For Quick Alerts
ALLOW NOTIFICATIONS  
For Daily Alerts

ನಿಮ್ಮ ಡಲ್ ಸ್ಕಿನ್ ಹೋಗಲಾಡಿಸಲು ಸುಲಭವಾದ ಮನೆಮದ್ದು ಇಲ್ಲಿದೆ

|

ಕಲೆರಹಿತ ಮತ್ತು ಹೊಳೆಯುವ ಮುಖವನ್ನು ಯಾರು ಬಯಸುವುದಿಲ್ಲ ಹೇಳಿ? ಆದರೆ, ನಿಮ್ಮ ತ್ವಚೆಯು ಮಾಲಿನ್ಯ, ಆಹಾರ ಪದ್ಧತಿ ಹಾಗೂ ಇತರ ಕಾರಣಗಳಿಂದ ಡಲ್, ನಿರ್ಜೀವ ಮತ್ತು ದಣಿದಂತೆ ಕಾಣುತ್ತಿರುತ್ತದೆ. ಆದರೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಇದನ್ನು ಮನೆಯಲ್ಲಿಯೇ ಕೆಲವು ಸುಲಭ ಮತ್ತು ಸರಳ ಪರಿಹಾರದೊಂದಿಗೆ ಸರಿಪಡಿಸಬಹುದು.

dull skin

ಇದಕ್ಕೆ ಮೊದಲು ನಿಮ್ಮ ಚರ್ಮದ ಪ್ರಕಾರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಮತ್ತು ನಿಮ್ಮ ಮಂದ ಅಥವಾ ಡಲ್ ಚರ್ಮಕ್ಕೆ ಕಾರಣವೇನೆಂಬುದನ್ನು ಅರಿಯಬೇಕು. ಆದ್ದರಿಂದ ಇಲ್ಲಿ ನಾವು ಡಲ್ ಸ್ಕಿನ್ ಗೆ ಕಾರಣಗಳು ಮತ್ತು ಅದನ್ನು ಹೋಗಲಾಡಿಸಲು ಸುಲಭ ಮನೆಮದ್ದುಗಳನ್ನು ಹೇಳಲಾಗಿದೆ.

ನಿರ್ಜಲೀಕರಣಗೊಂಡ ಚರ್ಮ:

ನಿರ್ಜಲೀಕರಣಗೊಂಡ ಚರ್ಮ:

ನಿಮ್ಮ ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದಾಗ ನಿಮ್ಮ ಚರ್ಮವು ನಿರ್ಜಲೀಕರಣಗೊಳ್ಳುತ್ತದೆ. ನಿಮ್ಮ ಚರ್ಮಕ್ಕೆ ನೀರಿನ ಕೊರತೆಯಿದ್ದಾಗ, ಅದು ನಿರ್ಜೀವ ಮತ್ತು ಮಂದವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನಿಮ್ಮ ಕಣ್ಣುಗಳ ಸುತ್ತಲೂ ಡಾರ್ಕ್ ಸರ್ಕಲ್ ಗಳು ಕೂಡ ಇದರದ್ದೇ ಪ್ರಭಾವವಾಗಿದೆ.

ಡಯೆಟ್:

ಡಯೆಟ್:

ನೀವು ತಿನ್ನುವುದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಇದು ನಿಮ್ಮ ಮುಖ ಮತ್ತು ಚರ್ಮದ ಮೇಲೂ ಕಾಣಬಹುದು. ಅನಾರೋಗ್ಯಕರ ಆಹಾರವು ನಿಮ್ಮ ಚರ್ಮದ ಹೊಳಪನ್ನು ಕಡಿಮೆ ಮಾಡಿ, ಮಂದ ಮತ್ತು ನಿರ್ಜೀವ ಚರ್ಮವನ್ನು ನೀಡುತ್ತದೆ. ಹಸಿರು ಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ತಾರಣ್ಯ ಪೂರ್ಣ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ವಿಟಮಿನ್-ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಚರ್ಮವನ್ನು ಅದರ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.

ನಿದ್ರೆಯ ಕೊರತೆ:

ನಿದ್ರೆಯ ಕೊರತೆ:

ನಿಮಗೆ ಸಾಕಷ್ಟು ನಿದ್ರೆ ಬರದಿದ್ದಾಗ, ನಿಮ್ಮ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಮತ್ತು ಪಫಿನೆಸ್ ಅನ್ನು ಎದುರಿಸುತ್ತೀರಿ. ನಿಮ್ಮ ಚರ್ಮವು ಉತ್ಸಾಹಭರಿತ ಮತ್ತು ತಾಜಾವಾಗಿ ಕಾಣುವಂತೆ ಮಾಡಲು ನಿಮ್ಮ ದೇಹಕ್ಕೆ ಕನಿಷ್ಠ 8 ಗಂಟೆಗಳ ನಿದ್ರೆ ನೀಡಬೇಕು.

