For Quick Alerts
ALLOW NOTIFICATIONS  
For Daily Alerts

ಈ ಮುಖದ ವ್ಯಾಯಾಮಗಳಿಂದ 40ನೇ ವಯಸ್ಸಿನಲ್ಲೂ ಸಹ 20ರ ಹೊಳಪನ್ನು ಪಡೆಯಬಹುದು

|

ಅತಿಯಾದ ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಅನೇಕ ಬಾರಿ ಅಕಾಲಿಕ ವಯಸ್ಸಿಗೆ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಅಥವಾ ಡಾರ್ಕ್ ಸರ್ಕಲ್ ಗಳಂತಹ ಹಲವಾರು ಸಮಸ್ಯೆಗಳು ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಮಹಿಳೆಯರು ವಯಸ್ಸಿಗೆ ಮುಂಚೆಯೇ ವಯಸ್ಸಾಗಿರುವಂತೆ ಕಾಣುತ್ತಾರೆ.
ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವು ಮೂರು ಮುಖದ ವ್ಯಾಯಾಮಗಳ ಬಗ್ಗೆ. ಇದರಿಂದ ನಿಮ್ಮ ಮುಖದ ಸುಕ್ಕುಗಳು ಮತ್ತು ಡಾರ್ಕ್ ಸರ್ಕಲ್ ಗಳ ಸಮಸ್ಯೆ ಕಡಿಮೆಯಾಗುವುದು.

ತ್ವಚೆಯ ಹೊಳಪನ್ನು ಹೆಚ್ಚಿಸುವ ಮೂರು ಮುಖದ ವ್ಯಾಯಾಮಗಳನ್ನು ಈ ಕೆಳಗೆ ನೀಡಲಾಗಿದೆ:

 ಕೆನ್ನೆಯ ಚರ್ಮವನ್ನು ಬಿಗಿಗೊಳಿಸಲು ಈ ವ್ಯಾಯಾಮ ಮಾಡಿ:

ಕೆನ್ನೆಯ ಚರ್ಮವನ್ನು ಬಿಗಿಗೊಳಿಸಲು ಈ ವ್ಯಾಯಾಮ ಮಾಡಿ:

ಈ ವ್ಯಾಯಾಮ ಮಾಡುವುದರಿಂದ ನಿಮ್ಮ ಮುಖದ ಚರ್ಮದ ಬಿಗಿಯಾಗಿ, ಮುಖದ ಚರ್ಮ ಜೋತು ಬೀಳುವುದು ಕಡಿಮೆಯಾಗುವುದು. ಈ ಮುಖದ ವ್ಯಾಯಾಮ ಮಾಡುವ ಮೊದಲು, ನಿಮ್ಮ ಮುಖವನ್ನು ನೀರಿನಿಂದ ತೊಳೆದು, ಬಾದಾಮಿ, ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯಿಂದ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಅದರ ನಂತರ ಈ ವ್ಯಾಯಾಮ ಮಾಡಲು ಪ್ರಾರಂಭಿಸಿ.

ವ್ಯಾಯಾಮ ಮಾಡುವುದು ಹೇಗೆ?:

1. ಮೊದಲಿಗೆ ನಿಮ್ಮ ಬಾಯಿ ತೆರೆಯಿರಿ.

2. ನಂತರ ನಿಮ್ಮ ತುಟಿಗಳಿಂದ ಹಲ್ಲುಗಳನ್ನು ಮುಚ್ಚಿ ಮತ್ತು ಪೌಟ್ ಮಾಡಿ.

3. ಬಾಯಿ ಮುಚ್ಚಿಕೊಂಡೇ ಕಿರುನಗೆ ಬೀರಿ. ನಗುತ್ತಿರುವಾಗ ನಿಮ್ಮ ಹಲ್ಲುಗಳನ್ನು ಕಾಣಬಾರದು.

4. ನಂತರ, ನಿಮ್ಮ ಬೆರಳುಗಳನ್ನು ಗಲ್ಲದ ಮೇಲೆ ಇಟ್ಟು, ನಿಮ್ಮ ದವಡೆಯ ರೇಖೆಯನ್ನು ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿ.

