For Quick Alerts
ALLOW NOTIFICATIONS  
For Daily Alerts

ಸ್ಯಾನಿಟೈಸರ್‌ನಿಂದ ಕೈ ಡ್ರೈಯಾಗುವುದನ್ನು ತಡೆಗಟ್ಟಲು ಟಿಪ್ಸ್

|

ಕೊರೊನಾವೈರಸ್‌ ಬಂದಾಗಿನಿಂದ ಸ್ಯಾನಿಟೈಸರ್‌ ಬಳಕೆ ಹೆಚ್ಚಾಗಿದೆ. ಕ್ರಿಮಿಗಳು, ಸೋಂಕಾಣುಗಳನ್ನು ಕೊಲ್ಲುವಲ್ಲಿ ಕೊರೊನಾವೈರಸ್‌ ಪರಿಣಾಮಕಾರಿಯಾದರೂ ಇದರ ಅಡ್ಡಪರಿಣಾಮ ಇದ್ದೇ ಇದೆ. ನಿಮಗೆ ಈಗಾಗಲೇ ಗಮನಕ್ಕೆ ಬಂದಿರಬಹುದು.

ಅತೀ ಹೆಚ್ಚು ಸ್ಯಾನಿಟೈಸರ್‌ ಬಳಸುವುದರಿಂದ ಕೈಗಳು ತುಂಬಾ ಡ್ರೈಯಾದಂತೆ ಫೀಲ್‌ ಆಗುತ್ತಿದೆಯೇ? ಹೌದು ಸ್ಯಾನಿಟೈಸರ್ ಬಳಸುವುದರಿಂದ ಕೈಯಲ್ಲಿನ ಮೃದುತ್ವ ದೂರವಾಗಿ ಕೈಗಳು ತುಂಬಾ ಡ್ರೈಯಾಗುವುದು.

ಹ್ಯಾಂಡ್‌ ಸ್ಯಾನಿಟೈಸರ್ ಹಾಗೂ ಸೋಪು ಹಾಕವುದರಿಂದ ಅದು ಕೈಯಲ್ಲಿರುವ ಮಾಯಿಶ್ಚರೈಸರ್ ತೆಗೆದು ಹಾಕುತ್ತದೆ. ಹಾಗಂತ ಈ ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಸ್ಯಾನಿಟೈಸರ್ ಬಳಸಬೇಕು.

ನಾವಿಲ್ಲಿ ಸ್ಯಾನಿಟೈಸರ್‌ ಬಳಸಿದರೂ ಕೈಯಲ್ಲಿ ಮೃದುತ್ವ ಕಾಪಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ:

ಕೈಯ ಮಾಯಿಶ್ಚರೈಸರ್ ಕಾಪಾಡುವ ಮಾಸ್ಕ್‌ :

ಕೈಯ ಮಾಯಿಶ್ಚರೈಸರ್ ಕಾಪಾಡುವ ಮಾಸ್ಕ್‌ :

ನಾವು ನಮ್ಮ ಮುಖ ಚೆನ್ನಾಗಿ ಕಾಣಬೇಕೆಂದು ಮುಖಕ್ಕೆ ಮಾಸ್ಕ್ ಹಚ್ಚುತ್ತೇವೆ. ಅದೇ ರೀತಿ ಕೈಗೆ ಕೂಡ 15 ದಿನಕ್ಕೊಮ್ಮೆ ಮಾಸ್ಕ್ ಹಚ್ಚಿ. ಇದರಿಂದ ಮುಖದಂತೆ ಕೈಯ ತ್ವಚೆ ಮೃದುವಾಗುವುದು, ಇದಲ್ಲದೆ ಪ್ರತಿನಿತ್ಯ ಕೋಕಾ ಬಟರ್ ಅಥವಾ ಶಿಯಾ ಬಟರ್ನಿಂದ ಮಾಯಿಶ್ಚರೈಸರ್ ಮಾಡಿ.