ಚರ್ಮ ರಕ್ಷಣೆಯ ದಿನಚರಿಯನ್ನು ಅನುಸರಿಸದೇ ಇರುವುದು:

ಚರ್ಮ ರಕ್ಷಣೆಯ ದಿನಚರಿಯನ್ನು ಅನುಸರಿಸದೇ ಇರುವುದು:

ಹೊಳೆಯುವ ತ್ವಚೆಯನ್ನು ಪಡೆಯಲು, ನೀವು ಚರ್ಮ ರಕ್ಷಣೆಯ ದಿನಚರಿಯನ್ನು ಅನುಸರಿಸಬೇಕು. ಇದರಲ್ಲಿ ಮುಖ್ಯವಾದುದು ಶುಚಿಗೊಳಿಸುವಿಕೆ, ಎಫ್ಫೋಲಿಯೇಟಿಂಗ್ ಮತ್ತು ಮಾಯಿಶ್ಚರೈಸಿಂಗ್ ಆಗಿದೆ. ಅಲ್ಲದೆ, ಮಲಗುವ ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನಿಮ್ಮ ಮೇಕ್ಅಪ್ ನೊಂದಿಗೆ ಎಂದಿಗೂ ಮಲಗಬೇಡಿ. ನೀವು ಹಾಗೇ ಮಲಗಿದರೆ, ಇದು ನಿಮ್ಮ ಚರ್ಮದ ಮೇಲ್ಮೈಯಲ್ಲಿ ಕೊಳಕು ಮತ್ತು ಡೆಡ್ ಸೆಲ್ ಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಚರ್ಮದ ರಂಧ್ರಗಳು ಮುಚ್ಚಿ ಮೊಡವೆ ಪೀಡಿತ ಮತ್ತು ಮಂದವಾಗಿಸುತ್ತದೆ.

ನಿಂಬೆ:

ನಿಂಬೆ:

ನಿಂಬೆಯಲ್ಲಿ ವಿಟಮಿನ್-ಸಿ ಸಮೃದ್ಧವಾಗಿದ್ದು, ಆಂಟಿ-ಪಿಗ್ಮೆಂಟೇಶನ್ ಗುಣಗಳನ್ನು ಹೊಂದಿದೆ, ಇದು ನಿಮ್ಮ ಚರ್ಮವನ್ನು ಉತ್ಸಾಹಭರಿತವಾಗಿ ಕಾಣಲು ಸಹಾಯ ಮಾಡುತ್ತದೆ.

ಇದಕ್ಕಾಗಿ ಒಂದು ಬಟ್ಟಲಲ್ಲಿ ನಿಂಬೆ ರಸ ಹಿಂಡಿ ತೆಗೆಯಿರಿ. ಹತ್ತಿ ಚೆಂಡನ್ನು ಬಳಸಿ ಮತ್ತು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ಇದನ್ನು 5-7 ನಿಮಿಷಗಳ ಕಾಲ ಬಿಡಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸೂಚನೆ: ಸುಡುವಿಕೆ, ತುರಿಕೆ ಅಥವಾ ಯಾವುದೇ ಸಮಸ್ಯೆಯನ್ನು ನೀವು ಅನುಭವಿಸಿದರೆ, ಅದನ್ನು ತಕ್ಷಣ ತೊಳೆಯಿರಿ.

ಜೇನುತುಪ್ಪ:

ಜೇನುತುಪ್ಪ:

ಜೇನುತುಪ್ಪವು ನಿಮ್ಮ ಚರ್ಮವನ್ನು ಆರ್ಧ್ರಕಗೊಳಿಸುವ ಗುಣಗಳನ್ನು ಹೊಂದಿದ್ದು, ಕಾಂತಿಯುತ ನೋಟವನ್ನು ನೀಡುತ್ತದೆ. ಇದು ನಿಮ್ಮ ಚರ್ಮವನ್ನು ಹೊಳೆಯಲು, ಮೃದು ಮತ್ತು ಕೊಬ್ಬಿದಂತೆ ಕಾಣಿಸಲು ಸಹಾಯ ಮಾಡುತ್ತದೆ.

ಇದಕ್ಕಾಗಿ ಒಂದು ತಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿ ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಅದನ್ನು ನಿಮ್ಮ ಬೆರಳ ತುದಿಯಿಂದ ಹಚ್ಚಿ. ಒಣಗಲು 10 ನಿಮಿಷಗಳ ಕಾಲ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದಕ್ಕೆ ಕೆಲವು ಹನಿ ನಿಂಬೆ ಸೇರಿಸಬಹುದು.

