For Quick Alerts
ALLOW NOTIFICATIONS  
For Daily Alerts

ಚರ್ಮದ ಮೇಲೆ ಐಸ್ ಇಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

|

ಚರ್ಮವು ನಮ್ಮ ದೇಹದ ದೊಡ್ಡ ಅಂಗ ಮಾತ್ರವಲ್ಲ ಹೊರಗಿನ ಅನೇಕ ಕಾರಣಗಳಿಂದ ಅತೀ ಹೆಚ್ಚು ಪರಿಣಾಮಗಳಿಗೆ ಒಳಗಾಗುವ ದೇಹದ ಭಾಗ ಕೂಡ ಹೌದು. ಉದಾಹರಣೆಗೆ ಸೂರ್ಯ‌ನ ಕಿರಣಗಳು, ಮಾಲಿನ್ಯತೆ, ಕೀಟಗಳ ಕಚ್ಚುವಿಕೆ ಸುಟ್ಟು ಹೋಗುವುದು ಇತ್ಯಾದಿ.ಚರ್ಮದ ಮೇಲಾಗುವ ಕಲೆಗಳು ಮತ್ತು ನಿರಂತರವಾಗಿ ಇರುವ ದಣಿದ ನೋಟವು ಯಾರಿಗೂ ಹಿತವೆನಿಸುವುದಿಲ್ಲ. ಚರ್ಮವನ್ನು ಪುನರ್ ಯೌವ್ವನಗೊಳಿಸಲು ಮತ್ತು ಸಹಜ ಹೊಳಪನ್ನು ಕಾಪಾಡಿಕೊಳ್ಳಲು ಜೊತೆಗೆ ಕಾಂತಿ ವೃದ್ಧಿಸಲು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ. ಆ ನಿಟ್ಟಿನಲ್ಲಿ ಇರುವ ಸುಲಭದ ಮಾರ್ಗವೊಂದರ ಬಗ್ಗೆ ನಾವಿಲ್ಲಿ ನಿಮಗೆ‌ ಮಾಹಿತಿಯನ್ನು ನೀಡುತ್ತಿದ್ದೇವೆ. ಅದುವೇ ಐಸ್ ಥೆರಪಿ.

Benefits Of Applying Ice On Skin

ಹೌದು ಚರ್ಮದ ಮೇಲೆ ಮಂಜುಗಡ್ಡೆ ಯನ್ನು ಇಟ್ಟುಕೊಳ್ಳುವ ವಿಧಾನವನ್ನು ಯಾವಾಗ ಬೇಕಿದ್ದರೂ ಬಳಸಬಹುದು ಮತ್ತು ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೆ ಹೊಳಪು ಬರುವಂತೆ ಮಾಡುತ್ತದೆ. ಕಾಂತಿಹೀನ ಕಣ್ಣುಗಳಿಗೆ ಸಹಾಯ ಮಾಡುತ್ತದೆ ಮತ್ತು ವಯಸ್ಸಾದಂತೆ ಕಾಣುವ ಚರ್ಮಕ್ಕೆ ಒಳಿತು ಮಾಡುತ್ತದೆ. ಇನ್ನು ಹಲವು ಕಾರಣಗಳಿಗೆ ಇದು ಒಳಿತು ಮಾಡುತ್ತದೆ. ಇದು ಬಹಳ ಸುಲಭದ ವಿಧಾನವಾಗಿದ್ದು ನೀವು ಎಲ್ಲಿಂದಲೋ ಹಣ ಕೊಟ್ಟು ಖರೀದಿಸಬೇಕಾಗಿಲ್ಲ. ಮನೆಯಲ್ಲಿ ಹೆಚ್ಚು ಕೆಲಸ ಮಾಡಿ ತಯಾರಿಸುವುದೂ ಅಲ್ಲ.

ಚರ್ಮಕ್ಕೆ ಐಸ್ ಇಡುವುದರಿಂದಾಗಿ ಕೂಲಿಂಗ್ ಏಜೆಂಟ್ ನಂತೆ ಇದು ಕೆಲಸ ಮಾಡುತ್ತದೆ. ನೀವು ನಾಲ್ಕರಿಂದ ಐದು ಐಸ್ ಕ್ಯೂಬ್ ತೆಗೆದುಕೊಳ್ಳಿ ಮತ್ತು ಅದನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟುಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ನಿಮ್ಮ ಚರ್ಮದ ಮೇಲಿಡಿ.ಬದಿಗಳನ್ನು ರೋಲ್ ಮಾಡಿ ಮತ್ತು ನಿಮ್ಮ ಮುಖ ಮತ್ತು ದೇಹಕ್ಕೆ‌ ಅದರಿಂದ ನಿಧಾನವಾಗಿ ಮಸಾಜ್ ಮಾಡಿ.ಮುಖಕ್ಕೆ ಐಸ್ ನಿಂದ ಮಸಾಜ್ ಮಾಡುವಾಗ ವೃತ್ತಾಕಾರದಲ್ಲಿ ಒಂದು ಅಥವಾ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.ನೀವು ಇದನ್ನ ನಿಮ್ಮ ಹಣೆ,ಕೆನ್ನೆ,ಮೂಗು, ಗಲ್ಲ, ಮತ್ತು ತುಟಿಯ ಸುತ್ತಲೂ ಬಳಸಬಹುದು.

