For Quick Alerts
ALLOW NOTIFICATIONS  
For Daily Alerts

ರೋಸ್ ವಾಟರ್ ನಿಮ್ಮ ಸ್ಕಿನ್ ಬ್ಯೂಟಿ ಫ್ರೆಂಡ್ !!!

|

ನಮಗೆಲ್ಲಾ ಗೊತ್ತು . ಗುಲಾಬಿಗೆ ಎಂತಹವರನ್ನೂ ನಾಚಿಸುವ ಅಂದವಿದೆ ಎಂದು . ಮುಳ್ಳು ಗಿಡದಲ್ಲಿ ಸದಾ ನಗು ನಗುವ ಗುಲಾಬಿಯ ಅಂದ ಎಂತಹವರನ್ನೂ ನಾಚಿ ನೀರಾಗಿಸುತ್ತದೆ . ಗುಲಾಬಿ ಕೇವಲ ಹೆಣ್ಣುಮಕ್ಕಳ ಮುಡಿಗೇರಿ ಅವರ ಖುಷಿ ಹೆಚ್ಚು ಮಾಡಲು ಮಾತ್ರವಲ್ಲದೆ ಅದರಿಂದ ತಯಾರಾದ ಅನೇಕ ಬಗೆಯ ವಸ್ತುಗಳು ಮನುಷ್ಯರ ಉಪಯೋಗಕ್ಕೆ ಟೊಂಕ ಕಟ್ಟಿ ನಿಂತಿರುತ್ತವೆ . ಉದಾಹರಣೆಗೆ ಗುಲಖನ್ . ವಿಪರೀತ ದೇಹದ ಉಷ್ಣದಿಂದ ಬಳಲುತ್ತಿರುವವರಿಗೆ ರಾಮಬಾಣ . ಹೀಗೆ ಗುಲಾಬಿಯ ಉಪಯೋಗಗಳ ಬಗ್ಗೆ ಹೇಳುತ್ತಾ ಹೋದಂತೆ ನೆನೆಪಿಗೆ ಬಂದಿದ್ದು ರೋಸ್ ವಾಟರ್ . ಮುಖದ ಅಂದ ಹೆಚ್ಚಿಸಲು ಉಪಯೋಗಕ್ಕೆ ಬರುವ ಯಾವ ಅಪಾಯವೂ ಇಲ್ಲದಂತಹ ಒಂದು ಸುರಕ್ಷಿತ ದ್ರವ .

rose water

ರೋಸ್ ವಾಟರ್ ನ ಉಪಯೋಗಗಳು

ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಏಮಾರಬೇಡಿ . ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ . ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ ಹಿಡಿದು ಚರ್ಮದ ಮೇಲಿನ ಮಚ್ಚೆ ತೆಗೆಯುವವರೆಗೂ ಇದರ ಉಪಯೋಗ ಬಹಳ . ಸೆನ್ಸಿಟಿವ್ ಸ್ಕಿನ್ ಹೊಂದಿರುವವರಿಗೆ ಇದರ ಪ್ರಯೋಜನ ಬಹಳ ಲಾಭಕಾರಿ . ಏಕೆಂದರೆ ಇದು ನೈಸರ್ಗಿಕ ವಿಧಾನದಿಂದ ತಯಾರಾದ ಒಂದು ಒಳ್ಳೆಯ ದ್ರವ . ಇದು ಅತ್ಯಂತ ಸುರಕ್ಷಿತ ಮತ್ತು ಸರಳ ವಿಧಾನ . ಆದ್ದರಿಂದ ರೋಸ್ ವಾಟರ್ ನ ವಿಷಯದಲ್ಲಿ ಯಾವುದೇ ಅನುಮಾನ ಬೇಡ . ಹೇಗೆ ? ಬನ್ನಿ ನೋಡೋಣ .

