For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಾಗಲು ಈ ಗ್ರೀನ್ ಟೀ ಫೇಸ್ ಪ್ಯಾಕ್‌ಗಳನ್ನೊಮ್ಮೆ ಬಳಸಿ

|

ಗ್ರೀನ್ ಟೀ ಅಥವಾ ಹಸಿರು ಚಹಾದಿಂದ ಆರೋಗ್ಯ ವೃದ್ಧಿಯಾಗುವುದೆಂದು ಹೆಚ್ಚಿನವರಿಗೆ ತಿಳಿದಿದೆ. ಆದರೆ ಇದು ತ್ವಚೆಗೂ ಪ್ರಯೋಜನ ಎಂಬುದು ತಿಳಿದಿದೆಯಾ? ಇದರಲ್ಲಿರುವ ಗುಣಗಳು ಎಣ್ಣೆಯುಕ್ತ ತ್ವಚೆ ಹೊಂದಿರುವರಿಗೆ ತಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದು. ಗ್ರೀನ್ ಟೀಯ ಜೊತೆಗೆ ಇತರ ಕೆಲವು ವಸ್ತುಗಳನ್ನು ಬೆರೆಸಿ, ಪ್ಯಾಕ್‌ನಂತೆ ಹಚ್ಚಿಕೊಳ್ಳುವುದರಿಂದ ಸುಂದರ ತ್ವಚೆ ನಿಮ್ಮದಾಗುತ್ತದೆ. ಹಾಗಾದರೆ, ಅಂತಹ ಫೇಸ್ ಪ್ಯಾಕ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಸುಂದರವಾದ ಮುಖ ಪಡೆಯಲು ಸಹಾಯ ಮಾಡುವ ಗ್ರೀನ್ ಟೀಯ ಫೇಸ್ ಪ್ಯಾಕ್‌ಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1) ಅರಿಶಿನ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ :

1) ಅರಿಶಿನ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ :

ಅರಿಶಿನವು ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಎಲ್ಲಾ ಚರ್ಮದ ಪ್ರಕಾರಗಳಿಗೆ ಹೊಂದಿಕೊಳ್ಳುತ್ತದೆ. ಆದ್ದರಿಂದ ಈ ಎರಡು ಪದಾರ್ಥಗಳ ಸಂಯೋಜನೆಯು ಮೊಡವೆಗಳನ್ನು ಕಡಿಮೆ ಮಾಡಲು ಹಾಗೂ ತ್ವಚೆಯನ್ನು ಕ್ಲೀನ್ ಆಗಿ ಇಡಲು ಸಹಾಯ ಮಾಡುವುದು.

ಬೇಕಾಗುವ ವಸ್ತುಗಳು:

1/4 ಚಮಚ ಅರಿಶಿನ

1 ಚಮಚ ಗ್ರೀನ್ ಟೀ

1 ಚಮಚ ಕಡಲೆಹಿಟ್ಟು

ಬಳಸುವ ವಿಧಾನ:

ಮೇಲಿನ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಅದನ್ನು ನಿಮ್ಮ ಮುಖಕ್ಕೆ ಹಚ್ಚಿ. ಇದನ್ನು ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಮಾಡಿ.

2) ಅಕ್ಕಿ ಹಿಟ್ಟು, ನಿಂಬೆ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್:

2) ಅಕ್ಕಿ ಹಿಟ್ಟು, ನಿಂಬೆ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್:

ನಿಂಬೆ ರಸ ಮೊಡವೆಗಳ ವಿರುದ್ಧ ಹೋರಾಡುವ ಮತ್ತು ಮುಖದ ಕಲೆಗಳನ್ನು ತೆಗೆದುಹಾಕಲು ಹಾಗೂ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಅಕ್ಕಿ ಹಿಟ್ಟು ಚರ್ಮದಲ್ಲಿರುವ ಅಧಿಕ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಈ ಫೇಸ್ ಪ್ಯಾಕ್ ಎಣ್ಣೆಯುಕ್ತ ತ್ವಚೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವುದು.

ಬೇಕಾಗುವ ವಸ್ತುಗಳು:

2 ಚಮಚ ಅಕ್ಕಿ ಹಿಟ್ಟು

1 ಚಮಚ ನಿಂಬೆ ರಸ

1 ಚಮಚ ಗ್ರೀನ್ ಟೀ

ಬಳಸುವ ವಿಧಾನ:

ಮೇಲಿನ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಬಳಸಿ.

3) ಜೇನುತುಪ್ಪ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್:

3) ಜೇನುತುಪ್ಪ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್:

ಜೇನುತುಪ್ಪವು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಅದು ನಿಮ್ಮ ತ್ವಚೆಯಿಂದ ಕಲೆಗಳನ್ನು ಕಡಿಮೆಮಾಡಲು ಹಾಗೂ ತೇವಾಂಶ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಗ್ರೀನ್ ಟೀ ನಿಮ್ಮ ಚರ್ಮದ ಉತ್ಕರ್ಷಣ ನಿರೋಧಕದ ತಡೆಗೋಡೆಯನ್ನು ಬಲಪಡಿಸುತ್ತದೆ.

ಬೇಕಾಗುವ ವಸ್ತುಗಳು:

2 ಚಮಚ ಹಸಿ ಜೇನು

1 ಚಮಚ ಗ್ರೀನ್ ಟೀ

ಬಳಸುವ ವಿಧಾನ:

ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಚ್ಛವಾದ ಮುಖಕ್ಕೆ ಹಚ್ಚಿ. ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ನೀವು ಇದನ್ನು ವಾರಕ್ಕೊಮ್ಮೆ ಮಾಡಬಹುದು.

English summary

Green Tea Face Packs at Home to get Beautiful Skin in Kannada

Here we talking about Green Tea Face Packs at Home to get Beautiful Skin in Kannada, read on
Story first published: Thursday, September 30, 2021, 17:35 [IST]
X
Desktop Bottom Promotion