ಮಂಜುಗಡ್ಡೆಯನ್ನು ನಿಮ್ಮ ಚರ್ಮಕ್ಕೆ ಹಚ್ಚುವುದರಿಂದ ಆಗುವ ಲಾಭಗಳ ಕುರಿತು ತಿಳಿಯೋಣ ಬನ್ನಿ.

ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ

ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ

ಮಂಜುಗಡ್ಡೆಯ ಕಡಿಮೆ ತಾಪಮಾನವು ಚರ್ಮದ ಒಳಮೇಲ್ಮೈಯಲ್ಲಿರುವ ರಕ್ತದ ಹರಿಯುವಿಕೆಗೆ ನೆರವು ನೀಡುತ್ತದೆ. ಮಂಜುಗಡ್ಡೆಯ ಕಡಿಮೆ ತಾಪಮಾನವು ಕ್ಯಾಪಿಲ್ಲರಿಗಳಲ್ಲಿನ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಆ ಸಮಯದಲ್ಲಿ ಚರ್ಮದ ಅಡಿಯಲ್ಲಿ ರಕ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ದೇಹದ ಐಸ್‌ ಇಡಲ್ಪಟ್ಟ ಭಾಗವು ಶೀತ ಚಿಕಿತ್ಸೆಗೆ ಸ್ಪಂದಿಸುತ್ತದೆ ಮತ್ತು ಬೆಚ್ಚಗಿನ ರಕ್ತದ ಹರಿವನ್ನು ಈ ಪ್ರದೇಶಕ್ಕೆ ಕಳುಹಿಸುತ್ತದೆ,ಇದರಿಂದಾಗಿ ರಕ್ತಪರಿಚಲನೆಯು ಸುಧಾರಿಸುತ್ತದೆ.

ಬೆಚ್ಚಗಿನ ರಕ್ತದ ಈ ಹರಿವು ವಿಷವನ್ನು ತೆಗೆಯಲು ಸಹಾಯ ಮಾಡುತ್ತದೆ. ಇದು ಚರ್ಮದ ಮಂದತೆಯನ್ನು ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಬಣ್ಣವನ್ನು ಸೇರಿಸಲು ಸಹಾಯ ಮಾಡುತ್ತದೆ. ಗರಿಷ್ಟ ಲಾಭವನ್ನು ಪಡೆಯುವುದಕ್ಕಾಗಿ ನಿಮ್ಮ ಮುಖವನ್ನು ತೊಳೆಯುವ ಮೂಲಕ ಆರಂಭಿಸಿ ಮತ್ತು ಟವೆಲ್ ನಿಂದ ಮುಖವನ್ನು ಒಣಗಿಸಿ. ನಂತರ ನಿಧಾನವಾಗಿ ಮಂಜುಗಡ್ಡೆಯ ಕ್ಯೂಬ್ ಗಳನ್ನು ತೆಗೆದುಕೊಂಡು ಮೃದುವಾದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮುಖ, ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ. ಚಲನೆಯಲ್ಲಿ ಒಂದು ದಿಕ್ಕನ್ನ ಮಾತ್ರ ಅನುಸರಿಸುವುದು ಒಳ್ಳೆಯದು.

