For Quick Alerts
ALLOW NOTIFICATIONS  
For Daily Alerts

ತ್ವಚೆಗೆ ನೈಸರ್ಗಿಕವಾಗಿ ಪ್ರಕೃತಿದತ್ತವಾದ ಸಾಮಗ್ರಿಗಳನ್ನು ಹೀಗೆ ಬಳಸಿ

|

ಇಂದು ನಾವು ಪ್ಲಾಸ್ಟಿಕ್ ಗೆ ಹೆಚ್ಚು ಅವಲಂಬಿತವಾಗಿ ಹೋಗಿ ಬಿಟ್ಟಿದ್ದೇವೆ. ಆದರೆ ಇದರಿಂದ ಆಗುವಂತಹ ಅನಾಹುತಗಳು ಮಾತ್ರ ಅಷ್ಟಿಷ್ಟಲ್ಲ. ನಾವು ದಿನನಿತ್ಯವು ಬಳಸುವ ಪೇಸ್ಟ್, ಕ್ರೀಮ್, ಲೋಷನ್ ಇತ್ಯಾದಿಗಳ ಟ್ಯೂಬ್ ಗಳು ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟಿದ್ದು, ಈಗಾಗಲೇ ಸಮುದ್ರ ಸೇರಿ ಅಲ್ಲಿ ಮೀನುಗಳ ಹೊಟ್ಟೆ ಸೇರುವುದು, ಬೀದಿಯಲ್ಲಿ ಆಹಾರ ಹುಡುಕುವ ದನಗಳ ಹೊಟ್ಟೆಯೊಳಗೆ ಹೋಗಿರುವುದನ್ನು ನಾವು ಕಂಡಿದ್ದೇವೆ. ಇದು ಕೇವಲ ಪ್ರಾಣಿಗಳಿಗೆ ಮಾತ್ರವಲ್ಲದೆ, ಮಾನವರಿಗೂ ಅಪಾಯವನ್ನು ಉಂಟು ಮಾಡುವುದು.

ಪ್ಲಾಸ್ಟಿಕ್ ನಿಂದಾಗಿ ಹಲವಾರು ರೀತಿಯ ಕಾಯಿಲೆಗಳು ಬರುವುದು. ಇದರಿಂದಾಗಿ ನೈಸರ್ಗಿಕವಾಗಿ ಕ್ರೀಮ್ ಗಳನ್ನು ಬಳಸಿಕೊಂಡರೆ ಆಗ ಮಾರುಕಟ್ಟೆಯಿಂದ ಟ್ಯೂಬ್ ಗಳನ್ನು ತರಬೇಕಾಗಿಲ್ಲ. ಇದಕ್ಕಾಗಿ ಕೆಲವೊಂದು ಕ್ರೀಮ್ ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇದು ನಮ್ಮ ಪರಿಸರ ರಕ್ಷಿಸುವುದು ಮಾತ್ರವಲ್ಲದೆ, ತ್ವಚೆಯ ಮೇಲೂ ಯಾವುದೇ ಅಡ್ಡ ಪರಿಣಾಮ ಬೀರದು. ತ್ವಚೆಗೆ ನೈಸರ್ಗಿಕವಾಗಿ ಪ್ರಕೃತಿದತ್ತವಾದ ಸಾಮಗ್ರಿಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇ. ಇದರಿಂದ ಮುಖವು ಕಾಂತಿಯುತವಾಗುವುದು ಮತ್ತು ಸೌಂದರ್ಯವು ಹೆಚ್ಚಾಗುವುದು. ನೀವು ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಇಲ್ಲಿ ಬಳಸಬೇಕೆಂದಿಲ್ಲ.

