For Quick Alerts
ALLOW NOTIFICATIONS  
For Daily Alerts

ಪುದೀನಾ ಸೊಪ್ಪಿನಲ್ಲಿದೆ, ತ್ವಚೆ ಬೆಳಗಿಸುವ ಅದ್ಭುತ ಶಕ್ತಿ! ಹೇಗೆ ಬಳಸಬೇಕು ಇಲ್ಲಿದೆ ನೋಡಿ..

|

ಫೇಸ್ ವಾಶ್, ಮಾಯಿಶ್ಚರೈಸರ್ ಮತ್ತು ಲೋಷನ್ ಗಳಂತಹ ತ್ವಚೆಯ ಉತ್ಪನ್ನಗಳನ್ನು ತಯಾರಿಸುವಾಗ ಪುದೀನಾ ಪ್ರಮುಖವಾಗಿ ಬಳಕೆಯಾಗುತ್ತದೆ. ಪುದೀನ ಎಲೆಗಳಲ್ಲಿ ಪೋಷಕಾಂಶಗಳು ತುಂಬಿದ್ದು, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅತ್ಯುತ್ತಮ ಕ್ಲೆನ್ಸರ್, ಟೋನರ್ ಮತ್ತು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತವೆ. ಇಂತಹ ಎಲೆಗಳ ನಿಮಗೆ ತಿಳಿದಿಲ್ಲದ ಕೆಲವೊಂದು ವಿಚಾರಗಳ ಬಗ್ಗೆ ಹೇಳಿದ್ದೇವೆ.

ಪುದೀನಾ ಎಲೆಗಳಿಂದ ಚರ್ಮಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ :

ಮೊಡವೆಗಳಿಗೆ ಚಿಕಿತ್ಸೆ ನೀಡುವುದು :

ಮೊಡವೆಗಳಿಗೆ ಚಿಕಿತ್ಸೆ ನೀಡುವುದು :

ಪುದೀನಾ ಎಲೆಗಳಲ್ಲಿ ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಇದು ಚರ್ಮದಲ್ಲಿ ಮೇದೋಗ್ರಂಥಿ ಸ್ರಾವವನ್ನು ನಿಯಂತ್ರಿಸುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮೊಡವೆ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಪುದೀನಾ ಎಲೆಗಳ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಉರಿಯೂತವನ್ನು ತಡೆದು, ಮೊಡವೆಗಳನ್ನು ಗುಣಪಡಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಪುದೀನಾ ಎಲೆಗಳ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ ಮತ್ತು ಅದು ಒಣಗಲು 15 ನಿಮಿಷಗಳ ಕಾಲ ಬಿಡಿ. ಇದು ಮೊಡವೆ ಕಲೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮದ ರಂಧ್ರಗಳನ್ನು ಸಹ ಸ್ವಚ್ಛಗೊಳಿಸುತ್ತದೆ.

ಗಾಯಗಳನ್ನು ಗುಣಪಡಿಸುವುದು :

ಗಾಯಗಳನ್ನು ಗುಣಪಡಿಸುವುದು :

ಪುದೀನಾ ಎಲೆಗಳಲ್ಲಿರುವ ಪ್ರಬಲವಾದ ಉರಿಯೂತ ನಿವಾರಕ ಗುಣಗಳು ಗಾಯಗಳು, ಸೊಳ್ಳೆ ಕಡಿತ ಮತ್ತು ಚರ್ಮದ ತುರಿಕೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಪುದೀನಾ ಎಲೆಯ ರಸವನ್ನು ತೆಗೆದು, ಅದನ್ನು ಚರ್ಮದ ಸೋಂಕಿತ ಪ್ರದೇಶದಲ್ಲಿ ಹಚ್ಚಬೇಕು. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಜೊತೆಗೆ ಚರ್ಮದ ಮೇಲೆ ಕಿರಿಕಿರಿಯುಂಟುಮಾಡುವ ಮತ್ತು ಸುಡುವ ಸಂವೇದನೆಯನ್ನು ಶಮನಗೊಳಿಸುತ್ತದೆ.

ಚರ್ಮವನ್ನು ಹೈಡ್ರೇಟ್ ಮತ್ತು ಟೋನ್ ಮಾಡುವುದು:

ಚರ್ಮವನ್ನು ಹೈಡ್ರೇಟ್ ಮತ್ತು ಟೋನ್ ಮಾಡುವುದು:

ಪುದೀನಾ ಚರ್ಮವನ್ನು ನೈಸರ್ಗಿಕವಾಗಿ ಟೋನ್ ಮಾಡಲು ಸಹಾಯ ಮಾಡುತ್ತದೆ. ಇದು ರಂಧ್ರಗಳಿಂದ ಕೊಳೆಯನ್ನು ತೆಗೆದುಹಾಕಿ, ಚರ್ಮವನ್ನು ಉತ್ತಮವಾಗಿ ಟೋನ್ ಮಾಡುವುದು. ಇದು ನಿಮ್ಮ ಚರ್ಮಕ್ಕೆ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳನ್ನು ತಡೆಯಲು ಸಹ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಪುದೀನಾ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು 20 ರಿಂದ 25 ನಿಮಿಷಗಳ ಕಾಲ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ.

ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡುವುದು :

ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡುವುದು :

ಪುದೀನಾ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣುಗಳ ಕೆಳಗಿರುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡಲು ಚೆನ್ನಾಗಿ ಕೆಲಸ ಮಾಡುತ್ತವೆ. ಇದು ತುಂಬಾ ಸರಳವಾದ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಪುದೀನಾ ಎಲೆಯ ಪೇಸ್ಟ್ ಅನ್ನು ಡಾರ್ಕ್ ಸರ್ಕಲ್ ಗಳ ಮೇಲೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಇದು ಕಣ್ಣುಗಳ ಅಡಿಯ ಚರ್ಮವನ್ನು ಟೋನ್ ಮಾಡುವುದು.

ಮೈಬಣ್ಣವನ್ನು ಬೆಳಗಿಸುವುದು:

ಮೈಬಣ್ಣವನ್ನು ಬೆಳಗಿಸುವುದು:

ಪುದೀನಾವು ಸೆಪ್ಟಿಕ್ ವಿರೋಧಿ ಗುಣಗಳಿಂದ ಸಮೃದ್ಧವಾಗಿದ್ದು, ತ್ವಚೆಯಲ್ಲಿನ ಕಲೆ ಮತ್ತು ದದ್ದುಗಳನ್ನು ತಡೆಯುತ್ತದೆ. ಇದು ಸೂರ್ಯನ ಕಿರಣಗಳಿಂದ ಉಂಟಾಗಿರುವ ಹಾನಿಯನ್ನು ಕಡಿಮೆ ಮಾಡುತ್ತದೆ. ಕಲೆರಹಿತ ಮತ್ತು ಹೊಳೆಯುವ ನೋಟಕ್ಕಾಗಿ ನಿಮ್ಮ ತ್ವಚೆಗೆ ಪುದೀನ ಎಲೆಗಳ ಸಾರವನ್ನು ಹಚ್ಚಿ. ಪರಿಣಾಮಕಾರಿ ಫಲಿತಾಂಶಗಳಿಗಾಗಿ ತಿಂಗಳಿಗೊಮ್ಮೆ ಪ್ರಕ್ರಿಯೆಯನ್ನು ಪುನರಾವರ್ತಿಸಿ.

English summary

Beauty Benefits of Mint in Skincare in Kannada

Here we talking about Beauty benefits of mint in skincare in Kannada, read on
Story first published: Monday, August 2, 2021, 13:03 [IST]
X
Desktop Bottom Promotion