ಮನೆಯಲ್ಲಿ ಮ್ಯಾನಿಕ್ಯೂರ್ ಮಾಡಿ

ಮನೆಯಲ್ಲಿ ಮ್ಯಾನಿಕ್ಯೂರ್ ಮಾಡಿ

ನೀವು ಈ ವಸ್ತುಗಳನ್ನು ಬಳಸಿ ಮ್ಯಾನಿಕೂರ್‌ ಮಾಡಿ.

* ಕ್ಯೂಟಿಕಲ್ ಕ್ರೀಮ್

* ಎಕ್ಸ್‌ಫೋಲೆಟ್‌ ಸಾಲ್ಟ್

* ಮಾಯಿಶ್ಚರೈರಸ್

* ಫ್ರೂಟ್‌ ಮಾಸ್ಕ್‌ ( ನೀವು ಬೇಕಿದ್ದರೆ ಬಟರ್ ಫ್ರೂಟ್‌ ಅಥವಾ ಪಪ್ಪಾಯಿ, ಸ್ವಲ್ಪ ಹಾಲು ಹಾಗೂ ಜೇನು ಸೇರಿಸಿ ಫ್ರೂಟ್‌ ಮಾಸ್ಕ್ ತಯಾರಿಸಬಹುದು, ಇಲ್ಲದಿದ್ದರೆ ರೆಡಿಮೇಡ್ ಮಾಸ್ಕ್ ಕೂಡ ಬಳಸಬಹುದು)

ಮೊದಲಿಗೆ ಕ್ಯೂಟಿಕಲ್‌ ಕ್ರೀಮ್‌ ಹಚ್ಚಿ, ನಂತರ ಎಪ್ಸೋಮ್ ಸಾಲ್ಟ್ ಬಳಸಿ ಕೈಯಲ್ಲಿರುವ ಕೊಳೆಯನ್ನು ತೆಗೆಯಿರಿ.

* ನಂತರ ಕೈಗಳನ್ನು ತೊಳೆದು ಫ್ರೂಟ್ ಮಾಸ್ಕ್ ಹಚ್ಚಿ 10 ನಿಮಿಷ ಬಿಡಿ.

* ನಂತರ ಕೈಗಳನ್ನು ತೊಳೆದು ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ.

ದಿನಾ ಎಣ್ಣೆ ಹಚ್ಚಿ

ದಿನಾ ಎಣ್ಣೆ ಹಚ್ಚಿ

* ಇನ್ನು ಸ್ಯಾನಿಟೈಸರ್‌ ಹಚ್ಚುವುದರಿಂದ ಕೈ ಡ್ರೈಯಾಗುವುದನ್ನು ತಡೆಗಟ್ಟಲು ನೀವು ಮನೆಗೆ ಬಂದ ಮೇಲೆ ಕೈಗಳನ್ನು ತೊಳೆದು ಕೊಬ್ಬರಿ ಎಣ್ಣೆ ಹಚ್ಚಿ, ಉಗುರುಗಳಿಗೂ ಹಚ್ಚಿ.

* ಹಾಲಿನ ಕೆನೆ ಹಚ್ಚಿದರೂ ಕೈಗಳು ಮಾಯಿಶ್ಚರೈರಸ್‌ನಿಂದ ಕೂಡಿರುತ್ತದೆ.

ಮನೆ ಕೆಲಸ ಮಾಡುವಾಗ ಗ್ಲೌಸ್ ಬಳಸಿ

ಮನೆ ಕೆಲಸ ಮಾಡುವಾಗ ಗ್ಲೌಸ್ ಬಳಸಿ

ಮನೆಯಲ್ಲಿ ಕೆಲಸ ಮಾಡುವಾಗ ಒರೆಸುವುದು, ಮಾತ್ರೆ ತೊಳೆಯುವುದು ಇವುಗಳಿಂದ ಕೈಗಳು ಹಾಳಾಗುವುದು. ಆದ್ದರಿಂದ ಮಾಸ್ಕ್ ಬಳಸುವುದು ಒಳ್ಳೆಯದು.

English summary

Hands Too Dry Due To Constant Sanitisation? Here Are The Ways To Curb It In Kannada

Hands too dry due to constant sanitisation? Here are the ways to curb it in Kannada, read on....
X
Desktop Bottom Promotion