ಗ್ರೀನ್ ವಾಷಿಂಗ್‌ನ್ನು ನೋಡಿ

ಗ್ರೀನ್ ವಾಷಿಂಗ್‌ನ್ನು ನೋಡಿ

ಕೆಲವೊಂದು ಕಂಪೆನಿಗಳು ತಮ್ಮ ಉತ್ಪನ್ನಗಳು ನೈಸರ್ಗಿಕದತ್ತ ಹಾಗೂ ಪರಿಸರ ಸ್ನೇಹಿ ಎಂದು ಹೇಳುತ್ತದೆ. ಆದರೆ ಈ ನೈಸರ್ಗಿಕದತ್ತವಾಗಿರುವಂತಹ ಉತ್ಪನ್ನಗಳು ನಿಮಗೆ ಹಾಗೂ ಪರಿಸರಕ್ಕೆ ಒಳ್ಳೆಯದು ಎಂದು ಹೇಳುವಂತಿಲ್ಲ. ಇದರ ಲೇಬಲ್ ನೋಡಿ, ಆಳವಾಗಿ ಅಧ್ಯಯನ ಮಾಡಿ ಮತ್ತು ಪ್ರಶ್ನೆಗಳನ್ನು ಕೇಳಿ. ನೈಸರ್ಗಿಕ ಶಮನಕಾರಿ ಮತ್ತು ಆರೈಕೆನ್ನು ನೀವು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಮುಖ್ಯವಾಗಿ ಆಯುರ್ವೇದವು ತುಂಬಾ ಒಳ್ಳೆಯದು.ಆಯುರ್ವೇದದಿಂದಾಗಿ ಸೌಂದರ್ಯವು ಅದಾಗಿಯೇ ಬರುವುದು. ಇದರಲ್ಲಿ ಒಳಗಿನ ಸೌಂದರ್ಯದ ಜತೆಗೆ ಹೊರಗಿನ ಸೌಂದರ್ಯವು ಸಮತೋಲನದಲ್ಲಿ ಇರುವುದು. ಆದರ ಸೌಂದರ್ಯ ಉತ್ಪನ್ನಗಳಲ್ಲಿ ಆಯುರ್ವೇದದ ಬಗ್ಗೆ ಸುಳ್ಳು ಕೂಡ ಹೇಳಲಾಗುತ್ತದೆ.

ಕುತ್ತಿಗೆ ಹಾಗೂ ಮುಖ ಶುದ್ಧೀಕರಿಸಲು ಸರಿಯಾದ ಕ್ರಮ

ಕುತ್ತಿಗೆ ಹಾಗೂ ಮುಖ ಶುದ್ಧೀಕರಿಸಲು ಸರಿಯಾದ ಕ್ರಮ

ನಾಲ್ಕು ಚಮಚ ಕಡಲೆ ಹಿಟ್ಟು, ಒಂದು ಚಮಚ ಲಿಂಬೆರಸ, ಒಂದು ಚಮಚ ಮೊಸರು ಮತ್ತು ಒಂದು ಚಿಟಿಕೆ ಅರಶಿನ ಹಾಕಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ಬಿಸಿ ನೀರಿನಿಂಧ ತೊಳೆಯಿರಿ.

ಈ ಪ್ಯಾಕ್ ನ ಲಾಭಗಳು

ಕಲೆ ನಿವಾರಿಸುವುದು, ಅತಿಯಾದ ಎಣ್ಣೆ ತೆಗೆಯುವುದು, ಚರ್ಮದ ಬಣ್ಣ ಉತ್ತಮಪಡಿಸುವುದು, ಮೊಡವೆ, ಕಲೆ ಮತ್ತು ಬ್ಲ್ಯಾಕ್ ಹೆಡ್ ತೆಗೆಯುವುದು, ಒಣಚರ್ಮಕ್ಕೆ ಪೋಷಣೆ ನೀಡುವುದು, ವಯಸ್ಸಾಗುವ ಲಕ್ಷಣ ತಡೆಯುವ ಗುಣಗಳಿವೆ.

 ಮೊಶ್ಚಿರೈಸರ್ ನ ಮ್ಯಾಜಿಕ್

ಮೊಶ್ಚಿರೈಸರ್ ನ ಮ್ಯಾಜಿಕ್

ಮುಖಕ್ಕೆ ತೆಂಗಿನ ಎಣ್ಣೆಯಿಂದ ಮೊಶ್ಚಿರೈಸ್ ಮಾಡಿ. ಇದು ತುಂಬಾ ಹಗುರ, ತಂಪು ಮತ್ತು ಶಮನಕಾರಿ. ಬೆಣ್ಣೆಯನ್ನು ಕೂಡ ಪ್ರಯತ್ನಿಸ ಬಹುದಾಗಿದೆ. ಒಣ ಮತ್ತು ಕಿರಿಕಿರಿ ಉಂಟು ಮಾಡುವ ಚರ್ಮವು ಶಮನವಾಗುವುದು. ಇದರಿಂದ ಸಾವಯವ ಹರಳೆಣ್ಣೆ ಮಾಸ್ಕ್ ನ್ನು ಬಳಸಬೇಕು. ಮುಖದಲ್ಲಿ ಅತಿಯಾದ ಎಣ್ಣೆಯಂಶವಿದ್ದರೆ ಆಗ ಕಡಲೆಹಿಟ್ಟು ಬಳಸಿ.

