For Quick Alerts
ALLOW NOTIFICATIONS  
For Daily Alerts

ತ್ವಚೆಯ ದಿಢೀರ್ ಕಾಂತಿಗೆ ರೋಸ್ ವಾಟರ್‌ ಮತ್ತು ಗ್ಲಿಸರಿನ್ ಇಂದೇ ಬಳಸಿ

|

ಕಾಂತಿಯುತ ತ್ವಚೆ ಪಡೆಯುವುದು ಕೇವಲ ಒಂದು ರಾತ್ರಿಯಲ್ಲಿ ದಕ್ಕಿಸಿಕೊಳ್ಳಬಹುದಾದ ಪವಾಡವಂತೂ ಖಂಡಿತ ಅಲ್ಲ.ಹಾಗಂತ ಆಕರ್ಷಕವಾಗಿರುವ ತ್ವಚೆ ಪಡೆಯುವುದು ಅಸಾಧ್ಯವಾಗಿರುವ ಕೆಲಸವೂ ಅಲ್ಲ. ಅದಕ್ಕಾಗಿ ನೀವು ಸರಿಯಾದ ಚರ್ಮದ ರಕ್ಷಣೆಯ ಮಾರ್ಗಗಳನ್ನು ಅನುಸರಿಸಬೇಕು ಮತ್ತು ಸರಿಯಾದ ಪದಾರ್ಥಗಳ ಬಳಕೆಯನ್ನು ನಿಮ್ಮ ಚರ್ಮಕ್ಕೆ ಮಾಡಬೇಕಾಗುತ್ತದೆ.
ಗ್ಲಿಸರಿನ್ ಮತ್ತು ರೋಸ್ ವಾಟರ್ ಎರಡು ಪದಾರ್ಥಗಳು ಮಹಿಳೆಯರ ಚರ್ಮದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಮುಖ್ಯವಾಗಿ ಗ್ಲಿಸರಿನ್ ಮತ್ತು ರೋಸ್ ವಾಟರ್ ಅನ್ನು ಬ್ಲೆಂಡ್ ಮಾಡುವ ಮೂಲಕ ಮುಖಕ್ಕೆ ಬಳಕೆ ಮಾಡಿದರೆ (ನಿಮ್ಮ ಅಲರ್ಜಿ ಇರುವ ಚರ್ಮ ಅಲ್ಲದೇ ಇದ್ದರೆ) ಸಾಕಷ್ಟು ಲಾಭವನ್ನು ಪಡೆಯಬಹುದು ಮತ್ತು ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ. ಹಾಗಾದ್ರೆ ಚರ್ಮ ಮತ್ತು ಮುಖಕ್ಕೆ ಗ್ಲಿಸರಿನ್,ರೋಸ್ ವಾಟರ್ ಅನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳುವುದಕ್ಕಾಗಿ ಮುಂದೆ ಓದಿ.

Glycerin And Rose Water
ಚರ್ಮಕ್ಕೆ ತಡೆಗೋಡೆ

ಚರ್ಮಕ್ಕೆ ತಡೆಗೋಡೆ

1. ಇದು ಚರ್ಮಕ್ಕೆ ತಡೆಗೋಡೆಯಂತೆ ರಕ್ಷಣೆ ನೀಡುತ್ತದೆ ಗ್ಲಿಸರಿನ್ ನಿಮ್ಮ ಚರ್ಮವನ್ನು ಆರ್ಧ್ರಕವಾಗಿಸುವ ಒಂದು ಅತ್ಯಧ್ಬುತ ಹಮೆಕ್ಟಂಟ್ ಆಗಿದೆ. ಟ್ರಾನ್ಸ್ ಪಿಡರ್ಮಲ್ ನೀರಿನ ನಷ್ಟ ಅಥವಾ TEWL (ಎಪಿಡರ್ಮಿಸ್ ಮೂಲಕ ದೇಹದಿಂದ ನಷ್ಟವಾಗುವ ನೀರು) ನಿಮ್ಮ ಚರ್ಮದ ಸಾಮಾನ್ಯ ಕಾರ್ಯವನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಅಂಶವಾಗಿದೆ. ಗ್ಲಿಸರಿನ್ ನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದಾಗಿ TEWL ನ್ನು ತಡೆಯಬಹುದು ಮತ್ತು ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡಬಹುದು ಎಂಬುದಾಗಿ ಅಧ್ಯಯನವೊಂದು ಬಹಿರಂಗಪಡಿಸಿದೆ.

2. ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ

2. ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ನಿಮ್ಮದು ಡಿಹೈಡ್ರೇಟ್ ಆಗಿರುವ ಚರ್ಮ ಮತ್ತು ಅಟಾಪಿಕ್ ಡರ್ಮಟೈಟಿಸ್ನಂತೆ ಸಮಸ್ಯೆ ಇರುವ ಚರ್ಮವಾಗಿದ್ದಲ್ಲಿ ಖಂಡಿತ ನಿಮ್ಮ ಚರ್ಮವು ಗ್ಲಿಸರಿನ್ ನ್ನು ಹೆಚ್ಚು ಇಷ್ಟಪಡುತ್ತದೆ. ಈಗಾಗಲೇ ತಿಳಿಸಿರುವಂತೆ ಗ್ಲಿಸರಿನ್ ಒಂದು ಹಮೆಕ್ಟಂಟ್ ಅಂದರೆ ವಾತಾವರಣದಲ್ಲಿರುವ ತೇವಾಂಶವನ್ನು ಇದು ಆಕರ್ಷಿಸುತ್ತದೆ ಮತ್ತು ಚರ್ಮವನ್ನು ಶುಷ್ಕತೆಯಿಂದ ಕಾಪಾಡುವಲ್ಲಿ ನೆರವು ನೀಡುತ್ತದೆ.