ಕಣ್ಣುಗಳ ಅಂದವನ್ನು ಕಾಪಾಡಲು ನೆಚ್ಚಿನ ರೋಸ್ ವಾಟರ್

ಕೇವಲ ನೋಡಲು ತೆಳ್ಳಗೆ ಬೆಳ್ಳಗೆ ಇದ್ದರೆ ಸಾಲದು , ಮುಖದ ಮೇಲಿರುವ ಎಲ್ಲಾ ಅಂಗಗಳೂ ಸರಿಯಾದ ರೀತಿಯಲ್ಲಿ ಸರಿಯಾದ ಜಾಗದಲ್ಲಿ ಇದ್ದರೆ ಒಳ್ಳೆಯದು . ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಕೆಲವರು ನೋಡಲು ಅಂದವಾಗೇನೋ ಇರುತ್ತಾರೆ . ಆದರೆ ಅವರ ಕಣ್ಣು ಗುಡ್ಡೆಗಳು ದಪ್ಪವಾಗಿದ್ದು , ಇವರ ಇಡೀ ಅಂದವನ್ನೇ ಹಾಳು ಮಾಡಿ ಬಿಡುತ್ತವೆ . ಅಂತವರು ಈ ರೋಸ್ ವಾಟರ್ ಅನ್ನು ಅವರ ಸಹಾಯಕ್ಕೆ ತೆಗೆದು ಕೊಳ್ಳಬಹುದು . ಏನೆಂದರೆ ಒಂದು ಹತ್ತಿಯ ಉಂಡೆಯನ್ನು ಕೋಲ್ಡ್ ರೋಸ್ ವಾಟರ್ ನಲ್ಲಿ ಅದ್ದಿ ಕಣ್ಣು ಮುಚ್ಚಿ ಅದನ್ನು ಎರಡೂ ಕಣ್ಣಿನ ಮೇಲಿಟ್ಟು ಒಂದು ಗಂಟೆಯವರೆಗೂ ಹಾಗೆ ಬಿಟ್ಟರೆ ದಪ್ಪವಿರುವ ಕಣ್ಣು ಗುಡ್ಡೆಗಳು ಕ್ರಮೇಣ ಗಾತ್ರ ಕಡಿಮೆ ಗೊಳಿಸಿಕೊಳ್ಳುತ್ತವೆ . ಪ್ರತಿ ಭಾನುವಾರದಂದು ಅಥವಾ ನೀವು ಯಾವಾಗ ಫ್ರೀ ಆಗಿ ಮನೆಯಲ್ಲಿರುತ್ತೀರೋ ಆಗ ರೋಸ್ ವಾಟರ್ ನಿಂದ ಈ ರೀತಿ ಮಾಡಿ . ಕ್ರಮೇಣ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ .

ನಿಮ್ಮನ್ನು ಮತ್ತು ನಿಮ್ಮ ದೇಹವನ್ನು ರಿಲಾಕ್ಸ್ ಮಾಡಲು ರೋಸ್ ವಾಟರ್ ಬಾತ್ ಮಾಡಿ

ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ . ಅದರ ಘಮಗುಡುವ ಪರಿಮಳ ನಿಮ್ಮನ್ನು ನಿಜಕ್ಕೂ ರಿಲಾಕ್ಸ್ ಮಾಡುತ್ತದೆ . ಮನಸ್ಸಿನ ತಳಮಳವೆಲ್ಲಾ ದೂರವಾಗಿ , ಹೊಸ ಉಲ್ಲಾಸ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆ . ಅಷ್ಟೇ ಅಲ್ಲದೆ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಚರ್ಮಕ್ಕೆ ಕೂಡ ಬಹಳ ಉಪಯೋಗ ಇದೆ . ಚರ್ಮದ ರೋಗಗಳಿಂದ ದೂರ ಮಾಡಿ ಚರ್ಮವನ್ನು ಕಾಂತಿಯುಕ್ತ ಮಾಡುತ್ತದೆ .