ಕಾಂತಿ ಹೆಚ್ಚಿಸಲು

ಕಾಂತಿ ಹೆಚ್ಚಿಸಲು

ರೋಸ್ ವಾಟರ್ ಸ್ಪ್ರೇಯಂತೆ ಇದಕ್ಕೆ ಬೇರೆ ಯಾವುದೇ ಕೆಲಸ ಮಾಡುವುದಿಲ್ಲ. ಇದು ಒಳ್ಳೆಯ ಸುವಾಸನೆ ಹೊಂದಿದೆ, ತಂಪಾಗಿರುವುದು ಮತ್ತು ಇದನ್ನು ದಿನದಲ್ಲಿ ಹಲವಾರು ಸಲ ಬಳಸಿಕೊಳ್ಳಬಹುದು. ಇದು ನಯ ಹಾಗೂ ಸುಂದರ ಚರ್ಮವನ್ನು ಪಡೆಯಲು ತುಂಬಾ ಒಳ್ಳೆಯದು.

ಶಮನಕಾರಿ ಮತ್ತು ಸತ್ತ ಚರ್ಮ ತೆಗೆಯುವ ಮಾಸ್ಕ್

ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಳ್ಳಿ.

ಎರಡು ಚಮಚ ಓಟ್ಸ್ ತೆಗೆದುಕೊಂಡು ರುಬ್ಬಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ.

ಚರ್ಮಕ್ಕೆ ಇದನ್ನು ಸರಿಯಾಗಿ ಮಸಾಜ್ ಮಾಡಿ.

20 ನಿಮಿಷ ಕಾಲ ನೀವು ಹಾಗೆ ಬಿಡಿ

ಬಿಸಿ ನೀರಿನಿಂದ ಮುಖ ತೊಳೆಯಿರಿ

ಈ ಮಾಸ್ಕ್ ನ ಲಾಭಗಳು

ಈ ಮಾಸ್ಕ್ ನ ಲಾಭಗಳು

*ಕಲೆಗಳನ್ನು ತೆಗೆಯುವುದು

*ಹಾನಿಗೀಡಾಗಿರುವ ಚರ್ಮವನ್ನು ಸರಿಪಡಿಸುವುದು

ಬಳಲಿರುವ, ಉರಿಯೂತದ ಚರ್ಮಕ್ಕೆ ಶಕ್ತಿ ನೀಡುವುದು

*ಚರ್ಮಕ್ಕೆ ಬಲ ನೀಡುವ ವಿಟಮಿನ್ ಗಳು ಇವೆ

*ಕಾಂತಿಯನ್ನು ನೀಡುವುದು

ರಾಸಾಯನಿಕ ಮುಕ್ತ ಬ್ಲೀಚ್

ರಾಸಾಯನಿಕ ಮುಕ್ತ ಬ್ಲೀಚ್

*ರಾಸಾಯನಿಕಯುಕ್ತ ಬ್ಲೀಚ್ ನ್ನು ಬಳಸುವ ಮೂಲಕ ನಿಮ್ಮ ತ್ವಚೆ ಹಾಗೂ ದೇಹವನ್ನು ರಕ್ಷಿಸಿಕೊಳ್ಳಿ. ಇಲ್ಲಿ ನೈಸರ್ಗಿಕವಾಗಿರುವ ಬ್ಲೀಚಿಂಗ್‌ನ್ನು ನಿಮಗೆ ತಿಳಿಸಲಾಗಿದೆ. ಇದು ರಾಸಾಯನಿಕಯುಕ್ತ ಬ್ಲೀಚ್ ನಿಂದ ನಿಮ್ಮ ರಕ್ಷಿಸುವುದು.

*ಮೊಸರು ಮತ್ತು ಟೊಮೆಟೋ ಜ್ಯೂಸ್ ನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ನೀವು ಮುಖ, ಕುತ್ತಿಗೆ ಮತ್ತು ಬಾಧಿತ ಜಾಗಕ್ಕೆ ಹತ್ತಿಕೊಳ್ಳಿ.

*30 ನಿಮಿಷ ಕಾಲ ಹಾಗೆ ಬಿಡಿ.

*ಬಿಸಿ ನೀರಿನಿಂದ ತೊಳೆಯಿರಿ.

*ನಿಮಗೆ ಫಲಿತಾಂಶ ಸಿಗುವ ತನಕ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.

ಇದರಿಂದ ಸಿಗುವ ಲಾಭಗಳು

*ಕಲೆ ನಿವಾರಣೆ

*ಬಿಸಿಲಿನಿಂದ ಆದ ಕಲೆ ತೆಗೆಯುವುದು.