3. ಚರ್ಮದ ಪ್ರವೇಶ ಸಾಧ್ಯತೆಯನ್ನು ವೃದ್ಧಿಸುತ್ತದೆ

3. ಚರ್ಮದ ಪ್ರವೇಶ ಸಾಧ್ಯತೆಯನ್ನು ವೃದ್ಧಿಸುತ್ತದೆ

ಮನುಷ್ಯನ ಚರ್ಮವು ಕಡಿಮೆ ಪ್ರವೇಶಸಾಧ್ಯತೆಯನ್ನು ಹೊಂದಿರುತ್ತದೆ. ಅಂದರೆ ವಿದೇಶಿ ವಸ್ತುಗಳು ಚರ್ಮದ ಪದರವನ್ನು ಭೇದಿಸಿ ಒಳನುಸುಳುವುದು ಬಹಳ ಕಠಿಣ. ಅದೇ ಕಾರಣಕ್ಕೆ ಕೆಲವು ಚರ್ಮದ ರಕ್ಷಣೆಯ ಉತ್ಪನ್ನಗಳು ನಿಮ್ಮ ಚರ್ಮದ ಮೇಲೆ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಗ್ಲಿಸರಾಲ್ (ವಾಣಿಜ್ಯಿಕವಾಗಿ ಗ್ಲಿಸರಿನ್ ಎಂದು ಕರೆಯಲಾಗುತ್ತದೆ) ಚರ್ಮದ ಪ್ರವೇಶ ಸಾಧ್ಯತೆಯನ್ನು ಅಧಿಕಗೊಳಿಸುವುದಕ್ಕೆ ನೆರವು ನೀಡುತ್ತದೆ.

ರೋಸ್ ವಾಟರ್ ನಿಂದ ಚರ್ಮಕ್ಕೆ ಈ ಲಾಭಗಳನ್ನು ಪಡೆದುಕೊಳ್ಳಬಹುದು:

ರೋಸ್ ವಾಟರ್ ನಿಂದ ಚರ್ಮಕ್ಕೆ ಈ ಲಾಭಗಳನ್ನು ಪಡೆದುಕೊಳ್ಳಬಹುದು:

1. ಸೂಕ್ಷ್ಮವಾಗಿರುವ ಮತ್ತು ವಯಸ್ಸಾದಂತೆ ಕಾಣುವ ಚರ್ಮಕ್ಕೆ ಒಳಿತು ಮಾಡುತ್ತದೆ

ಒಂದು ವೇಳೆ ನಿಮ್ಮ ಶುಷ್ಕವಾಗಿರುವ ಅಥವಾ ವಯಸ್ಸಾದಂತೆ ಕಾಣುವ ಚರ್ಮವಿದ್ದಲ್ಲಿ ರೋಸ್ ವಾಟರ್ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಯುತವಾಗಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಲ್ಲಿ ಆಂಟಿ-ಏಜಿಂಗ್ ಗುಣಗಳಿವೆ ಮತ್ತು ನಿಯಮಿತವಾಗಿ ಇದನ್ನು ಬಳಸುವುದರಿಂದಾಗಿ ನಿಮ್ಮ ಚರ್ಮದ ಈ ಸಮಸ್ಯೆಯಿಂದ ದೂರವಾಗಬಹುದು. ಇದು ಚರ್ಮದ ಉಸಿರಾಟ ಪ್ರಕ್ರಿಯೆಗೆ ನೆರವು ನೀಡುತ್ತದೆ ಮತ್ತು ಚರ್ಮದ ಪದರವನ್ನು ಉತ್ತಮಗೊಳಿಸಿ ಚರ್ಮ ಕೆಂಪಗಾಗುವುದನ್ನು ತಡೆಯುತ್ತದೆ.

2. ಉರಿಯ ಪರಿಣಾಮಗಳನ್ನು ತಡೆಯುವ ಸಾಮರ್ಥ್ಯವಿದೆ

2. ಉರಿಯ ಪರಿಣಾಮಗಳನ್ನು ತಡೆಯುವ ಸಾಮರ್ಥ್ಯವಿದೆ

ಗುಲಾಬಿಯ ಹೂವುಗಳಲ್ಲಿ ಟ್ಯಾನಿನ್, ಆಂಥೋಸಯಾನಿನ್ ಮತ್ತು ಸಾರಭೂತ ತೈಲಗಳಿರುತ್ತದೆ. ಗುಲಾಬಿಯ ಈ ರಸದಲ್ಲಿ ಉರಿಯೂತವನ್ನು ತಡೆಯುವ ಗುಣಗಳಿದೆ ಮತ್ತು ಫೈಬ್ರೋಬ್ಲಾಸ್ಟ್ ಜೀವಕೋಶಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. (ಈ ಜೀವಕೋಶಗಳು ಕಾಲಜನ್ ಸಂಶ್ಲೇಷಣೆಗೆ ಕಾರಣವಾಗಿರುವ ಕೋಶಗಳಾಗಿವೆ. ಇವುಗಳು ಚರ್ಮ ಹಾನಿಯಾಗುವಿಕೆ ಕಾರಣವಾಗಿರುತ್ತದೆ)

