಗೆ ಮತ್ತು ಮೊಸರು ತ್ವಚೆಯಲನ್ನು ಒಣಗಿಸದೇ ಎಣ್ಣೆಯಂಶವನ್ನು ಉಳಿಸುವಲ್ಲಿ ಸಹಕಾರಿಯಾಗಿದೆ. ಮೂರರ ಮಿಶ್ರಣ ತ್ವಚೆಯ ಹೊಳಪನ್ನು ಮತ್ತಷ್ಟು ಹೆಚ್ಚುತ್ತದೆ.

* ಒಂದು ಸ್ಪೂನ್ ಅರಿಶಿನ, ಒಂದು ಸ್ಪೂನ್ ಕಲಡೆಹಿಟ್ಟು ಹಾಗೂ ಒಂದು ಚಮಚ ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ

* ಮಿಶ್ರಣವನ್ನು ಕೂದಲು ಬೆಳೆದಿರುವ ದಿಕ್ಕಿಗೆ ನಯವಾಗಿ ಹಚ್ಚಿ ಮಸಾಜ್ ಮಾಡಿ

* ತ್ವಚೆ ಒಣಗುವವರೆಗೂ ಹಾಗೆ ಬಿಡಿ (ಕನಿಷ್ಠ 15 ನಿಮಿಷ)

* ನಂತರ ಸ್ವಲ್ಪ ಹಾಲು ಅಥವಾ ನೀರನ್ನು ಹಾಕಿಕೊಂಡು ತ್ವಚೆಯ ಮೇಲೆ ಮಸಾಜ್ ಮಾಡಿ

* ಅಂತಿಮವಾಗಿ ಬೆಚ್ಚಗಿನ ನೀರಿನಲ್ಲಿ ಸೋಪು ಹಚ್ಚದೆ ಮುಖವನ್ನು ಚೆನ್ನಾಗಿ ತೊಳೆಯಿರಿ

ಇದನ್ನು ಸತತವಾಗಿ ಮಾಡುತ್ತಿರುವುದರಿಂದ ತ್ವಚೆಯ ಹೊಳಪು ಹೆಚ್ಚುವ ಜತೆಗೆ ಅನಗತ್ಯ ಕೂದಲ ಬೆಳವಣಿಗೆಯನ್ನು ನಿವಾರಿಸುತ್ತದೆ.

4. ಮೊಟ್ಟೆ+ಸಕ್ಕರೆ+ಕಾರ್ನ್ ಫ್ಲೋರ್

4. ಮೊಟ್ಟೆ+ಸಕ್ಕರೆ+ಕಾರ್ನ್ ಫ್ಲೋರ್

ಮೊಟ್ಟೆ ಕೇವಲ ಅಧಿಕ ಪೌಷ್ಟಿಕಾಂಶವುಳ್ಳ ಆಹಾರ ಮಾತ್ರ ಅಲ್ಲ, ಸೌಂದರ್ಯವನ್ನು ಇಮ್ಮಡಿಗೊಳಿಸುವ ಅತ್ಯುತ್ತಮ ಮನೆಮದ್ದು.

* ಒಂದು ಮೊಟ್ಟೆಯ ಬಿಳಿಯ ಭಾಗವನ್ನು ಮಾತ್ರ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಹಾಗೂ ಅರ್ಧ ಚಮಚ ಕಾರ್ನ್ ಫ್ಲೋರ್‌ ಅನ್ನು ಮಿಶ್ರಣ ಮಾಡಿ

* ನಂತರ ಶುದ್ಧವಾದ ತ್ವಚೆಗೆ ಮಿಶ್ರಣವನ್ನು ಕೂದಲು ಬೆಳೆದ ಅಭಿಮುಖವಾಗಿ ಗಾಢವಾಗಿ ಹಚ್ಚಿ

* ಮಿಶ್ರಣ ತ್ವಚೆಯ ಮೇಲೆ ಸಂಪೂರ್ನ ಒಣಗುವವರೆಗೂ ಕನಿಷ್ಠ 15-20 ನಿಮಿಷ ಬಿಡಿ

* ನಂತರ ತ್ವಚೆಯ ಮೇಲೆ ಒಂದು ಲೇಯರ್ ಉಂಟಾಗಿರುತ್ತದೆ ಇದನ್ನು ಕೂದಲು ಬೆಳೆದ ವಿರುದ್ಧ ದಿಕ್ಕಿನಲ್ಲಿ ತೆಗೆಯಿರಿ

ಈ ವಿಧಾನವು ನಿಮ್ಮ ಮುಖದಲ್ಲಿರುವ ವೈಟ್ ಎಡ್ಸ್ ಮತ್ತು ಬ್ಲಾಕ್‌ ಎಡ್ಸಗಳು ಸೇರಿದಂತೆ ಅನವಶ್ಯಕ ಲೇಯರ್ ಅನ್ನು ತೆರವುಗೊಳಿಸುತ್ತದೆ ಅಲ್ಲದೇ ಅನವಶ್ಯಕ ಕೂದಲನ್ನು ನಿವಾರಿಸುತ್ತದೆ.