ಉರಿಯೂತ ಮತ್ತು ನೋವು ತಡೆಯಲು ಸಹಕಾರಿ

ಉರಿಯೂತ ಮತ್ತು ನೋವು ತಡೆಯಲು ಸಹಕಾರಿ

ಯಾವುದೇ ರೀತಿಯ ಉರಿ, ನೋವು ತಡೆಯುವುದಕದಕ್ಕೆ ಐಸ್ ಪ್ಯಾಕ್ ಸಹಕಾರಿ. ಕೇವಲ ಕಡಿಮೆ ಮಾಡುವುದಕ್ಕಾಗಿ ಮಾತ್ರವಲ್ಲ ಬದಲಾಗಿ ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.ಬಿಸಿಯ ದದ್ದುಗಳಿಗೆ ಕೂಡ ಇದು ಕೆಲಸ ಮಾಡುತ್ತದೆ. ನೋವು ಮತ್ತು ಉರಿಯೂತದ ಹೊರತಾಗಿ ಮಂಜುಗಡ್ಡೆ ಇಡುವಿಕೆಯು ಚರ್ಮದ ಮೇಲಿನ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕೂಡ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಬಿಸಿಲಿನ ಬೇಗೆಯನ್ನು ಶಮನಗೊಳಿಸುತ್ತದೆ

ಬಿಸಿಲಿನ ಬೇಗೆಯನ್ನು ಶಮನಗೊಳಿಸುತ್ತದೆ

ಹೆಚ್ಚು ಹೊತ್ತು ಹೊರಗೆ ಇರುವುದರಿಂದಾಗಿ ಸೂರ್ಯನ ಕಿರಣಗಳಿಂದ ಚರ್ಮ ಸುಟ್ಟಂತೆ ಆಗಬಹುದು. ಸನ್ ಬರ್ನ್‌ ಯಿಂದಾಗಿ ಚರ್ಮದ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ. ಅದು ಖಂಡಿತ ನೋವಿನ ಸಂಗತಿ. ಸನ್‌ಬರ್ನ್ ಗುಣಪಡಿಸುವುದಕ್ಕೆ ಮಂಜುಗಡ್ಡೆ ಇಡುವುದು ವೇಗವಾಗಿರುವ ಮತ್ತು ಪರಿಣಾಮಕಾರಿಯಾಗಿರುವ ಔಷಧೀಯ ವಿಧಾನವಾಗಿದೆ.

ಉತ್ತಮ ಫಲಿತಾಂಶಕ್ಕಾಗಿ ಅಲವೀರಾ ಜೆಲ್ ನಿಂದ‌ ಐಸ್ ಕ್ಯೂಬ್ ತಯಾರಿಸಿಕೊಳ್ಳುವುದು ಬಹಳ ಒಳ್ಳೆಯದು.ಒಂದು ವೇಳೆ ಅಲವೀರಾ ಜೆಲ್ ನಕ್ಯೂಬ್ ಇಲ್ಲದೆ ಇದ್ದರೆ ಅಲವೀರಾವನ್ನು ಅಪ್ಲೈ ಮಾಡಿ ಐಸ್ ಕ್ಯೂಬ್ ಇಡುವುದನ್ನ ಪ್ರಾರಂಭಿಸಬಹುದು.ಸೌತೆಕಾಯಿ ರಸದಿಂದಲೂ ಕೂಡ ಐಸ್ ಕ್ಯೂಬ್ ತಯಾರಿಸಿಕೊಳ್ಳಬಹುದು.

ಚರ್ಮದಲ್ಲಿ ಹೊಳಪನ್ನು ಹೆಚ್ಚಿಸುತ್ತದೆ

ಚರ್ಮದಲ್ಲಿ ಹೊಳಪನ್ನು ಹೆಚ್ಚಿಸುತ್ತದೆ

ಒತ್ತಡದಿಂದಾಗಿ ಚರ್ಮವು ಕಾಂತಿಹೀನವಾಗುತ್ತಾ ಸಾಗುತ್ತದೆ. ಚರ್ಮಕ್ಕೆ ಐಸ್ ಇಡುವುದರಿಂದಾಗಿ ಚರ್ಮದ ಹೊಳಪು ಹೆಚ್ಚುತ್ತದೆ. ಆ‌ಮೂಲಕ ಮುಖ ಸುಸ್ತು ನಿವಾರಣೆಯಾಗುತ್ತದೆ. ಹೀಗೆ ಸುಸ್ತು ನಿವಾರಣೆಯಾಗುವಿಕೆಯು ಮುಖದಲ್ಲಿ ಗೋಚರಿಸುವುದರ ಜೊತೆಗೆ ಚರ್ಮದಲ್ಲಿ ರಕ್ತಸಂಚಾರವಾಗುತ್ತದೆ ಮತ್ತು ಚಿಕಿತ್ಸೆ ನೀಡಲಾದ ಪ್ರದೇಶದ ಚರ್ಮದ ಬಣ್ಣದಲ್ಲಿ ಹೊಳಪು ಬರುತ್ತದೆ.