3. ಚರ್ಮವನ್ನು ಶಾಂತಗೊಳಿಸುವ ಗುಣ

3. ಚರ್ಮವನ್ನು ಶಾಂತಗೊಳಿಸುವ ಗುಣ

ರೋಸ್ ವಾಟರ್ ನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವನ್ನು ಶಾಂತಗೊಳಿಸಿಕೊಳ್ಳಬಹುದು ಮತ್ತು ತಣ್ಣನೆಯ ಅನುಭವವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಚರ್ಮಕ್ಕೆ ಹೈಡ್ರೇಟ್ ಮಾಡುವ ಗುಣ ಇದಕ್ಕಿದೆ.ಅದರಲ್ಲೂ ಪ್ರಮುಖವಾಗಿ ದಿನವಿಡೀ ಬಳಲುವಿಕೆಯಿಂದ ಬೆಂಡಾಗಿರುವ ನಿಮ್ಮ ಚರ್ಮಕ್ಕೆ ಇದು ಆರಾಮದಾಯಕ ಅನುಭವವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲ ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಆಗವ ಅಡ್ಡಪರಿಣಾಮಗಳನ್ನು ತಡೆಯುವಲ್ಲಿ ಬಹಳ ಪ್ರಮುಖ ಪಾತ್ರವನ್ನು ಇದು ವಹಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ರೋಸ್ ವಾಟರ್ ನಲ್ಲಿ ಇತರೆ ರಾಸಾಯನಿಕಗಳು ಇರುವ ಸಾಧ್ಯತೆ ಇದ್ದು ಅದು ನಿಮ್ಮ ಚರ್ಮಕ್ಕೆ ದುಷ್ಪರಿಣಾಮ ಮಾಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಗುಲಾಬಿ ದಳಗಳನ್ನು ಬಳಸಿ ಮನೆಯಲ್ಲಿ ಗುಲಾಬಿ ರಸವನ್ನು ತೆಗೆದು ರೋಸ್ ವಾಯರ್ ತಯಾರಿಸಿಕೊಂಡರೆ ಹೆಚ್ಚು ಉತ್ತಮ ಪರಿಣಾಮಗಳನ್ನು ನೀವು ನಿಮ್ಮ ಚರ್ಮಕ್ಕೆ ಪಡೆದುಕೊಳ್ಳಬಹುದು.

ಇದೀಗ ನಿಮಗೆ ಈ ಎರಡೂ ಪದಾರ್ಥಗಳು ನಿಮ್ಮ ಚರ್ಮಕ್ಕೆ ಯಾವ ರೀತಿ ಪರಿಣಾಮ ನೀಡಬಲ್ಲವು ಎಂಬ ಬಗ್ಗೆ ತಿಳಿದುಕೊಂಡಾಗಿದೆ. ಹಾಗಾದ್ರೆ ಇದನ್ನು ಬಳಸುವುದು ಹೇಗೆ? ಮುಖಕ್ಕೆ ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇವೆ.

ಗ್ಲಿಸರಿನ್ ಮತ್ತು ರೋಸ್ ವಾಟರ್ ನ್ನು ಮುಖಕ್ಕೆ ಬಳಸುವುದು ಹೇಗೆ?

ಸೂಚನೆ: ಗ್ಲಿಸರಿನ್ ಅನ್ನು ನೇರವಾಗಿ ನಿಮ್ಮ ಚರ್ಮಕ್ಕೆ ಬಳಸುವುದನ್ನು ತಪ್ಪಿಸಿ. ಯಾವಾಗಲೂ ಕೂಡ ರೋಸ್ ವಾಟರ್ ನೊಂದಿಗೆ ಕರಗಿಸಿಯೇ ಬಳಸಬೇಕು. ನೇರವಾಗಿ ಒಂದು ವೇಳೆ ನೀವು ಬಳಕೆ ಮಾಡಿದರೆ ಕೆಲವು ರೀತಿಯ ಪರಿಣಾಮಗಳಿಗೆ ಕಾರಣವಾಗಬಹುದು ಮತ್ತು ಗ್ಲಿಸರಿನ್ ನಿಮ್ಮ ಚರ್ಮವನ್ನು ಶುಷ್ಕಗೊಳಿಸುವ ಸಾಧ್ಯತೆ ಇದೆ.

1. ರೋಸ್ ವಾಟರ್ ಮತ್ತು ಗ್ಲಿಸರಿನ್ ಟೋನರ್

1. ರೋಸ್ ವಾಟರ್ ಮತ್ತು ಗ್ಲಿಸರಿನ್ ಟೋನರ್

ನಿಮಗೆ ಬೇಕಾಗುವ ಅಗತ್ಯ ವಸ್ತುಗಳು:

4 ಟೇಬಲ್ ಸ್ಪೂನ್ ನಷ್ಟು ರೋಸ್ ವಾಟರ್

2 ಟೇಬಲ್ ಸ್ಪೂನ್ ಗಳಷ್ಟು ಗ್ಲಿಸರಿನ್

ಗಾಳಿ ಹೋಗದಂತಿರುವ ಸ್ಪ್ರೇ ಬಾಟಲಿ

ವಿಧಾನ:

ಸ್ಪ್ರೇ ಬಾಟಲಿಯಲ್ಲಿ ಎರಡೂ ವಸ್ತುಗಳನ್ನು ಸೇರಿಸಿ.

ಚೆನ್ನಾಗಿ ಮಿಕ್ಸ್ ಆಗುವುದಕ್ಕಾಗಿ ಸರಿಯಾಗಿ ಅಲುಗಾಡಿಸಿ

ಯಾವಾಗ ಮುಖ ಶುಷ್ಕವೆನಿಸುತ್ತದೆಯೋ ಆಗ ಮುಖಕ್ಕೆ ಈ ಮಿಶ್ರಣವನ್ನು ಸ್ಪ್ರೇ ಮಾಡಿಕೊಳ್ಳಿ.

2. ರೋಸ್ ವಾಟರ್ ಮತ್ತು ಗ್ಲಿಸರನ್ ಮಿಶ್ರಿತ ಮೇಕಪ್ ಸೆಟ್ಟಿಂಗ್ ಸ್ಪ್ರೇ

2. ರೋಸ್ ವಾಟರ್ ಮತ್ತು ಗ್ಲಿಸರನ್ ಮಿಶ್ರಿತ ಮೇಕಪ್ ಸೆಟ್ಟಿಂಗ್ ಸ್ಪ್ರೇ

ನಿಮಗೆ ಬೇಕಾಗುವ ವಸ್ತುಗಳು:

4 ಟೇಬಲ್ ಸ್ಪೂನ್ ಗ್ಲಿಸರಿನ್

6 ಟೇಬಲ್ ಸ್ಪೂನ್ ರೋಸ್ ವಾಟರ್

2 ಟೇಬಲ್ ಸ್ಪೂನ್ ವಿಟ್ಜ್ ಹೇಜಲ್(witch hazel)

½ ಟೇಬಲ್ ಸ್ಪೂನ್ ಟೀ ಟ್ರೀ ಆಯಿಲ್ (ಬೇಕಿದ್ದರೆ ಹಾಕಿಕೊಳ್ಳಬಹುದು)

ಸ್ಪ್ರೇ ಬಾಟಲ್

ಮಾಡುವ ವಿಧಾನ:

ಕೊಳವೆಯನ್ನು ಬಳಸಿ ಎಲ್ಲಾ ಪದಾರ್ಥಗಳನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ.