5. ಮೆಂತ್ಯ ಪುಡಿ

5. ಮೆಂತ್ಯ ಪುಡಿ

ಕಾಳಿನ ಪುಡಿ ಅತ್ಯುತ್ತಮ ಕೂದಲು ನಿವಾರಕ ಮನೆಮದ್ದು.

* ಮೆಂತ್ಯ ಕಾಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಿ

* ಒಂದು ಚಮಚ ಮೆಂತ್ಯದ ಪುಡಿಗೆ ಸ್ವಲ್ಪರೋಸ್ ವಾಟರ್‌ ಅನ್ನು ಮಿಶ್ರ ಮಾಡಿ

* ಸ್ವಲ್ಪ ಸಮಯದ ನಂತರ ಮಿಶ್ರಣವನ್ನು ಮುಖಕ್ಕೆ ಹಚ್ಚಿ

* ಮಿಶ್ರಣ ಒಣಗಿದ ನಂತರ ಒದ್ದೆ ಹತ್ತಿಯಲ್ಲಿ ನಿಧಾನವಾಗಿ ಮಿಶ್ರಣವನ್ನು ತೆಗೆಯಿರಿ

ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ 15 ದಿನ ಮಾಡಿದರೆ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ.

6. ಸೂಪರ್ ಮಿಂಟ್ ಟೀ (ಪುದೀನ ಟೀ)

6. ಸೂಪರ್ ಮಿಂಟ್ ಟೀ (ಪುದೀನ ಟೀ)

ಸಂಶೋಧನೆಯಗಳ ಪ್ರಕಾರ ಪುದೀನ ಟೀ ಕುಡಿಯುವುರಿಂದ ಟೆಸ್ಟೋಸ್ಟಿರಾನ್ ಉತ್ಪತ್ತಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಪುರುಷರಲ್ಲಿರುವ ಹೆಚ್ಚಿರುವ ಈ ಹಾರ್ಮೋನಿನ ಪ್ರಮಾಣ ಮಹಿಳೆರಲ್ಲಿ ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

* ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಲು ಇಡಿ

* ಸ್ವಲ್ಪ ಕುದಿದ ನಂತರ ಅದಕ್ಕೆ ಒಂದು ಚಮಚ ಪುದೀ ಎಲೆ ಅಥವಾ ಪುದೀನ ಎಲೆಯ ಪುಡಿಯನ್ನು ಹಾಕಿ 10 ನಿಮಿಷ ಕುದಿಸಿ

* ಅಗತ್ಯವಿದ್ದರೆ ಇದಕ್ಕೆ ರುಚಿಗೆ ನಿಂಬೆ ರಸ ಸೇರಿಸಿ

ನಿತ್ಯ ಎರಡು ಬಾರಿ ಈ ಟೀ ಅನ್ನು ಕುಡಿಯುವುದರಿಂದ ದೇಹದಲ್ಲಿ ಅನಗತ್ಯ ಕೂದಲ ಬೆಳವಣಿಗೆ ನಿಧಾನವಾಗಿ ನಿವಾರಣೆಯಾಗುತ್ತದೆ.

7. ಬಾಳೆಹಣ್ಣು+ಓಟ್ಸ್

7. ಬಾಳೆಹಣ್ಣು+ಓಟ್ಸ್

* ಒಂದು ಬಾಳೆಹಣ್ಣಿಗೆ ಒಂದು ಚಮಚ ಓಟ್ಸ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ

* ನಂತರ ಕೂದಲು ಬೆಳೆಯುವ ಸ್ಥಳದಲ್ಲಿ ಈ ಮಿಶ್ರಣವನ್ನು ಮಸಾಜ್ ಮಾಡಿ

* ಸ್ವಲ್ಪ ಸಮಯ ಒಣಗಲು ಬಿಡಿ

* ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ

ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ. ಕೇವಲ ಒಂದೇ ತಿಂಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ.

English summary

Home Remedies To Get Rid Of Unwanted Body Hair

Unwanted hair on the body or the face is a nuisance for women and those painful waxing sessions do not make it any easier for us. Often theproblem of excessive hair growth starts around puberty and marks its territory across the face, neck, chest, back, toes and arms. Here are the best home remedies tips for remove unwanted hair from body. Take a look.
X
Desktop Bottom Promotion