ರೋಸ್ ವಾಟರ್ ಒಂದು ನ್ಯಾಚುರಲ್ ಟೋನರ್ ಕೂಡ ಹೌದು

ಚರ್ಮ ಯಾರಿಗೆ ಉರಿಯೂತದಿಂದ ಬಳಲುತ್ತಿರುತ್ತದೋ ಅಂತಹವರಿಗೆ ರೋಸ್ ವಾಟರ್ ಒಂದು ಮೈಲ್ಡ್ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ . ಮಾರುಕಟ್ಟೆಯಲ್ಲಿ ಹಲವಾರು ಸ್ಕಿನ್ ಟೋನಿಂಗ್ ಏಜೆಂಟ್ ಗಳು ಉಪಲಬ್ದವಿದ್ದರೂ ರೋಸ್ ವಾಟರ್ ನಷ್ಟು ಪರಿಣಾಮಕಾರಿ ಆಗಿರುವುದಿಲ್ಲ . ಏಕೆಂದರೆ ರೋಸ್ ವಾಟರ್ ನೈಸರ್ಗಿಕವಾದ ಯಾವುದೇ ಕೆಮಿಕಲ್ ಇಲ್ಲದಂತಹ ಚರ್ಮಕ್ಕೆ ಒಂದು ರೀತಿಯ ವಾರವಾದ ದ್ರವ . ಇದು ಚರ್ಮವನ್ನು ಸುಕ್ಕು ಗಟ್ಟದಂತೆ ನೋಡಿಕೊಳ್ಳುತ್ತದೆ . ಇದರಲ್ಲೂ ಸಹ ಒಂದು ಕಾಟನ್ ಉಂಡೆಯನ್ನು ರೋಸ್ ವಾಟರ್ ನಲ್ಲಿ ಅದ್ದಿಕೊಂಡು ಚರ್ಮದ ಮೇಲೆಲ್ಲಾ ಸವರುತ್ತಾ ಹೋಗಿ . ಇದರಿಂದ ಚರ್ಮದ ಸಣ್ಣ ಸಣ್ಣ ರಂದ್ರಗಳು ತೆರೆಯಲ್ಪಡುತ್ತವೆ . ಬೆವರಿನ ದುರ್ಗಂಧ ಹೊರಹಾಕಲು ಇವು ಅತ್ಯಂತ ಸಹಕಾರಿ . ಇದಕ್ಕೆ ಆದಷ್ಟು ಕೋಲ್ಡ್ ರೋಸ್ ವಾಟರ್ ಅನ್ನು ಉಪಯೋಗಿಸುವುದು ಒಳ್ಳೆಯದು .

ಮುಖದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಬಳಸಿ

ಚರ್ಮದ ಕಾಂತಿ ಹೆಚ್ಚು ಮಾಡಲು ರೋಸ್ ವಾಟರ್ ಬಹಳ ಸಹಕಾರಿ ಎಂದು ನಮಗೆಲ್ಲಾ ಗೊತ್ತು . ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ . ಇದರಿಂದ ಚರ್ಮದ ಕಾಂತಿ ಇಮ್ಮಡಿ ಗೊಳ್ಳುತ್ತದೆ .

ಮೊಡವೆಗಳಿಗೆ ರಾಮಬಾಣ ಈ ರೋಸ್ ವಾಟರ್

ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುತ್ತವೆ . ಇದರಲ್ಲಿ ಯಾವುದೇ ಸಂದೇಹವಿಲ್ಲ . ಅದಕ್ಕೆ ಪರಿಹಾರವೆಂದರೆ ತಣ್ಣನೆಯ ನೀರಿಗೆ ಸ್ವಲ್ಪ ಕೋಲ್ಡ್ ರೋಸ್ ವಾಟರ್ ಅನ್ನು ಹಾಕಿ ಬೆರೆಸಿ ಅದರಿಂದ ಮುಖದ ಮೇಲೆ ಎರಚುವಂತೆ ಮಾಡಿ ಮುಖ ತೊಳೆದುಕೊಂಡರೆ ಮುಖದ ಮೇಲಿನ ಮೊಡವೆಗಳ ಸಮೇತ ಮುಖದ ಮೇಲಿನ ಕಲೆಗಳೂ ಸಹ ಮಾಯವಾಗುತ್ತವೆ . ಇದನ್ನು ದಿನಕ್ಕೆ ಮೂರು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು . ಅಷ್ಟೇ ಅಲ್ಲದೆ ಕೋಲ್ಡ್ ರೋಸ್ ವಾಟರ್ ಅನ್ನು ಮುಲ್ತಾನಿ ಮಿಟ್ಟಿಯ ಜೊತೆ ಕೂಡ ಉಪಯೋಗಿಸಬಹುದು .

English summary

rose water should be a part of your daily beauty regime

We all know what rose water is capable of. This one thing alone can fix almost every skin related issue. From skin brightening to scar removal, rose water is almost miraculous with such versatility. It is natural, so doesn’t pose any threat to people with sensitive skin. It is simplest and safest to apply yet the benefits are ample. You can no doubt make rose water a part of your beauty regime.
X
Desktop Bottom Promotion