ನಿಧಾನವಾಗಿ ಅದನ್ನು ಕುಲುಕಾಡಿ.

ಕ್ಯಾಪ್ ನ್ನು ಬದಲಾಯಿಸಿ ಮತ್ತು ನಿಮ್ಮ ಕೈಗಳ ನಡುವೆ ಬಾಟಲಿಯನ್ನು ಇಟ್ಟು ನಿಧಾನವಾಗಿ ಅಲುಗಾಡಿಸಿ ಪದಾರ್ಥಗಳನ್ನು ಮಿಕ್ಸ್ ಮಾಡಿ( ತುಂಬಾ ಕಠಿಣವಾಗಿ ಅಲುಗಾಡಿಸಬೇಡಿ)

ನಿಧಾನವಾಗಿ ಅಲುಗಾಡಿಸಿ ಮತ್ತು ನಿಮ್ಮ ಮುಖಕ್ಕೆ ಸ್ಪ್ರೇ ಮಾಡಿಕೊಳ್ಳಿ.

ಇದು ಹೇಗೆ ಸಹಾಯ ಮಾಡುತ್ತದೆ?

ಉರಿಯೂತ ಮತ್ತು ಮೊಡವೆಗಳನ್ನು ಹೊಡೆದೋಡಿಸುವ ಆಂಟಿಬ್ಯಾಕ್ಟೀರಿಯಾ ಗುಣಗಳು ವಿಟ್ಸ್ ಹ್ಯಾಜಲ್ ನಲ್ಲಿದೆ. ಟೀ ಟ್ರೀ ಎಣ್ಣೆಯು ನಿಮ್ಮ ಚರ್ಮವನ್ನು ಬ್ಯಾಕ್ಟೀರಿಯಾ,ವೈರಸ್ ಮತ್ತು ಸೇರಿದಂತೆ ಇತರೆ ಬಾಧೆಗಳಿಂದ ರಕ್ಷಣೆ ನೀಡುತ್ತದೆ ಅಷ್ಟೇ ಅಲ್ಲ ನಿಮ್ಮ ಚರ್ಮಕ್ಕೆ ಕೂಲಿಂಗ್ ಅನುಭೂತಿಯನ್ನು ಒದಗಿಸುತ್ತದೆ.

3. ರೋಸ್ ವಾಟರ್ ಮತ್ತು ಗ್ಲಿಸರಿನ್ ಫೇಶಿಯಲ್ ಕ್ಲೆನ್ಸರ್

3. ರೋಸ್ ವಾಟರ್ ಮತ್ತು ಗ್ಲಿಸರಿನ್ ಫೇಶಿಯಲ್ ಕ್ಲೆನ್ಸರ್

ನಿಮಗೆ ಬೇಕಾಗುವ ವಸ್ತುಗಳು

1 ½ ಕಪ್ ನಷ್ಟು ರೋಸ್ ವಾಟರ್

2 ಟೇಬಲ್ ಸ್ಪೂನ್ ನಷ್ಟು ಪರಿಮಳವಿಲ್ಲದ ಕ್ಯಾಸ್ಟೈಲ್ ಸೋಪು

1 ಟೇಬಲ್ ಸ್ಪೂನ್ ಗ್ಲಿಸರಿನ್

1 ಟೇಬಲ್ ಸ್ಪೂನ್ ವಿಟಮಿನ್ ಇ ಆಯಿಲ್

1 ಗಾಳಿಹೋಗದಂತಹ ಗ್ಲಾಸ್ ಜಾರ್

ವಿಧಾನ:

ಒಂದು ಬೌಲ್ ಗೆ ಎಲ್ಲಾ ಪದಾರ್ಥಗಳನ್ನು ಹಾಕಿಕೊಳ್ಳಿ.

ಎಲ್ಲವೂ ಸರಿಯಾಗಿ ಮಿಶ್ರಣವಾಗುವಂತೆ ಕೆಲವು ಸೆಕೆಂಡುಗಳ ಕಾಲ ಚೆನ್ನಾಗಿ ಕುಲುಕಿ.

ಗ್ಲಾಸ್ ಜಾರ್ ಗೆ ಎಲ್ಲವನ್ನೂ ಹಾಕಿಕೊಳ್ಳಿ.

ಪ್ರತಿ ದಿನ ನಿಮ್ಮ ಮುಖ ತೊಳೆಯುವುದಕ್ಕೆ ಈ ಮಿಶ್ರಣವನ್ನೇ ಬಳಸಿ.

ಇದು ಹೇಗೆ ನಿಮಗೆ ಸಹಾಯ ಮಾಡುತ್ತದೆ?

ಕ್ಯಾಸ್ಟೈಲ್ ಸೋಪು ನಿಮ್ಮ ಚರ್ಮದ ಮೇಲೆ ಸೌಮ್ಯವಾಗಿರುತ್ತದೆ ಮತ್ತು ಮೊಡವೆಗಳನ್ನು ತಡೆಯುವುದಕ್ಕೆ ಸಹಾಯ ಮಾಡುತ್ತದೆ. ಫ್ರೀ ರ್ಯಾಡಿಕಲ್ ಗಳಿಂದಾಗುವ ಡ್ಯಾಮೇಜ್ ಗಳನ್ನು ವಿಟಮಿನ್ ಇ ರಕ್ಷಿಸಿ ಚರ್ಮವನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲದ ನಿವಾರಣೆಗೆ ಇದು ನೆರವು ನೀಡುತ್ತದೆ.