*ಕಾಂತಿ ಹೆಚ್ಚಿಸುವುದು.

ತುಳಸಿ ಬಳಸಿಕೊಂಡು ಮೊಡವೆ ಕಲೆ ನಿವಾರಿಸಿ

ತುಳಸಿ ಬಳಸಿಕೊಂಡು ಮೊಡವೆ ಕಲೆ ನಿವಾರಿಸಿ

ಮುಖದ ಮೇಲೆ ಮೊಡವೆ ಕಲೆಗಳು ಇದೆಯಾ? ಹಾಗಾದರೆ ನೀವು ತುಳಸಿ ಬಳಸಿಕೊಳ್ಳಿ.

*ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಮತ್ತು ಇದಕ್ಕೆ ಸ್ವಲ್ಪ ಕಿತ್ತಳೆ ಸಿಪ್ಪೆ ಹುಡಿ ಹಾಕಿ.

*ಇದನ್ನು ತ್ವಚೆಗೆ ಹಚ್ಚಿಕೊಂಡು 10-15 ನಿಮಿಷ ಹಾಗೆ ಬಿಡಿ.

ಇದರ ಬಳಿಕ ತೊಳೆಯಿರಿ.

ಇದರ ಲಾಭಗಳು

ಕಲೆಗಳನ್ನು ಇದು ತೆಗೆಯುವುದು

ಚರ್ಮಕ್ಕೆ ಒಳ್ಳೆಯ ಶಮನ ನೀಡುವುದು

ಬೇವಿನ ಎಣ್ಣೆಯಿಂದ ತ್ವಚೆಯ ಆರೈಕೆ

ಬೇವಿನ ಎಣ್ಣೆಯಿಂದ ತ್ವಚೆಯ ಆರೈಕೆ

ಮೊಡವೆ ಹಾಗೂ ಬೊಕ್ಕೆಗಳು ಇದ್ದರೆ ಆಗ ನೇರವಾಗಿ ಬೇವಿನ ಎಣ್ಣೆಯನ್ನು ಹಚ್ಚಿಕೊಳ್ಳೀ. ಇದು ಆ ಭಾಗವನ್ನು ಒಣಗಿಸುವುದು ಮಾತ್ರವಲ್ಲದೆ, ಶಮನ ನೀಡುವುದು. ಬೇಸಿಗೆಗೆ ಇದು ತುಂಬಾ ಒಳ್ಳೆಯದು.

ಅಲೋವೆರಾ ಬಳಸಿಕೊಳ್ಳಿ

ಅಲೋವೆರಾ ಬಳಸಿಕೊಳ್ಳಿ

ಅಲೋವೆರಾ ಎನ್ನುವುದು ಬಿಸಿಲಿನಿಂದ ಸುಟ್ಟ ಚರ್ಮಕ್ಕೆ ಹಾಗೂ ಇತರ ಕೆಲವು ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ. ಇದು ಚರ್ಮಕ್ಕೆ ಶಮನ ನೀಡಿ, ಯೌವನಯುತವಾಗಿ ಮಾಡುವುದು. ಇದನ್ನು ನೀವು ತ್ವಚೆಗೆ ಹಚ್ಚಿಕೊಳ್ಳಬಹುದು ಮತ್ತು ಜ್ಯೂಸ್ ಆಗಿ ಕುಡಿಯಬಹುದು. ಶ್ರೇಷ್ಠ ಚರ್ಮಕ್ಕೆ ಕೆಲವೊಂದು ಆಯುರ್ವೇದದ ಸಲಹೆಗಳು

*ನೀವು ದಿನಕ್ಕೆ ಏಳು ಗಂಟೆ ನಿದ್ರೆ ಮಾಡಿ.

*ಬಿಸಿ ನೀರನ್ನು ದಿನವಿಡಿ ಕುಡಿಯುತ್ತಲಿರಿ.

*ನಿಮ್ಮ ಆಹಾರ ಕ್ರಮದಲ್ಲಿ ಮಜ್ಜಿಗೆ ಮತ್ತು ಸೀಯಾಳವನ್ನು ಸೇರಿಸಿಕೊಳ್ಳೀ.

*ಹಣ್ಣಿನ ಜ್ಯೂಸ್ ಗಳನ್ನು ಸೇವಿಸಿ, ಸಿಹಿ ಕಡಿಮೆ ಮಾಡಿ.

*ಸಾವಯವ ಹಾಲು, ಇಡೀ ಧಾನ್ಯ ಮತ್ತು ಹಸಿರೆಲೆ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿ.