ಎಣ್ಣೆ ಕಲೆಗಳು, ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ

ಎಣ್ಣೆ ಕಲೆಗಳು, ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ

ಸ್ಕಿನ್‌ ಐಸಿಂಗ್ ನಿಂದಾಗಿ ಚರ್ಮದಲ್ಲಿರುವ ಹೊಂಡಗಳು ಮುಚ್ಚುತ್ತವೆ ಮತ್ತುಹೆಚ್ಚು ಜಿಡ್ಡಿನಂಶ ಚರ್ಮದಲ್ಲಿ ಶೇಖರಣೆಯಾಗುವುದು ತಪ್ಪುತ್ತದೆ. ಅತಿಯಾದ ಎಣ್ಣೆಯಂಶವು ಚರ್ಮದಲ್ಲಿ ಅಂಟುವಂತ ಫೀಲಿಂಗ್ ಕೊಡುವುದನ್ನು ಇದು ತಪ್ಪಿಸುತ್ತದೆ ಹಾಗಾಗಿ ಚರ್ಮವು ಎಣ್ಣೆ ಜಿಡ್ಡಿನಿಂದ ಕೂಡಿದೆ ಎಂದೆನಿಸುವುದೇ ಇಲ್ಲ. ಈ ವಿಧಾನವು ಗುಳ್ಳೆಗಳು, ಮೊಡವೆಗಳು, ಬ್ಲಾಕ್ ಹೆಡ್ಸ್ ಸೇರಿದಂತೆ ಚರ್ಮದ ಅನೇಕ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಗಾಯಗಳು ಮತ್ತು ನೋವುಗಳನ್ನು ಗುಣ ಪಡಿಸಲು ಕೂಡ ಈ ವಿಧಾನ ಅನುಸರಿಸಬಹುದು.

ಮೊಡವೆಗಳಿಗೆ ಬಳಸಿದ ಬಟ್ಟೆಯನ್ನು ಬದಲಾಯಿಸುವುದು ಒಳ್ಳೆಯದು. ನಿರಂತರ ಐಸ್ ಇಡುವ ಪ್ರಕ್ರಿಯೆಯನ್ನು ಪರಿಣಾಮಕ್ಕೆ ಒಳಗಾಗಿರುವ ಚರ್ಮದ‌ಮೇಲೆ ಮಾಡುವುದರಿಂದಾಗಿ ಉತ್ತಮ ಫಲಿತಾಂಶ ಪಡೆಯಬಹುದು.

ವಯಸ್ಸಾದಂತೆ ಕಾಣುವ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ

ವಯಸ್ಸಾದಂತೆ ಕಾಣುವ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ

ಐಸ್ ಫೇಶಿಯಲ್ ನಿಂದಾಗಿ ಚರ್ಮದಲ್ಲಿ ಉಂಟಾಗುವ ವಯಸ್ಸಾದಂತಹ ಚಿಹ್ನೆಗಳನ್ನು ತಪ್ಪಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ರೋಸ್ ವಾಟರ್ ನಿಂದ ಸೂದಿಂಗ್ ಆಯಿಲ್ ಗಳಾಗಿರುವ ಲ್ಯಾವೆಂಡರ್ ಆಯಿಲ್ ನ ಕ್ಯೂಬ್ ತಯಾರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಅಪ್ಲೈ ಮಾಡಿಕೊಳ್ಳಬಹುದು.

ಈ ರೀತಿ ಮಾಡುವುದರಿಂದಾಗಿ ನೆರಿಗೆಗಳಾಗುವುದನ್ನು ತಪ್ಪಿಸಬಹುದು.ಚರ್ಮದಲ್ಲಿ ಹಿಡಿತದ ಎಫೆಕ್ಟ್ ಇರುತ್ತದೆ. ನಿರಂತರವಾಗಿ ಐಸಿಂಗ್ ಮಾಡುವುದರಿಂದಾಗಿ ಚರ್ಮ ಸ್ವಚ್ವವಾಗುತ್ತದೆ ಮತ್ತು ಕೆಲವೇ ವಾರಗಳಲ್ಲಿ ಯೌವನಯುಕ್ತವಾಗಿರುವ ತ್ವಚೆ ಪಡೆಯುವುದಕ್ಕೆ‌ ಸಾಧ್ಯವಾಗುತ್ತದೆ. ನೈಸರ್ಗಿಕ ವಾದ ಪರಿಣಾಮಗಳಿಗಾಗಿ ನೀವು ನೀರಿನ ಬದಲು ಹಾಲಿನ ಕ್ಯೂಬ್ ಗಳನ್ನು ಬಳಸಬಹುದು.