4. ರೋಸ್ ವಾಟರ್ ಮತ್ತು ಗ್ಲಿಸರಿನ್ ಮಿಶ್ರಿತ ಫೇಶಿಯಲ್ ಮಾಸ್ಕ್

4. ರೋಸ್ ವಾಟರ್ ಮತ್ತು ಗ್ಲಿಸರಿನ್ ಮಿಶ್ರಿತ ಫೇಶಿಯಲ್ ಮಾಸ್ಕ್

ನಿಮಗೆ ಬೇಕಾಗುವ ಸಾಮಗ್ರಿಗಳು:

1 ಟೇಬಲ್ ಸ್ಪೂನ್ ಗ್ಲಿಸರಿನ್

1 ಟೇಬಲ್ ಸ್ಪೂನ್ ರೋಸ್ ವಾಟರ್

ನೀರು

2-3 ಹನಿಗಳಷ್ಟು ಸಿರಮ್ (ನಿಮ್ಮ ನೆಚ್ಚಿನ ಸಿರಮ್ ಆಯ್ಕೆ ಮಾಡಿಕೊಳ್ಳಿ)

1 ಎಸೆಯಬಹುದಾದ ಹತ್ತಿಯ ಶೀಟ್ ಮಾಸ್ಕ್

ವಿಧಾನ:

ಎಲ್ಲಾ ವಸ್ತುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಕಾಟನ್ ಶೀಟ್ ಮಾಸ್ಕ್ ಗೆ ಸವರಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆಯೇ ಬಿಡಿ.ನಂತರ ಅದನ್ನು ತೆಗೆಯಿರಿ ಮತ್ತು ನಿಮ್ಮ ಮುಖದಲ್ಲಿರುವ ಹೆಚ್ಚುವರಿ ನೀರಿನಂಶವನ್ನು ರಿಮೂವ್ ಮಾಡಿ.ವಾರಕ್ಕೆ ಮೂರು ಬಾರಿಯಾದರೂ ಈ ರೆಸಿಪಿಯನ್ನು ಬಳಕೆ ಮಾಡಿ.

ಇದು ಹೇಗೆ ಸಹಾಯ ಮಾಡುತ್ತದೆ?

ಈ ಸಿರಮ್ ಹಲವು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಉದಾಹರಣೆಗೆ ಆಕ್ನೆ, ಶುಷ್ಕತೆ, ಚರ್ಮದ ನೆರಿಗೆಗಳು, ಕಪ್ಪು ಚುಕ್ಕಿಗಳು ಇತ್ಯಾದಿ.

5. ರೋಸ್ ವಾಟರ್ ಮತ್ತು ಗ್ಲಿಸರಿನ್ ಮಾಯ್ಚರೈಸರ್

5. ರೋಸ್ ವಾಟರ್ ಮತ್ತು ಗ್ಲಿಸರಿನ್ ಮಾಯ್ಚರೈಸರ್

ನಿಮಗೆ ಬೇಕಾಗುವ ಸಾಮಗ್ರಿಗಳು:

1 ಟೇಬಲ್ ಸ್ಪೂನ್ ಗ್ಲಿಸರಿನ್

4 ಟೇಬಲ್ ಸ್ಪೂನ್ ರೋಸ್ ವಾಟರ್

ಗಾಜಿನ ಹನಿಬೀಳುವಂತಿರುವ ಬಾಟಲಿ

ವಿಧಾನ:

ಒಂದು ಗಾಜಿನ ಡ್ರಾಪ್ಪರ್ ಬಾಟಲಿಯಲ್ಲಿ ಎಲ್ಲಾ ಪದಾರ್ಥಗಳನ್ನು ಸೇರಿಸಿ.

ಬಾಟಲಿಯ ಮುಚ್ಚಳವನ್ನು ಮುಚ್ಚಿ ಮತ್ತು ಚೆನ್ನಾಗಿ ಅಲುಗಾಡಿಸಿ. ಎರಡರಿಂದ ಮೂರು ಹನಿಗಳನ್ನು ನಿಮ್ಮ ಮುಖಕ್ಕೆ ಹಾಕಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

ಪ್ರತಿದಿನವೂ ಎರಡು ಬಾರಿ ಹೀಗೆ ಮಾಡಿ. ಒಮ್ಮೆ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಿಕೊಳ್ಳಿ.

6. ರೋಸ್ ವಾಟರ್ ಮತ್ತು ಗ್ಲಿಸರಿನ್ ಸಿರಮ್

6. ರೋಸ್ ವಾಟರ್ ಮತ್ತು ಗ್ಲಿಸರಿನ್ ಸಿರಮ್

ನಿಮಗೆ ಬೇಕಾಗುವ ಸಾಮಗ್ರಿಗಳು:

2 ಟೇಬಲ್ ಸ್ಪೂನ್ ಗ್ಲಿಸರಿನ್

1 ಟೇಬಲ್ ಸ್ಪೂನ್ ರೇಸ್ ವಾಟರ್ (ಸಾವಯವ)

2 ಟೇಬಲ್ ಸ್ಪೂನ್ ಅಲವೀರಾ ಜಲ್

½ ಟೇಬಲ್ ಸ್ಪೂನ್ ಆರ್ಗನ್ ಎಣ್ಣೆ

5 ಹನಿಗಳಷ್ಟು ಜೆರೇನಿಯಂ ಸಾರಭೂತ ತೈಲ

1 ಗಾಜಿನ ಹನಿಬೀಳುವಂತಿರುವ ಬಾಟಲಿ

1 ಕೊಳವೆ

ವಿಧಾನ:

ಗಾಜಿನ ಡ್ರಾಪರ್ ಬಾಟಲಿಯಲ್ಲಿ ಎಲ್ಲಾ ಪದಾರ್ಥಗಳನ್ನು ಸೇರಿಸಿ. ಕೊಳವೆಯನ್ನು ಬಳಸಿ ಪದಾರ್ಥಗಳು ಚೆಲ್ಲದಂತೆ ನೋಡಿಕೊಳ್ಳಿ. ಬಾಟಲಿಯ ಮುಚ್ಚುಳ ಹಾಕಿ ಮತ್ತು ನಿಮ್ಮ ಕೈಯಲ್ಲಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಈ ಸಿರಮ್ ನ್ನು ತಣ್ಣಗಿರುವ ಪ್ರದೇಶದಲ್ಲಿ ಸ್ಟೋರ್ ಮಾಡಿಕೊಳ್ಳಿ.

ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕೆಲವು ಹನಿಗಳಷ್ಟು ಸಿರಮ್ ನ್ನು ಕೈಗಳಿಗೆ ಹಚ್ಚಿಕೊಂಡು ನಂತರ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ನಿಮ್ಮ ಅನುಕೂಲವಾಗುವ ಹೊತ್ತಿಗೆ ಅಥವಾ ರಾತ್ರಿಯ ವೇಳೆಗೆ ಈ ಸಿರಮ್ ನ್ನು ಅಪ್ಲೈ ಮಾಡಿಕೊಳ್ಳಿ.

ಇದು ಹೇಗೆ ಸಹಾಯ ಮಾಡುತ್ತದೆ?

ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದಕ್ಕೆ ಅಲವೀರಾ ಜೆಲ್ ಸಹಾಯ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಇದು ಹೆಚ್ಚಿಸುತ್ತದೆ. ಚರ್ಮದಲ್ಲಿ ಸುಕ್ಕುಗಳಾಗುವುದನ್ನು ಇದು ತಡೆಯುತ್ತದೆ. ಅರ್ಗಾನ್ ಎಣ್ಣೆ ಚರ್ಮ ಆರೋಗ್ಯ ಹೆಚ್ಚಿಸುತ್ತದೆ ಮತ್ತು ಚರ್ಮದ ಹೈಡ್ರೇಷನ್ ಮತ್ತು ಚರ್ಮವನ್ನು ಮೃದುಗೊಳಿಸುವುದಕ್ಕೆ ಇದು ನೆರವು ನೀಡುತ್ತದೆ. ಜೆರೇನಿಯಂ ಎಣ್ಣೆಯು ಮೊಡವೆಯನ್ನು ತೆಗೆಯುತ್ತದೆ ಚರ್ಮಕ್ಕೆ ವಯಸ್ಸಾಗುವಿಕೆಯನ್ನು ಇದು ತಡೆಯುತ್ತದೆ. ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಗೆ ಇದು ನೆರವಾಗುತ್ತದೆ.

7. ರೋಸ್ ವಾಟರ್ ಮತ್ತು ಗ್ಲಿಸರಿನ್ ಫೇಸ್ ಮಿಸ್ಟ್

7. ರೋಸ್ ವಾಟರ್ ಮತ್ತು ಗ್ಲಿಸರಿನ್ ಫೇಸ್ ಮಿಸ್ಟ್

ನಿಮಗೆ ಬೇಕಾಗುವ ಸಾಮಗ್ರಿಗಳು:

¼ ಕಪ್ ನಷ್ಟು ರೋಸ್ ವಾಟರ್

2 ಟೇಬಲ್ ಸ್ಪೂನ್ ಗ್ಲಿಸರಿನ್

¼ ಕಪ್ ಭಟ್ಟಿ ಇಳಿಸಿದ ನೀರು

ಸ್ಪ್ರೇ ಬಾಟಲಿ

ವಿಧಾನ:

ಸ್ಪ್ರೇ ಬಾಟಲಿಗೆ ಭಟ್ಟಿ ಇಳಿಸಿದ ನೀರನ್ನು ಸುರಿಯಿರಿ. ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಮುಖದ ಮೇಲೆ ಇದನ್ನು ಸಿಂಪಡಿಸಿಕೊಳ್ಳಿ ಮತ್ತು ಅದನ್ನು ಮುಖ ಹೀರಿಕೊಳ್ಳುವವರೆಗೆ ಹಾಗೆಯೇ ಬಿಡಿ. ನಿಮ್ಮ ಚರ್ಮಕ್ಕೆ ಅಗತ್ಯವೆನಿಸಿದಾಗಲೆಲ್ಲಾ ಇದನ್ನು ಬಳಕೆ ಮಾಡಬಹುದು. ಪ್ರತಿದಿನವಿಡೀ ಬಳಕೆ ಮಾಡಿದರೂ ಪರವಾಗಿಲ್ಲ.

8. ರೋಸ್ ವಾಟರ್,ಗ್ಲಿಸರಿನ್ ಮತ್ತು ಲಿಂಬೆ ಮಿಶ್ರಿತ ಸ್ಕಿನ್ ಟೋನರ್

8. ರೋಸ್ ವಾಟರ್,ಗ್ಲಿಸರಿನ್ ಮತ್ತು ಲಿಂಬೆ ಮಿಶ್ರಿತ ಸ್ಕಿನ್ ಟೋನರ್

ನಿಮಗೆ ಬೇಕಾಗುವ ಸಾಮಗ್ರಿಗಳು:

1/2 ಕಪ್ ನಷ್ಟು ರೋಸ್ ವಾಟರ್

5 ಹನಿಗಳಷ್ಟು ಗ್ಲಿಸರಿನ್

ಅರ್ಧ ಲಿಂಬೆ ರಸ

ವಿಧಾನ:

ರೋಸ್ ವಾಟರ್ ನೊಂದಿಗೆ ಲಿಂಬೆಯ ರಸವನ್ನು ಸೇರಿಸಿ.

ಈ ಮಿಶ್ರಣಕ್ಕೆ ಗ್ಲಿಸರಿನ್ ಕೂಡ ಸೇರಿಸಿ.

ಗಾಜಿನ ಬಾಟಲಿಯಲ್ಲಿ ಈ ಮಿಶ್ರಣವನ್ನು ಸ್ಟೋರ್ ಮಾಡಿಕೊಳ್ಳಿ. ಟೋನರ್ ನಂತೆ ಇದನ್ನು ಬಳಕೆ ಮಾಡುವುದಕ್ಕಾಗಿ ಹತ್ತಿಯ ಉಂಡೆಗಳನ್ನು ಬಳಸಿ.

10 ರಿಂದ 15 ನಿಮಿಷಕ್ಕೂ ಅಧಿಕ ಮುಖದಲ್ಲಿ ಇಟ್ಟುಕೊಳ್ಳಬೇಡಿ. ನಂತರ ಮುಖವನ್ನು ತೊಳೆದುಕೊಳ್ಳಿ.