ಮೊಸರು:

ಮೊಸರು:

ಡಲ್ ಹಾಗೂ ಡೆಡ್ ಸೆಲ್ ಗಳನ್ನು ತೊಡೆದುಹಾಕಲು ಮೊಸರು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ಕೋಶಗಳಲ್ಲಿ ಟೈರೋಸಿನೇಸ್ ಚಟುವಟಿಕೆಗಳನ್ನು ತಡೆದು, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಪಿಗ್ಮೆಂಟೇಶನ್ ಮತ್ತು ಡಾರ್ಕ್ ಪ್ಯಾಚ್‌ಗಳನ್ನು ತೊಡೆದುಹಾಕಲು ಮೊಸರು ನಿಮಗೆ ಸಹಾಯ ಮಾಡುತ್ತದೆ ಮತ್ತು ಚರ್ಮದ ನೈಸರ್ಗಿಕ ಕಾಂತಿಯನ್ನು ಮರಳಿ ತರುತ್ತದೆ.

ಇದಕ್ಕಾಗಿ ಒಂದು ಬೌಲ್ ತೆಗೆದುಕೊಂಡು ಒಂದು ಚಮಚ ಮೊಸರು ಸೇರಿಸಿ. ಇದಕ್ಕೆ ಜೇನುತುಪ್ಪದ ಕೆಲವು ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಈ ಫೇಸ್ ಮಾಸ್ಕ್ / ಫೇಸ್ ಪ್ಯಾಕ್ ಅನ್ನು ವಾರಕ್ಕೆ ಮೂರು ಬಾರಿ ಬಳಸಬಹುದು.

ಹಸಿಹಾಲು:

ಹಸಿಹಾಲು:

ನೀವು ಡಲ್ ಹಾಗೂ ಟ್ಯಾನ್ ಯುಕ್ತ ಚರ್ಮವನ್ನು ಅನುಭವಿಸುತ್ತಿದ್ದರೆ, ಹಸಿ ಹಾಲು ಉತ್ತಮವಾಗಿದೆ. ಹಸಿ ಹಾಲನ್ನು ಮುಖ ಮತ್ತು ದೇಹ ಶುದ್ಧೀಕರಣವಾಗಿ ಬಳಸಬಹುದು. ಇದು ಎ, ಡಿ, ಇ, ಮತ್ತು ಕೆ ನಂತಹ ಪ್ರಮುಖ ಜೀವಸತ್ವಗಳನ್ನು ಹೊಂದಿದ್ದು, ನಿಮ್ಮ ಚರ್ಮವು ತಾರುಣ್ಯ ಮತ್ತು ಪ್ರಕಾಶಮಾನವಾಗಿರಲು ಸಹಾಯ ಮಾಡುತ್ತದೆ. ಹಾಲು ಒಂದು ಉತ್ತಮ ಎಫ್ಫೋಲಿಯೇಟಿಂಗ್ ಮತ್ತು ಹೈಡ್ರೇಟಿಂಗ್ ಏಜೆಂಟ್ ಆಗಿದ್ದು, ಇದನ್ನು ನಿಮ್ಮ ಚರ್ಮದ ಹೊಳಪನ್ನು ಮರಳಿ ತರಲು ಬಳಸಬಹುದು.

ಇದಕ್ಕಾಗಿ ಒಂದು ಬಟ್ಟಲಲ್ಲಿ ಸ್ವಲ್ಪ ಹಸಿ ತೆಗೆದುಕೊಂಡು ಅದನ್ನು ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ರೆಫ್ರಿಜರೇಟರ್ ನಲ್ಲಿ ಇರಿಸಿ. ಹತ್ತಿ ಚೆಂಡನ್ನು ಬಳಸಿ, ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಾಕಿ. ಅದನ್ನು ಒಣಗಲು ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಸೌತೆಕಾಯಿ:

ಸೌತೆಕಾಯಿ:

ಸೌತೆಕಾಯಿ ನಿಮ್ಮ ಚರ್ಮಕ್ಕೆ ಉತ್ತಮವಾದ ಹಣ್ಣು. ಇದು ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಹಣ್ಣಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮ್ಮ ಚರ್ಮವನ್ನು ಕಾಂತಿಯುಕ್ತಗೊಳಿಸಲು ಸಹಾಯ ಮಾಡುತ್ತದೆ.

ಇದಕ್ಕಾಗಿ ಒಂದು ಬೌಲ್ ನಲ್ಲಿ ತುರಿದ ಸೌತೆಕಾಯಿ ಸೇರಿಸಿ. ಈಗ ನಿಮ್ಮ ಅಂಗೈ ಬಳಸಿ, ಸೌತೆಕಾಯಿ ರಸವನ್ನು ಹಿಂಡಿ, ಮತ್ತೊಂದು ಬಟ್ಟಲಿಗೆ ಸುರಿಯಿರಿ. ಹತ್ತಿ ಚೆಂಡನ್ನು ಬಳಸಿ ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿಕೊಳ್ಳಿ. ಒಣಗಿದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಅಲೋವೆರಾ ಜೆಲ್ ಅನ್ನು ಸಹ ಸೇರಿಸಬಹುದು.

English summary

Dull Skin: Reasons And Home Remedies To Treat It

Everyday life takes a toll on your skin, making it look tired and dull. Here are easy ways to revive your tired skin. have a look
X
Desktop Bottom Promotion