5. ಈ ವ್ಯಾಯಾಮವನ್ನು ಸುಮಾರು 5 ರಿಂದ 7 ಬಾರಿ ಮಾಡಿ.

ಡಬಲ್ ಚಿನ್ ಸಮಸ್ಯೆಗೆ ಈ ವ್ಯಾಯಾಮ ಮಾಡಿ:

ಡಬಲ್ ಚಿನ್ ಸಮಸ್ಯೆಗೆ ಈ ವ್ಯಾಯಾಮ ಮಾಡಿ:

ಈ 10 ಸೆಕೆಂಡುಗಳ ಚಮಚದ ಸಹಾಯದಿಂದ ವ್ಯಾಯಾಮವು ಡಬಲ್ ಚಿನ್ ಮತ್ತು ಸುಕ್ಕುಗಳಂತಹ ಸಮಸ್ಯೆಗಳನ್ನು ತೊಡೆದುಹಾಕಬಹುದು. ಇದರಿಂದ ನಿಮ್ಮ ಕೆನ್ನೆಗಳಿಗೆ ವ್ಯಾಯಾಮ ದೊರೆತು, ಸಂಗ್ರಹವಾಗಿರುವ ಬೊಜ್ಜು ಕರಗುವುದು.

ವ್ಯಾಯಾಮ ಮಾಡುವುದು ಹೇಗೆ?:

1. ಚಮಚವನ್ನು ಬಾಯಿಯಲ್ಲಿ ಇರಿಸಿ

2. ಈಗ ಚಮಚದ ಮೇಲೆ ಅಮೃತಶಿಲೆಯನ್ನು ಇರಿಸಿ

3. ಅದನ್ನು ಸುಮಾರು 10 ಸೆಕೆಂಡುಗಳ ಕಾಲ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿ.

4. ನಂತರ ವಿಶ್ರಾಂತಿ ಪಡೆಯಿರಿ.

5. ಈ ವ್ಯಾಯಾಮವನ್ನು ಎರಡು ಮೂರು ಬಾರಿ ಪುನರಾವರ್ತಿಸಿ.

ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಈ ವ್ಯಾಯಾಮ ಮಾಡಿ:

ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಈ ವ್ಯಾಯಾಮ ಮಾಡಿ:

ಕಣ್ಣುಗಳ ಸುತ್ತಲೂ ಫೈನ್ ಲೈನ್ ಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು, ನಿಮ್ಮ ಕಣ್ಣುಗಳ ಸುತ್ತ ಬಾದಾಮಿ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿದ ನಂತರ ನಿಧಾನವಾಗಿ ಕಣ್ಣುಗಳ ಸುತ್ತಲೂ ಬೆರಳು ಹಾಕಿ ಮಸಾಜ್ ಮಾಡಿ. ಇದರ ನಂತರ, ನಿಮ್ಮ ತೋರುಬೆರಳಿನಿಂದ ಕಣ್ಣುಗಳ ಹೊರ ಭಾಗವನ್ನು ನಿಧಾನವಾಗಿ ಮಸಾಜ್ ಮಾಡಿ. ಜೊತೆಗೆ ಮುಖವನ್ನು ಕೈಗಳಿಂದ ಮೆಲ್ಲನೇ ಮಸಾಜ್ ಮಾಡಿ. ಇದನ್ನು ಮಾಡುವುದರಿಂದ, ಕಣ್ಣುಗಳ ಸುತ್ತ ಸುಕ್ಕುಗಳು ಮತ್ತು ಡಾರ್ಕ್ ಸರ್ಕಲ್ ಗಳು ಕಡಿಮೆಯಾಗುತ್ತವೆ.

English summary

Facial Exercises for Glowing Skin and Anti Aging in Kannada

Here we talking about Facial Exercises for Glowing Skin and Anti Aging in Kannada, read on
X
Desktop Bottom Promotion