ಪ್ರತಿದಿನವೂ ಒಮ್ಮೆ ಇದನ್ನು ಬಳಕೆ ಮಾಡಿ.

ಇದು ಹೇಗೆ ಸಹಾಯಕ?

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸಂಕೋಚಕವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಚರ್ಮದ ಟೋನ್ ನ್ನು ಹಗುರಗೊಳಿಸುತ್ತದೆ.

ಸೂಚನೆ:

ಸೂಚನೆ:

ಡೈಲ್ಯೂಟ್ ಆದ ಲಿಂಬೆಯ ರಸವನ್ನು ಯಾವತ್ತೂ ಕೂಡ ಚರ್ಮಕ್ಕೆ ಬಳಕೆ ಮಾಡಬೇಡಿ. ಅಷ್ಟೇ ಅಲ್ಲ ಲಿಂಬೆಯ ರಸವು ಚರ್ಮವನ್ನು ಫೋಟೋಸೆನ್ಸಿಟೀವ್ ಮಾಡುತ್ತದೆ ಹಾಗಾಗಿ ಸೂರ್ಯನ ಕಿರಣಗಳಿಗೆ ತೆರಳುವ ಮುನ್ನ ಸನ್ಸ್ಕ್ರೀನ್ ಅನ್ನು ಹಚ್ಚಿಕೊಂಡೇ ತೆರಳಬೇಕಾಗುತ್ತದೆ. ಎರಡೂ ಪದಾರ್ಥಗಳು ಚರ್ಮಕ್ಕೆ ಯಾವುದೇ ಹಾನಿಯನ್ನೂ ಮಾಡುವುದಿಲ್ಲ ಎಂಬುದೇನೋ ನಿಜ. ಆದರೆ ಒಂದು ವೇಳೆ ನಿಮ್ಮದು ಅಲರ್ಜಿ ಇರುವ ಚರ್ಮವಾಗಿದ್ದರೆ ಬಳಸದೇ ಇರುವುದೇ ಒಳ್ಳೆಯದು. ನಿಮಗೆ ನೀವೇ ಈ ಮೇಲಿನ ಎಲ್ಲಾ ಪ್ರಯತ್ನಗಳನ್ನು ಚರ್ಮಕ್ಕೆ ಮಾಡಿಕೊಳ್ಳುವ ಮುನ್ನ ಕೆಲವು ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು. ಆ ಸಲಹೆಗಳ ಪಟ್ಟಿ ಇಲ್ಲಿದೆ ನೋಡಿ.

ಮುಖಕ್ಕೆ ಗ್ಲಿಸರಿನ್ ಮತ್ತು ರೋಸ್ ವಾಟರ್ ನ್ನು ಬಳಕೆ ಮಾಡುವುದಕ್ಕೂ ಮುನ್ನ ನೀವು ಗಮನಿಸಬೇಕಾಗಿರುವ ಕೆಲವು ಸಲಹೆಗಳು:

* ಗ್ಲಿಸರಿನ್ ಅನ್ನು ನಿಮ್ಮ ಚರ್ಮಕ್ಕೆ ಬಳಕೆ ಮಾಡುವ ಮುನ್ನ ಮೊದಲಿಗೆ ಪ್ಯಾಚ್ ಟೆಸ್ಟ್ ನ್ನು ಮಾಡಿಕೊಳ್ಳಿ. ಗ್ಲಿಸರಿನ್ ಮತ್ತು ರೋಸ್ ವಾಟರ್ ನ್ನು ನಿಮ್ಮ ಚರ್ಮಕ್ಕೆ ಬಳಕೆ ಮಾಡುವ ಮುನ್ನ ಚರ್ಮದ ಸ್ಪೆಷಲಿಸ್ಟ್ ನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಕೂಡ ಸೂಕ್ತವಾದದ್ದೇ ಆಗಿದೆ. ಅಲರ್ಜಿ ಟೆಸ್ಟ್ ಮಾಡಿಸಿಕೊಂಡು ನಂತರ ಬಳಕೆ ಮಾಡಬಹುದು.

* ಒಂದು ವೇಳೆ ನಿಮ್ಮದು ಎಣ್ಣೆಯಂತ ತ್ವಚೆ ಅಥವಾ ಸಮ್ಮಿಶ್ರಣವಿರುವಂತಹ ಶುಷ್ಕತೆಯೂ ಅಲ್ಲ ಎಣ್ಣೆಯಂತೆಯೂ ಇರದ ತ್ವಚೆಯಾಗಿದ್ದಲ್ಲಿ ವಾರಕ್ಕೆ ಎರಡಕ್ಕೂ ಅಧಿಕ ಬಾರಿ ಈ ರೆಮಿಡಿಗಳನ್ನು ಬಳಕೆ ಮಾಡಬೇಡಿ. ಅತಿಯಾಗಿ ಬಳಕೆ ಮಾಡುವುದರಿಂದಾಗಿ ನಿಮ್ಮ ಚರ್ಮವು ಗ್ರೀಸಿನಂತಾಗುವ ಸಾಧ್ಯತೆ ಇರುತ್ತದೆ.

* ಆದಷ್ಟು ಶುದ್ಧ ರೋಸ್ ವಾಟರ್(ಸಾಧ್ಯವಾದರೆ ಮನೆಯಲ್ಲೇ ತಯಾರಿಸಿಕೊಳ್ಳಿ) ಮತ್ತು ಸಾವಯವವಾಗಿರುವ ಗ್ಲಿಸರಿನ್ ನ್ನು ಬಳಕೆ ಮಾಡಿ. ಆ ಮೂಲಕ ಚರ್ಮದಲ್ಲಿ ಕೆಟ್ಟ ಪರಿಣಾಮಗಳಾಗುವುದನ್ನು ತಡೆಯಬಹುದು. ಮಾರುಕಟ್ಟೆಯಲ್ಲಿ ಲಭ್ಯವಾಗುವ ರೋಸ್ ವಾಟರ್ ನಲ್ಲಿ ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದಾದ ಕೆಲವು ಹೆಚ್ಚುವರಿ ಪದಾರ್ಥಗಳನ್ನು ಸೇರಿಸಿರುವ ಸಾಧ್ಯತೆ ಇರುತ್ತದೆ. ಅಂದರೆ ರೋಸ್ ವಾಟರ್ ಹಾಳಾಗದಂತೆ ಪ್ರಿಸರ್ವೇಟೀವ್ ಗಳನ್ನು ಮತ್ತು ಪರಿಮಳಕ್ಕಾಗಿ ಕೆಲವು ಕೆಮಿಕಲ್ ಗಳನ್ನು ಅದರಲ್ಲಿ ಬಳಸಿರುವ ಸಾಧ್ಯತೆ ಇರುತ್ತದೆ.