*ಬಾದಾಮಿ, ಅಕ್ರೋಡ ಮತ್ತು ಇತರ ಬೀಜಗಳನ್ನು ಸೇವಿಸಿ.

ಫ್ಲಾಕ್ಸ್ ಸೀಡ್ಸ್, ಕುಂಬಳಕಾಯಿ, ಸೂರ್ಯಕಾಂತಿ ಮತ್ತು ಚಿಯಾ ಬೀಜಗಳನ್ನು ಸೇವಿಸಿ.

*ನೆಲ್ಲಿಕಾಯಿ ಮತ್ತು ಅವಕಾಡೋವನ್ನು ಸೇವಿಸಿ.

ಸೂಕ್ಷ್ಮಜೀವಿಗಳು ಬೇಡ

ಸೂಕ್ಷ್ಮಜೀವಿಗಳು ಬೇಡ

ಫೇಸ್ ವಾಶ್ ಮತ್ತು ಟೂಥ್ ಪೇಸ್ಟ್ ಗಳಲ್ಲಿ ಇರುವ ಪ್ಲಾಸ್ಟಿಕ್ ನಲ್ಲಿ ಕೆಲವೊಂದು ರೀತಿಯ ಸೂಕ್ಷ್ಮಜೀವಿಗಳು ಕಂಡುಬರುತ್ತದೆ. ಇದು ಖಂಡಿತವಾಗಿಯೂ ಒಳ್ಳೆಯದಲ್ಲ ಮತ್ತು ಇದು ಪರಿಸರಕ್ಕೂ ತುಂಬಾ ಹಾನಿಕಾರಕವಾಗಿದೆ. ಈ ತೆಳು ಪ್ಲಾಸ್ಟಿಕ್ ನಿಂದಾಗಿ ಸಮುದ್ರ ಮತ್ತು ಕೆರೆಗಳಲ್ಲಿ ವಾಸವಾಗಿರುವ ಜೀವಿಗಳು ತೊಂದರೆಗೆ ಒಳಗಾಗುತ್ತಿದೆ. ಇದು ಸಂಪೂರ್ಣವಾಗಿ ಜಲಚರಗಳ ಮೇಲೆ ಹಾನಿಯನ್ನು ಉಂಟು ಮಾಡುತ್ತಿದೆ. ಟಾಕ್ಸಿಸ್ ಲಿಂಕ್ ಅಧ್ಯಯನದ ಪ್ರಕಾರ ಶೇ.50ರಷ್ಟು ಫೇಸ್ ವಾಶ್ ಉತ್ಪನ್ನಗಳು ಮತ್ತು ಶೇ.67 ರಷ್ಟು ಫೇಶಿಯಲ್ ಸ್ಕ್ರಬ್ ಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇವೆ ಮತ್ತು ಫಾಲಿಥೈಲಿನ್ ನಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಕಡಿಮೆ ಮಾಡಿ, ಮರುಬಳಕೆ ಮಾಡಿ

ಕಡಿಮೆ ಮಾಡಿ, ಮರುಬಳಕೆ ಮಾಡಿ

ಪ್ಲಾಸ್ಟಿಕ್ ನ ತ್ಯಾಜ್ಯವು ಇಂದು ಸಮುದ್ರದಲ್ಲಿ ಅತಿಯಾಗಿದೆ. ಇದನ್ನು ಬಾಹ್ಯಾಕಾಶದಿಂದ ತುಂಬಾ ಸುಲಭವಾಗಿ ನೋಡಬಹುದಾಗಿದೆ. ಆದಷ್ಟು ಮಟ್ಟಿಗೆ ಪ್ಲಾಸ್ಟಿಕ್ ನ್ನು ಕಡಿಮೆ ಮಾಡಿ. ಇದನ್ನು ಮರುಬಳಕೆ ಮಾಡಿ. ಖಾಲಿ ಬಾಟಲಿ ಮತ್ತು ಜಾರ್ ಗಳನ್ನು ಮರುಬಳಕೆ ಮಾಡಲು ಸಾಧ್ಯವೇ ಎಂದು ನೋಡಿಕೊಳ್ಳಿ.

English summary

Switch To Green Skin Care Routine In These Ways

In recent times, public conscience has been shaken up by images of tons of plastic products, tubes and lotions, cleansers, toothbrushes and micro plastic being culled out from the gut of dolphins and sperm whales who wash ashore dead from the toxicity of the plastic brewing in their bodies.And in all of this, if you are wondering what can your contribution be in reducing this enormous amount of plastic pollution and saving our oceans, now you can do your bit to save the planet by just making simple conscious choices, especially when it comes to beauty care.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more