ಮೇಕಪ್‌ನ ಅಡ್ಡ ಪರಿಣಾಮಗಳನ್ನು ತಪ್ಪಿಸುತ್ತದೆ

ಮೇಕಪ್‌ನ ಅಡ್ಡ ಪರಿಣಾಮಗಳನ್ನು ತಪ್ಪಿಸುತ್ತದೆ

ಮಂಜುಗಡ್ಡೆಯನ್ನು ಮುಖಕ್ಕೆ ಅಪ್ಲೈ ಮಾಡುವುದರಿಂದಾಗಿ ಚರ್ಮದಲ್ಲಿರುವ ಹೊಂಡಗಳು ಮುಚ್ಚಲ್ಪಡುತ್ತದೆ ಆ ಮೂಲಕ ಚರ್ಮದ ಮೇಲ್ಮೈ ಚೆನ್ನಾಗಾಗುತ್ತದೆ.ಈ ರೀತಿಯ ಹೊಂಡಗಳು ಮೇಕಪ್ ನ್ನು ಹೆಚ್ಚು ಬೇಡುತ್ತವೆ ಮತ್ತು ಮೇಕಪ್ ನ‌ ಅಡ್ಡ ಪರಿಣಾಮಗಳಿಗೆ ಹೆಚ್ಚು ಕಾರಣವಾಗುತ್ತದೆ. ಆದರೆ ಐಸಿಂಗ್ ಮಾಡುವುದರಿಂದಾಗಿ ಈ ಹೊಂಡಗಳು ಮುಚ್ಚುವುದರಿಂದಾಗಿ ನಿರಂತರ‌ ಮೇಕಪ್ ಮತ್ತು ಕಾಸ್ಮೆಟಿಕ್ ಬಳಸುವವರಿಗಾಗುವ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುತ್ತದೆ.

ಕಣ್ಣುಗಳನ್ನು ರಿಫ್ರೆಶ್ ಮಾಡುತ್ತದೆ ಮತ್ತು ಕಣ್ಣುಗಳ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ

ಕಣ್ಣುಗಳನ್ನು ರಿಫ್ರೆಶ್ ಮಾಡುತ್ತದೆ ಮತ್ತು ಕಣ್ಣುಗಳ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ

ನೀವು ಕೆಲವು ಕಾಟನ್ ಬಾಲ್ ಗಳನ್ನು ತಣ್ಣನೆಯ ಐಸ್ ನೀರಿನಲ್ಲಿ ಅದ್ದಿ ನಂತರ ಹಿಂಡಿ ಅದನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ.ಇದು ನಿಮ್ಮ ಕಣ್ಣುಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ ಮತ್ತು ಕಣ್ಣುಗಳ ಉಬ್ಬುವಿಕೆಯನ್ನು ನಿಯಂತ್ರಿಸುತ್ತದೆ.ಕೆಲವು ಹನಿ ರೋಸ್ ವಾಟರಗ ಸೇರಿಸುವುದರಿಂದಾಗಿ ರಿಫ್ರೆಶ್ ಆಗುವಂತಹ ಫೀಲಿಂಗ್ ನೀಡುತ್ತದೆ.

ಐಸ್ ಕ್ಯೂಬ್ ಗಳನ್ನು ಒಂದು ಮೃದು ಬಟ್ಟೆಯಲ್ಲಿ ಕಟ್ಟಿ ಅದನ್ನು ಕಣ್ಣುಗಳ ಮೇಲೆ ಕಣ್ಣಿನ ಒಳಭಾಗದಿಂದ ಆರಂಭಿಸಿ ಬದಿಗಳ ಮೂಲಕ ವೃತ್ತಾಕಾರದಲ್ಲಿ ತಿರುಗಿಸುವುದರಿಂದಾಗಿ ಉತ್ತಮ ಫಲಿತಾಂಶ ಪಡೆಯಬಹುದು. ಈ ವಿಧಾನವು ಕೇವಲ ಹಣವನ್ನು ಉಳಿಸುವುದು ಮಾತ್ರವಲ್ಲ, ಸುಲಭದ್ದೂ ಹೌದು ಮತ್ತು ಹೆಚ್ಚು ಪರಿಣಾಮಕಾರಿಯೂ ಹೌದು ಮತ್ತು 100% ನೈಸರ್ಗಿಕ ವಾಗಿರುವ ವಿಧಾನವೂ ಆಗಿದೆ.

English summary

Benefits Of Applying Ice On Skin

Here we are discussing about Benefits Of Applying Ice On Skin. Skin icing is a technique which can be used at any time and will improve skin clarity and tone, help with puffy eyes and even reduce signs of ageing, among other things. Read more.
Story first published: Thursday, May 21, 2020, 15:40 [IST]
X
Desktop Bottom Promotion