* ರೋಸ್ ವಾಟರ್ ಮತ್ತು ಗ್ಲಿಸರಿನ್ ಎರಡೂ ಕೂಡ ಚೆನ್ನಾಗಿ ಡಲ್ಯೂಟ್ ಆಗುವಂತೆ ನೋಡಿಕೊಳ್ಳಿ ಮತ್ತು ಹೊರಗಡೆ ಹೋಗುವ ಮುನ್ನ ಅದನ್ನು ಚರ್ಮದಿಂದ ತೊಳೆದುಕೊಂಡೇ ಹೋಗಿ. ಡಲ್ಯೂಟ್ ಆಗದ ಗ್ಲಿಸರಿನ್ ಧೂಳು,ಹೊಗೆ ಮತ್ತು ಮಾಲಿನ್ಯವನ್ನು ಸೆಳೆದುಕೊಂಡು ನಿಮ್ಮ ಚರ್ಮದ ರಂಧ್ರಗಳ ಮೂಲಕ ಹೋಗಿ ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

ಗ್ಲಿಸರಿನ್ ಮತ್ತು ರೋಸ್ ವಾಟರ್ ನ ಅಡ್ಡಪರಿಣಾಮಗಳು

ಗ್ಲಿಸರಿನ್ ಮತ್ತು ರೋಸ್ ವಾಟರ್ ನ ಅಡ್ಡಪರಿಣಾಮಗಳು

* ಎರಡೂ ಪದಾರ್ಥಗಳನ್ನು ಮುಖದ ಸೌಂದರ್ಯ ಹೆಚ್ಚಿಸಲು ಸುರಕ್ಷಿತವೆಂದೇ ಹೇಳಲಾಗುತ್ತದೆ.ಆದರೂ ಕೂಡ ಕೆಲವರಿಗೆ ಎರಡೂ ಪದಾರ್ಥಗಳು ಅಲರ್ಜಿಯನ್ನುಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಒಂದು ವೇಳೆ ನಿಮ್ಮ ಸೂಕ್ಷ್ಮ ಅಥವಾ ಅಲರ್ಜಿ ಗುಣವಿರುವ ಚರ್ಮವೇ ಆಗಿದ್ದಲ್ಲಿ ಅಡ್ಡಪರಿಣಾಮಗಳನ್ನು ಈ ಪದಾರ್ಥಗಳಿಂದ ಎದುರಿಸುವ ಸಾಧ್ಯತೆಇದೆ.ಈ ಕೆಳಗಿನ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ.

ಕೆಂಪಗಾಗುವುದು

ತುರಿಕೆಯಾಗುವುದು

ರ್ಯಾಷಸ್ ಗಳಾಗುವುದು

ಸುಟ್ಟಂತ ಅನುಭವವಾಗುವುದು

ಕುಟುಕುವಂತಹ ಸಂವೇದನೆಯಾಗುವುದು

ನೋವು ಕಾಣಿಸಿಕೊಳ್ಳುವುದು

ಒಂದು ವೇಳೆ ನೀವು ಈ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಇತರೆ ಯಾವುದೇ ರೀತಿಯಲ್ಲಿ ಚರ್ಮದಲ್ಲಿ ಬದಲಾವಣೆ ಕಾಣಿಸಿಕೊಂಡರೆ ಈ ಪ್ರೊಡಕ್ಟ್ ಗಳನ್ನು ಬಳಸುವಿಕೆಯನ್ನು ನಿಲ್ಲಿಸಿಬಿಡಿ ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ರೋಸ್ ವಾಟರ್ ಮತ್ತು ಗ್ಲಿಸರಿನ್ ನಿಮ್ಮ ಚರ್ಮಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಯಾವುದೇ ನೈಸರ್ಗಿಕ ವಸ್ತುಗಳನ್ನು ನಿಮ್ಮ ಮುಖಕ್ಕೆ ಬಳಸುವ ಮುನ್ನ ನೀವು ಸ್ವಲ್ಪ ಜಾಗರೂಕರಾಗಿರಬೇಕಾಗುತ್ತದೆ. ಯಾಕೆಂದರೆ ನಿಮ್ಮ ದೇಹದ ಚರ್ಮಕ್ಕಿಂತ ನಿಮ್ಮ ಮುಖದ ಚರ್ಮವು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಒಂದು ವೇಳೆ ನಿಮಗೆ ಚರ್ಮದ ಸಮಸ್ಯೆಗಳಿದ್ದಲ್ಲಿ ಅಥವಾ ಚರ್ಮದ ವಿಭಿನ್ನ ಕಂಡೀಷನ್ ಇದ್ದಲ್ಲಿ ನೀವು ನಿಮ್ಮ ವೈದ್ಯರ ಬಳಿ ಸಲಹೆ ಪಡೆದು ನಂತರ ಚರ್ಮದ ಇಂತಹ ಚಿಕಿತ್ಸೆಗಳಿಗೆ ಮುಂದಾಗುವುದು ಒಳ್ಳೆಯದು.

English summary

Best Ways to Use Glycerin And Rose Water For Skin

Flawless skin is not an overnight miracle. But achieving it is not impossible either. You need to follow the right skincare regimen and use the right ingredients. Glycerin and rosewater are two ingredients that most women rely on for healthy skin. A blend of glycerin and rose water is extremely beneficial for your face (unless you are allergic to it) and can keep your skin healthy. Scroll down and find out how to use rose water and glycerin for your face and skin.
X
Desktop Bottom Promotion